ETV Bharat / entertainment

Watch: ಪಾಸ್​ಪೋರ್ಟ್​ ಮರೆತು ವಿಮಾನ ನಿಲ್ದಾಣದ ಪ್ರವೇಶ ದ್ವಾರದಲ್ಲೇ ನಿಂತ ಮೌನಿ ರಾಯ್​​ - ಫ್ಯಾಷನ್​ನಿಂದ ತನ್ನದೇ ಅಭಿಮಾನಿ

ತಡರಾತ್ರಿ ಮತ್ತು ಬೆಳಗಿನ ಜಾವದ ಕಾರ್ಯಕ್ರಮಗಳಿಂದಾಗಿ ಹರಿ ಬರಿಯಲ್ಲಿ ಪಾಸ್​ಪೋರ್ಟ್​ ಮರೆತು ಬಂದಿರುವುದಾಗಿ ತಿಳಿಸಿದ್ದಾರೆ

Watch: Mouni Roy frantically searches for passport at airport, fans say 'You are Naagin, what are you afraid of'

author img

By

Published : Jul 12, 2023, 4:57 PM IST

Updated : Jul 12, 2023, 6:29 PM IST

ಬೆಂಗಳೂರು: ತಮ್ಮ ಅದ್ಬುತ ಲುಕ್​ನಿಂದ ಸದಾ ಎಲ್ಲರ ಗಮನ ಸೆಳೆಯುವ ನಟಿ, ಮೌನಿ ರಾಯ್. ನಟನೆ, ಲುಕ್​, ಫ್ಯಾಷನ್​ನಿಂದ ತನ್ನದೇ ಅಭಿಮಾನಿ ಬಳಗವನ್ನು ಈ ನಟಿ ಹೊಂದಿದ್ದಾರೆ. ದಿನದಿಂದ ದಿನಕ್ಕೆ ತಮ್ಮ ಫ್ಯಾಷನ್​ನಿಂದ ಅಭಿಮಾನಿಗಳನ್ನು ಸೆಳೆಯುತ್ತಿರುವ ನಾಗಿನ್​ ನಟಿ ಮುಂಬೈನಲ್ಲಿ ನೀಲಿ ಬಣ್ಣದ ಕೋ ಆರ್ಡ್​ ಸೆಟ್​ನಲ್ಲಿ ಕಾಣಿಸಿಕೊಂಡಿದ್ದಾರೆ. ನೀಲಿ ಬಣ್ಣದ ಆರಾಮದಾಯಕ ಉಡುಗೆಗೆ ಬಿಳಿ ಸ್ನಿಕರ್ಸ್​​ ಅನ್ನು ಅವರು ತೊಟ್ಟಿದ್ದಾರೆ. ಕಪ್ಪು ಸನ್​ಗ್ಲಾಸ್​ ಜೊತೆ ಓಪನ್​ ಹೇರ್​ ಬಿಟ್ಟಿರುವ ಅವರ ಸ್ಟೈಲ್​ಗೆ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ.

ಮುಂಬೈನ ವಿಮಾನ ನಿಲ್ದಾಣದಲ್ಲಿ ಅಂದದ ಉಡುಗೆಯಲ್ಲಿ ಕಂಡು ಬಂದ ಆಕೆ ಪ್ರವೇಶದ್ವಾರದ ಮುಂದೆಯೇ ನಿಲ್ಲುವ ಪರಿಸ್ಥಿತಿ ಎದುರಾಯಿತು. ಕಾರಣ ಆಕೆ ಪಾಸ್​ಪೋರ್ಟ್​ ಅನ್ನು ಮರೆತು ಬಂದ ಹಿನ್ನೆಲೆ. ಪಾಸ್​ಪೋರ್ಟ್​ಗಾಗಿ ಅವರು ಬ್ಯಾಗ್​ನೆಲ್ಲ ಜಾಲಾಡಿದ್ದಾರೆ. ಆದರೆ, ಈ ವೇಳೆ ಎಲ್ಲೂ ಪಾಸ್​ಪೋರ್ಟ್​ ಕಂಡು ಬಂದಿಲ್ಲ. ಈ ಹಿನ್ನೆಲೆ ಪ್ರವೇಶ ದ್ವಾರದ ಬಳಿಯೇ ನಿಲ್ಲುವಂತೆ ಆಗಿದೆ. ಇದೇ ಸಮಯದಲ್ಲಿ ಅವರು ಪಾಪರಾಜಿಗಳತ್ತ ಸುಂದರ ನಗು ಚೆಲ್ಲಿ, ಕೈ ಆಡಿಸಿದ್ದಾರೆ.

