ETV Bharat / entertainment

ಬಹುಕಾಲದ ಪ್ರೀತಿಗೆ ದಾಂಪತ್ಯದ ಮುದ್ರೆ ಒತ್ತಲು ಇಟಲಿಗೆ ಹಾರಿದ ವರುಣ್​ ತೇಜ್​ - ಲಾವಣ್ಯ ತ್ರಿಪಾಠಿ - etv bharat kannada

ಟಾಲಿವುಡ್​ ನಟರಾದ ವರುಣ್​ ತೇಜ್​ ಮತ್ತು ಲಾವಣ್ಯ ತ್ರಿಪಾಠಿ ನವೆಂಬರ್​ 1ರಂದು ಇಟಲಿಯಲ್ಲಿ ಮದುವೆಯಾಗಲಿದ್ದಾರೆ. ಈ ನಿಮಿತ್ತ ಜೋಡಿ ತಮ್ಮ ಕುಟುಂಬದ ಜೊತೆ ವಿದೇಶಕ್ಕೆ ಹಾರಿದ್ದಾರೆ.

Watch: Varun Tej and Lavanya Tripathi off to Italy for dreamy destination wedding
ಬಹುಕಾಲದ ಪ್ರೀತಿಗೆ ದಾಂಪತ್ಯದ ಮುದ್ರೆ ಒತ್ತಲು ಇಟಲಿಗೆ ಹಾರಿದ ವರುಣ್​ ತೇಜ್​- ಲಾವಣ್ಯ ತ್ರಿಪಾಠಿ
author img

By ETV Bharat Karnataka Team

Published : Oct 27, 2023, 12:30 PM IST

ಟಾಲಿವುಡ್​ ನಿರ್ಮಾಪಕ ನಾಗೇಂದ್ರ ಬಾಬು ಅವರ ಪುತ್ರ ಮೆಗಾ ಪ್ರಿನ್ಸ್​ ವರುಣ್​ ತೇಜ್​ ಇನ್ನೇನು ಕೆಲವೇ ದಿನಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ತಯಾರಾಗಿದ್ದಾರೆ. ಜೂನ್​ 9ರಂದು ನಟಿ ಲಾವಣ್ಯ ತ್ರಿಪಾಠಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವ ನಟ ಅದ್ಧೂರಿಯಾಗಿ ಮದುವೆಯಾಗಲಿದ್ದಾರೆ. ನವೆಂಬರ್ 1​ರಂದು ಇಟಲಿಯಲ್ಲಿ ವಿವಾಹ ಸಮಾರಂಭ ನಡೆಯಲಿದೆ. ಎರಡೂ ಕುಟುಂಬಗಳ ಸಮ್ಮುಖದಲ್ಲಿ ಮೂರು ದಿನಗಳ ಕಾಲ ಡೆಸ್ಟಿನೇಶನ್​ ವೆಡ್ಡಿಂಗ್​ ಪ್ಲಾನ್​ ಮಾಡಲಾಗಿದೆ.

ಇದೀಗ ಮದುವೆಯ ನಿಮಿತ್ತ ವರುಣ್​ ತೇಜ್​ ಮತ್ತು ಲಾವಣ್ಯ ತ್ರಿಪಾಠಿ ತಮ್ಮ ಕುಟುಂಬದ ಜೊತೆ ಇಟಲಿಗೆ ತೆರಳಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಇವರೆಲ್ಲರೂ ಹೈದರಾಬಾದ್​ನ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ವರುಣ್​ ವೈಟ್​ ಟಿ-ಶರ್ಟ್​ಗೆ ಬ್ಲ್ಯಾಕ್​ ಜಾಕೆಟ್​ ಮತ್ತು ಡೆನಿಮ್​ ಧರಿಸಿದ್ದರು. ಲಾವಣ್ಯ ತ್ರಿಪಾಠಿಬೀಜ್​ ಬಾಡಿಕಾನ್​ ಡ್ರೆಸ್​ನ್ನು ಆಯ್ಕೆ ಮಾಡಿಕೊಂಡಿದ್ದರು. ಇವರೊಂದಿಗೆ ವರುಣ್​ ಸಹೋದರಿ ನಿಹಾರಿಕಾ ಕೊನಿಡೇಲಾ ಮತ್ತು ನಟನ ಸೋದರ ಸಂಬಂಧಿ ವೈಷ್ಣವ್​ ತೇಜ್​ ಕೂಡ ಇದ್ದರು.

Watch: Varun Tej and Lavanya Tripathi off to Italy for dreamy destination wedding
ವರುಣ್​ ತೇಜ್​- ಲಾವಣ್ಯ ತ್ರಿಪಾಠಿ ಮದುವೆ ಆಮಂತ್ರಣ

