ETV Bharat / entertainment

ಸರ್ಗಮ್ ಕೌಶಲ್​ಗೆ​ ಒಲಿದ ಮಿಸೆಸ್​ ವರ್ಲ್ಡ್ ಪಟ್ಟ: 21 ವರ್ಷದ ಬಳಿಕ ಭಾರತಕ್ಕೆ ಕಿರೀಟ - ಭಾರತಕ್ಕೆ ಕಿರೀಟ

ಭಾರತದ ಸರ್ಗಮ್ ಕೌಶಲ್ ಮಿಸೆಸ್​ ವರ್ಲ್ಡ್ 2022ರ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

indias-sargam-koushal-wins-mrs-world-2022-crown-back-in-india-after-21-years
ಸರ್ಗಮ್ ಕೌಶಲ್​ ಒಲಿದ ಮಿಸೆಸ್​ ವರ್ಲ್ಡ್ ಪಟ್ಟ: 21 ವರ್ಷದ ಬಳಿಕ ಭಾರತಕ್ಕೆ ಕಿರೀಟ
author img

By

Published : Dec 18, 2022, 9:46 PM IST

ನವದೆಹಲಿ: ಭಾರತದ ಸರ್ಗಮ್ ಕೌಶಲ್ ಮಿಸೆಸ್​ ವರ್ಲ್ಡ್ 2022ರ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ 21 ವರ್ಷಗಳ ಬಳಿಕ ಮಿಸೆಸ್​ ವರ್ಲ್ಡ್ ಕಿರೀಟ ಭಾರತದ ಪಾಲಾಗಿದೆ. 2001ರಲ್ಲಿ ಅದಿತಿ ಗೋವಿತ್ರಿಕರ್ ಅವರು ಮಿಸೆಸ್ ವರ್ಲ್ಡ್ ಆಗಿ ಆಯ್ಕೆಯಾಗಿದ್ದರು.

ಅಮೆರಿಕದ ವೆಸ್ಟ್‌ಗೇಟ್ ಲಾಸ್ ವೇಗಾಸ್ ರೆಸಾರ್ಟ್​ನಲ್ಲಿ ಶನಿವಾರ ಸಂಜೆ ನಡೆದ ಸಮಾರಂಭದಲ್ಲಿ 2021ನೇ ಸಾಲಿನ ಮಿಸೆಸ್​ ವರ್ಲ್ಡ್ ಶೈಲಿನ್ ಫೋರ್ಡ್ ಅವರು ಜಮ್ಮು ಮತ್ತು ಕಾಶ್ಮೀರ ಮೂಲದ ಸರ್ಗಮ್ ಕೌಶಲ್ ಅವರಿಗೆ ಕಿರೀಟ ತೊಡಿಸಿದರು. ಪಾಲಿನೇಷಿಯಾದ ಬೆಡಗಿ ಮೊದಲ ರನ್ನರ್​ ಅಪ್ ಮತ್ತು ಕೆನಡಾದ ಸಂದರಿ ಎರಡನೇ ರನ್ನರ್ ಅಪ್ ಆಗಿ ಹೊರಹೊಮ್ಮಿದರು.

ಮಿಸೆಸ್​ ವರ್ಲ್ಡ್ 2022ರ ಕೀರಿಟ ಬಗ್ಗೆ ಭಾನುವಾರ ಸರ್ಗಮ್ ಕೌಶಲ್ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಈ ಖುಷಿ ಹಂಚಿಕೊಂಡಿದ್ದಾರೆ. ದೀರ್ಘಕಾಲದ ಕಾಯುವಿಕೆ ಮುಗಿದಿದೆ. 21 ವರ್ಷಗಳ ನಂತರ ಮಿಸೆಸ್​ ವರ್ಲ್ಡ್ ಕಿರೀಟ ನಮ್ಮ ಪಾಲಾಗಿದೆ. ನಾನು ತುಂಬಾ ಉತ್ಸುಕಳಾಗಿದ್ದೇನೆ. ಲವ್ ಯು ಇಂಡಿಯಾ, ಲವ್ ಯು ವರ್ಲ್ಡ್ ಎಂದು ವಿಡಿಯೋ ಬಿಡುಗಡೆ ಮಾಡಿದ್ದಾರೆ.

1984ರಲ್ಲಿ ವಿವಾಹಿತ ಮಹಿಳೆಯರಿಗೆ ಮಿಸೆಸ್ ವರ್ಲ್ಡ್ ಸೌಂದರ್ಯ ಸ್ಪರ್ಧೆ ಆರಂಭವಾಗಿದೆ. ಈ ವರ್ಷದ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಸರ್ಗಮ್ ಕೌಶಲ್ ಗುಲಾಬಿ ಬಣ್ಣದ ಸೆಂಟರ್ ಸ್ಲಿಟ್ ಗ್ಲಿಟರಿ ಗೌನ್​ಅನ್ನು ಧರಿಸಿದ್ದರು.

ಇದನ್ನೂ ಓದಿ: 3 ಲಕ್ಷ ಮೌಲ್ಯದ ಬಟ್ಟೆ ತೊಟ್ಟು ಕ್ಯಾಮರಾಗೆ ಪೋಸ್​ ಕೊಟ್ಟ ಮಲೈಕಾ ಅರೋರಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.