ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಮನೆಯ ಸದಸ್ಯ ಪ್ರತಾಪ್ ಆರೋಗ್ಯದಲ್ಲಿ ಏರುಪೇರಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಿದ್ದರಿಂದ ಸದ್ಯ ಆರ್ ಆರ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ಪ್ರತಾಪ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಊಟದಲ್ಲಿ ವ್ಯತ್ಯಾಸ ಆಗಿ ಪ್ರತಾಪ್ ಆಸ್ಪತ್ರೆಗೆ ಸೇರುವಂತಾಗಿದೆ. ಚಿಕಿತ್ಸೆ ಬಳಿಕ ಡ್ರೋನ್ ಪ್ರತಾಪ್ ಬಿಗ್ ಬಾಸ್ ಮನೆಗೆ ಇವತ್ತೇ ಪುನಃ ವಾಪಸ್ ಆಗಲಿದ್ದಾರೆ ಎಂದು ಬಿಗ್ ಬಾಸ್ ಶೋನ ಮೂಲಗಳು ತಿಳಿಸಿವೆ.
ದೊಡ್ಮನೆಯಲ್ಲಿ ಉತ್ತಮ ಆಟ ಆಡುತ್ತಿರುವ ದ್ರೋನ್ ಪ್ರತಾಪ್, ಕರುನಾಡಿನ ಜನಮನ ಗೆದ್ದಿರುವ ಸ್ಪರ್ಧಿಗಳಲ್ಲಿ ಒಬ್ಬರು. ಇತ್ತೀಚೆಗೆ ಅವರ ತಂದೆ ಬಿಗ್‌ಬಾಸ್ ಮನೆಗೆ ಹೋಗಿದ್ದಲ್ಲದೇ ಮಗನನ್ನು ಅಪ್ಪಿಕೊಂಡು ಸಾಂತ್ವನ ಹೇಳಿದ್ದರು. ಅವರ ತಾಯಿ ಕೂಡ ಆಗಮಿಸಿದ್ದರು.
ಬಿಗ್ ಬಾಸ್ ಬಹುಭಾಷೆಗಳಲ್ಲಿ ಪ್ರಸಾರ ಆಗುತ್ತದೆ. ಕನ್ನಡದಲ್ಲಿ ಅಭಿನಯ ಚಕ್ರವರ್ತಿ ಸುದೀಪ್ ನಡೆಸಿಕೊಡುತ್ತಾರೆ. ಈಗಾಗಲೇ 9 ಸೀಸನ್ಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿರುವ ತಂಡ, 10ನೇ ಸೀಸನ್ನ ಫಿನಾಲೆಗೆ ತಯಾರಿ ನಡೆಸುತ್ತಿದೆ. ಇದು ಜನಮೆಚ್ಚಿದ ಕನ್ನಡ ಕಾರ್ಯಕ್ರಮಗಳಲ್ಲೊಂದು. ಬಹುತೇಕ ಮುಕ್ತಾಯ ಹಂತ ತಲುಪಿರುವ ಬಿಗ್ ಬಾಸ್ ಸೀಸನ್ 10ರಲ್ಲಿ ಕೆಲವರು ಉಳಿದುಕೊಂಡಿದ್ದು, ಈ ಎಲ್ಲರೂ ತಮ್ಮದೇ ಆದ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ಫಿನಾಲೆಯಲ್ಲಿ ಟಫ್ ಫೈಟ್ ಇರಲಿದೆ ಎಂದು ಪ್ರೇಕ್ಷಕರು ಊಹಿಸಿದ್ದು, ಸೀಸನ್ 10ನ್ನು ಯಾರು ಗೆಲ್ತಾರೆ? ಎಂಬ ಕುತೂಹಲ ಹೆಚ್ಚಾಗಿದೆ.
ಇದನ್ನೂ ಓದಿ: ಕ್ಲೈಮ್ಯಾಕ್ಸ್ ತಲುಪಿದ 'ಮ್ಯಾಕ್ಸ್': ಫೋಟೋ ಹಂಚಿಕೊಂಡ ಕಿಚ್ಚ ಸುದೀಪ್
ಪ್ರತಾಪ್ ಕೂಡ ಕಠಿಣ ಪೈಪೋಟಿ ಕೊಡುವ ಸ್ಪರ್ಧಿಗಳಲ್ಲೋರ್ವರು. ಬಿಗ್ ಬಾಸ್ ಮೂಲಕ ಜನಪ್ರಿಯತೆ ಸಂಪಾದಿಸಿದ್ದಾರೆ ಅಂದ್ರೆ ತಪ್ಪಾಗಲ್ಲ ನೋಡಿ. ಕಳೆದ ವಾರ ಪ್ರತಾಪ್ ತಂದೆ ತಾಯಿ ಬಿಗ್ ಬಾಸ್ ಮನೆಗೆ ಆಗಮಿಸಿದ್ದರು. ಭಾವುಕ ಕ್ಷಣಗಳು ಸೃಷ್ಟಿಯಾಗಿದ್ದವು. ಮಗನನ್ನು ಅಪ್ಪಿಕೊಂಡು ಸಮಾಧಾನಪಡಿಸಿದ್ದರು. ಇನ್ನು ಟಾಸ್ಕ್ ವಿಚಾರವಾಗಿ, ಸಂಗೀತಾ ಅವರ ತಮಾಷೆಯಿಂದ ಪ್ರತಾಪ್ ಇತ್ತೀಚೆಗೆ ಅಸಮಾಧಾನಗೊಂಡಿದ್ದರು.
ಇದನ್ನೂ ಓದಿ: ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾದಲ್ಲಿ ಕರೀನಾ ಕಪೂರ್ ಖಾನ್?!