ETV Bharat / entertainment

ಪವರ್ ಸ್ಟಾರ್ ಯಶಸ್ವಿ ಹಾದಿಯಲ್ಲಿ ಯುವ ರಾಜ್​ಕುಮಾರ್​: ಅಪ್ಪು ಕಾರ್​ ನಂಬರ್​ ಯುವ ಸಿನಿಮಾದಲ್ಲಿ ಬಳಕೆ - yuva rajkumar yuva movie

ಚಿಕ್ಕಪ್ಪ ಪವರ್ ಸ್ಟಾರ್​ನಂತೆ ಪವರ್​ಫುಲ್ ಲುಕ್‌‌ನಲ್ಲಿ ರಾಘವೇಂದ್ರ ರಾಜ್​ಕುಮಾರ್ ಕಿರಿಯ ಪುತ್ರ ಯುವ ರಾಜ್​ಕುಮಾರ್ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟಿದ್ದಾರೆ.

yuva rajkumar follows principles of late actor puneeth rajkumar
ಪವರ್ ಸ್ಟಾರ್ ಹಾದಿಯಲ್ಲಿ ಯುವ ರಾಜ್​ಕುಮಾರ್
author img

By

Published : Mar 4, 2023, 1:10 PM IST

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವತಾರದಲ್ಲೇ ಸ್ಯಾಂಡಲ್​ವುಡ್​ಗೆ ಜೂ. ಪವರ್‌ಸ್ಟಾರ್ ಎಂಟ್ರಿ ಆಗಿದೆ. ಒಂದೂವರೆ ವರ್ಷಗಳಿಂದ ಕಾಯುತ್ತಿದ್ದ ಅಭಿಮಾನಿಗಳ ಮೊಗದಲ್ಲಿ ಯುವ ರಾಜ್​ಕುಮಾರ್ ತಮ್ಮ ಚೊಚ್ಚಲ ಚಿತ್ರದ ಮೂಲಕ ನಗು ತರಿಸಿದ್ದಾರೆ. ಯುವ ರಾಜ್​ಕುಮಾರ್ ಅವರ ಮೊದಲ ಸಿನಿಮಾದ ಟೈಟಲ್​ ಅನಾವರಣಗೊಂಡಿದೆ. 'ಯುವ' ಸಿನಿಮಾ ಶೀರ್ಷಿಕೆ. ಪವರ್ ಸ್ಟಾರ್​ರಂತೆ ಪವರ್​ಫುಲ್ ಲುಕ್‌‌ನಲ್ಲಿ ತಮ್ಮ ಚೊಚ್ಚಲ ಚಿತ್ರದ ಮೂಲಕ‌ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ ಯುವ ರಾಜ್​ಕುಮಾರ್​.

ರಾಘವೇಂದ್ರ ರಾಜ್​ಕುಮಾರ್ ಕಿರಿಯ ಪುತ್ರನಾಗಿರೋ‌ ಯುವ ರಾಜ್​ಕುಮಾರ್ ಅವರು ಕಿರಿಯ ವಯಸ್ಸಿನಿಂದಲೂ ಅಪ್ಪು ಚಿಕ್ಕಪ್ಪನನ್ನು ನೋಡಿ ಬೆಳೆದವರು. ಹೀಗಾಗಿ ಪವರ್ ಸ್ಟಾರ್ ಸಕ್ಸಸ್ ಹಾದಿಯನ್ನು ಯುವ ರಾಜ್​ಕುಮಾರ್​ ಅವರು ಚಾಚೂ ತಪ್ಪದೇ ಫಾಲೋ ಮಾಡುತ್ತಿದ್ದಾರೆ ಅನ್ನೋದಿಕ್ಕೆ ಶುಕ್ರವಾರ ಅದ್ಧೂರಿಯಾಗಿ ನಡೆದ ಯುವ ಸಿನಿಮಾದ ಟೈಟಲ್ ಅನಾವರಣ ಪ್ರೋಗ್ರಾಮ್ ಒಂದು ಉತ್ತಮ ಉದಾಹರಣೆ.

