ಕನ್ನಡ ಚಿತ್ರರಂಗದ ಇತಿಹಾಸದ ಪುಟಗಳಲ್ಲಿ 2022 ಸದಾ ನೆನಪಿನಲ್ಲಿ ಉಳಿಯುವ ವರ್ಷವಾಗಿ ಹೊರಹೊಮ್ಮಿದೆ. ಇದೇ ಹುಮ್ಮಸ್ಸಿನಲ್ಲಿ ಸ್ಯಾಂಡಲ್ವುಡ್ 2023ಕ್ಕೆ ಕಾಲಿಟ್ಟಿದೆ. ಹೊಸ ವರ್ಷದ ಮೊದಲ ವಾರ 'ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ', 'ಸ್ಫೂಕಿ ಕಾಲೇಜು', 'ಥಗ್ಸ್ ಆಫ್ ರಾಮಘಡ', 'ಮರೆಯದೆ ಕ್ಷಮಿಸು', 'ಮಿಸ್ಟರ್ ಬ್ಯಾಚುಲರ್', 'ಮಿಸ್ ನಂದಿನಿ', 'ಸದ್ಗುರು' ಹೀಗೆ 8 ಎಂಟು ಸಿನಿಮಾಗಳು ರಿಲೀಸ್ ಆಗಿದ್ದವು. ಆದ್ರೆ, ಯಾವುದೇ ಚಿತ್ರಗಳು ಸಹ ಅಂದುಕೊಂಡಂತೆ ಪ್ರೇಕ್ಷಕರನ್ನು ರಂಜಿಸುವ ಕೆಲಸ ಮಾಡಲಿಲ್ಲ. ಸಂಕ್ರಾಂತಿ ಹಬ್ಬಕ್ಕೆ ಯಾವುದೇ ಸ್ಟಾರ್ ಸಿನಿಮಾಗಳು ಇಲ್ಲದೇ ಹೊಸಬರ 'ಆರ್ಕೆಸ್ಟ್ರಾ ಮೈಸೂರು', 'ಮಂಕು ಭಾಯ್ ಫಾಕ್ಸಿ ರಾಣಿ' ಹಾಗೂ 'ವಿರಾಟಪುರ ವಿರಾಗಿ' ಚಿತ್ರಗಳು ಬಿಡುಗಡೆಯಾದರೂ ಸಿನಿಪ್ರಿಯರಿಗೆ ಇಷ್ಟ ಆಗಿರಲಿಲ್ಲ.
ಸಂಕ್ರಾಂತಿಗೆ ತೆಲುಗಿನಲ್ಲಿ ಬಿಡುಗಡೆಯಾದ ಬಾಲಯ್ಯ ಅಭಿನಯದ 'ವೀರನರಸಿಂಹ ರೆಡ್ಡಿ', ತಮಿಳಿನಲ್ಲಿ ತೆರೆಕಂಡ ಅಜಿತ್ ತುನಿವ್ ಹಾಗೂ ವಿಜಯ್ ನಟನೆ 'ವಾರಿಸುಡು' ಚಿತ್ರಗಳು ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆಯ ಗಳಿಕೆ ಮಾಡುವ ಮೂಲಕ ಪರಿಭಾಷೆಯಲ್ಲಿ ಶುಭಾರಂಭ ಮಾಡಿವೆ. ಸ್ಯಾಂಡಲ್ವುಡ್ನಲ್ಲಿ ಈ ವಾರ ಕೂಡ ಹೊಸ ನಟರ ಎರಡು ಹಾಗೂ ಒಂದು ತುಳು ಸಿನಿಮಾ ಸೇರಿದಂತೆ 3 ಚಿತ್ರಗಳು ಬಿಡುಗಡೆ ಆಗುತ್ತಿವೆ. ಅದರಲ್ಲಿ ಟ್ರೈಲರ್ನಿಂದಲೇ ಒಂದು ಮಟ್ಟಿಗೆ ಗಮನ ಸೆಳೆಯುತ್ತಿರೋ ಚಿತ್ರ 'ಬೇಬಿ ಮಿಸ್ಸಿಂಗ್'. ಈ ಸಿನಿಮಾ ಇಂದು ಬಿಡುಗಡೆ ಆಗುತ್ತಿದ್ದು, ಯುವ ನಿರ್ದೇಶಕ ಯಶಸ್ವಿಕಾಂತ್ ನಿರ್ಮಾಣ ಮಾಡಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಸ್ಪರ್ಶ ರೇಖಾ, ಅವಿನಾಶ್, ಶಶಿಕುಮಾರ್ , ಕಡ್ಡಿಪುಡಿ ಚಂದ್ರು, ಅಶೋಕ್ ಕಶ್ಯಪ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಒಂದು ಮಗುವಿನ ಸುತ್ತ ಬೇಬಿ ಮಿಸ್ಸಿಂಗ್ ಸಿನಿಮಾ ಕಥೆ ಸಾಗಲಿದೆ. ಅಶೋಕ್ ಕಶ್ಯಪ್ ಚಿತ್ರಕ್ಕೆ ಕ್ಯಾಮರಾ ವರ್ಕ್ ಮಾಡಿದ್ದು, ಶ್ರೀ ಶಾಸ್ತಾ ಸಂಗೀತ ನೀಡಿದ್ದಾರೆ. ಎಸ್.ಕೆ.ನಾಗೇಂದ್ರ ಅರಸ್ ಸಂಕಲನವಿದೆ.
