ETV Bharat / entertainment

ವ್ಯಾಲಂಟೈನ್​ ದಿನದ ಸಂಭ್ರಮ ಹೆಚ್ಚಿಸಲು ಮುಂದಾದ ವಿರುಷ್ಕಾ, ರಾಹುಲ್​ - ಅಥಿಯಾ ಜೋಡಿ - ಇತ್ತೀಚೆಗಷ್ಟೇ ಮದುವೆಯ ಬಂಧನ

ಪ್ರೇಮಿಗಳ ದಿನವನ್ನು ವಿಶೇಷವಾಗಿಸುವ ಜೊತೆಗೆ ಕ್ರಿಕೆಟಿಗ ಹಾರ್ದಿಕ್​ ಪಾಂಡ್ಯಾ ಅವರ ಮದುವೆಯಲ್ಲಿ ಭಾಗಿಯಾಗಲು ಈ ಜೋಡಿ ಮುಂದಾಗಿದ್ದಾರೆ ಎನ್ನಲಾಗಿದೆ.

ವ್ಯಾಲಂಟೈನ್​ ದಿನದ ಸಂಭ್ರಮ ಹೆಚ್ಚಿಸಲು ಮುಂದಾದ ವಿರುಷ್ಕಾ, ರಾಹುಲ್​- ಅಥಿಯಾ ಜೋಡಿ

author img

By

Published : Feb 14, 2023, 4:18 PM IST

ಮುಂಬೈ: ಪ್ರೇಮಿಗಳ ದಿನವನ್ನು ವಿಶೇಷವಾಗಿ ಸಂಭ್ರಮಿಸಲು ಅನೇಕ ಜೋಡಿಗಳು ಕಾತುರದಿಂದ ಕಾಯುತ್ತಿರುತ್ತಾರೆ. ಅದರಂತೆ ಇತ್ತೀಚೆಗಷ್ಟೇ ಮದುವೆಯ ಬಂಧನಕ್ಕೆ ಒಳಗಾದ ಅಥಿಯಾ ಶೆಟ್ಟಿ ಮತ್ತು ರಾಹುಲ್​ ಗಾಂಧಿ ಈ ದಿನವನ್ನು ಮತ್ತಷ್ಟು ವಿಶೇಷವಾಗಿಸಲು ಮುಂದಾಗಿದ್ದಾರೆ. ಪ್ರೀತಿಸಿ ಮದುವೆಯಾದ ಬಳಿಕ ಈ ಜೋಡಿಯ ಮೊದಲ ವ್ಯಾಲಂಟೈನ್​ ಡೇ ಇದಾಗಿದೆ.

ಈ ಹಿನ್ನೆಲೆ ಈ ಇಬ್ಬರು ಈ ದಿನವನ್ನು ವಿಶೇಷವಾಗಿ ಆಚರಿಸಲು ವಿದೇಶಕ್ಕೆ ಹಾರಿದ್ದಾರೆ. ಇದಕ್ಕೂ ಮುನ್ನ ಅವರು ಮುಂಬೈ ವಿಮಾನ ನಿಲ್ದಾಣದಲ್ಲಿ ಕಂಡು ಬಂದಿದ್ದಾರೆ. ಇದರ ಜೊತೆ ಮತ್ತೊಂದು ಆದರ್ಶ ಜೋಡಿಗಳಾದ ವಿರಾಟ್​ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಕೂಡ ಮುಂಬೈ ವಿಮಾನ ನಿಲ್ದಾಣದಲ್ಲಿ ಪ್ಯಾಪಾರಾಜಿಗಳ ಕ್ಯಾಮೆರಾಕ್ಕೆ ಸಿಕ್ಕಿಬಿದ್ದಿದ್ದಾರೆ. ಈ ಎರಡು ಜೋಡಿಗಳು ಪ್ರೇಮಿಗಳ ದಿನ ಸಂಭ್ರಮ ಆಚರಿಸಲು ಪ್ರಯಾಣಿಸಿದ್ದಾರೆ ಎನ್ನಲಾಗಿದೆ.

ಇಂದು ಮುಂಜಾನೆ ವಿಮಾನ ನಿಲ್ದಾಣದಲ್ಲಿ ಕ್ಯಾಶುಯಲ್​ ಲುಕ್​ನಲ್ಲಿ ಅನುಷ್ಕಾ ಮತ್ತು ವಿರಾಟ್​ ಕಾಣಿಸಿಕೊಂಡಿದ್ದಾರೆ. ವಿರಾಟ್​ ವರ್ಕ್​ ಲೈಫ್​ನಷ್ಟೇ ಮಹತ್ವವನ್ನು ಕೌಟಂಬಿಕ ಜೀವನಕ್ಕೆ ನೀಡುತ್ತಾರೆ. ಸಮಯ ಸಿಕ್ಕಾಗೆಲ್ಲಾ ಈ ಜೋಡಿಗಳು ಪ್ರಯಾಣ ಬೆಳೆಸುತ್ತಿರುತ್ತಾರೆ. ಈ ಜೋಡಿಗಳು ಇದೀಗ ಪ್ರೇಮಿಗಳ ದಿನ ಆಚರಣೆಗೆ ಮುಂದಾಗಿದ್ದಾರೆ. ಇನ್ನು ವಿಮಾನ ನಿಲ್ದಾಣದಲ್ಲಿ ಅನುಷ್ಕಾ ಕಪ್ಪು ಬಣ್ಣದ ಸ್ವೆಟ್​ಶರ್ಟ್​, ಕಡು ನೀಲಿ ಬಣ್ಣದ ಟ್ರಾಕ್​ ಪ್ಯಾಂಟ್​ನಲ್ಲಿ ಕಂಡು ಬಂದಿದ್ದಾರೆ.

