ETV Bharat / entertainment

ಕಮಲ್​ ಹಾಸನ್​ ಬರ್ತ್​ಡೇ ಪಾರ್ಟಿ: ಒಂದೇ ಫ್ರೇಮ್​ನಲ್ಲಿ ಸೆರೆಯಾದ ಸೂರ್ಯ- ಅಮೀರ್​ ಖಾನ್​​ - ಈಟಿವಿ ಭಾರತ ಕನ್ನಡ

Kamal Haasan's 69th birthday bash: ನಟ ಕಮಲ್ ಹಾಸನ್ ಬರ್ತ್​ಡೇ ಪಾರ್ಟಿಯಲ್ಲಿ ಭಾರತೀಯ ಚಿತ್ರರಂಗದ ಸೂಪರ್​ಸ್ಟಾರ್​ ನಟರಾದ ಸೂರ್ಯ ಮತ್ತು ಅಮೀರ್​ ಖಾನ್​ ಜೊತೆಯಾಗಿ ಕಾಣಿಸಿಕೊಂಡರು.

Viral alert! Suriya and Aamir Khan, 'two Ghajinis in one frame' at Kamal Haasan's 69th birthday bash
ಕಮಲ್​ ಹಾಸನ್​ ಬರ್ತ್​ಡೇ ಪಾರ್ಟಿ: ಒಂದೇ ಫ್ರೇಮ್​ನಲ್ಲಿ ಸೆರೆಯಾದ ಸೂರ್ಯ-ಅಮೀರ್​ ಖಾನ್​​
author img

By ETV Bharat Karnataka Team

Published : Nov 7, 2023, 11:00 PM IST

ದಕ್ಷಿಣ ಭಾರತದ ಸಿನಿಮೋದ್ಯಮದಲ್ಲಿ ಹಿರಿಯ ನಟ, ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ಕಮಲ್ ಹಾಸನ್ ಇಂದು ತಮ್ಮ 69ನೇ ವರುಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಅವರು ತಮಿಳುನಾಡಿನ ಚೆನ್ನೈನಲ್ಲಿ ಸ್ನೇಹಿತರು, ಸಹದ್ಯೋಗಿಗಳಿಗಾಗಿ ಪಾರ್ಟಿಯನ್ನು ಆಯೋಜಿಸಿದ್ದರು. ಈ ಸಂತೋಷಕೂಟದಲ್ಲಿ ತಮಿಳು ಚಿತ್ರರಂಗದ ಅನೇಕ ಗಣ್ಯರು ಭಾಗಿಯಾಗಿದ್ದರು. ಜೊತೆಗೆ ಬಾಲಿವುಡ್​ ಸೂಪರ್​ಸ್ಟಾರ್​ ಅಮೀರ್​ ಖಾನ್​ ಕೂಡ ಭಾಗಿಯಾಗಿದ್ದು, ಅಭಿಮಾನಿಗಳಿಗೆ ಅಚ್ಚರಿ ತಂದಿತು.

'ಉಲಗ ನಾಯಗನ್​' ಎಂದೇ ಕರೆಯಲ್ಪಡುವ ಕಮಲ್​ ಹಾಸನ್​ ಅವರು ತಮ್ಮ ಬರ್ತ್​ಡೇ ಪಾರ್ಟಿಯನ್ನು ಚೆನ್ನೈನ ಬೆಲೆಬಾಳುವ ದೊಡ್ಡ ಹೋಟೆಲ್​ನಲ್ಲಿ ಆಯೋಜಿಸಿದ್ದರು. ಸೆಲೆಬ್ರೇಶನ್​ನಲ್ಲಿ ತಮಿಳು ಚಿತ್ರೋದ್ಯಮ ಭಾಗಿಯಾಗಿತ್ತು. ಕಾಲಿವುಡ್​ ಸೂಪರ್​ಸ್ಟಾರ್​ ನಟ ಸೂರ್ಯ ಹಾಜರಿದ್ದರು. ಆದರೆ, ಬಾಲಿವುಡ್​ ನಟ ಅಮೀರ್​ ಖಾನ್​ ಅವರು ಅನಿರೀಕ್ಷಿತವಾಗಿ ಕಾಣಿಸಿಕೊಂಡಿದ್ದು, ಬರ್ತ್​ಡೇ ಪಾರ್ಟಿಯ ಸಂಭ್ರಮವನ್ನು ಮತ್ತಷ್ಟು ವಿಶೇಷವಾಗಿಸಿತ್ತು. ಈ ವೇಳೆ ಅಮೀರ್​ ಖಾನ್​ ಮತ್ತು ಸೂರ್ಯ ಒಂದೇ ಫ್ರೇಮ್​ನಲ್ಲಿ ಸೆರೆಯಾಗಿದ್ದಾರೆ.

