ETV Bharat / entertainment

ಋಷಿಕೇಶಕ್ಕೆ ತೆರಳಿದ 'ವಿರುಷ್ಕಾ' ದಂಪತಿ: ಸ್ವಾಮಿ ದಯಾನಂದ ಗಿರಿ ಆಶ್ರಮಕ್ಕೆ ಭೇಟಿ, ಪೂಜೆ - ಈಟಿವಿ ಭಾರತ ಕನ್ನಡ

ಕ್ರಿಕೆಟಿಗ ವಿರಾಟ್​ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಉತ್ತರಾಖಂಡದ ಋಷಿಕೇಶಕ್ಕೆ ತೆರಳಿದ್ದಾರೆ. ಅಲ್ಲಿನ ಸ್ವಾಮಿ ದಯಾನಂದ ಗಿರಿ ಆಶ್ರಮಕ್ಕೆ ಭೇಟಿ ನೀಡಿದ್ದಾರೆ.

rishikesh
ಋಷಿಕೇಶಕ್ಕೆ ತೆರಳಿದ 'ವಿರುಷ್ಕಾ' ದಂಪತಿ
author img

By

Published : Jan 31, 2023, 12:24 PM IST

ಋಷಿಕೇಶ್(ಉತ್ತರಾಖಂಡ): ಆಸ್ಟ್ರೇಲಿಯಾ ವಿರುದ್ಧದ ಭಾರತ ಟೆಸ್ಟ್​ ಸರಣಿಗೆ ಮುನ್ನ ಕ್ರಿಕೆಟಿಗ ವಿರಾಟ್​ ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾ ಉತ್ತರಾಖಂಡದ ಋಷಿಕೇಶ ಪ್ರವಾಸ ಕೈಗೊಂಡಿದ್ದಾರೆ. ವಿರುಷ್ಕಾ ದಂಪತಿ ಸ್ವಾಮಿ ದಯಾನಂದ ಗಿರಿ ಆಶ್ರಮಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ವಿರಾಟ್​ ಮತ್ತು ಅನುಷ್ಕಾ ಆಶ್ರಮದಲ್ಲಿ ಧಾರ್ಮಿಕ ವಿಧಿ ವಿಧಾನಗಳಲ್ಲಿ ಪಾಲ್ಗೊಂಡರು. ಈ ಹಿಂದೆ ದಂಪತಿ ತಮ್ಮ ಮಗಳು ವಮಿಕಾ ಜೊತೆಗೆ ವೃಂದಾವನದ ಆಶ್ರಮಕ್ಕೆ ಭೇಟಿ ನೀಡಿದ್ದರು. ಇದೀಗ ಕೆಲ ದಿನಗಳ ನಂತರ ಋಷಿಕೇಶಕ್ಕೆ ತೆರಳಿ ಆಶೀರ್ವಾದ ಪಡೆದಿದ್ದಾರೆ.

ದೇವರಿಗೆ ಥ್ಯಾಂಕ್ಸ್ ಹೇಳಿದ್ದ ಕೊಹ್ಲಿ: ಸುಂದರ ಕುಟುಂಬ ಕರುಣಿಸಿದ್ದಕ್ಕಾಗಿ ಕ್ರಿಕೆಟಿಗ ವಿರಾಟ್ ಕೊಹ್ಲಿ ದೇವರಿಗೆ​ ಕೃತಜ್ಞತೆ ಸಲ್ಲಿಸಿದ್ದರು. ಕೊಹ್ಲಿ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದು, ಸದಾ ಆಶೀರ್ವಾದ ನೀಡುತ್ತಿರುವ ದೇವರಿಗೊಂದು ಕೃತಜ್ಞತೆ ಸಮರ್ಪಿಸಿದ್ದಾರೆ. ತಮ್ಮ ಮುದ್ದಾದ ಮಗಳು ವಮಿಕಾ ಜೊತೆ ವಿರುಷ್ಕಾ ದಂಪತಿ ಕಡಲ ತೀರದಲ್ಲಿ ಹೆಜ್ಜೆ ಹಾಕುತ್ತಿರುವ ಫೋಟೋ ಇದಾಗಿದೆ. ಈ ಚಿತ್ರಕ್ಕೆ ವಿರುಷ್ಕಾ ಅಭಿಮಾನಿಗಳು ಕಮೆಂಟ್​ ಮಾಡಿದ್ದು, 'ದೇವರು ನಿಮ್ಮ ಕುಟುಂಬವನ್ನು ಚೆನ್ನಾಗಿಟ್ಟಿರಲಿ' ಎಂದು ಹಾರೈಸಿದ್ದರು.