ತಡರಾತ್ರಿ ಮತ್ತು ಬೆಳಗಿನ ಜಾವದ ಕಾರ್ಯಕ್ರಮಗಳಿಂದಾಗ ಹರಿ ಬಿರಿಯಲ್ಲಿ ಪಾಸ್​ಪೋರ್ಟ್​ ಮರೆತು ಬಂದಿರುವುದಾಗಿ ತಿಳಿಸಿದ್ದಾರೆ. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಬಳಕೆದಾರರೊಬ್ಬರು, 'ನೀವು ನಾಗಿನ್​, ಹೆದರುವುದು ಏಕೆ' ಎಂದಿದ್ದಾರೆ.

'2006ರಲ್ಲಿ 'ಕ್ಯೂಂಕಿ ಸಾಸ್​ ಬಿ ಕಬಿ ಬಹು ತಿ' ಎಂಬ ಟಿವಿ ಧಾರಾವಾಹಿ ಮೂಲಕ ನಟಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. 2011ರಲ್ಲಿ ಪಂಜಾಬಿ ಸಿನಿಮಾ 'ಹೀರೋ ಹಿಟ್ಲರ್​​ ಇನ್​ ಲವ್'​ ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಸಿದರು. ಇತ್ತೀಚೆಗೆ 'ದೊತರಾ' ಎಂಬ ಎಂಬ ಮ್ಯೂಸಿಕ್​ ಅಲ್ಬಂನಲ್ಲಿ ಅವರು ಕಾಣಿಸಿದ್ದಾರೆ. ಈ ಆಲ್ಬಂ ಹಾಡಿಗೆ ಜುಬಿನ್​ ನೌಟಿಯಾಲ್​ ಮತ್ತು ಪಯಲ್​ ದೇವ್​ ಧ್ವನಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿರುವ ಈ ವಿಡಿಯೋ ಯುಟ್ಯೂಬ್​ನಲ್ಲಿ 24 ಮಿಲಿಯನ್​ ವಿವ್ಯೂ ಗಳನ್ನು ಪಡೆದುಕೊಂಡಿದೆ.

ಮೌನಿ, ಅಬ್ಬಸ್​ ಆಲಿಬಾಯಿ ಬುರ್ಮವಾಲಾ ಮಸ್ತನ್​ ಮತ್ತು ಆಲಿಬಾಯ್​ ಬುರ್ಮಾವಾಲಾ ಅವರ ಕ್ರೈಂ, ಸಸ್ಪೆನ್ಸ್​​, ಥ್ರಿಲ್ಲರ್ ಚಿತ್ರ 'ಪೆಂಟಾಹೌಸ್'​ನಲ್ಲೂ ಅವರು ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಬಾಬಿ ಡಿಯೋಲ್​ ಮತ್ತು ಅರ್ಜುನ್​ ರಾಂಪಾಲ್​ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ. ಇದರ ಜೊತೆಗೆ ನಟಿ, ಸಂಜಯ್​ ದತ್​ ಅವರ 'ದಿ ವರ್ಜಿನ್​ ಟ್ರೀ ಇನ್​ ಆರ್​​ ಕಿಟ್ಟಿ'ಯಲ್ಲಿ ಕೂಡ ಕಾಣಿಸಿಕೊಳ್ಳಲಿದ್ದಾರೆ. 'ಕೆಜಿಎಫ್'​ ಚಿತ್ರದ ಹಿಂದಿ ವರ್ಷನ್​ನಲ್ಲಿ ನಟಿ ಪ್ರಮುಖ ಹಾಡಿಗೆ ಹೆಜ್ಜೆ ಹಾಕಿದ್ದರು. ಇದೇ ಹಾಡಿನ ದಕ್ಷಿಣ ಭಾರತದ ಭಾಷೆಗಳಲ್ಲಿ ನಟಿ ತಮನ್ನಾ ಭಾಟಿಯಾ ಸೊಂಟ ಬಳುಕಿಸಿದ್ದರು.

ಇದನ್ನೂ ಓದಿ: Watch: ಫ್ಯಾನ್ಸ್​ ಜೊತೆ ಏರ್​ಪೋರ್ಟ್​ನಲ್ಲಿ 'ಕಾವಾಲಾ' ಹಾಡಿಗೆ ಸ್ಟೆಪ್​ ಹಾಕಿದ ತಮನ್ನಾ ಭಾಟಿಯಾ

Last Updated : Jul 12, 2023, 6:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.