ಅನುಷ್ಕಾ ಮತ್ತು ವಿರಾಟ್​ ಕಂಡ ಕೆಲವು ಸಮಯದ ಬಳಿಕ ಅಥಿಯಾ ಮತ್ತು ರಾಹುಲ್​ ತಮ್ಮ ಸ್ಟೈಲಿಶ್​ ಲುಕ್​ ಮೂಲಕ ವಿಮಾನ ನಿಲ್ದಾಣದಲ್ಲಿ ಕಂಡು ಬಂದಿದ್ದಾರೆ. ಡೆನಿಮ್​ನಲ್ಲಿ ಅಥಿಯಾ ಕಂಡು ಬಂದರೆ, ಬಣ್ಣದ ಜಾಕೆಟ್​ನಲ್ಲಿ ರಾಹುಲ್​ ಕಾಣಿಸಿಕೊಂಡರು. ಇಬ್ಬರು ಕೂಡ ಬಿಳಿ ಬಣ್ಣದ ಟೀ ಶರ್ಟ್​ ತೊಟ್ಟಿದ್ದು, ಎಲ್ಲರ ಗಮನ ಸೆಳೆದಿದೆ. ಕಳೆದ ತಿಂಗಳಷ್ಟೇ ಮಹಾರಾಷ್ಟ್ರದಲ್ಲಿ ಅದ್ದೂರಿಯಾಗಿ ಈ ಜೋಡಿ ಮದುವೆಯಾಗಿದ್ದರು. ಇನ್ನು ಈ ಎರಡು ಜೋಡಿಗಳು ಪ್ರತ್ಯೇಕವಾಗಿ ವಿದೇಶ ಪ್ರಯಾಣ ನಡೆಸಿದ್ದು, ಎಲ್ಲಿಗೆ ಪ್ರಯಾಣ ನಡೆಸಿದ್ದಾರೆ ಎಂಬ ಮಾಹಿತಿ ಇಲ್ಲ.

ರಾಜಸ್ಥಾನದಲ್ಲಿ ಪಾಂಡ್ಯ: ಈ ನಡುವೆ ಈ ಇಬ್ಬರು ಕ್ರಿಕೆಟಿಗರ ಜೋಡಿ ತಮ್ಮ ತಂಡದ ಸಹ ಆಟಗಾರನಾಗಿರುವ ಆಲ್​ರೌಂಡರ್​​ ಕ್ರಿಕೆಟಿಗ ಹಾರ್ದಿಕ್​ ಪಾಂಡ್ಯಾ ಮದುವೆಯಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಹಾರ್ದಿಕ್​ ಪಾಂಡ್ಯ ತಮ್ಮ ಬಾಳ ಸಂಗಾತಿಯನ್ನು ಪ್ರೇಮಿಗಳ ದಿನದಂದು ಮರು ಮದುವೆಯಾಗುವ ಮೂಲಕ ಈ ದಿನವನ್ನು ವಿಶೇಷವಾಗಿ ಆಚರಿಸಲು ಮುಂದಾಗಿದ್ದಾರೆ. ಈ ಮದುವೆಯಲ್ಲಿ ಭಾಗಿಯಾಗಲು ಇವರು ರಾಜಸ್ಥಾನದ ಉದಯಪುರಕ್ಕೆ ಹಾರಿದ್ದಾರೆ ಎನ್ನಲಾಗಿದೆ.

ಕೋವಿಡ್​ ಹಿನ್ನೆಲೆ ರಿಜಿಸ್ಟರ್​ ಮದುವೆಯಾಗಿದ್ದ ಹಾರ್ದಿಕ್​ ಪಾಂಡ್ಯ ಉದಯಪುರದಲ್ಲಿ ನತಾಶಾ ಜೊತೆ ಅದ್ದೂರಿ ವಿವಾಹಕ್ಕೆ ಆಯೋಜನೆ ಮಾಡಿದ್ದಾರೆ. ಈಗಾಗಲೇ ಎರಡೂವರೆ ವರ್ಷದ ಮಗುವನ್ನು ಹೊಂದಿರುವ ಈ ಜೋಡಿಯ ಈ ಅದ್ಧೂರಿ ಮದುವೆ ಸಮಾರಂಭದಲ್ಲಿ, ಹಾರ್ದಿಕ್-ನತಾಶಾ ಅವರ ಸಂಬಂಧಿಗಳು, ಸ್ನೇಹಿತರು ಮತ್ತು ಕ್ರಿಕೆಟಿಗರು ಸೇರಿದಂತೆ ಬಾಲಿವುಡ್ ತಾರೆಯರು ಸಹ ಭಾಗವಹಿಸಲಿದ್ದಾರೆ.

ಇದನ್ನೂ ಓದಿ: ಪ್ರೇಮಿಗಳ ದಿನ: ಮತ್ತೆ ಮದುವೆಯಾಗಲಿರುವ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.