ಆಸ್ಟ್ರೇಲಿಯಾ ವಿರುದ್ಧ ಭಾರತ ಟೆಸ್ಟ್​ ಸರಣಿ: ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾ ಶೀಘ್ರವೇ ಭಾರತ ಪ್ರವಾಸ ಕೈಗೊಳ್ಳಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಅಗ್ರ ಎರಡು ಸ್ಥಾನಗಳನ್ನು ನಿರ್ಧರಿಸುವಲ್ಲಿ ಈ ಸರಣಿ ನಿರ್ಣಯಕವಾಗಿದೆ. ಜೂನ್‌ನಲ್ಲಿ ದಿ ಓವಲ್‌ ಮೈದಾನದಲ್ಲಿ ಚಾಂಪಿಯನ್‌ಶಿಪ್ ಫೈನಲ್​ ಪಂದ್ಯ ನಡೆಯಲಿದೆ.

ಇದನ್ನೂ ಓದಿ: ಉತ್ತರಾಖಂಡದ ಕೈಂಚಿ ಬಾಬಾ ಆಶ್ರಮದಲ್ಲಿ ವಿರಾಟ್ ಕೊಹ್ಲಿ- ಅನುಷ್ಕಾ: ಹನುಮಾನ್ ಚಾಲೀಸ್ ಪಠಣ

ಪ್ರೀತಿಸಿ ಮದುವೆಯಾದ ವಿರುಷ್ಕಾ: ಜಾಹೀರಾತಿನ ಚಿತ್ರೀಕರಣವೊಂದರಲ್ಲಿ ಭೇಟಿಯಾಗಿ ಕೆಲವು ವರ್ಷಗಳ ಕಾಲ ಪ್ರೀತಿಯಲ್ಲಿ ಮುಳುಗಿದ್ದ ಈ ಜೋಡಿ 2017 ಡಿಸೆಂಬರ್ 11ರಂದು ಇಟಲಿಯಲ್ಲಿ ದಾಂಪತ್ಯದ ಮುದ್ರೆ ಒ್ತತಿದ್ದರು. ಬಳಿಕ ನವದೆಹಲಿ ಹಾಗೂ ಮುಂಬೈನಲ್ಲಿ ರಿಸೆಪ್ಷನ್​ ಪಾರ್ಟಿ ಆಯೋಜಿಸಿದ್ದರು. ಪ್ರಧಾನಿ ಮೋದಿ, ಬಾಲಿವುಡ್ ಮತ್ತು ಕ್ರಿಕೆಟ್ ತಾರೆಯರು ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. 2021ರ ಜನವರಿ 11 ರಂದು ತಾರಾ ದಂಪತಿಗೆ ಹೆಣ್ಣು ಮಗು ಜನಿಸಿದ್ದು, 'ವಮಿಕಾ' ಎಂದು ನಾಮಕರಣ ಮಾಡಿದ್ದರು. ಎರಡು ತಿಂಗಳ ಹಿಂದೆ ಈ ಜೋಡಿ ತಮ್ಮ 5ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದರು.

ಪುತ್ರಿಯೊಂದಿಗೆ ಅನುಷ್ಕಾ ಬ್ಯುಸಿ: ಅನುಷ್ಕಾ ಶರ್ಮಾ ಮಗಳ ಆರೈಕೆಯಲ್ಲಿ ತೊಡಗಿದ್ದು, ಫುಲ್​ ಬ್ಯುಸಿಯಾಗಿದ್ದಾರೆ. 2018 ರಲ್ಲಿ ಶಾರುಖ್ ಖಾನ್ ನಟನೆಯ ಜೀರೋ ಚಿತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು. ಸದ್ಯ ಕ್ರಿಕೆಟ್​ ಪಟು ಜೂಲನ್ ಗೋಸ್ವಾಮಿ ಅವರ ಜೀವನಚರಿತ್ರೆ ಚಕ್ದಾ ಎಕ್ಸ್‌ಪ್ರೆಸ್‌ ಚಿತ್ರದ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಚಿತ್ರವು ಶೀಘ್ರದಲ್ಲೇ ತೆರೆ ಕಾಣಲಿದೆ.

ಇದನ್ನೂ ಓದಿ: 'ದೀಪಿಕಾ ಅಮರ್​​, ಜಾನ್​ ಅಬ್ರಾಹಂ ಅಕ್ಬರ್​, ನಾನು ಅಂಥೋನಿ': ಪಠಾಣ್‌ ಬಗ್ಗೆ ಶಾರುಖ್​ ಒಗ್ಗಟ್ಟಿನ ವ್ಯಾಖ್ಯಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.