ETV Bharat / entertainment

ನಾಳೆ ಯಶ್​ ಬರ್ತ್​ಡೇ: 'ಟಾಕ್ಸಿಕ್' ಅಪ್​ಡೇಟ್ಸ್ ನಿರೀಕ್ಷೆಯಲ್ಲಿ ಅಭಿಮಾನಿಗಳು - Yash Birthday

ನಾಳೆ ರಾಕಿಂಗ್​ ಸ್ಟಾರ್ ಯಶ್ ಹುಟ್ಟುಹಬ್ಬ ಹಿನ್ನೆಲೆ 'ಟಾಕ್ಸಿಕ್' ಸಿನಿಮಾದ ಅಪ್​ಡೇಟ್ಸ್ ಸಿಗಬಹುದೆಂಬ ನಿರೀಕ್ಷೆಯಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ.

Yash
ಯಶ್
author img

By ETV Bharat Karnataka Team

Published : Jan 7, 2024, 5:51 PM IST

ಸ್ಯಾಂಡಲ್​ವುಡ್​ನ ರಾಕಿಂಗ್​ ಸ್ಟಾರ್ ಯಶ್ ಜನ್ಮದಿನಾಚರಣೆಗೆ ಕ್ಷಣಗಣನೆ ಆರಂಭವಾಗಿದೆ. ನಾಳೆ 38ನೇ ವಸಂತಕ್ಕೆ ಕಾಲಿಡಲಿದ್ದಾರೆ ಕೆಜಿಎಫ್​ ಸ್ಟಾರ್. ಅಪಾರ ಸಂಖ್ಯೆಯ ಅಭಿಮಾನಿಗಳು ತಮ್ಮ ಮೆಚ್ಚಿನ ನಟನ ಜನ್ಮದಿನವನ್ನು ವಿಶೇಷವಾಗಿ ಆಚರಿಸಲು ಸಜ್ಜಾಗಿದ್ದಾರೆ. ಜೊತೆಗೆ ಬರ್ತ್​​ಡೇ ಸ್ಪೆಷಲ್​ ಆಗಿ 'ಟಾಕ್ಸಿಕ್' ಸಿನಿಮಾದ ಅಪ್​ಡೇಟ್ಸ್ ಸಿಗಬಹುದೆಂಬ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.

ಮುಂದಿನ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ: 'ಸ್ವಯಂ ನಿರ್ಮಿತ ನಟ' ಎಂದೇ ಗುರುತಿಸಿಕೊಂಡಿರುವ ಯಶ್​​​ ನಾಯಕ ನಟನಾಗಿ ಅಭಿನಯಿಸಿದ ಚಿತ್ರಗಳು ಕೇವಲ 18. ಕೊನೆಯ ಎರಡು ಚಿತ್ರಗಳಾದ ಕೆಜಿಎಫ್​ 1, ಕೆಜಿಎಫ್​ 2 ಮೂಲಕ ತಮ್ಮ ಜನಪ್ರಿಯತೆಯನ್ನು ಸಾಕಷ್ಟು ಹೆಚ್ಚಿಸಿಕೊಂಡಿದ್ದಾರೆ. ಅಭಿಮಾನಿಗಳು, ಸಿನಿಪ್ರಿಯರು ಮಾತ್ರವಲ್ಲದೇ ಇಡೀ ಭಾರತೀಯ ಚಿತ್ರರಂಗದ ಖ್ಯಾತನಾಮರು ಕನ್ನಡ ನಟನ ಬಗ್ಗೆ ಮಾತನಾಡುವಂತಾಯ್ತು. ಇವರ ಅಮೋಘ ಅಭಿನಯಕ್ಕೆ ಚಿತ್ರರಂಗದವರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಹಾಗಾಗಿ ನಟನ ಮುಂದಿನ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.

  • " class="align-text-top noRightClick twitterSection" data="">

'ಯಶ್​ 19'.. ಕೆಜಿಎಫ್​ 2 ಬ್ಲಾಕ್​ಬಸ್ಟರ್ ಹಿಟ್​ ಆದ ಬಳಿಕ ನಟನ ಯಾವುದೇ ಸಿನಿಮಾ ಘೋಷಣೆ ಆಗಿರಲಿಲ್ಲ. 2022ರ ಏಪ್ರಿಲ್​ನಲ್ಲಿ ಕೆಜಿಎಫ್​ 2 ತೆರೆಕಂಡು ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿದ ಹಿನ್ನೆಲೆ ಮುಂದಿನ ಸಿನಿಮಾ ಘೋಷಣೆಗೆ ಸಿನಿಪ್ರಿಯರು ಕಾತರರಾಗಿದ್ದರು. ಆದ್ರೆ ಒಂದೂವರೆ ವರ್ಷ ಕಳೆದರೂ ಯಾವುದೇ ಸುದ್ದಿ ಇರಲಿಲ್ಲ. ಅಂತಿಮವಾಗಿ 2023ರ ಡಿಸೆಂಬರ್​ 8ರಂದು 'ಯಶ್​ 19' ಘೋಷಣೆಯಾಯ್ತು. ಸಣ್ಣ ಗ್ಲಿಂಪ್ಸ್ ಮೂಲಕ ಶೀರ್ಷಿಕೆ ಅನಾವರಣಗೊಳಿಸಲಾಯ್ತು. ವಿಡಿಯೋ ನೋಡಿದ ಯಶ್​ ಕಟ್ಟಾ ಅಭಿಮಾನಿಗಳು ಸಂತಸದಿಂದ ಕುಣಿದಿದ್ದರು.

