ETV Bharat / entertainment

ಸ್ಯಾಂಡಲ್​ವುಡ್​ಗೆ ದೊಡ್ಮನೆಯ ಮತ್ತೋರ್ವ ಪ್ರತಿಭೆ ಎಂಟ್ರಿ: ಯುವ ರಾಜ್​ಕುಮಾರ್​ ಚೊಚ್ಚಲ ಚಿತ್ರದ ಟೈಟಲ್​ ಅನಾವರಣ - yuva movie

ರಾಘವೇಂದ್ರ ರಾಜ್​ಕುಮಾರ್​ ಅವರ ಕಿರಿಯ ಪುತ್ರ ಯುವ ರಾಜ್​ಕುಮಾರ್ ಚೊಚ್ಚಲ ಚಿತ್ರದ ಶೀರ್ಷಿಕೆ ಅನಾವರಣಗೊಂಡಿದೆ. ಈ ಮೂಲಕ ರಾಜ್​ಕುಮಾರ್ ಕುಟುಂಬದ ಮತ್ತೊಂದು ಕುಡಿ ಚಂದನವನಕ್ಕೆ ಎಂಟ್ರಿ ಕೊಟ್ಟಂತಾಗಿದೆ.

Yuva Rajkumar yuva movie
ಯುವ ರಾಜ್​ಕುಮಾರ್ ಯುವ ಸಿನಿಮಾ
author img

By

Published : Mar 3, 2023, 8:00 PM IST

Updated : Mar 3, 2023, 8:48 PM IST

ರಾಜ್​ಕುಮಾರ್​​ ಕುಟುಂಬದ ಅಭಿಮಾನಿಗಳ ಕನಸು ನನಸಾಗಿದೆ. ಇಂದು ಅದ್ಧೂರಿಯಾಗಿ ರಾಘವೇಂದ್ರ ರಾಜ್​ಕುಮಾರ್​ ಅವರ ಕಿರಿಯ ಪುತ್ರ ಯುವ ರಾಜ್​ಕುಮಾರ್ ಚಂದನವನಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಚಿತ್ರದ ಟೈಟಲ್​ ಟೀಸರ್​ ಇಂದು ಅನಾವರಣಗೊಂಡಿದೆ. 'ಯುವ' ಎಂಬುದು ಯುವ ರಾಜ್​ಕುಮಾರ್​ ಚೊಚ್ಚಲ ಚಿತ್ರದ ಶೀರ್ಷಿಕೆ. ಅಪ್ಪು ಮಾಡಬೇಕಿದ್ದ ಚಿತ್ರದಲ್ಲಿ ಯುವ ನಟಿಸ್ತಾರೆ ಅಂತ ಘೋಷನೆಯಾದ ಗಳಿಗೆಯಿಂದಲೇ ಸಮಸ್ತ ದೊಡ್ಮನೆ ಅಭಿಮಾನಿಗಳು ಕಾತುರದಿಂದ ಕಾಯ್ತಿದ್ರು. ಈಗ ಕೊನೆಗೂ ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಯುವ ಚಿತ್ರ ಅನೌನ್ಸ್ ಆಗಿದೆ.

  • " class="align-text-top noRightClick twitterSection" data="">

ದೇಹ ದಂಡಿಸಿ ತಮ್ಮ ಪಾತ್ರಕ್ಕೆ ಹೊಂದುವಂತೆ ಯುವ ರಾಜ್​ಕುಮಾರ್​ ರೆಡಿಯಾಗಿದ್ದಾರೆ. ಚಿತ್ರಕಥೆ, ನಾಯಕಿಯ ಆಯ್ಕೆ ಸೇರಿದಂತೆ ಪ್ರೀ ಪ್ರೊಡಕ್ಷನ್​ ಕೆಲಸದಲ್ಲಿ ನಿರ್ದೇಶಕ ಸಂತೋಷ್ ಆನಂದ್ ರಾಮ್ ನಿರತರಾಗಿದ್ದರು. ಬೀರ್​​ಬಲ್ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಬಲಗಾಲಿಟ್ಟು ನಂತರ ಸಪ್ತಸಾಗರದಾಚೆ ಎಲ್ಲೋ, ಬಾನದಾರಿಯಲ್ಲಿ ಅಭಿನಯ ಮಾಡಿರುವ ನಟಿ ರುಕ್ಮಿಣಿ ವಸಂತ್ ಅವರಿಗೆ ದೊಡ್ಮನೆ ಕುಡಿಯೊಂದಿಗೆ ನಟಿಸುವ ಅವಕಾಶ ಸಿಕ್ಕಿದೆ. ನಾಯಕಿಯ ಆಯ್ಕೆ, ನಾಯಕ ಸೇರಿದಂತೆ ಚಿತ್ರತಂಡ ತಯಾರಿ ಪೂರ್ಣಗೊಂಡ ಹಿನ್ನೆಲೆ ಇಂದು ಚಿತ್ರದ ಟೈಟಲ್​ ಟೀಸರ್ ಬಿಡುಗಡೆ ಆಗಿದೆ.

