ETV Bharat / entertainment

ಹೃತಿಕ್ ರೋಷನ್​​​, ಜೂ. ಎನ್​​ಟಿಆರ್ ನಟನೆಯ 'ವಾರ್​ 2' ರಿಲೀಸ್​ ಡೇಟ್ ರಿವೀಲ್ - ಅಯಾನ್‌ಮುಖರ್ಜಿ

ಹೃತಿಕ್ ರೋಷನ್, ಜೂನಿಯರ್ ಎನ್‌ಟಿಆರ್ ಮತ್ತು ಕಿಯಾರಾ ಅಡ್ವಾಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 'ವಾರ್​ 2' ಸಿನಿಮಾದ ರಿಲೀಸ್​ ಡೇಟ್ ರಿವೀಲ್ ಆಗಿದೆ.

War 2 release date
ವಾರ್​ 2 ರಿಲೀಸ್​ ಡೇಟ್
author img

By ETV Bharat Karnataka Team

Published : Nov 29, 2023, 5:05 PM IST

ಬಾಲಿವುಡ್​​ ಸೂಪರ್​ ಸ್ಟಾರ್ ಸಲ್ಮಾನ್ ಖಾನ್ ಹಾಗೂ ಬಹುಬೇಡಿಕೆ ತಾರೆ ಕತ್ರಿನಾ ಕೈಫ್ ನಟನೆಯ ಟೈಗರ್ 3 ಸಿನಿಮಾ ಪ್ರೇಕ್ಷಕರನ್ನು ತಲುಪುವಲ್ಲಿ ಯಶ ಕಂಡಿದೆ. ಸಿನಿಪ್ರಿಯರೀಗ ಯಶ್​ ರಾಜ್​ ಫಿಲ್ಮ್ಸ್​​ನ 'ಸ್ಪೈ ಯೂನಿವರ್ಸ್‌'ನಿಂದ ಮುಂದಿನ ಸ್ಪೈ ಸಿನಿಮಾ ನಿರೀಕ್ಷಿಸುತ್ತಿದ್ದಾರೆ. ವೈಆರ್​ಎಫ್​ನ ಮುಂದಿನ ಬಹುನಿರೀಕ್ಷಿತ ಸ್ಪೈ ಸಿನಿಮಾ ''ವಾರ್ 2''.

ಮುಂದಿನ ಬಹುನಿರೀಕ್ಷಿತ ಸ್ಪೈ ಥ್ರಿಲ್ಲರ್ 'ವಾರ್​ 2' ಬಿಡುಗಡೆ ದಿನಾಂಕ ಬಹಿರಂಗಗೊಂಡಿದೆ. 2025ರ ಸ್ವಾತಂತ್ರ್ಯ ದಿನಾಚರಣೆ ಸಂದರ್ಭ ಸಿನಿಮಾ ತೆರೆಗಪ್ಪಳಿಸಲಿದೆ. 2025ರ ಆಗಸ್ಟ್ 14 ರಂದು ಸಿನಿಮಾ ಚಿತ್ರಮಂದಿರ ಪ್ರವೇಶಿಸಲಿದೆ ಎಂದು ಸಿನಿಮಾ ವಿಮರ್ಶಕ ತರಣ್​ ಆದರ್ಶ್​ ತಿಳಿಸಿದ್ದಾರೆ. ಚಿತ್ರದಲ್ಲಿ ಹೃತಿಕ್ ರೋಷನ್, ಜೂನಿಯರ್ ಎನ್‌ಟಿಆರ್ ಮತ್ತು ಕಿಯಾರಾ ಅಡ್ವಾಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಸೋಷಿಯಲ್​ ಮೀಡಿಯಾಗಳಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಅಯಾನ್ ಮುಖರ್ಜಿ ನಿರ್ದೇಶನದ ಮತ್ತು ಯಶ್​ ರಾಜ್​ ಫಿಲ್ಮ್ಸ್ ನಿರ್ಮಾಣದ ವಾರ್ 2 ಬಾಕ್ಸ್ ಆಫೀಸ್‌ ಧೂಳೆಬ್ಬಿಸಲಿದೆ ಎಂದು ತಿಳಿಸಿದ್ದಾರೆ. ಜನಪ್ರಿಯ ಸೋಷಿಯಲ್​ ಮೀಡಿಯಾ ಪ್ಲಾಟ್​​ಫಾರ್ಮ್ ಎಕ್ಸ್​​ನಲ್ಲಿ ಪೋಸ್ಟ್ ಶೇರ್ ಮಾಡಿರುವ ತರಣ್​ ಆದರ್ಶ್, ''ಯಶ್​ ರಾಜ್​ ಫಿಲ್ಮ್ಸ್ ವಾರ್ 2ರ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. 2025ರ ಸ್ವಾತಂತ್ರ್ಯ ದಿನಾಚರಣೆ ಸಂದರ್ಭ ಸಿನಿಮಾ ತೆರೆಗಪ್ಪಳಿಸಲಿದೆ. ಯಶ್​ ರಾಜ್​ ಫಿಲ್ಮ್ಸ್​​ನ 'ಸ್ಪೈ ಯೂನಿವರ್ಸ್‌'ನ ಆರನೇ ಚಿತ್ರವಿದು. ವಾರ್​ 2 ಬಿಡುಗಡೆಗೆ ಮುಹೂರ್ತ ನಿಗದಿ ಆಗಿದೆ. ಯಶ್​ ರಾಜ್​ ಫಿಲ್ಮ್ಸ್ ನಿರ್ಮಾಣದ ಸಿನಿಮಾವನ್ನು ಅಯಾನ್‌ ಮುಖರ್ಜಿ ನಿರ್ದೇಶಿಸಿದ್ದಾರೆ" ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಕನ್ನಡದಲ್ಲೂ ಬಿಡುಗಡೆಯಾಗಲಿದೆ ರಶ್ಮಿಕಾರ 'ಅನಿಮಲ್​': ಬೆಂಗಳೂರಿನಲ್ಲಿ ಭರ್ಜರಿ ಪ್ರಚಾರ