ಆಮಂತ್ರಣ ಪತ್ರಿಕೆ ವೈರಲ್​: ವರುಣ್​ ತೇಜ್​ ಮತ್ತು ಲಾವಣ್ಯ ತ್ರಿಪಾಠಿ ಮದುವೆ ಆಮಂತ್ರಣ ಪತ್ರಿಕೆ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಸಿಲ್ವರ್​ ಬಣ್ಣದಲ್ಲಿರುವ ಈ ಕಾರ್ಡ್​ ನೋಡಲು ಆಕರ್ಷಕವಾಗಿದೆ. ಇದರಲ್ಲಿ ಮೊದಲು ವರುಣ್​ ಅವರ ಅಜ್ಜ-ಅಜ್ಜಿಯ ಹೆಸರನ್ನು ಮುದ್ರಿಸಲಾಗಿದೆ. ಬಳಿಕ ಚಿರಂಜೀವಿ, ಪವನ್​ ಕಲ್ಯಾಣ್​ ಮತ್ತು ರಾಮ್​ಚರಣ್​ ಹೆಸರನ್ನು ಬರೆಯಲಾಗಿದೆ. ವರುಣ್​ ಪೋಷಕರಾದ ನಾಗಬಾಬು ಹಾಗೂ ಪದ್ಮಜಾ ಮತ್ತು ಲಾವಣ್ಯ ಪೋಷಕರಾದ ಕಿರಣ್​ ಹಾಗೂ ದಿಯಾರಾಜ ತ್ರಿಪಾಠಿ ಹೆಸರು ಕೂಡ ಮದುವೆ ಕಾರ್ಡ್​ನಲ್ಲಿದೆ.

ಇದನ್ನೂ ಓದಿ: ಶೀಘ್ರದಲ್ಲೇ ವರುಣ್​​- ಲಾವಣ್ಯ ಮದುವೆ; ಮನೀಶ್​ ಮಲ್ಹೋತ್ರಾ ಶೋ ರೂಮ್​ನಲ್ಲಿ ಕಾಣಿಸಿಕೊಂಡ ಜೋಡಿ​

ಈ ಮೊದಲೇ ವರದಿಯಾದಂತೆ, ವರುಣ್​ ತೇಜ್​ ಮತ್ತು ಲಾವಣ್ಯ ತ್ರಿಪಾಠಿ ಮದುವೆ ನವೆಂಬರ್​ 1ರಂದು ಇಟಲಿಯ ಟಸ್ಕನಿಯ ಬೊರ್ಗೊ ಸ್ಯಾನ್​ ಫೆಲಿಸ್​ ರೆಸಾರ್ಟ್​ನಲ್ಲಿ ನಡೆಯಲಿದೆ. ಅದಕ್ಕೂ ಮುನ್ನ ಅಕ್ಟೋಬರ್​ 30ರಂದು ಕಾಕ್ಟೈಲ್​ ನೈಟ್​ನೊಂದಿಗೆ ಮದುವೆ ಸಂಭ್ರಮ ಶುರುವಾಗಲಿದೆ. ಅಕ್ಟೋಬರ್​ 31ರಂದು ಹಳದಿ ಮತ್ತು ಮೆಹಂದಿ ಕಾರ್ಯಕ್ರಮಗಳು ನಡೆಯಲಿದೆ. ವಿವಾಹದ ನಂತರ ಈ ದಂಪತಿ ತಮ್ಮ ಉದ್ಯಮದ ಸಹದ್ಯೋಗಿಗಳು, ಸ್ನೇಹಿತರಿಗಾಗಿ ಹೈದರಾಬಾದ್​ನಲ್ಲಿ ಆರತಕ್ಷತೆಯನ್ನು ಆಯೋಜಿಸುವ ನಿರೀಕ್ಷೆಯಿದೆ.

ಪ್ರೀತಿಗೆ ದಾಂಪತ್ಯದ ಮುದ್ರೆ: ವರುಣ್​ ತೇಜ್​ ಮತ್ತು ಲಾವಣ್ಯ ತ್ರಿಪಾಠಿ 2016 ರಿಂದ ಡೇಟಿಂಗ್​ನಲ್ಲಿದ್ದರು. ಇವರಿಬ್ಬರು 2017ರ 'ಮಿಸ್ಟರ್​' ಚಿತ್ರದ ಸೆಟ್​ನಲ್ಲಿ ಪರಸ್ಪರ ಭೇಟಿಯಾದರು. ಅಲ್ಲಿಂದ ಸ್ನೇಹ ಬೆಳೆದು ನಂತರ ಪ್ರೀತಿಸಲು ಶುರು ಮಾಡಿದರು. ಇದೇ ವರ್ಷ ಜೂನ್​ 9ರಂದು ಎಂಗೇಜ್​ಮೆಂಟ್​ ಮಾಡಿಕೊಳ್ಳುವ ಮೂಲಕ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದರು. ಇದೀಗ ಜೋಡಿ ತಮ್ಮ ಇಷ್ಟು ವರ್ಷದ ಪ್ರೀತಿಗೆ ದಾಂಪತ್ಯದ ಮುದ್ರೆ ಒತ್ತಲು ಸಜ್ಜಾಗಿದ್ದಾರೆ. ವರುಣ್​ ತೇಜ್​ ನಟ ಹಾಗೂ ನಿರ್ಮಾಪಕ ನಾಗೇಂದ್ರ ಬಾಬು ಅವರ ಪುತ್ರ. ಚಿರಂಜೀವಿ ಮತ್ತು ಪವನ್​ ಕಲ್ಯಾಣ್​ ಅವರ ಸೋದರಳಿಯ.

ಇದನ್ನೂ ಓದಿ: ಮೆಗಾ ಫ್ಯಾಮಿಲಿಯಲ್ಲಿ ಮದುವೆ ಸಂಭ್ರಮ: ಹಸೆಮಣೆ ಏರಲು ಸಜ್ಜಾದ ವರುಣ್​ ತೇಜ್ ​- ಲಾವಣ್ಯ ತ್ರಿಪಾಠಿ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.