ಪುನೀತ್​ ರಾಜ್​ಕುಮಾರ್​​​ ಅವರಿಗಾಗಿ ರೆಡಿ ಮಾಡಿದ್ದ ಕಥೆಗೆ ಯುವ ರಾಜ್​ಕುಮಾರ್​ ಜೀವ ತುಂಬಲಿದ್ದಾರೆ. ಹೊಂಬಾಳೆ ಫಿಲ್ಮ್ ಈ ಸಿನಿಮಾ ನಿರ್ಮಾಣ ಮಾಡಲಿದೆ. ಯುವ ರಾಜ್​ಕುಮಾರ್ ತಮ್ಮ ಯುವನ ಪಾತ್ರಕ್ಕೆ ಸಾಕಷ್ಟು ಮೇಕ್ ಓವರ್ ಮಾಡಿಕೊಂಡಿರೋದು ಟೀಸರ್​ನಲ್ಲಿ ಗೊತ್ತಾಗುತ್ತದೆ. ಟೀಸರ್​ನಲ್ಲಿರುವ ಪಂಚಿಂಗ್ ಡೈಲಾಗ್​​ಗಳು ರಾಜವಂಶದ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ಯುವ ರಾಜ್​ಕುಮಾರ್ ಜೊತೆ ಕನ್ನಡದ ಹುಡುಗಿ ರುಕ್ಮಿಣಿ ವಸಂತ ಜೊತೆಯಾಗಿದ್ದಾರೆ. ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದಾರೆ. ಪುನೀತ್ ರಾಜ್​ಕುಮಾರ್ ಹುಟ್ಟು ಹಬ್ಬದಂದು ಯುವ ಚಿತ್ರದ ಶೂಟಿಂಗ್​​ ಆರಂಭ ಆಗಲಿದ್ದು, 2023ರ ಡಿಸೆಂಬರ್ 22ರಂದು ಸಿನಿಮಾ ತೆರೆಗೆ ಅಪ್ಪಳಿಸಲಿದೆ.

ಪಿಆರ್​ಕೆ ಪ್ರೊಡಕ್ಷನ್​​ನಲ್ಲಿ ಯುವ ರಾಜ್​ಕುಮಾರ್​ ಅವರ ಸಿನಿಮಾ ಮಾಡುವ ಕನಸನ್ನು ದಿವಂಗತ ಪುನೀತ್​ ರಾಜ್​ಕುಮಾರ್​ ಕಂಡಿದ್ದರು. ಆ ಕನಸು ಹೊಂಬಾಳೆ ಫಿಲ್ಸ್​ನಿಂದ ನನಸಾಗುತ್ತಿದೆ. ಬೆಂಗಳೂರಿನ ಅಶೋಕ ಹೋಟೆಲ್​​ನಲ್ಲಿ ಯುವ ಟೈಟಲ್​ ಟೀಸರ್​ ಅನಾವರಣ ಕಾರ್ಯಕ್ರಮ ನಡೆದಿದ್ದು, ಅಧಿಕೃತವಾಗಿ ಸ್ಯಾಂಡಲ್​ವುಡ್​​ಗೆ ಎಂಟ್ರಿ ಕೊಟ್ಟಿದ್ದಾರೆ ಯುವ ರಾಜ್​ಕುಮಾರ್​.

yuva film
ಯುವ ಚಿತ್ರದ ಮುಹೂರ್ತ ಸಮಾರಂಭ

ಇದನ್ನೂ ಓದಿ: 'ಕಬ್ಜ'ಕ್ಕೆ ಶಿವಣ್ಣ ಎಂಟ್ರಿ: ಟ್ರೇಲರ್​ ಬಿಡುಗಡೆಗೂ ಮುನ್ನವೇ ಸರ್​ಪ್ರೈಸ್​ ಕೊಟ್ಟ ನಿರ್ದೇಶಕ ಆರ್ ಚಂದ್ರು

