ETV Bharat / entertainment

15 ಕೋಟಿ ರೂ. ಬಜೆಟ್​ನಲ್ಲಿ ಶಾರುಖ್​ ಸಾಂಗ್ ಶೂಟ್ - 1,000 ಲೇಡಿ ಡ್ಯಾನ್ಸರ್ಸ್ ಮಧ್ಯೆ ಕಿಂಗ್​ ಖಾನ್ ಡ್ಯಾನ್ಸ್ - ಎಸ್‌ಆರ್‌ಕೆ

Jawan: 'ಜವಾನ್' ಸಿನಿಮಾದ ಜಿಂದಾ ಬಂದಾ (Zinda Banda) ಹಾಡಿನ ಕುರಿತು ಪ್ರೇಕ್ಷಕರು ತಮ್ಮ ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.

Zinda Banda from Jawan
ಜವಾನ್ ಜಿಂದಾ ಬಂದಾ ಸಾಂಗ್​
author img

By

Published : Jul 26, 2023, 5:21 PM IST

ಬಾಲಿವುಡ್​​ ಕಿಂಗ್​ ಶಾರುಖ್ ಖಾನ್ ಅಭಿನಯದ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಜವಾನ್'. ಪ್ರೇಕ್ಷಕರು ಸಿನಿಮಾ ಕುರಿತು ತಮ್ಮ ಉತ್ಸಾಹ, ಕುತೂಹಲ, ನಿರೀಕ್ಷೆ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರದ ಮೊದಲ ಹಾಡು ಜಿಂದಾ ಬಂದಾ (Zinda Banda) ಶೀಘ್ರದಲ್ಲೇ ಅನಾವರಣಗೊಳ್ಳಲಿದೆ.

1,000 ಡ್ಯಾನ್ಸರ್ಸ್, 15 ಕೋಟಿ ರೂ. ಬಜೆಟ್.... "ಚೆನ್ನೈ, ಹೈದರಾಬಾದ್, ಬೆಂಗಳೂರು, ಮಧುರೈ, ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳ 1,000ಕ್ಕೂ ಹೆಚ್ಚು ನೃತ್ಯಗಾರರಿಂದ ಐದು ದಿನಗಳ ಕಾಲ ಚೆನ್ನೈನಲ್ಲಿ ಈ ಸಾಂಗ್​ ಶೂಟ್​ ಮಾಡಲಾಗಿದೆ. 15 ಕೋಟಿ ರೂಪಾಯಿಗಳ ಬಿಗ್​​ ಬಜೆಟ್‌ನಲ್ಲಿ ಈ ಸಾಂಗ್​​ ನಿರ್ಮಿಸಲಾಗಿದೆ. ಜಿಂದಾ ಬಂದಾ ಸಾಂಗ್​ನಲ್ಲಿ ಸಾವಿರಾರು ಹುಡುಗಿಯರೊಂದಿಗೆ ಎಸ್​ಆರ್​ಕೆ ಡ್ಯಾನ್ಸ್ ಮಾಡಿದ್ದಾರೆ. ಅನಿರುದ್ಧ್ ಸಂಗೀತ ಸಂಯೋಜನೆ ಮಾಡಿದ್ದು, ಶೋಬಿ ಅವರು ಡ್ಯಾನ್ಸ್ ಕೊರಿಯೋಗ್ರಾಫಿ ಮಾಡಿದ್ದಾರೆ. ಈ ಜಿಂದಾ ಬಂದಾ ಟ್ರ್ಯಾಕ್ ಅನಾವರಣಗೊಳ್ಳಲು ಸಿದ್ಧವಿದೆ ಎಂದು ಮೂಲಗಳು ತಿಳಿಸಿವೆ. ಪ್ರೇಕ್ಷಕರು ಈ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.

ಎಸ್‌ಆರ್‌ಕೆ ಫ್ಯಾನ್ಸ್ ಕ್ಲಬ್​ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿವೆ. ಇದರಲ್ಲಿ ಜವಾನ್‌ನ ಥೀಮ್ ಸಾಂಗ್​ಗೆ ಹೆಜ್ಜೆ ಹಾಕುತ್ತಿರುವಂತೆ ತೋರುತ್ತಿದೆ. ವಿಡಿಯೋ, ಫೋಟೋಗಳು ಪ್ರೇಕ್ಷಕರಿಂದ ಚಪ್ಪಾಳೆ ಸ್ವೀಕರಿಸಿದೆ. ಅನಿರುಧ್ ರವಿಚಂದರ್ ಅವರ ಸಂಗೀತ, ಡ್ಯಾನ್ಸರ್ಸ್​ನ ಅದ್ಭುತ ನೃತ್ಯ ಪ್ರೇಕ್ಷಕರನ್ನು ಸೆಳೆಯಲಿದೆ ಎಂಬ ವಿಶ್ವಾಸ ಚಿತ್ರತಂಡದ್ದು.

