ETV Bharat / entertainment

'ಬಿಗ್​ ಬಾಸ್'​ ಡಬಲ್ ಎಲಿಮಿನೇಷನ್​: ಅವಿನಾಶ್​ ಶೆಟ್ಟಿ, ಮೈಕಲ್​ ಔಟ್ - etv bharat kannada

Bigg Boss season-10: ಭಾನುವಾರ ಬಿಗ್​ ಬಾಸ್​ ಮನೆಯಿಂದ ಸ್ಪರ್ಧಿಗಳಾದ ಅವಿನಾಶ್​ ಶೆಟ್ಟಿ ಹಾಗೂ ಮೈಕಲ್ ಹೊರಬಿದ್ದರು.

Avinash Shetty and Michael eliminated from Bigg Boss season 10
'ಬಿಗ್​ ಬಾಸ್'​ ಡಬಲ್ ಎಮಿನೇಷನ್​: ಅವಿನಾಶ್​ ಶೆಟ್ಟಿ- ಮೈಕಲ್​ ಔಟ್, ಸ್ಪರ್ಧಿಗಳು ಶಾಕ್​
author img

By ETV Bharat Karnataka Team

Published : Dec 25, 2023, 3:48 PM IST

ಕನ್ನಡದ ಜನಪ್ರಿಯ ರಿಯಾಲಿಟಿ ಶೋ 'ಬಿಗ್​ ಬಾಸ್​' ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡುತ್ತಿದೆ. ದಿನಕ್ಕೊಂದು ವಿಭಿನ್ನ ಟಾಸ್ಕ್​ಗಳು, ವೀಕೆಂಡ್​ ಎಪಿಸೋಡ್​ಗಳು ಪ್ರೇಕ್ಷಕರ ಕುತೂಹಲ ಹೆಚ್ಚಿಸುತ್ತಿವೆ. ಇದೀಗ ಕಾರ್ಯಕ್ರಮ ಕೊನೆಯ ಹಂತ ತಲುಪುತ್ತಿದ್ದು, ಸ್ಪರ್ಧಿಗಳ ನಡುವಿನ ಸ್ಪರ್ಧೆಯೂ ತೀವ್ರಗೊಂಡಿದೆ. ಈ ವಾರ ಡಬಲ್​ ಎಲಿಮಿನೇಷನ್​ ನಡೆದಿದ್ದು, ಮೈಕಲ್​ ಮತ್ತು ಅವಿನಾಶ್​ ಶೆಟ್ಟಿ ಬಿಗ್​ ಬಾಸ್​ ಮನೆಯಿಂದ ಹೊರಬಿದ್ದಿದ್ದಾರೆ. ಇದನ್ನು ಕಂಡು ಸ್ಪರ್ಧಿಗಳು ಶಾಕ್​ ಆಗಿದ್ದಾರೆ.

ವಾರದ ದಿನಗಳಲ್ಲಿ ಟಾಸ್ಕ್ ಚಿಂತೆಯಲ್ಲಿರುವ ಸ್ಪರ್ಧಿಗಳಿಗೆ ವಾರಾಂತ್ಯ ಬಂತೆಂದರೆ ಎಲಿಮಿನೇಷನ್​​ ಬಿಸಿ ಕಾಡುತ್ತದೆ. ನಟ ಸುದೀಪ್​ 'ವೀಕೆಂಡ್​ ವಿತ್​ ಸುದೀಪ್​' ಕಾರ್ಯಕ್ರಮ ನಡೆಸಿಕೊಡುತ್ತಾರೆ. ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮಕ್ಕೆ ಪ್ರತ್ಯೇಕ​ ಫ್ಯಾನ್​ ಬೇಸ್ ಇದೆ. ವಾರವಿಡೀ ಕಾರ್ಯಕ್ರಮ ವೀಕ್ಷಿಸದಿರುವವರೂ ಕೂಡ ಕಿಚ್ಚನಿಗಾಗಿಯೇ ವಾರಾಂತ್ಯದ ಸಂಚಿಕೆಗಳನ್ನು ನೋಡುವುದುಂಟು. ಸುದೀಪ್​​ ನಿರೂಪಣೆಯ ಶೈಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ ಈ ವಾರಾಂತ್ಯದ ಕಾರ್ಯಕ್ರಮವನ್ನು ಸುದೀಪ್ ಅವರು​​ ನಡೆಸಿಕೊಟ್ಟಿಲ್ಲ.

