ETV Bharat / entertainment

ಅಭಿನಯ ಭಾರ್ಗವ ವಿಷ್ಣುವರ್ಧನ್ 13ನೇ ಪುಣ್ಯಸ್ಮರಣೆ - Vishnuvardhan

2009ರ ಡಿಸೆಂಬರ್ 30 ಡಾ. ವಿಷ್ಣುವರ್ಧನ್​​​ ಅಗಲಿದ ದಿನ. ಅವರ ಅಂತ್ಯ ಕ್ರಿಯೆ ಬಾಲಣ್ಣ ಅವರ ಅಭಿಮಾನ್ ಸ್ಟುಡಿಯೋ ಪಕ್ಕದಲ್ಲಿ ಡಿಸೆಂಬರ್ 31, 2009ರಂದು ಜರುಗಿತ್ತು. ಇಂದಿಗೆ ಅವರು ನಮ್ಮನ್ನು ಅಗಲಿ 13 ವರ್ಷಗಳು.

Vishnuvardhan death anniversary
ವಿಷ್ಣುವರ್ಧನ್ ಪುಣ್ಯಸ್ಮರಣೆ
author img

By

Published : Dec 30, 2022, 12:33 PM IST

ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿ ಹೋದ ವಿಷ್ಣುವರ್ಧನ್ ಅವರ 13ನೇ ಪುಣ್ಯಸ್ಮರಣೆಯನ್ನು ವಿವಿಧೆಡೆ ನಾನಾ ರೀತಿಯಲ್ಲಿ ಆಚರಿಸಲಾಗುತ್ತಿದೆ. 2009‌ರ ಡಿಸೆಂಬರ್ 30ರಂದು ಸಾಹಸಸಿಂಹ ವಿಷ್ಣುವರ್ಧನ್ ಅವರು ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು. ಆದರೆ, ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಇಂದಿಗೂ ವಿಷ್ಣು ದಾದ ಅಜರಾಮರ. ಅವರನ್ನ ಇಂದು ನಾನಾ ರೀತಿಯಲ್ಲಿ ಸ್ಮರಿಸುವ ಕಾರ್ಯ ಆಗುತ್ತಿದೆ.

18 ಸೆಪ್ಟೆಂಬರ್​ 1950ರಲ್ಲಿ ಶ್ರೀ ಹೆಚ್​​​​.ಎಲ್​. ನಾರಾಯಣ ರಾವ್ ಹಾಗೂ ಶ್ರೀಮತಿ ಕಾಮಾಕ್ಷಮ್ಮ ಪುತ್ರನಾಗಿ ವಿಷ್ಣುವರ್ಧನ್ ಮೈಸೂರಿನಲ್ಲಿ ಜನಿಸಿದರು. 2009 ಡಿಸೆಂಬರ್ 30 ಬೆಳಗಿನ ಜಾವ ಅವರು ನಿಧನರಾಗಿದ್ದು ಕೂಡಾ ಮೈಸೂರಿನ ಕಿಂಗ್ಸ್ ಕೋರ್ಟ್ ಹೋಟೆಲ್​​​ನಲ್ಲಿ. ಇಂದು ಅವರಿಗೆ ಗೌರವ ಸಲ್ಲಿಸುವ ಕಾರ್ಯ ನಡೆಯುತ್ತಿದೆ.

ನಾಗರಹಾವು ಸಿನಿಮಾಗೆ 50 ವರ್ಷ: ಡಾ ವಿಷ್ಣುವರ್ಧನ್ ಹಾಗೂ ಅಂಬರೀಶ್‌ ಅವರಂತಹ ದಿಗ್ಗಜ ನಟರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಚಿತ್ರ ನಾಗರಹಾವು. ಕನ್ನಡ ಸಿನಿಮಾರಂಗದ ಚಿತ್ರಬ್ರಹ್ಮ ಅಂತಾ ಕರೆಯಿಸಿಕೊಂಡಿರುವ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಈ ಮಾಸ್ಟರ್‌ಪೀಸ್ ಚಿತ್ರ 1972ರ ಡಿಸೆಂಬರ್ 29ರಂದು ತೆರೆಕಂಡು ನಿನ್ನೆಗೆ 50 ವರ್ಷ ತುಂಬಿದೆ.

ತ.ರಾ ಸುಬ್ಬರಾಯರ 3 ಕಾದಂಬರಿಗಳ ಕಥೆ, ಪುಟ್ಟಣ್ಣ ಕಣಗಾಲ್ ದಕ್ಷ ನಿರ್ದೇಶನ ಹಾಗೂ ವಿಜಯ ಭಾಸ್ಕರ್ ಸಂಗೀತ ಚಿತ್ರದ ಜೀವಾಳವಾಗಿತ್ತು. ವಂಶವೃಕ್ಷ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ವಿಷ್ಣುವರ್ಧನ್ ಪದಾರ್ಪಣೆ ಮಾಡಿದರು. ವಿಷ್ಣುವರ್ಧನ್ ಮೂಲ ಹೆಸರು ಸಂಪತ್ ಕುಮಾರ್. ಆದರೆ, ನಾಗರಹಾವು ಚಿತ್ರಕ್ಕಾಗಿ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಸಂಪತ್ ಕುಮಾರ್ ಹೆಸರಿನ ಬದಲು ವಿಷ್ಣುವರ್ಧನ್ ಅಂತಾ ಚೆಂಜ್​ ಮಾಡಿದರು.

ವಿಷ್ಣುವರ್ಧನ್ ಸಿನಿಮಾಗಳು: ವಂಶವೃಕ್ಷ, ಸೀತೆಯಲ್ಲ ಸಾವಿತ್ರಿ, ಮನೆ ಬೆಳಗಿದ ಸೊಸೆ, ಗಂಧದ ಗುಡಿ, ಬೂತಯ್ಯನ ಮಗ ಅಯ್ಯು, ಪ್ರೊಫೆಸರ್ ಹುಚ್ಚುರಾಯ, ಅಣ್ಣ ಅತ್ತಿಗೆ, ದೇವರಗುಡಿ, ಕೂಡಿ ಬಾಳೋಣ, ಆಪ್ತರಕ್ಷಕ, ಆಪ್ತಮಿತ್ರ, ಬಳ್ಳಾರಿ ನಾಗ, ಸಿವಂತ, ಏಕದಂತ, ಸಾಹುಕಾರ ಮುಂತಾದವು.

ಇದನ್ನೂ ಓದಿ: ಕನ್ನಡ ಚಿತ್ರರಂಗದ ಎವರ್‌ಗ್ರೀನ್‌ ನಾಗರಹಾವು ಸಿನಿಮಾಗೆ 50 ವರ್ಷಗಳ ಸಂಭ್ರಮ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.