'ದಿ ಕಾಶ್ಮೀರ್ ಫೈಲ್ಸ್' ಚಿತ್ರದ ಮೂಲಕ ಸಂಚಲನ ಮೂಡಿಸಿದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ. ಕೆಲವು ವಿವಾದಗಳಿಂದ ಅವರು ಆಗಾಗ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗಷ್ಟೇ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ವಿರುದ್ಧ ಅಗ್ನಿಹೋತ್ರಿ ಮಾತನಾಡಿರುವುದಾಗಿ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಈ ಬಗ್ಗೆ ಇದೀಗ ಸ್ವತಃ ಅಗ್ನಿಹೋತ್ರಿ ಅವರೇ ಸ್ಪಷ್ಟನೆ ನೀಡಿದ್ದಾರೆ. ಟ್ವೀಟ್ ಮಾಡುವ ಮೂಲಕ ಎಲ್ಲ ಸುಳ್ಳು ವದಂತಿಗಳಿಗೆ ತೆರೆ ಎಳೆದಿದ್ದಾರೆ.
-
Who is spreading such fake news attributing fake quotes to me? I respect Prabhas who is a mega mega star doing mega mega budget films.
— Vivek Ranjan Agnihotri (@vivekagnihotri) July 27, 2023 " class="align-text-top noRightClick twitterSection" data="
We make non-starter, small budget, people’s films. There is no comparison between us.
Pl spare me. https://t.co/IoHqdZGXCl
">Who is spreading such fake news attributing fake quotes to me? I respect Prabhas who is a mega mega star doing mega mega budget films.
— Vivek Ranjan Agnihotri (@vivekagnihotri) July 27, 2023
We make non-starter, small budget, people’s films. There is no comparison between us.
Pl spare me. https://t.co/IoHqdZGXClWho is spreading such fake news attributing fake quotes to me? I respect Prabhas who is a mega mega star doing mega mega budget films.
— Vivek Ranjan Agnihotri (@vivekagnihotri) July 27, 2023
We make non-starter, small budget, people’s films. There is no comparison between us.
Pl spare me. https://t.co/IoHqdZGXCl
ಅಗ್ನಿಹೋತ್ರಿ ಟ್ವೀಟ್: "ನಾನು ಮತ್ತೊಮ್ಮೆ ಪ್ರಭಾಸ್ ಚಿತ್ರಕ್ಕೆ ಪೈಪೋಟಿ ನೀಡುತ್ತಿದ್ದೇನೆ ಎಂಬ ಮಾತುಗಳು ಕೇಳಿಬರುತ್ತಿವೆ. ಇಂತಹ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿರುವವರು ಯಾರು? ಪ್ರಭಾಸ್ ಬಗ್ಗೆ ನನಗೆ ಅಪಾರ ಗೌರವವಿದೆ. ಅವರೊಬ್ಬ ಮೆಗಾ ಸ್ಟಾರ್. ಅವರು ಭಾರಿ ಬಜೆಟ್ ಚಿತ್ರಗಳನ್ನು ಮಾಡುತ್ತಾರೆ. ಆದರೆ, ನಾವು ಸ್ಟಾರ್ ನಟರಿಲ್ಲದೇ ಕಡಿಮೆ ಬಜೆಟ್ನಲ್ಲಿ ಜನ ಸಾಮಾನ್ಯರಿಗಾಗಿ ಸಿನಿಮಾ ಮಾಡುತ್ತೇವೆ. ನಮ್ಮ ನಡುವೆ ಯಾವುದೇ ಹೋಲಿಕೆ ಇಲ್ಲ. ದಯವಿಟ್ಟು ನನ್ನನ್ನು ಬಿಟ್ಟುಬಿಡಿ" ಎಂದು ವಿವೇಕ್ ಅಗ್ನಿಹೋತ್ರಿ ಟ್ವೀಟ್ ಮಾಡಿದ್ದಾರೆ. ಇದೀಗ ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ: 'ಮೈ ನೇಮ್ ಈಸ್ ಲಖನ್' ಸಾಂಗ್ ಆನಂದಿಸಿದ ವಿದೇಶಿಗ - ಮೆಚ್ಚಿನ ನಟ ಅನಿಲ್ ಕಪೂರ್ ಎದುರಿದ್ದರೂ ಗುರುತಿಸದ ಅಭಿಮಾನಿ
ನಿರ್ದೇಶಕನ ಸಿನಿಮಾ.. 'ದಿ ಕಾಶ್ಮೀರ್ ಫೈಲ್ಸ್' 2022ರ ಮಾರ್ಚ್ನಲ್ಲಿ ತೆರೆಕಂಡಿತ್ತು. ಮಿಶ್ರ ಪ್ರತಿಕ್ರಿಯೆ ಪಡೆದಿದ್ದ ಈ ಸಿನಿಮಾ ಎಲ್ಲೆಡೆ ಸಖತ್ ಸದ್ದು ಮಾಡಿತ್ತು. ವಿವೇಕ್ ಅಗ್ನಿಹೋತ್ರಿ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬಂದಿತ್ತು. ನಟ ಅನುಪಮ್ ಖೇರ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದರು. ಕಾಶ್ಮೀರಿ ಪಂಡಿತರ ವಲಸೆ ಮೇಲೆ ಕಥೆ ಹೆಣೆಯಲಾಗಿದೆ. ಇನ್ನು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಸದ್ಯ 'ದಿ ವ್ಯಾಕ್ಸಿನ್ ವಾರ್' ಸಿನಿಮಾ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. 'ದಿ ವ್ಯಾಕ್ಸಿನ್ ವಾರ್' ಸಿನಿಮಾದ ಮೇಲೆ ಜನರಿಗೆ ಸಾಕಷ್ಟು ನಿರೀಕ್ಷೆ ಇದೆ.
ಕೋವಿಡ್ ಸಂದರ್ಭದಲ್ಲಿನ ನೈಜ ಘಟನೆಗಳನ್ನು ಆಧರಿಸಿ ಚಿತ್ರ ತಯಾರಾಗುತ್ತಿದೆ. ಜೊತೆಗೆ, ಭಾರತೀಯ ವಿಜ್ಞಾನಿಗಳ ಕಥೆಯಾಧರಿತವಾಗಿದೆ. ಇದರಲ್ಲಿ ಸಪ್ತಮಿ ಗೌಡ ಪಾತ್ರ ಹೇಗಿರಲಿದೆ ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಹೊರ ಬರಬೇಕಿದೆ. ದಿ ವ್ಯಾಕ್ಸಿನ್ ವಾರ್ ಸಿನಿಮಾದ ಚಿತ್ರೀಕರಣ ಈಗಾಗಲೇ ನಡೆಯುತ್ತಿದೆ. ಈ ಸಿನಿಮಾ ದಸರಾ ವೇಳೆಗೆ 11 ಭಾಷೆಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ಚಿತ್ರದಲ್ಲಿ, ಖ್ಯಾತ ಬಾಲಿವುಡ್ ನಟ ಅನುಪಮ್ ಖೇರ್, ರೈಮಾ ಸೇನ್, ಸಪ್ತಮಿ ಗೌಡ, ನಾನಾ ಪಾಟೇಕರ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: ದುಲ್ಕರ್ ಸಲ್ಮಾನ್ ಹುಟ್ಟುಹಬ್ಬ: 'ಗನ್ಸ್ ಅಂಡ್ ಗುಲಾಬ್ಸ್' ಟ್ರೇಲರ್ ಡೇಟ್ ಅನೌನ್ಸ್