ಶನಿವಾರದ ಸಂಚಿಕೆಗೆ ಬಿಗ್​ ಬಾಸ್​​ ವಿಜೇತೆ, ಹಿರಿಯ ನಟಿ ಶ್ರುತಿ ಆಗಮಿಸಿ ನ್ಯಾಯ ಪಂಚಾಯಿತಿ ನಡೆಸಿಕೊಟ್ಟಿದ್ದರು. ಭಾನುವಾರದ ಸಂಚಿಕೆ ಬಿಗ್​ ಬಾಸ್​ ಸೀಸನ್​ 7ರ ವಿಜೇತ ಶೈನ್​ ಶೆಟ್ಟಿ ಮತ್ತು ಸ್ಪರ್ಧಿ ಶುಭಾ ಪೂಂಜಾ ನೇತೃತ್ವದಲ್ಲಿ ನಡೆಯಿತು. ಈ ವಾರ ಒಟ್ಟು 6 ಜನ ನಾಮಿನೇಟ್​ ಆಗಿದ್ದರು. ಅವರಲ್ಲಿ ಸಂಗೀತಾ ಶೃಂಗೇರಿ ಶನಿವಾರವೇ ಸೇಫ್​ ಆಗಿದ್ದರು. ಇವರನ್ನು ಬಿಟ್ಟರೆ ಭಾನುವಾರ ಪ್ರತಾಪ್​, ವರ್ತೂರು ಸಂತೋಷ್​ ಮತ್ತು ಸಿರಿ ಸೇಫ್​ ಆದರು.

ಇದಾಗಿ ಸಂಚಿಕೆಯ ಕೊನೆಯಲ್ಲಿ ಮೈಕಲ್​ ಅಥವಾ ಅವಿನಾಶ್​ ಶೆಟ್ಟಿ ಇವರಿಬ್ಬರಲ್ಲಿ ಯಾರಾದರೂ ಒಬ್ಬರು ಮನೆಯಿಂದ ಹೊರಹೋಗುತ್ತಾರೆ ಎಂದು ಸ್ಪರ್ಧಿಗಳು ಭಾವಿಸಿದ್ದರು. ಆದರೆ, ಬಿಗ್​ ಬಾಸ್​​ ಮನೆಯಂಗಳಕ್ಕೆ ಎರಡು ಕಾರುಗಳು ಬಂದವು. ಅದರಲ್ಲಿ ಮೈಕಲ್​ ಹಾಗೂ ಅವಿನಾಶ್​ ಅವರನ್ನು ಕುಳಿತುಕೊಳ್ಳುವಂತೆ ಬಿಗ್ ಬಾಸ್ ಸೂಚಿಸಿದರು. ಕಾರು ಮನೆಯ ಗೇಟ್​ ದಾಟಿ ಹೊರಹೋಯಿತು. ಇದನ್ನು ಕಂಡ ಸ್ಪರ್ಧಿಗಳು ಶಾಕ್​ ಆದರು. ಈ ವಾರ ಒಂದೇ ಎಲಿಮಿನೇಷನ್​ ಎಂದುಕೊಂಡವರಿಗೆ ಇಬ್ಬರು ಮನೆಯಿಂದ ಹೊರಹೋಗಿದ್ದನ್ನು ನೋಡಿ ಅಚ್ಚರಿಗೊಂಡರು.

ಆದರೆ, ಸೋಷಿಯಲ್​ ಮೀಡಿಯಾಗಳಲ್ಲಿ, ಮೈಕಲ್​ ಮನೆಯಿಂದ ಹೊರಹೋಗಿಲ್ಲ. ಅವರನ್ನು ಮನೆಗೆ ಮರಳಿ ಇಂದು ಕರೆಸಲಾಗುತ್ತದೆ ಎಂಬ ವಿಚಾರಗಳು ಹರಿದಾಡುತ್ತಿವೆ. ಹಾಗಿದ್ರೆ ಮೈಕಲ್​ ಮರಳಿ ಬರ್ತಾರಾ? ಅಥವಾ ಎರಡು ಎಲಿಮಿಷೇನ್​ ನಡೆದಿರುವುದು ನಿಜನಾ? ಎಂಬೆಲ್ಲಾ ಕುತೂಹಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಬಿಗ್‌ ಬಾಸ್ ಕನ್ನಡದ 24 ಗಂಟೆಯ ನೇರಪ್ರಸಾರವನ್ನು ಜಿಯೋಸಿನಿಮಾದಲ್ಲಿ ಉಚಿತವಾಗಿ ನೋಡಬಹುದು. ನಿತ್ಯದ ಎಪಿಸೋಡ್‌ಗಳನ್ನು ಕಲರ್ಸ್ ಕನ್ನಡದಲ್ಲಿ ರಾತ್ರಿ 9.30ಕ್ಕೆ ವೀಕ್ಷಿಸಬಹುದಾಗಿದೆ.

ಇದನ್ನೂ ಓದಿ: ಬಿಗ್​ ಬಾಸ್​ಗೆ ಶೈನ್​ ಶೆಟ್ಟಿ, ಶುಭಾ ಪೂಂಜಾ ಎಂಟ್ರಿ: ಈ ವಾರ ಡಬಲ್​ ಎಲಿಮಿನೇಶನ್​!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.