ವಿಶ್ವದ ಪ್ರತಿಷ್ಠಿತ 95ನೇ ಆಸ್ಕರ್ ಅಕಾಡಮಿ ಪ್ರಶಸ್ತಿಯ ಅರ್ಹತೆ ವಿಭಾಗದಲ್ಲಿ ಕಿಚ್ಚ ಸುದೀಪ್ ನಟನೆಯ 'ವಿಕ್ರಾಂತ್ ರೋಣ' ಕೂಡ ಕಾಣಿಸಿಕೊಂಡಿದೆ. 'ಕಾಂತಾರ' ಸೇರಿದಂತೆ ಟಾಪ್ ಸಿನಿಮಾಗಳು ಆಸ್ಕರ್ಗೆ ಅರ್ಜಿ ಸಲ್ಲಿಸಿದ್ದವು. ಇದೀಗ ಕನ್ನಡದ ಎರಡು ಸಿನಿಮಾ ಕ್ವಾಲಿಫಿಕೇಷನ್ ಪಾಸ್ ಆಗಿವೆ. ನಟನಾ ವಿಭಾಗದಲ್ಲಿ ವಿಕ್ರಾಂತ್ ರೋಣ ಸಿನಿಮಾ ಆಸ್ಕರ್ ಪ್ರಶಸ್ತಿ ಪಟ್ಟಿಯಲ್ಲಿದೆ.
ಹೌದು, ಈಗಾಗ್ಲೇ ಹೊಂಬಾಳೆ ಫಿಲ್ಸ್ಮ್ ಸಂಸ್ಥೆ ಆಸ್ಕರ್ ರೇಸ್ನಲ್ಲಿ 'ಕಾಂತಾರ' ಸಿನಿಮಾ ಇದೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಇದೀಗ ಸುದೀಪ್ ಅಭಿನಯದ ನಿರ್ದೇಶಕ ಅನೂಪ್ ಭಂಡಾರಿ ನಿರ್ದೇಶನದ 'ವಿಕ್ರಾಂತ್ ರೋಣ' ಸಿನಿಮಾ ಕೂಡ ಇದೆ. ಈ ವಿಚಾರನ್ನು ನಿರ್ದೇಶಕ ಅನೂಪ್ ಭಂಡಾರಿ ತಮ್ಮ ಟ್ಟಿಟರ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.
ಹವಾ ಸೃಷ್ಟಿಸಿದ್ದ ವಿಕ್ರಾಂತ್ ರೋಣ: 'ವಿಕ್ರಾಂತ್ ರೋಣ' ಸಿನಿಮಾ ವಿಶ್ವಾದ್ಯಂತ ಬರೋಬ್ಬರಿ 2500ಕ್ಕೂ ಹೆಚ್ಚು ಚಿತ್ರಮಂದಿಗಳಲ್ಲಿ ಬಿಡುಗಡೆ ಆಗುವ ಮೂಲಕ ಭರ್ಜರಿ ಓಪನಿಂಗ್ ಪಡೆದುಕೊಂಡಿತ್ತು. ಸೌತ್ ಸಿನಿಮಾ ಇಂಡಸ್ಟ್ರಿಯ ಸಿನಿಮಾಗಳು ಬಾಲಿವುಡ್ ಹಾಗೂ ಹಾಲಿವುಡ್ ಸಿನಿಮಾಗಳ ಲೇವೆಲ್ಗೆ ಕಾಂಪೀಟ್ ಮಾಡಿತ್ತು. ಥ್ರಿಲ್ಲಿಂಗ್ ಆ್ಯಕ್ಷನ್ ಜೊತೆಗೆ ಅಡ್ವೆಂಚರ್ ಹಾಗೂ ಫ್ಯಾಂಟಸಿ ಕಥೆ ಹೊಂದಿದ್ದ 'ವಿಕ್ರಾಂತ್ ರೋಣ' ತ್ರಿಡಿಯಲ್ಲಿ ಮೂಡಿ ಬಂದಿತ್ತು. ಕಮರೊಟ್ಟು ಎಂಬ ಗ್ರಾಮವನ್ನು ಸೃಷ್ಟಿಸಿ ದಟ್ಟ ಕಾಡಿನ ರೀತಿಯಂತೆ ದೊಡ್ಡದಾದ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗಿತ್ತು.
