ETV Bharat / entertainment

Watch: ದೇಹ ದಂಡನೆಯಲ್ಲಿ ನಟಿ ಅಲಯಾ ಎಫ್: ತಾರೆಯ ಫಿಟ್‌ನೆಸ್ ವಿಡಿಯೋ ಕಂಡು ನೆಟಿಜನ್ಸ್​ ಶಾಕ್ - ಬಾಲಿವುಡ್​ ನಟಿ ಅಲಯಾ ಫಿಟ್​ನೆಸ್​ ವಿಡಿಯೋ

ಫಿಟ್​ನೆಸ್​ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಬಾಲಿವುಡ್​ ನಟಿ ಅಲಯಾ ಎಫ್ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.

Watch: Alaya F dumps fitness videos enduring punches, attempting yoga pose and falling
ತಾರೆಯ ಫಿಟ್‌ನೆಸ್
author img

By

Published : Aug 21, 2023, 2:06 PM IST

ಹೈದರಾಬಾದ್: ಫಿಟ್​ನೆಸ್​ ವಿಚಾರದಲ್ಲಿ ಮುತುವರ್ಜಿ ವಹಿಸುವ ಬಾಲಿವುಡ್​ ನಟಿಯರ ಪಟ್ಟಿಯಲ್ಲಿ ಅಲಯಾ ಎಫ್​ ಕೂಡ ಒಬ್ಬರು. ಉಲ್ಲಾಸ ಮತ್ತು ಉತ್ಸಾಹದಿಂದರಲೂ ತಪ್ಪದೇ ವರ್ಕೌಟ್​ ಮಾಡುವುದು ನಟಿಯ ಪ್ರತಿದಿನದ ಅಭ್ಯಾಸ. ಆಗಾಗ ತಮ್ಮ ಫಿಟ್​ನೆಸ್​ ವಿಡಿಯೋಗಳನ್ನು ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಫಾನ್ಸ್​ಗಳಿಗೆ ಈ ಬಗ್ಗೆ ಮಾರ್ಗದರ್ಶನ ನೀಡುತ್ತಿರುತ್ತಾರೆ.

ಸದ್ಯ ಯೋಗ, ತಾಲೀಮು ಮತ್ತು ನೃತ್ಯ ಮಾಡುತ್ತಿರುವ ಹಲವು ವಿಡಿಯೋಗಳನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದು ನೆಟಿಜನ್ಸ್​ ಫಿದಾ ಆಗಿದ್ದಾರೆ. ವಿಡಿಯೋಗೆ ಅಂದದ ಶೀರ್ಷಿಕೆ ಕೂಡ ನೀಡಿದ್ದಾರೆ. ಲೈಕ್​ ಮತ್ತು ಕಾಮೆಂಟ್​ ಮಾಡುವ ಮೂಲಕ ನಟಿಯ ವರ್ಕೌಟ್​ ಅನ್ನು ಹೊಗಳುತ್ತಿದ್ದಾರೆ. ನಟಿಯ ಈ ಫಿಟ್​ನೆಸ್ ವಿಡಿಯೋ ಜಾಲತಾಣದಲ್ಲಿ ಹೆಚ್ಚು ವೀಕ್ಷಣೆ ಕೂಡ ಕಂಡಿದೆ.

ನಟಿ ಅಲಯಾ ತಮ್ಮ ಜಿಮ್ ತರಬೇತಿಗಾರರಿಂದ ಹೊಟ್ಟೆಗೆ ಪಂಚ್‌ ನೀಡುತ್ತಿರುವುದನ್ನು ಮೊದಲ ವಿಡಿಯೊದಲ್ಲಿ ಕಾಣಬಹುದು. ನಗುತ್ತಲೇ ಪಂಚಿಂಗ್​ ಸ್ವೀಕರಿಸುತ್ತಿರುವುದನ್ನು ವಿಡಿಯೋದಲ್ಲಿ ಗಮನಿಸಬಹುದು. ತನ್ನ ನೃತ್ಯ ತರಬೇತಿದಾರರ ಜೊತೆ ಡಾನ್ಸ್​ ಮಾಡುತ್ತಿರುವುದನ್ನು ಎರಡನೇ ವಿಡಿಯೋದಲ್ಲಿ ನಾವು ಗಮನಿಸಬಹುದು. ಮೂರನೇ ವಿಡಿಯೋದಲ್ಲಿ ಯೋಗ, ನಾಲ್ಕನೇ ವಿಡಿಯೋದಲ್ಲಿ ಸ್ಕಿಪ್ಪಿಂಗ್, ಐದನೇ ವಿಡಿಯೋದಲ್ಲಿ ವರ್ಕೌಟ್ ಮಾಡುತ್ತಿರುವುದು​, ಆರನೇ ವಿಡಿಯೋದಲ್ಲಿ ಟೆನ್ನಿಸ್ ಆಟ ಆಡುತ್ತಿರುವುದು​, ಏಳನೇ ವಿಡಿಯೋದಲ್ಲಿ ಅಪಾಯಕಾರಿ ಯೋಗಾಸನ ಮಾಡುತ್ತಿರುವ ವಿಡಿಯೋಗಳನ್ನು ಅವರು ಹಂಚಿಕೊಂಡಿದ್ದಾರೆ. ದೇಹ ದಂಡಿಸುವ ನಟಿಯ ಹಲವು ವಿಡಿಯೋಗಳನ್ನು ಕಂಡು ನೆಟಿಜನ್ಸ್​ ಶಾಕ್​ ಆಗಿದ್ದಾರೆ.

