ETV Bharat / entertainment

ಧೂಮಂ ಶೂಟಿಂಗ್​ ಅಡ್ಡಕ್ಕೆ ವಿಜಯ್​​ ಕಿರಗಂದೂರು, ರಿಷಭ್​ ಶೆಟ್ಟಿ ಭೇಟಿ - dhoomam movie

ಧೂಮಂ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿದೆ. ಈ ಹಿನ್ನೆಲೆ ಚಿತ್ರ ನಿರ್ಮಾಪಕ ವಿಜಯ್ ಕುಮಾರ್​ ಕಿರಗಂದೂರು, ಕಾಂತಾರ ಸಾರಥಿ ರಿಷಭ್​ ಶೆಟ್ಟಿ, ನಟಿ ಸಪ್ತಮಿ ಗೌಡ ಸೇರಿದಂತೆ ಮೊದಲಾದವರು ಚಿತ್ರೀಕರಣ ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ.

Vijay Kirgandur rishab shetty in dhoomam shooting set
ಧೂಮಂ ಚಿತ್ರ ತಂಡದೊಂದಿಗೆ ವಿಜಯ್​​ ಕಿರಗಂದೂರು, ರಿಷಭ್​ ಶೆಟ್ಟಿ
author img

By

Published : Nov 24, 2022, 6:57 PM IST

ಕನ್ನಡ ಚಿತ್ರರಂಗ ಅಲ್ಲದೇ ಭಾರತೀಯ ಸಿನಿಮಾರಂಗದಲ್ಲಿ ವಿಭಿನ್ನ ಸಿನಿಮಾಗಳ ಮೂಲಕ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಹೊಂಬಾಳೆ ಫಿಲಂಸ್​ ಅಡಿ 12ನೇ ಪ್ಯಾನ್​​ ಇಂಡಿಯಾ ಚಿತ್ರ ರೆಡಿಯಾಗುತ್ತಿದೆ. ನಿರ್ಮಾಪಕ ವಿಜಯ್​ ಕುಮಾರ್​ ಕಿರಗಂದೂರು ಅವರು ಮಲೆಯಾಳಂ ನಟ ಫಹಾದ್​ ಫಾಸಿಲ್ ಜೊತೆ ಧೂಮಂ ಸಿನಿಮಾ ಮಾಡುತ್ತಿರುವುದು ಗೊತ್ತಿರುವ ವಿಚಾರ.

Vijay Kirgandur rishab shetty in dhoomam shooting set
ಧೂಮಂ ಸಿನಿಮಾ ಮುಹೂರ್ತ ಕಾರ್ಯಕ್ರಮ

ಸದ್ಯ ಧೂಮಂ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿದೆ. ಈ ಹಿನ್ನೆಲೆ ನಿರ್ಮಾಪಕ ವಿಜಯ್ ಕುಮಾರ್​ ಕಿರಗಂದೂರು, ಕಾಂತಾರ ಸಾರಥಿ ರಿಷಭ್​ ಶೆಟ್ಟಿ, ನಟಿ ಸಪ್ತಮಿ ಗೌಡ ಸೇರಿದಂತೆ ಮೊದಲಾದವರು ಚಿತ್ರೀಕರಣ ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ. ಈ ಚಿತ್ರೀಕರಣದಲ್ಲಿ ಫಹಾದ್​ ಫಾಸಿಲ್​, ಅಪರ್ಣಾ ಬಾಲಮುರಳಿ ಮತ್ತಿತರರು ಭಾಗವಹಿಸಿದ್ದು, ಅವರೊಂದಿಗೆ ಸಂತಸದ ಕ್ಷಣಗಳನ್ನು ಕಳೆದಿದ್ದಾರೆ.

ಇದನ್ನೂ ಓದಿ: ಒಟಿಟಿಗೆ ಕಾಂತಾರ ಎಂಟ್ರಿ.. ಮನೆಮಂದಿಯೆಲ್ಲಾ ಕುಳಿತು ಸಿನಿಮಾ ನೋಡಿ ಆನಂದಿಸಿ

'ಧೂಮಂ' ಚಿತ್ರವನ್ನು 'ಲೂಸಿಯಾ' ಖ್ಯಾತಿಯ ಪವನ್​ ಕುಮಾರ್​ ನಿರ್ದೇಶನ ಮಾಡುತ್ತಿದ್ದು, ಇದೊಂದು ಪ್ಯಾನ್​ ಇಂಡಿಯಾ ಚಿತ್ರವಾಗಿದೆ. ಫಹಾದ್​ ಫಾಸಿಲ್​ ಮತ್ತು ಅಪರ್ಣಾ ಬಾಲಮುರಳಿ ಜತೆಗೆ ಅಚ್ಯುತ್​ ಕುಮಾರ್​, ಜಾಯ್​ ಮ್ಯಾಥ್ಯೂ, ದೇವ್​ ಮೋಹನ್​, ಅನು ಮೋಹನ್​ ಮುಂತಾದವರು ನಟಿಸುತ್ತಿರುವ ಈ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ಮತ್ತು ಪ್ರೀತಾ ಜಯರಾಮನ್​ ಅವರ ಛಾಯಾಗ್ರಹಣವಿದೆ.

ಇದನ್ನೂ ಓದಿ: ನೀವು ಹೆಮ್ಮೆ ಪಡುವಂತೆ ಬದುಕುತ್ತೇನೆ.. ತಂದೆಯನ್ನು ಸ್ಮರಿಸಿ ಮಹೇಶ್​​ ಬಾಬು ಭಾವನಾತ್ಮಕ ಪೋಸ್ಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.