  • இந்தி’ய திரையுலகில் அவருடைய படங்கள் மூலம்,
    மிக உயர்வாக மதிக்கப்படும் சிறந்த நடிகர்.
    ஒவ்வொரு முறையும் என்னை ஆச்சர்ய ஆனந்தத்தில் திளைக்க வைக்கும் மனிதர். நேற்றிரவு கமல் சார் பிறந்த நாளில் … நடப்பவை(பவங்)களை ஒரு ஒதுக்கு புறமாக நின்று ரசித்துக் கொண்டிருந்த என்னை கண்டு ஓடி வந்து… pic.twitter.com/ajZok5kUrr

    — Radhakrishnan Parthiban (@rparthiepan) November 7, 2023 " class="align-text-top noRightClick twitterSection" data=" ">

ಖ್ಯಾತ ಛಾಯಾಗ್ರಾಹಕ ರವಿ ಕೆ ಚಂದ್ರನ್ ಅವರು ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಅವರು ಅಮೀರ್ ಖಾನ್ ಮತ್ತು ಸೂರ್ಯ ಇಬ್ಬರನ್ನೂ ಒಳಗೊಂಡ ಸ್ಮರಣೀಯ ಸೆಲ್ಫಿಯನ್ನು ಹಂಚಿಕೊಂಡಿದ್ದಾರೆ. "ಕಮಲ್​ ಹಾಸನ್​ ಬರ್ತ್​ಡೇ ಪಾರ್ಟಿಯಲ್ಲಿ ಒಂದೇ ಫ್ರೇಮ್​ನಲ್ಲಿ ಎರಡು ಗಜಿನಿಗಳು" ಎಂದು ಕ್ಯಾಪ್ಶನ್​ ನೀಡಿದ್ದಾರೆ. ಈ ಫೋಟೋವು 119.9K ವೀಕ್ಷಣೆಯನ್ನು ಪಡೆದಿದೆ. ಅಪರೂಪಕ್ಕೆ ಸ್ಟಾರ್​ ನಟರಿಬ್ಬರು ಒಂದೇ ಫ್ರೇಮ್​ನಲ್ಲಿ ಕಾಣಿಸಿಕೊಂಡಿದ್ದು, ಫೋಟೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಇದನ್ನೂ ಓದಿ: ಹ್ಯಾಪಿ ಬರ್ತ್​ಡೇ ಕಮಲ್​ ಹಾಸನ್!​ ಮೂರು ದಶಕಗಳ ನಂತರ ಮಣಿರತ್ನಂ 'Thug Life'ನಲ್ಲಿ ಅಭಿನಯ

ಮತ್ತೊಂದೆಡೆ, ನಿರ್ದೇಶಕ ಮತ್ತು ನಟ ಪಾರ್ತಿಬನ್​ ಅವರು ಅಮೀರ್​ ಖಾನ್​ ಜೊತೆಗಿನ ಫೋಟೋವನ್ನು ಎಕ್ಸ್​ನಲ್ಲಿ ಹಂಚಿಕೊಂಡಿದ್ದಾರೆ. ಕಮಲ್​ ಹಾಸನ್​ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲೇ ಕ್ಲಿಕ್ಕಿಸಿದ ಫೋಟೋ ಇದಾಗಿದೆ. ಸೆಲ್ಫಿ ಹಂಚಿಕೊಳ್ಳುವುದರ ಜೊತೆಗೆ, ಕ್ಯಾಪ್ಶನ್​ನಲ್ಲಿ ಅಮೀರ್​ ಖಾನ್​ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಭಾರತೀಯ ಚಿತ್ರರಂಗದ ಅತ್ಯಂತ ನೆಚ್ಚಿನ ವ್ಯಕ್ತಿಗಳಲ್ಲಿ ಇವರೂ ಒಬ್ಬರು ಎಂದು ಬಣ್ಣಿಸಿದ್ದಾರೆ. ಜೊತೆಗೆ ಕೆಲವು ವೈಯಕ್ತಿಕ ವಿಚಾರವಾಗಿ ಮಾತುಕತೆ ನಡೆಸಿರುವುದಾಗಿ ಬರೆದುಕೊಂಡಿದ್ದಾರೆ.

'ಕಲ್ಕಿ 2898 AD' ಕಮಲ್​ ಫಸ್ಟ್​ ಲುಕ್​ ಔಟ್​: ಕಮಲ್​ ಹಾಸನ್​ ಅವರ ಮುಂಬರುವ ಬಹುನಿರೀಕ್ಷಿತ ಚಿತ್ರ 'ಕಲ್ಕಿ 2898 AD'. ಪ್ಯಾನ್​ ಇಂಡಿಯಾ ಸ್ಟಾರ್​ ಪ್ರಭಾಸ್​ ಸೇರಿದಂತೆ ಬಹುತಾರಾಗಣವಿರುವ ಹೈ ಬಜೆಟ್​ ಸಿನಿಮಾವಿದು. ಇಂದು ಕಮಲ್​ ಹಾಸನ್​ ಜನ್ಮದಿನದ ಹಿನ್ನೆಲೆ ಚಿತ್ರತಂಡ ಅವರ ಫಸ್ಟ್​ ಲುಕ್​ ಅನ್ನು ಬಿಡುಗಡೆಗೊಳಿಸಿದೆ. ಡಿಫರೆಂಟ್​ ಸ್ಟೈಲ್​ನಲ್ಲಿರುವ ಈ ಪೋಸ್ಟರ್​ ವೈರಲ್​ ಆಗುತ್ತಿದೆ.

ಇದನ್ನೂ ಓದಿ: ಕಮಲ್ ಹಾಸನ್ ಜನ್ಮದಿನ: ಇಂಡಿಯನ್ 2 ಪೋಸ್ಟರ್ ರಿಲೀಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.