ಆರ್​​ಆರ್​ಆರ್​ ಖ್ಯಾತಿಯ ಜೂನಿಯರ್ ಎನ್​​ಟಿಆರ್ ಹಾಗೂ ಬಾಲಿವುಡ್​ ಸೂಪರ್​ ಸ್ಟಾರ್ ಹೃತಿಕ್ ರೋಷನ್ ಕಾಂಬಿನೇಶನ್​ನ ಮೊದಲ ಸಿನಿಮಾ ಇದು. ಹಾಗಾಗಿ ಸಿನಿಪ್ರಿಯರು ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಹೊಂದಿದ್ದಾರೆ. ಚಿತ್ರ ನಿರ್ಮಾಣ ಸಂಸ್ಥೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸುವ ಕೆಲಸ ಮುಂದುವರಿಸಿದೆ. ವಾರ್ 2 ಸಿನಿಮಾ 2019ರ ಆ್ಯಕ್ಷನ್ ಥ್ರಿಲ್ಲರ್ ವಾರ್ ಚಿತ್ರದ ಮುಂದುವರಿದ ಭಾಗ. ಮೊದಲ ಭಾಗದಲ್ಲಿ ಹೃತಿಕ್ ರೋಷನ್, ಟೈಗರ್ ಶ್ರಾಫ್ ಮತ್ತು ವಾಣಿ ಕಪೂರ್ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: 17 ವರ್ಷಗಳ ಮುನಿಸು: ನಿರ್ದೇಶಕ ಅಮೀರ್​ ಬಳಿ ಕ್ಷಮೆಯಾಚಿಸಿದ ನಿರ್ಮಾಪಕ ಜ್ಞಾನವೇಲ್ ರಾಜಾ

ಸಿದ್ದಾರ್ಥ್ ಆನಂದ್ ನಿರ್ದೇಶಿಸಿದ ವಾರ್ 1 ಸೂಪರ್ ಹಿಟ್ ಆಯಿತು. ಬಿಡುಗಡೆಯಾದ ಒಂದು ವಾರದಲ್ಲಿ 200 ಕೋಟಿ ರೂ. ಗಳಿಸಿತ್ತು. 2019ರ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಸಿನಿಮಾಗಳಲ್ಲಿ ಒಂದಾಗಿ ಹೊರಹೊಮ್ಮಿತು. ಇನ್ನು, ಸಿದ್ಧಾರ್ಥ್ ಆನಂದ್ ನಿರ್ದೇಶನದ ವೈಮಾನಿಕ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಫೈಟರ್‌ ಬಿಡುಗಡೆಗೆ ಸಜ್ಜಾಗಿದೆ. ಹೃತಿಕ್ ರೋಷನ್ ಜೊತೆ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳಲಿದ್ದಾರೆ. ಜೂನಿಯರ್ ಎನ್‌ಟಿಆರ್ ಪ್ಯಾನ್ - ಇಂಡಿಯಾ ಸಿನಿಮಾ 'ದೇವರ'ದಲ್ಲಿ ಸೈಫ್ ಅಲಿ ಖಾನ್ ಮತ್ತು ಜಾನ್ವಿ ಕಪೂರ್ ಜೊತೆ ಕಾಣಿಸಿಕೊಳ್ಳಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.