ಹೊಂಬಾಳೆಯಿಂದ ಯುವ ಸಮರ್ಪಣೆ: ಸತತ ಸದಭಿರುಚಿಯ ಹಾಗೂ ದಾಖಲೆಯ ಚಿತ್ರಗಳನ್ನು ನಿರ್ಮಿಸುತ್ತಾ ಬಂದಿರುವ ಹೊಂಬಾಳೆ ಫಿಲ್ಮ್ಸ್ ವತಿಯಿಂದ ಮತ್ತೊಂದು ಹೆಮ್ಮೆಯ ಚಿತ್ರ ಸಮರ್ಪಣೆ 'ಯುವ'. ಇನ್ನು ಸಂತೋಷ್ ಆನಂದ್‌ರಾಮ್ ಅವರ ಐದನೇಯ ಬಹು ನಿರೀಕ್ಷಿತ ಚಿತ್ರವಿದು. ಹೊಂಬಾಳೆ ಹಾಗೂ ಸಂತೋಷ್ ಆನಂದ್‌ರಾಮ್ ಕಾಂಬಿನೇಶನ್​​ನ ಗೆಲುವಿನ ಓಟಕ್ಕೆ ಈ ಚಿತ್ರ ನಾಲ್ಕನೇ ಸೇರ್ಪಡೆ.

yuva film
ಯುವ ಮುಹೂರ್ತ ಸಮಾರಂಭದಲ್ಲಿ ನಟ ಜಗ್ಗೇಶ್, ಶಿವಣ್ಣ

ಯುವರಾಜಕುಮಾರ್ ಅವರ ಮೊದಲ ಚಿತ್ರದ ಶೀರ್ಷಿಕೆ ಅನಾವರಣ ಹಾಗೂ ಚಿತ್ರದ ಮುಹೂರ್ತ ಇಂದು ಬೆಂಗಳೂರಿನ ಖಾಸಗಿ ಹೋಟೆಲ್​​ನಲ್ಲಿ ವಿಜೃಂಭಣೆಯಿಂದ ಜರುಗಿತು. ಈ ಭವ್ಯ ಸಮಾರಂಭದಲ್ಲಿ ಚಿತ್ರದ ನಿರ್ಮಾಪಕರಾದ ವಿಜಯ್ ಕಿರಗಂದೂರ್, ನಿರ್ದೇಶಕ ಸಂತೋಷ್ ಆನಂದ್‌ರಾಮ್, ನಟ ಯುವರಾಜಕುಮಾರ್, ಸಂಗೀತ ನಿರ್ದೇಶಕ ಅಜನೀಶ್ ಬಿ ಲೋಕನಾಥ್, ಛಾಯಾಗ್ರಾಹಕ ಶ್ರೀಶ ಕೂದುವಳ್ಳಿ ಹಾಗೂ ಚಿತ್ರದ ಇತರೆ ತಾಂತ್ರಿಕ ವಿಭಾಗದವರು ಮತ್ತು ರಾಜ್ ಕುಟುಂಬಸ್ಥರು, ಹಿತೈಷಿಗಳು ಪಾಲ್ಗೊಂಡಿದ್ದರು.

ಶೈಲಜಾ ವಿಜಯ್ ಕಿರಗಂದೂರ್ ಚಿತ್ರದ ಮೊದಲ ಕ್ಲಾಪ್ ಮಾಡಿದರೆ, ಅಶ್ವಿನಿ ಪುನೀತ್ ರಾಜಕುಮಾರ್ ಕ್ಯಾಮೆರಾಗೆ ಚಾಲನೆ ನೀಡಿದರು. ಇನ್ನು ಚಿತ್ರದ ಮೊದಲ ಶಾಟ್​​ಗೆ ಶಿವರಾಜ್ ಕುಮಾರ್ ಆಕ್ಷನ್ ಕಟ್ ಹೇಳಿದರು‌.

yuva film
ನಟ ಜಗ್ಗೇಶ್ ಜೊತೆ ಯುವ

ಇದನ್ನೂ ಓದಿ: ಆರ್​ಆರ್​ಆರ್​​ ಸಕ್ಸಸ್​: ಜೂನಿಯರ್ ಎನ್​ಟಿಆರ್​, ಆಲಿಯಾ ಭಟ್​ಗೆ HCA ಪ್ರಶಸ್ತಿ

Last Updated : Mar 3, 2023, 8:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.