ಕೆಲವರು ಅಚ್ಚರಿ ವ್ಯಕ್ತಪಡಿಸಿ "ನೀವು ಮಾಡಲಾಗದ ಯಾವುದಾದರೂ ಕೆಲಸ ಮತ್ತು ವರ್ಕೌಟ್​ ಇದೆಯೇ?, "ನೀವು ಎಲ್ಲದರಲ್ಲೂ ಪರಿಪೂರ್ಣರು", "ನಿಮ್ಮ ಪ್ರತಿದಿನದ ಈ ಯೋಗಾಭ್ಯಾಸ ನಮಗೂ ಸ್ಫೂರ್ತಿ" ಎಂದು ಕಾಮೆಂಟ್​ ಮಾಡಿದ್ದಾರೆ. ಇನ್ನು ಕೆಲವರು "ಅಪಾಯಕಾರಿ ವರ್ಕೌಟ್​ ಮಾಡುವುದರಿಂದ ಸ್ವಲ್ಪ ದೂರುವಿರಿ" ಎಂದು ಸಹ ಸಲಹೆ ನೀಡಿದ್ದಾರೆ. ಮತ್ತೆ ಕೆಲವು ಅಭಿಮಾನಿಗಳು ಅವರ ಫಿಟ್​ನೆಸ್​ ಪ್ರೀತಿಯನ್ನು ಶ್ಲಾಘಿಸಿ 'ಸ್ಟ್ರಾಂಗ್ ವುಮೆನ್' ಮತ್ತು 'ಕಿಲ್ಲಿಂಗ್ ಇಟ್' ನಂತಹ ಕಾಮೆಂಟ್‌ಗಳನ್ನು ಬರೆದಿದ್ದಾರೆ.

ನಟಿಯು ಕೆಲವು ದಿನಗಳ ಹಿಂದೆ ಬಿಕಿನಿಯಲ್ಲಿರುವ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದರು. ನಟಿಯ ಹಾಟ್ ಅವತಾರಕ್ಕೂ ಸಹ ನೆಟಿಜನ್ಸ್​ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅದಕ್ಕೂ ಮುನ್ನ ಬಗೆ ಬಗೆಯ ಬಟ್ಟೆಯಲ್ಲಿ ಕಾಣಿಸಿಕೊಂಡಿರುವ ಫೋಟೋಗಳಿಗೆ ಪೋಸ್​ ನೀಡಿದ್ದರು. ವೃತ್ತಿ ವಿಷಯದಲ್ಲಿ ಚೂಸಿಯಾಗಿರುವ ಅಲಯಾ, ಹಲವು ಹಿಟ್​ ಸಿನಿಮಾಗಳಲ್ಲಿ ನಟಿಸಿದ್ದಾರೆ. 2020 ರಲ್ಲಿ ಬಿಡುಗಡೆಯಾದ 'ಜವಾನಿ ಜಾನೆಮನ್' ಎಂಬ ಹಾಸ್ಯ ಸಿನಿಮಾದಲ್ಲಿ ನಟಿಸುವ ಮೂಲಕ ಅವರು ಮೊದಲ ಬಾರಿಗೆ ಬಣ್ಣದ ಲೋಕಕ್ಕೆ ಕಾಲಿಟ್ಟರು. ಫ್ರೆಡ್ಡಿ, ಆಲ್ಮೋಸ್ಟ್ ಪ್ಯಾರ್ ವ್ಯೂತ್​ ಡಿಜೆ ಮೊಹಬ್ಬತ್‌ ಇವರು ನಟಿಸಿದ ಸಿನಿಮಾಗಳು. ಶ್ರೀ, ಬಡೇ ಮಿಯಾನ್ ಚೋಟೆ ಮಿಯಾನ್, ಏಕ್ ಔರ್ ಗಜಬ್ ಕಹಾನಿ ಅವರ ನಟಿಸುತ್ತಿರುವ ಚಿತ್ರಗಳಾಗಿವೆ.

ಇದನ್ನೂ ಓದಿ: ನ್ಯೂಯಾರ್ಕ್‌ನಲ್ಲಿ 41ನೇ 'ಇಂಡಿಯಾ ಡೇ ಪರೇಡ್‌': ಗೌರವ ಅತಿಥಿಯಾಗಿ ನಟಿಯರಾದ ಸಮಂತಾ, ಜಾಕ್ವೆಲಿನ್ ಭಾಗಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.