ಹೈದರಾಬಾದ್: ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಸಿಕ್ಕಾಪಟ್ಟೆ ಸ್ಟೈಲಿಶ್ ಲುಕ್ನಲ್ಲಿ ಫೋಟೋ ಶೂಟ್ ನಡೆಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗಷ್ಟೇ ಬಟ್ಟೆ ಬ್ರಾಂಡ್ವೊಂದಕ್ಕೆ ಅವರು ತೆಗೆಸಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸಿಕ್ಕಾಪಟ್ಟೆ ಮೆಚ್ಚುಗೆ ಪಡೆದಿದೆ. ಇನ್ನು ಈ ಫೋಟೋಗೆ ನಟಿ ಮತ್ತು ಮಹೇಶ್ ಬಾಬು ಹೆಂಡತಿ ನಮ್ರತಾ ಶಿರೋಡ್ಕರ್ ಕೂಡ ಕಮೆಂಟ್ ಮಾಡಿದ್ದು, ಎಲ್ಲರ ಗಮನ ಸೆಳೆದಿದೆ.
ತೆಲುಗು ಸ್ಟಾರ್ ಜೋಡಿಗಳಲ್ಲಿ ಆದರ್ಶ ದಂಪತಿಗಳಲ್ಲಿ ಒಬ್ಬರು ನಟಿ ನಮ್ರತಾ ಮತ್ತು ಮಹೇಶ್ ಬಾಬು. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಕ್ರಿಯಾಶೀಲರಾಗಿರುವ ಈ ಜೋಡಿಗಳು ಆಗ್ಗಿಂದಾಗ್ಗೆ ತಮ್ಮ ಖಾಸಗಿ ಮತ್ತು ಕುಟುಂಬ ಸದಸ್ಯರ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಪರಸ್ಪರ ಕಮೆಂಟ್ ಮತ್ತು ಶುಭಾಶಯಗಳನ್ನು ಹೇಳುತ್ತಾರೆ. ಇದೀಗ ನಟ ಮಹೇಶ್ ಬಾಬು ಫೋಟೋಗೆ ನಟಿ ನಮ್ರತಾ ಕಮೆಂಟ್ ಮಾಡಿದ್ದಾರೆ.
- " class="align-text-top noRightClick twitterSection" data="
">
ಕಳೆದೊಂದು ವಾರದಿಂದ ಫೋಟೋಶೂಟ್ಗಳ ಚಿತ್ರಗಳನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ನಟ ಹಂಚಿಕೊಳ್ಳುತ್ತಿದ್ದು, ಎಲ್ಲರ ಮೆಚ್ಚುಗೆ ಪಡೆದಿದ್ದಾರೆ. ಅದರಲ್ಲೂ ನೀಲಿ ಬಣ್ಣದ ಸೂಟ್ನಲ್ಲಿ ಸ್ಟನ್ನಿಂಗ್ ಫೋಸ್ ನೀಡಿರುವ ಮಹೇಶ್ ಬಾಬು ಲುಕ್ ಅವರ ಅಭಿಮಾನಿಗಳನ್ನು ಹುಚ್ಚೇಬ್ಬಿಸಿದೆ. ಇದಕ್ಕೆ ಕಮೆಂಟ್ ಮಾಡಿರುವ ನಮ್ರತಾ, ಸೂಟ್ ಗೇಮ್ ಆನ್ ಪಾಯಿಂಟ್ ಎಂದಿದ್ದಾರೆ. ಇದರ ಜೊತೆಗೆ ಫೈರ್ ಎಮೋಜಿ ಹಾಕುವ ಮೂಲಕ ಗಂಡ ಮಹೇಶ್ ಕಿಲ್ಲಿಂಗ್ ಲುಕ್ಗೆ ಫಿದಾ ಗೊಳಿಸಿರುವುದಾಗಿ ತಿಳಿಸಿದ್ದಾರೆ.