ಈ ಮಕ್ಕಳ ಸಾವಿನ ರಹಸ್ಯ ಭೇದಿಸುವ ಖಡಕ್ ಪೊಲೀಸ್ ಆಫೀಸರ್ ವಿಕ್ರಾಂತ್ ರೋಣನಾಗಿ ಸುದೀಪ್ ಬೆಳ್ಳಿ ತೆರೆ ಮೇಲೆ ಅಬ್ಬರಿಸಿದ್ದರು. ಕಿಚ್ಚನ ಜೊತೆ ನಿರೂಪ್ ಭಂಡಾರಿ ಹಾಗೂ ನೀತು ಅಶೋಕ್ ಪಾತ್ರದಲ್ಲಿ ಸಸ್ಪೆನ್ಸ್ನಿಂದ ಕೂಡಿತ್ತು. ಅವರ ಪಾತ್ರ ಮತ್ತು ಕಥೆಯ ಸಂಪೂರ್ಣ ತಿರುಳನ್ನು ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ರಿವೀಲ್ ಕಟ್ಟಿಕೊಡಲಾಗಿತ್ತು. ಇದು ವಿಕ್ರಾಂತ್ ರೋಣ ಚಿತ್ರದ ಹೈಲೆಟ್ಸ್. ಭೇದಿಸಲಾಗದ ಕಥೆ ಹೆಣೆಯುವ ಮೂಲಕ ನಿರ್ದೇಶಕ ಅನೂಪ್ ಭಂಡಾರಿ ಕಥೆ ಬರೆದಿದ್ದಿದ್ದರೆ ಈ ಚಿತ್ರವನ್ನು ಹಾಲಿವುಡ್ ಶೈಲಿಯಂತೆ ಚಿತ್ರೀಕರಣ ಮಾಡಿದ್ದು ವಿಶೇಷ. ಕಲಾ ನಿರ್ದೇಶಕ ಶಿವಕುಮಾರ್ ಹಾಗೂ ಕ್ಯಾಮರಮ್ಯಾನ್ ಡೇವಿಡ್ ವಿಲಿಯಂ ಜೊತೆಗೆ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ವಿಕ್ರಾಂತ್ ರೋಣ ಚಿತ್ರದ ಫಿಲ್ಲರ್ಗಳಾಗಿ ಕೆಲಸ ಮಾಡಿದ್ದರು.
ಧೂಳೆಬ್ಬಿಸಿದ ರಾ..ರಾ..ರಕ್ಕಮ್ಮ ಸಾಂಗ್..: ಸುದೀಪ್ ಅಲ್ಲದೇ ಚಿತ್ರದಲ್ಲಿ ರವಿಶಂಕರ್ ಗೌಡ, ವಾಸುಕಿ ವೈಭವ್, ರಮೇಶ್ ಕುಕ್ಕುವಲ್ಲಿ, ಚಿತ್ಕಲಾ ಬಿರಾದಾರ್ ಕೊಟ್ಟ ಪಾತ್ರದಲ್ಲಿ ಅಚ್ಚುಕಟ್ಟಾಗಿ ನಿಭಾಯಿಸುವಲ್ಲಿ ಯಶ ಕಂಡರು. ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್ ಒಂದು ಡೈಲಾಗ್ ಹೊಡೆಯುವ ಜೊತೆಗೆ, ರಾ.. ರಾ.. ರಕ್ಕಮ್ಮ ಹಾಡಿನಲ್ಲಿ ಸಖತ್ ಆಗಿ ಹೆಜ್ಜೆ ಹಾಕಿ ಅಭಿಮಾನಿಗಳಿಂದ ಸಿಳ್ಳೆ ಚಪ್ಪಾಳೆ ಗಿಟ್ಟಿಸಿಕೊಂಡರು. ಬಹುಕೋಟಿ ವೆಚ್ಚದಲ್ಲಿ ನಿರ್ಮಾಪಕ ಜಾಕ್ ಮಂಜು ಈ ಸಿನಿಮಾವನ್ನ ನಿರ್ಮಾಣ ಮಾಡಿದ್ದರು. ಚಿತ್ರೀಕರಣ ಮತ್ತು ಬಿಡುಗಡೆಗಾಗಿ ನಾಲ್ಕು ವರ್ಷಗಳಕಾಲ ತೆಗೆದುಕೊಂಡ ಚಿತ್ರ 2022ರ ಸೂಪರ್ ಹಿಟ್ ಆಗಿ ಹೊರಹೊಮ್ಮಿತ್ತು. ಇದೀಗ ಪ್ರತಿಷ್ಠಿತ ಆಸ್ಕರ್ ರೇಸ್ನಲ್ಲಿ ವಿಕ್ರಾಂತ್ ರೋಣ ಸಿನಿಮಾ ಇರೋದು ಕಿಚ್ಚನ ಅಭಿಮಾನಿಗಳಿಗೆ ಸಂತಸ ಉಂಟು ಮಾಡಿದೆ.