ಇದನ್ನೂ ಓದಿ; ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ಶೀರ್ಷಿಕೆ ಬಳಸದಂತೆ ಕೋರ್ಟ್ ತಡೆಯಾಜ್ಞೆ
ಇದರ ಜೊತೆಗೆ ಬುಲೆಟ್ ವಿನೋದ್ ಹಾಗೂ ಆದ್ಯಾ ಪ್ರಿಯಾ ಅಭಿನಯಿಸಿರೋ ಭಯಾನಕ ಹಾಗೂ ಸಸ್ಪೆನ್ಸ್ ಕಥೆ ಹೊಂದಿರುವ 'ಹುಷಾರ್' ಸಿನಿಮಾ ಕೂಡ ಇಂದು ರಿಲೀಸ್ ಆಗುತ್ತಿದೆ. ಅದ್ಯ ಪ್ರಿಯಾ, ಬುಲೆಟ್ ವಿನೋದ್ ಮಾತ್ರವಲ್ಲದೇ ಸಿದ್ದು ಸಿದ್ದೇಶ್ , ರಚನಾ ಮಲ್ನಾಡ್, ಡಿಂಗ್ರಿ ನಾಗರಾಜ್ ಚಿತ್ರದಲ್ಲಿ ನಟಿಸಿದ್ದಾರೆ. ಎನ್ ಸತೀಶ್ ರಾಜ್ ನಿರ್ದೇಶನ ಮಾಡಿರೋ ಹುಷಾರ್ ಚಿತ್ರಕ್ಕೆ ಎ ಟಿ ರವೀಶ್ ಸಂಗೀತ ನೀಡಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಈ ಸಿನಿಮಾದ ಪಾರ್ಟಿ ಹಾಡನ್ನು ಹಾಡಿದ್ದಾರೆ. ನಾಗರಾಜ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಈ ಎರಡು ಚಿತ್ರಗಳ ಜೊತೆ 'ಶಕಾಲಕಾ ಶಕಾಲಕಾ ಭೂಮ್' ಎಂಬ ತುಳು ಸಿನಿಮಾ ಕೂಡ ಬಿಡುಗಡೆ ಆಗುತ್ತಿದೆ.
ಇದನ್ನೂ ಓದಿ: ರೂಪದರ್ಶಿಯ ಆಕ್ಷೇಪಾರ್ಹ ಫೋಟೋ ವೈರಲ್ ಪ್ರಕರಣ: ನಟಿ ರಾಖಿ ಸಾವಂತ್ ಬಂಧನ!
ಇನ್ನು ಹೊಸ ವರ್ಷದ ಮೊದಲನೇ ತಿಂಗಳು ಜನವರಿ ಮುಗಿಯುವುದಕ್ಕೆ ಬರ್ತಾ ಇದೆ. ಆದರೆ, ಕನ್ನಡ ಚಿತ್ರರಂಗದಲ್ಲಿ ಹೇಳಿಕೊಳ್ಳುವಂತಹ ಸಿನಿಮಾಗಳು ಪ್ರೇಕ್ಷಕರಿಗೆ ಇಷ್ಟ ಆಗದೆ ಬಂದ ದಾರಿಯಲ್ಲೇ ಚಿತ್ರಮಂದಿರಗಳಿಂದ ತೆಗೆಯಲ್ಪಡುತ್ತಿವೆ. ವರ್ಷದ ಆರಂಭದಲ್ಲಿ ಕನ್ನಡ ಚಿತ್ರರಂಗದ ಸಾಧನೆ ಜೀರೋ ಆದರೆ ಇನ್ನು 11 ತಿಂಗಳಲ್ಲಿ ಯಾವ ನಟರ ಸಿನಿಮಾ ಪ್ರೇಕ್ಷಕರಿಗೆ ಇಷ್ಟ ಆಗುತ್ತೆ?, ಯಾವ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗಮನ ಸೆಳೆಯುತ್ತೆ ಎಂದು ಕಾದು ನೋಡಬೇಕು.