ಹೆಂಡತಿ ನಮ್ರತಾ ಬೆನ್ನಲ್ಲೇ ಅಭಿಮಾನಿಗಳು ಕೂಡ ನಟ ಮಹೇಶ್ ಲುಕ್ಗೆ ಕಮೆಂಟ್ಗಳ ಮಳೆ ಸುರಿಸಿದ್ದಾರೆ. ಒಬ್ಬರು ಕಿಂಗ್ ಆಫ್ ಟಾಲಿವುಡ್ ಎಂದರೆ, ಮತ್ತೊಬ್ಬ ಅಭಿಮಾನಿ ನೀವು ಟಾಲಿವುಡ್ನ ಗ್ರೀಕ್ ದೇವತೆ ಎಂದಿದ್ದಾರೆ.
ನಿರೀಕ್ಷೆ ಮೂಡಿಸಿರುವ ಚಿತ್ರ: ಇನ್ನು ಕೆಲಸದ ವಿಷಯದಲ್ಲಿ ಹೇಳುವುದಾದರೆ, ಸದ್ಯ ಮಹೇಶ್ ಬಾಬು ಅವರು ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಜೊತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದು ಮಹೇಶ್ ಬಾಬು 28ನೇ ಸಿನಿಮಾವಾಗಿದ್ದು, ಈ ಚಿತ್ರದ ಟೈಟ್ ಇದುವರೆಗೂ ಬಿಡುಗಡೆಯಾಗಿಲ್ಲ. ಈ ಹಿಂದೆ ತ್ರಿವಿಕ್ರಮ್ ಜೊತೆ ಅತಡು ಮತ್ತು ಖಲೇಜಾ ಚಿತ್ರದಲ್ಲಿ ನಟ ಮಹೇಶ್ ಬಾಬು ಕಾರ್ಯ ನಿರ್ವಹಿಸಿದ್ದರು. ಇದೀಗ 12 ವರ್ಷದ ಬಳಿಕ ಮತ್ತೊಮ್ಮೆ ಈ ಜೋಡಿ ಜೊತೆಯಾಗಿದ್ದಾರೆ. ಈ ಚಿತ್ರದ ಕೂಡ ಸೂಪರ್ ಹಿಟ್ ಆಗುವ ನಿರೀಕ್ಷೆ ಮೂಡಿಸಿದ್ದು, ಈ ಚಿತ್ರ ಎಲ್ಲವೂ ಅಂದುಕೊಂಡಂತೆ ಆದಲ್ಲಿ ಮುಂದಿನ ವರ್ಷ ಅಂದರೆ ಸಕ್ರಾಂತಿ ಸಂಭ್ರಮದಲ್ಲಿ 2004ರ ಜನವರಿ 13ಕ್ಕೆ ಬಿಡುಗಡೆ ಕಾಣಲಿದೆ.
ಇದರ ಜೊತೆಗೆ ಮಹೇಶ್ ಬಾಬು, ನಿರ್ದೇಶಕ ಎಸ್ಎಸ್ ರಾಜಮೌಳಿ ಅವರ ಜೊತೆಗೂ ಸಿನಿಮಾ ಮಾಡಲು ಮುಂದಾಗಿದ್ದಾರೆ. ಇದು ಮಹೇಶ್ ಬಾಬು ಅಭಿನಯದ 29ನೇ ಚಿತ್ರವಾಗಿರಲಿದೆ. ನೈಜ ಘಟನೆ ಆಧಾರಿತ ಸಾಹಸ ಕಥೆ ಇದಾಗಿದೆ ಎನ್ನಲಾಗಿದೆ. ತ್ರಿವಿಕ್ರಮ ನಿರ್ದೇಶದನ ಸಿನಿಮಾ ಶೂಟಿಂಗ್ ಮುಗಿಯುತ್ತಿದ್ದಂತೆ ಈ ಚಿತ್ರದ ಶೂಟಿಂಗ್ ಆರಂಭವಾಗುವ ನಿರೀಕ್ಷೆ ಇದೆ ಎನ್ನಲಾಗಿದೆ.
ಇದನ್ನೂ ಓದಿ: 'ವೇದ್' ಸಕ್ಸಸ್: ರಿತೇಶ್ ದೇಶ್ಮುಖ್-ಜೆನಿಲಿಯಾಗೆ ಕಿಚ್ಚ ಸುದೀಪ್ ಅಭಿನಂದನೆ