yuva rajkumar follows principles of late actor puneeth rajkumar
ಅಪ್ಪು ಕಾರ್​ ನಂಬರ್​ ಯುವನ ಸಿನಿಮಾದಲ್ಲಿ ಬಳಕೆ

ಖಡಕ್ ಡೈಲಾಗ್‌ಗಳಿಗೆ ಫ್ಯಾನ್ಸ್ ಫಿದಾ ಆಗಿದ್ರೆ, ಯುವನ‌‌ ಆ ಖದರ್ ನೋಡಿ ಅಭಿಮಾನಿಗಳಿಗೆ ಅಪ್ಪು ಅವರನ್ನೇ ಕಂಡಂತೆ ಆಗಿದೆ. ಇನ್ನುಂದೆ ಪುನೀತ್ ರಾಜ್‌ಕುಮಾರ್ ಮತ್ತು ಅವರ ಸಿನಿಮಾ ಇಲ್ಲವೆಂದು ನೊಂದುಕೊಂಡವರಿಗೆ ಈಗ ಹೊಸ ಭರವಸೆ ಬಂದಂತಾಗಿದೆ. ಈ ಕಾರಣಕ್ಕೆ ಟೀಸರ್‌ನಲ್ಲಿ ಕಂಡ ಯುವನನ್ನು ನೋಡಿ ಅಭಿಮಾನಿಗಳು ಭಾವುಕರಾಗಿದ್ದಾರೆ. ಪುನೀತ್ ಹಾಗೂ ಯುವ ಇಬ್ಬರಿಗೂ ಸಾಮ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ.

ದೊಡ್ಮನೆಯ ಅಪ್ಪು ಆಗಿದ್ದ ಮಾಸ್ಟರ್ ಲೋಹಿತ್ ಸಿನಿಮಾಕ್ಕಾಗಿ ಪುನೀತ್ ರಾಜ್‍ಕುಮಾರ್ ಎಂಬ ಹೆಸರಿನೊಂದಿಗೆ ಪವರ್ ಸ್ಟಾರ್ ಕನ್ನಡ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದರು.‌ ಅದೇ ರೀತಿ ಗುರುರಾಜ್ ಕುಮಾರ್ ಆಗಿದ್ದ ಯುವ ಈಗ ಸಿನಿಮಾಕ್ಕಾಗಿ ಯುವ ರಾಜ್​ಕುಮಾರ್ ಆಗಿ ಬೆಳ್ಳಿತೆರೆಯಲ್ಲಿ ವಿಜೃಂಭಿಸಲು ಬರುತ್ತಿದ್ದಾರೆ.

ಪವರ್ ಸ್ಟಾರ್ ಯಶಸ್ವಿ ಹಾದಿಯಲ್ಲಿ ಯುವ ರಾಜ್​ಕುಮಾರ್

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಮೊದಲ ಸಿನಿಮಾ ಅಪ್ಪು. ಇದು ಪುನೀತ್ ರಾಜ್‌ಕುಮಾರ್ ಅವರ ನಿಕ್ ನೇಮ್. ಇದನ್ನೇ ಟೈಟಲ್ ಆಗಿ ಇಡಲಾಗಿತ್ತು. ಈಗ ಯುವ ರಾಜ್‌ಕುಮಾರ್ ಚೊಚ್ಚಲ ಸಿನಿಮಾ ಟೈಟಲ್ 'ಯುವ'. ಇಬ್ಬರ ಮೊದಲ ಸಿನಿಮಾ ಟೈಟಲ್ ಅವರ ಹೆಸರುಗಳೇ ಆಗಿರೋದು ವಿಶೇಷ. ಈ ಕಾರಣಕ್ಕಾಗಿಯೇ ಪುನೀತ್ ರಾಜ್‌ಕುಮಾರ್ ಮತ್ತು ಯುವ ರಾಜ್‌ಕುಮಾರ್ ಅವರಲ್ಲಿರುವ ಸಾಮ್ಯತೆ ಹುಡುಕುತ್ತಿದ್ದಾರೆ ಫ್ಯಾನ್ಸ್​.

