ETV Bharat / entertainment

ಬಚ್ಚನ್ ಮೊಮ್ಮಗ ಅಗಸ್ತ್ಯ ನಂದಾ ಬರ್ತಡೇ: ರೂಮರ್​ ಗರ್ಲ್​​ಫ್ರೆಂಡ್​ ಸುಹಾನಾ ಖಾನ್​ ಜೊತೆ ಸೆಲೆಬ್ರೇಶನ್ - ಜಯಾ ಬಚ್ಚನ್

Agastya Nanda and Suhana Khan: ಅಮಿತಾಭ್ ಬಚ್ಚನ್ ಮೊಮ್ಮಗ ಅಗಸ್ತ್ಯ ನಂದಾ ಬರ್ತ್​​ಡೇ ಪಾರ್ಟಿಯಲ್ಲಿ ಶಾರುಖ್​ ಖಾನ್​ ಪುತ್ರಿ ಸುಹಾನಾ ಖಾನ್​​ ಕಾಣಿಸಿಕೊಂಡಿದ್ದಾರೆ.

Agastya Nanda Suhana Khan
ಅಗಸ್ತ್ಯ ನಂದಾ ಸುಹಾನಾ ಖಾನ್
author img

By ETV Bharat Karnataka Team

Published : Nov 23, 2023, 3:06 PM IST

ಅಮಿತಾಭ್ ಬಚ್ಚನ್ ಹಾಗೂ ಜಯಾ ಬಚ್ಚನ್ ದಂಪತಿಯ ಮೊಮ್ಮಗ ಅಗಸ್ತ್ಯ ನಂದಾ ಇಂದು ಜನ್ಮದಿನದ ಸಂಭ್ರಮದಲ್ಲಿದ್ದಾರೆ. 23ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಉದಯೋನ್ಮುಖ ನಟನಿಗೆ ಕುಟುಂಬಸ್ಥರು, ಸ್ನೇಹಿತರು ಸೇರಿದಂತೆ ಚಿತ್ರರಂಗದಿಂದ ಶುಭಾಶಯಗಳ ಸುರಿಮಳೆಯೇ ಹರಿದುಬಂದಿದೆ.

ಅಗಸ್ತ್ಯ ನಂದಾ ಜನ್ಮದಿನ: ಆರ್ಚೀಸ್ ಸ್ಟಾರ್​ನ ಫೋಟೋ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿವೆ. ಬರ್ತ್​​ಡೇ ಸೆಲೆಬ್ರೇಶನ್​ ವಿಡಿಯೋ ಕೂಡ ವೈರಲ್​ ಆಗಿದೆ. ಕೇಕ್ ಕಟ್​ ಮಾಡುವ ಸಂದರ್ಭ 'ದಿ ಆರ್ಚೀಸ್‌'ನ ಸಹ-ನಟಿ ಸುಹಾನಾ ಖಾನ್ ಸಹ ಉಪಸ್ಥಿತರಿದ್ದರು. ಶಾರುಖ್​​ ಖಾನ್​ ಪುತ್ರಿ ಬಚ್ಚನ್ ಮೊಮ್ಮಗ ಅಗಸ್ತ್ಯ ನಂದಾ ಜೊತೆ ಡೇಟಿಂಗ್​​ ನಡೆಸುತ್ತಿದ್ದಾರೆ ಎಂಬ ವದಂತಿ ಕೆಲ ದಿನಗಳಿಂದ ಇರೋದು ತಿಳಿದೇ ಇದೆ.