ಟಾಕ್ಸಿಕ್ ಅಪ್​ಡೇಟ್ಸ್​? 'ಟಾಕ್ಸಿಕ್'​ ಶೀರ್ಷಿಕೆಯ 'ಯಶ್​ 19' ಸಿನಿಮಾವನ್ನು ಹೆಸರಾಂತ ನಿರ್ದೇಶಕರಾದ ಗೀತು ಮೋಹನ್​ ದಾಸ್​​ ನಿರ್ದೇಶಿಸಲಿದ್ದಾರೆ. ಜನಪ್ರಿಯ ಚಲನಚಿತ್ರ ನಿರ್ಮಾಣ ಸಂಸ್ಥೆಯಾಗಿರುವ ಕೆವಿಎನ್​ ಪ್ರೊಡಕ್ಷನ್ಸ್ ಅಡಿ ವೆಂಕಟ್​ ಕೆ ನಾರಾಯಣ ಅವರು ಬಂಡವಾಳ ಹೂಡಲಿದ್ದಾರೆ. ಶೀಘ್ರದಲ್ಲೇ ಶೂಟಿಂಗ್​ ಪ್ರಾರಂಭವಾಗುವ ನಿರೀಕ್ಷೆ ಇದೆ. 2025ರ ಏಪ್ರಿಲ್​ 10ರಂದು ಟಾಕ್ಸಿಕ್​ ತೆರೆಗಪ್ಪಳಿಸಲಿದೆ. ನಾಳೆ ನಟನ ಜನ್ಮದಿನ ಹಿನ್ನೆಲೆ ಈ ಚಿತ್ರದ ಅಪ್​ಡೇಟ್ಸ್ ಬರಬಹುದೆಂಬ ನಿರೀಕ್ಷೆ ಅಭಿಮಾನಿಗಳದ್ದು. ಕರೀನಾ ಕಪೂರ್​ ಖಾನ್​ ಚಿತ್ರದ ನಾಯಕಿ ಎಂದು ಹೇಳಲಾಗುತ್ತಿದೆ. ಎಲ್ಲದಕ್ಕೂ ಚಿತ್ರತಂಡ ಶೀಘ್ರವೇ ಅಧಿಕೃತ ಮಾಹಿತಿ ಕೊಡಲಿದೆ.

ಜನ್ಮದಿನದಂದು ಅಭಿಮಾನಿಗಳಿಗೆ ಯಶ್​ ಸಿಗುವುದಿಲ್ಲ: ಹೆಸರಾಂತ ನಟರನ್ನು, ತಮ್ಮ ಮೆಚ್ಚಿನ ನಟರನ್ನು ನೋಡುವ ಕಾತರ ಅಪಾರ ಸಂಖ್ಯೆಯ ಅಭಿಮಾನಿಗಳದ್ದಾಗಿರುತ್ತದೆ. ವಿಶೇಷವಾಗಿ ಅವರ ಜನ್ಮದಿನದಂದು ಈ ಭೇಟಿ ಸಾಧ್ಯವಾಗುತ್ತದೆ. ಆದ್ರೆ ಸೋಮವಾರ ಯಶ್​ ಅವರು ಅಭಿಮಾನಿಗಳಿಗೆ ಸಿಗುತ್ತಿಲ್ಲ. ಬಿಡುವಿಲ್ಲದ ಕೆಲಸದ ಹಿನ್ನೆಲೆ ಪ್ರಯಾಣ ಮಾಡಬೇಕಿರುವುದರಿಂದ ಜನವರಿ 8ರಂದು ನಿಮಗೆ ಸಿಗಲು ಆಗುತ್ತಿಲ್ಲ ಎಂದು ಈಗಾಗಲೇ ಸೊಷಿಯಲ್​ ಮೀಡಿಯಾ ಪೋಸ್ಟ್ ಮೂಲಕ ಯಶ್​ ತಿಳಿಸಿದ್ದಾರೆ.

ಯಶ್​ ಬರ್ತ್​​ಡೇ ಕಾಮನ್​ ಡಿಪಿ: ಯಶ್​ ಜನ್ಮದಿನದ ಸಲುವಾಗಿ ಈಗಾಗಲೇ 'ಯಶ್​ ಬರ್ತ್​ಡೇ ಸಿಡಿಪಿ' ಅನಾವರಣಗೊಂಡಿದೆ. ಈ ಕಾಮನ್​ ಡಿಪಿ ಅನಾವರಣಗೊಳಿಸಿದ್ದು ಬೇರೆ ಯಾರೂ ಅಲ್ಲ. ಕನ್ನಡದ ಹೆಸರಾಂತ ನಟ ಶಿವ ರಾಜ್​ಕುಮಾರ್​. ಹೌದು, ಜನವರಿ 5ರಂದು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ​ ಡಿಪಿ ಬಿಡುಗಡೆ ಮಾಡಿದ್ದ ಶಿವಣ್ಣ ''ಯಶ್ ಮತ್ತು ಅವರ ಎಲ್ಲಾ ಅಭಿಮಾನಿಗಳಿಗೂ ಶುಭಾಶಯಗಳು. ಸಿಡಿಪಿ ಬಹಳ ಚೆನ್ನಾಗಿದೆ. ಯಶ್​​ ಬರ್ತ್​ಡೇಯ ಕಾಮನ್ ಡಿಪಿ ಅನಾವರಣಗೊಳಿಸಲು ಸಂತೋಷವಾಗಿದೆ'' ಎಂದು ಬರೆದುಕೊಂಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.