ಪಠಾಣ್ ಬಳಿಕ ಜವಾನ್​​: ಪಠಾಣ್​ ಬಳಿಕ 2023 ರಲ್ಲೇ ತೆರೆಕಾಣುತ್ತಿರುವ ಎಸ್‌ಆರ್‌ಕೆ ಅವರ ಎರಡನೇ ಬಹುನಿರೀಕ್ಷಿತ ಸಿನಿಮಾ ಜವಾನ್​. ಇದು ಕೂಡ ಕಂಪ್ಲೀಟ್​ ಆ್ಯಕ್ಷನ್​ ಪ್ಯಾಕ್ಡ್ ಸಿನಿಮಾ. ಹಲವು ವಿರೋಧಗಳ ನಡುವೆಯೇ 2023ರ ಜನವರಿ ಕೊನೆಯಲ್ಲಿ ತೆರೆಕಂಡ ಪಠಾಣ್​ ಹಲವು ಬಾಕ್ಸ್ ಆಫೀಸ್ ದಾಖಲೆಗಳನ್ನು ಬ್ರೇಕ್​ ಮಾಡಿದೆ. ಎಸ್‌ಆರ್‌ಕೆ ವೃತ್ತಿ ಜೀವನದಲ್ಲೇ ದೊಡ್ಡ ಹಿಟ್ ಸಿನಿಮಾ ಆಗಿ ಪಠಾಣ್​ ಹೊರಹೊಮ್ಮಿದೆ. ಶಾರುಖ್​ ಅವರ ನಾಲ್ಕು ವರ್ಷಗಳ ಸುದೀರ್ಘ ಬ್ರೇಕ್​ ನಂತರ ಪಠಾಣ್​ ಬಿಡುಗಡೆ ಆಯಿತು. ಇದೀಗ ಜವಾನ್​ ಬಗ್ಗೆ ಕುತೂಹಲ ಹೆಚ್ಚಾಗಿದೆ.

ಇದನ್ನೂ ಓದಿ: ದಕ್ಷಿಣ ಚಿತ್ರರಂಗದತ್ತ ಬಾಲಿವುಡ್​ ಮಂದಿಯ ಒಲವು: ವರುಣ್ ಧವನ್​​ ಸಿನಿಮಾ ನಿರ್ದೇಶಿಸಲಿದ್ದಾರೆ ಅಟ್ಲೀ!

ಈ ಚಿತ್ರವನ್ನು ದಕ್ಷಿಣ ಚಿತ್ರರಂಗದ ಅಟ್ಲೀ ನಿರ್ದೇಶಿಸಿದ್ದು, ವಿಜಯ್ ಸೇತುಪತಿ ಮತ್ತು ನಯನತಾರಾ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೇ ಪಠಾಣ್​ ನಟಿ ದೀಪಿಕಾ ಪಡುಕೋಣೆ ಸ್ಪೆಷಲ್​ ರೋಲ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸೆಪ್ಟೆಂಬರ್ 7 ರಂದು ಥಿಯೇಟರ್‌ಗಳಲ್ಲಿ ಜವಾನ್​ ಸಿನಿಮಾ ತೆರೆಕಾಣಲಿದೆ. ಈಗಾಗಲೇ ಅನಾವರಣಗೊಂಡಿರುವ ಜವಾನ್​ ಪ್ರಿವ್ಯೂ ರೋಮಾಂಚಕಾರಿಯಾಗಿದ್ದು, ಸಿನಿಮಾ ಮೇಲೆ ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ: RRR 2: ಆಫ್ರಿಕಾದಲ್ಲಿ ನಡೆಯಲಿದೆ ಆರ್​ಆರ್​ಆರ್​ ಸೀಕ್ವೆಲ್​ ಕಥೆ - ಸ್ಕ್ರಿಪ್ಟ್​ ಕೆಲಸ ಚುರುಕು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.