ಏ.3ರಂದು ಎಂಜಿಎಂ ಗ್ರ್ಯಾಂಡ್ ಗಾರ್ಡನ್ ಅರೇನಾ ಲಾಸ್ ವೇಗಾಸ್‌ನಲ್ಲಿ ನಡೆದ ಪ್ರತಿಷ್ಠಿತ 2022ರ ಗ್ರ್ಯಾಮಿ ಅವಾರ್ಡ್ ಕಾರ್ಯಕ್ರಮದಲ್ಲಿ ಭಾರತೀಯ ಸಂಗೀತ ಸಂಯೋಜಕ ರಿಕ್ಕಿ, ಸ್ಟೀವರ್ಟ್ ಕೋಪ್‌ಲ್ಯಾಂಡ್ ಅವರ ಡಿವೈನ್ ಟೈಡ್ಸ್ ಆಲ್ಬಂ ಆಯ್ಕೆ ಆಗಿತ್ತು. ಡಿವೈನ್ ಟೈಡ್ಸ್ ಹಾಡನ್ನು ಲಹರಿ ಮ್ಯೂಸಿಕ್ ಸಂಸ್ಥೆ ನಿರ್ಮಾಣ ಮಾಡಿತ್ತು. ಬೆಸ್ಟ್ ನ್ಯೂ ಏಜ್ ಆಲ್ಬಂ ಕ್ಯಾಟಗರಿಗೆ ಆಯ್ಕೆ ಆಗಿದ್ದು, ರಿಕ್ಕಿ ಕೇಜ್ 'ಗ್ರ್ಯಾಮಿ ಅವಾರ್ಡ್' ಪಡೆದುಕೊಂಡಿದ್ದಾರೆ.
ಧನ್ಯವಾದ ತಿಳಿಸಿದ ರಿಕ್ಕಿ : ಡಿವೈನ್ ಟೈಡ್ಸ್ ಹಾಡಿಗೆ ನಾವು ಇಂದು ಗ್ರ್ಯಾಮಿ ಅವಾರ್ಡ್ ಪಡೆದುಕೊಂಡಿದ್ದೇವೆ. ನಾನು ತುಂಬ ಕೃತಜ್ಞತಾಪೂರ್ವನಾಗಿದ್ದೇನೆ. ನನ್ನ ಪಕ್ಕದಲ್ಲಿ ನಿಂತಿರುವ ಲಿವಿಂಗ್ ಲೆಜೆಂಡ್ ಸ್ಟೀವರ್ಟ್ ಕೋಪ್‌ಲ್ಯಾಂಡ್‌ಗೆ ಧನ್ಯವಾದಗಳು. ನನಗೆ ಇದು ಎರಡನೇ ಗ್ರ್ಯಾಮಿ ಅವಾರ್ಡ್. ಸ್ಟೀವರ್ಟ್‌ಗೆ 6ನೇ ಗ್ರ್ಯಾಮಿ ಅವಾರ್ಡ್. ನನ್ನ ಜತೆ ಕೈಜೋಡಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ರಿಕ್ಕಿ ಕೇಜ್ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.
-
Ricky Kej greets audience with a namaste after winning second Grammy Award https://t.co/zgODi9CXht India's Ricky Kej greets audience with a namaste after winning second Grammy Award pic.twitter.com/y4VG51wxQY
— Vishal verma (@Vishalverma111) April 4, 2022 " class="align-text-top noRightClick twitterSection" data="
">Ricky Kej greets audience with a namaste after winning second Grammy Award https://t.co/zgODi9CXht India's Ricky Kej greets audience with a namaste after winning second Grammy Award pic.twitter.com/y4VG51wxQY
— Vishal verma (@Vishalverma111) April 4, 2022Ricky Kej greets audience with a namaste after winning second Grammy Award https://t.co/zgODi9CXht India's Ricky Kej greets audience with a namaste after winning second Grammy Award pic.twitter.com/y4VG51wxQY
— Vishal verma (@Vishalverma111) April 4, 2022
ಬೆಂಗಳೂರಿನಲ್ಲಿ ನೆಲೆಸಿರುವ ರಿಕಿ ಕೇಜ್ ಸಂಯೋಜನೆಯ ಆ ಆಲ್ಬಂಗೆ 2015ರಲ್ಲಿ ಗ್ರ್ಯಾಮಿ ಪ್ರಶಸ್ತಿ ಲಭಿಸಿತ್ತು. ಇದೀಗ ಮತ್ತೊಮ್ಮೆ ರಿಕಿ ಗ್ರ್ಯಾಮಿ ಅಂಗಳದಲ್ಲಿ ನಗೆ ಬೀರಿದ್ದಾರೆ. ಅವರ 'ಡಿವೈನ್ ಟೈಡ್ಸ್' ಆಲ್ಬಂಗೆ 64ನೇ ಗ್ರ್ಯಾಮಿ ಪ್ರಶಸ್ತಿ ಸಂದಿದೆ. ಖ್ಯಾತ ರಾಕ್ ಸಂಗೀತಗಾರ ಸ್ಟೂವರ್ಟ್ ಕೋಪ್‌ಲ್ಯಾಂಡ್ ಅವರೊಂದಿಗೆ ರಿಕಿ ಕೇಜ್ ರೂಪಿಸಿರುವ ಸಂಗೀತ ಸಂಚಯ ಡಿವೈನ್ ಟೈಡ್ಸ್‌ನಲ್ಲಿ 9 ಹಾಡುಗಳಿವೆ.
ಈ ಹಾಡುಗಳ ಪೈಕಿ ಸುಮಾರು ನಾಲ್ಕು ಹಾಡುಗಳಲ್ಲಿ ಕರ್ನಾಟಕದ ಹಲವು ಪ್ರತಿಭೆಗಳು ಕೆಲಸ ಮಾಡಿದ್ದಾರೆ. ಬೆಂಗಳೂರಿನ ವಾರಿಜಾಶ್ರೀ ಅವರ ಕೊಳಲು ಮತ್ತು ಗಾನ ಎರಡನ್ನೂ ಈ ಆಲ್ಬಂನಲ್ಲಿ ಆಲಿಸಬಹುದಾಗಿದೆ.
ಇದನ್ನೂ ಓದಿ: ಪಾಸಿಟಿವ್ ಹುಡ್ಗಿ ಪಾತ್ರದಲ್ಲಿ ಚೈತ್ರಾ ಆಚಾರ್.. ನಾಯಕ ಎಂಟ್ರಿ ಆದಾಗ ‘ಅಕಟಕಟ’