ಇದರ ಜೊತೆಗೆ ಮತ್ತೊಂದು ಇಂಟ್ರೆಸ್ಟ್ರಿಂಗ್ ವಿಚಾರ ಅಂದ್ರೆ, ಯುವ ರಾಜ್​ಕುಮಾರ್ ಚಿಕ್ಕಪ್ಪನ ಹಾದಿಯಲ್ಲೇ ನಡೆಯಬೇಕು ಅಂತಾ ಪಣ ತೊಟ್ಟಿದ್ದಾರೆ. ಹೀಗಾಗಿ ಪವರ್ ಸ್ಟಾರ್ ಅಚ್ಚುಮೆಚ್ಚಿನ ಕಾರು ಹಾಗೂ ಬೈಕ್ ನಂಬರ್​ಗಳನ್ನು ತಮ್ಮ ಜೀವನದಲ್ಲಿ ಹಾಗು ಸಿನಿಮಾದಲ್ಲಿ ಅಳವಡಿಸಿಕೊಂಡಿದ್ದಾರೆ. ಅದಕ್ಕೆ ಸಾಕ್ಷಿಯಾಗಿ ಯುವ ರಾಜ್​ಕುಮಾರ್​ ತಮ್ಮ ಬೈಕ್ (ಸಿನಿಮಾ ಪೋಸ್ಟರ್) ಮೇಲೆ ಚಿಕ್ಕಪ್ಪನ ಕಾರ್​ ನಂಬರ್ ಅನ್ನು ಬಳಸಿಕೊಂಡಿದ್ದಾರೆ.

ಇದನ್ನೂ ಓದಿ: ಸ್ಯಾಂಡಲ್​ವುಡ್​ಗೆ ದೊಡ್ಮನೆಯ ಮತ್ತೋರ್ವ ಪ್ರತಿಭೆ ಎಂಟ್ರಿ: ಯುವ ರಾಜ್​ಕುಮಾರ್​ ಚೊಚ್ಚಲ ಚಿತ್ರದ ಟೈಟಲ್​ ಅನಾವರಣ

ಇದರ ಜೊತೆಗೆ ಮನೆ ಅಥವಾ ಯಾವುದೇ ಕಾರ್ಯಕ್ರಮಕ್ಕೆ ಯುವ ರಾಜ್​ಕುಮಾರ್​ ಅವರು ಹೋದಾಗ, ಅಭಿಮಾನಿಗಳನ್ನು ಪ್ರೀತಿಯಿಂದ‌ ಮಾತನಾಡಿಸಿ ಗೌರವಿಸೋದನ್ನು ಕಂಡರೆ ಪುನೀತ್​ ರಾಜ್​ಕುಮಾರ್​ ಅವರನ್ನು ನೆನಪಿಸುತ್ತದೆ. ಇದನ್ನೆಲ್ಲಾ ಗಮನಿಸಿದ್ರೆ, ಯುವ ರಾಜ್​ಕುಮಾರ್ ತಮ್ಮ ಚಿಕ್ಕಪ್ಪನ ಸಕ್ಸಸ್ ಹಾದಿಯನ್ನು ಫಾಲೋ ಮಾಡ್ತಾ ಇರೋದು ಗೊತ್ತಾಗುತ್ತದೆ.

ಇದನ್ನೂ ಓದಿ: 1 ಲಕ್ಷ ಮೌಲ್ಯದ ಸೀರೆಯುಟ್ಟು ಅಂದ ಪ್ರದರ್ಶಿಸಿದ ಚೆಲುವೆ ತಮನ್ನಾ ಭಾಟಿಯಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.