ವಿಕ್ರಾಂತ್ ರೋಣ ಜೊತೆ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ 'ಕಾಂತಾರ' ಸಿನಿಮಾ ಕೂಡ ಆಸ್ಕರ್ ಪ್ರಶಸ್ತಿಗಾಗಿ ಅರ್ಹತೆ ಸುತ್ತಿನಲ್ಲಿ ಸ್ಥಾನ ಪಡೆದಿದೆ. ಅತ್ಯುತ್ತಮ ಚಿತ್ರ ಹಾಗೂ ಅತ್ಯುತ್ತಮ ನಟ ಎರಡು ವಿಭಾಗದಲ್ಲಿ ಅದು ಅರ್ಹತೆ ಸುತ್ತನ್ನು ಪಾಸ್ ಮಾಡಿದೆ. ಈ ಸಿನಿಮಾಗಳ ಜೊತೆ ಒಟ್ಟು 301 ಸಿನಿಮಾಗಳು ಅರ್ಹತೆ ಸುತ್ತನ್ನು ಪಾಸ್ ಮಾಡಿವೆ ಎನ್ನಲಾಗುತ್ತಿದೆ. ಈ ಪೈಕಿ ನಮ್ಮ ವಿಕ್ರಾಂತ್ ರೋಣ ಮತ್ತು ಕಾಂತಾರ ಕೂಡ ಆಗಿವೆ. ಕಾಂತಾರ ಚಿತ್ರ ನಿರ್ಮಿಸಿರುವ ಹೊಂಬಾಳೆ ಫಿಲ್ಮ್ಸ್ ಟ್ವೀಟ್ ಮೂಲಕ ಶುಭ ಸುದ್ದಿಯನ್ನು ಹಂಚಿಕೊಂಡಿದೆ.
ಈ ಚಿತ್ರಗಳ ಜೊತೆಗೆ ಎಸ್‌ಎಸ್ ರಾಜಮೌಳಿ ನಿರ್ದೇಶದ ಆರ್‌ಆರ್‌ಆರ್ ಚಿತ್ರ, ಸಂಜಯ್ ಲೀಲಾ ಬನ್ಸಾಲಿ ಅವರ ಗಂಗೂಬಾಯಿ ಕಥಿವಾಡಿ, ವಿವೇಕ್ ಅಗ್ನಿಹೋತ್ರಿ ನಿರ್ದೇಶದ ದಿ ಕಾಶ್ಮೀರ್ ಫೈಲ್ಸ್ ಕೂಡ ಸೇರಿಕೊಂಡಿದೆ. ಪಾನ್ ನಳಿನ್ ಅವರ ಚೆಲೋ ಶೋ, ಮರಾಠಿ ಚಲನಚಿತ್ರಗಳಾದ ಮೆ ವಸಂತರಾವ್, ತುಜ್ಯಾ ಸಥಿ ಕಹಿ ಹೈ, ಆರ್ ಮಾಧವನ್ ಅವರ ರಾಕೆಟ್ರಿ: ದಿ ನಂಬಿ ಎಫೆಕ್ಟ್, ಇರಾವಿನ್ ನಿಜಾಲ್ ಸೇರಿದಂತೆ ಒಟ್ಟು 301 ಸಿನಿಮಾಗಳು ಈ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ.
ಇದನ್ನೂ ಓದಿ: ಆ್ಯಕ್ಷನ್ ಸೀನ್ಗಳಿಂದ ಕೂಡಿದ ಪಠಾಣ್ ಟ್ರೈಲರ್ ರಿಲೀಸ್: ಸೌತ್ ಸೂಪರ್ಸ್ಟಾರ್ಸ್ ಏನಂದ್ರು ಗೊತ್ತಾ?