ಅಗಸ್ತ್ಯ ಜೊತೆ 'ದಿ ಆರ್ಚೀಸ್‌' ತಂಡ: ಅಗಸ್ತ್ಯ ನಂದಾ ಬರ್ತ್​ಡೇ ಸೆಲೆಬ್ರೇಶನ್​ನಲ್ಲಿ ಬಿಡುಗಡೆಗೆ ಸಜ್ಜಾಗಿರುವ 'ದಿ ಆರ್ಚೀಸ್‌' ಸಿನಿಮಾದ ಸಹ-ನಟರಾದ ಸುಹಾನಾ ಖಾನ್ ಮತ್ತು ಮಿಹಿರ್ ಅಹುಜಾ ಕಾಣಿಸಿಕೊಂಡಿದ್ದಾರೆ. ಮಿಹಿರ್ ಅಹುಜಾ ಅವರು ಫೋಟೋ, ವಿಡಿಯೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ವಿಡಿಯೋಗಳಲ್ಲಿ, ಅಗಸ್ತ್ಯ ನಂದಾ ಕೇಕ್​​ ಕತ್ತರಿಸುತ್ತಿದ್ದಾರೆ. ಸುಹಾನಾ ಪಕ್ಕದಲ್ಲಿ ನಿಂತಿದ್ದಾರೆ. ಗೆಳಯನ ಜನ್ಮದಿನದ ಸಂಭ್ರಮ ಸುಹಾನಾ ಮೊಗದಲ್ಲಿ ಎದ್ದು ಕಾಣುತ್ತಿದೆ. ಅಗಸ್ತ್ಯ ನಂದಾ ಜೊತೆಯೇ ಇದ್ದ ಶಾರುಖ್​ ಪುತ್ರಿ ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದಾರೆ. ಉಳಿದವರು ಹೆಚ್ಚು ಕಾಣಿಸಿಕೊಂಡಿಲ್ಲ. ಆದ್ರೆ ಗೆಳೆಯರ ಸೆಲೆಬ್ರೇಶನ್​ ಸೌಂಡ್​ ಸ್ಪಷ್ಟವಾಗಿ ಕೇಳಿಸಿದೆ. ಅಗಸ್ತ್ಯ ಮತ್ತು ಸುಹಾನಾ ಮ್ಯಾಚಿಂಗ್​ ಕಪ್ಪುಡುಗೆಯಲ್ಲಿ ಕಂಗೊಳಿಸಿದ್ದಾರೆ.

ಇದನ್ನೂ ಓದಿ: ಗ್ಲ್ಯಾಮರಸ್​ ಲುಕ್​​​ನಲ್ಲಿ ರಾಕುಲ್​​​ ಪ್ರೀತ್ ಸಿಂಗ್: ಸೌಂದರ್ಯಕ್ಕೆ ಫ್ಯಾನ್ಸ್ ಕೊಟ್ರು ಫುಲ್​ ಮಾರ್ಕ್ಸ್ ಫೋಟೋ ಗ್ಯಾಲರಿ

ಇಂದು ಬೆಳಗ್ಗೆ ನಟ ಅಭಿಷೇಕ್ ಬಚ್ಚನ್​ ಕೂಡ ಅಗಸ್ತ್ಯ ನಂದಾ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಅಗಸ್ತ್ಯ ಅವರ ಹಳೇ ಫೋಟೋ ಹಂಚಿಕೊಂಡ ನಟ, "ಹ್ಯಾಪಿ ಬರ್ತ್​ಡೇ ಆರ್ಚೀ ಆ್ಯಂಡ್ರೆವ್ಸ್. ಸ್ಟೇ ಕೂಲ್" ಎಂದು ಬರೆದಿದ್ದಾರೆ. ಅಗಸ್ತ್ಯ ಸಂದಾ, ಅಭಿಷೇಕ್ ಅವರ ಸಹೋದರಿ ಶ್ವೇತಾ ಬಚ್ಚನ್ ಅವರ ಪುತ್ರ.

ಇದನ್ನೂ ಓದಿ: ಸ್ಟೈಲಿಶ್​ ಲುಕ್​ನಲ್ಲಿ ಆಲಿಯಾ ಭಟ್; ಶಾರುಖ್​ ನಂತರದ ಸ್ಥಾನ ಬಣ್ಣದ ಲೋಕದ ಈ ಬೊಂಬೆಗೆ ಫೋಟೋಗಳಿವೆ ನೋಡಿ

ಚೊಚ್ಚಲ ಚಿತ್ರಕ್ಕೆ ಸುಹಾನಾ ಅಗಸ್ತ್ಯ ಸಜ್ಜು: ಅಗಸ್ತ್ಯ ಸಂದಾ, ಜೋಯಾ ಅಖ್ತರ್ ಅವರ ಮುಂದಿನ ಸಿನಿಮಾ 'ದಿ ಆರ್ಚೀಸ್‌' ಸಜ್ಜಾಗಿದ್ದಾರೆ. ಸಿನಿಮಾ ಡಿಸೆಂಬರ್ 7 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿರುತ್ತದೆ. ಅಗಸ್ತ್ಯ ಜೊತೆಗೆ ಶಾರುಖ್ ಪುತ್ರಿ ಸುಹಾನಾ ಖಾನ್ ಅವರ ಚೊಚ್ಚಲ ಚಿತ್ರ ಕೂಡ ಹೌದು. ಈ ಇಬ್ಬರೂ ಡೇಟಿಂಗ್​ ನಡೆಸುತ್ತಿದ್ದಾರೆಂಬುದು ಸೋಷಿಯಲ್​ ಮೀಡಿಯಾ ಬಳಕೆದಾರರ ಊಹೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.