ಕಾಲಿವುಡ್ ಸ್ಟಾರ್ ನಟ ದಳಪತಿ ವಿಜಯ್ ಅವರ 'ಲಿಯೋ' 2023ರ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಲೋಕೇಶ್ ಕನಕರಾಜ್ ನಿರ್ದೇಶನದ ಈ ಸಿನಿಮಾವು ಅಕ್ಟೋಬರ್ನಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರದ ಶೂಟಿಂಗ್ ಅಂತಿಮ ಹಂತಕ್ಕೆ ತಲುಪಿದ್ದು, ಪ್ರಸ್ತುತ ಚಿತ್ರತಂಡ ಆಂಧ್ರಪ್ರದೇಶದ ತಲಕೋನಾ ಜಿಲ್ಲೆಯಲ್ಲಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.
ಇದೀಗ ಲಿಯೋ ಸೆಟ್ನ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ವಿಜಯ್ ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೆಟ್ಗೆ ಜಮಾಯಿಸಿರುವುದು ಮತ್ತು ನಟನ ಹೆಸರನ್ನು ಕೂಗುತ್ತಾ ಸೆಲ್ಫಿಗಾಗಿ ಮುಗಿಬೀಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಜೊತೆಗೆ ವಿಜಯ್, ತಮ್ಮ ಪ್ರೀತಿಯ ಅಭಿಮಾನಿಗಳತ್ತ ಕೈ ಬೀಸುತ್ತಿರುವುದು ದೃಶ್ಯದಲ್ಲಿ ಸೆರೆಯಾಗಿದೆ.
-
.@actorvijay From the Set of #Leo 🦁💥 pic.twitter.com/jzTvCFqAz9
— #LEO OFFICIAL (@TeamLeoOffcl) June 27, 2023 " class="align-text-top noRightClick twitterSection" data="
">.@actorvijay From the Set of #Leo 🦁💥 pic.twitter.com/jzTvCFqAz9
— #LEO OFFICIAL (@TeamLeoOffcl) June 27, 2023.@actorvijay From the Set of #Leo 🦁💥 pic.twitter.com/jzTvCFqAz9
— #LEO OFFICIAL (@TeamLeoOffcl) June 27, 2023
ಇನ್ನೂ ವಿಡಿಯೋದಲ್ಲಿ, ನಟ 'ಲಿಯೋ'ನ ಮೊದಲ ಹಾಡು 'ನಾ ರೆಡಿ'ನಲ್ಲಿ ಧರಿಸಿದ್ದ ಅದೇ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಾಡು ಯೂಟ್ಯೂಬ್‌ನಲ್ಲಿ 31 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಜೊತೆಗೆ ಸೂಪರ್ ಹಿಟ್ ಆಗಿದೆ. ಆದರೆ ಸದ್ಯ ಇದೇ ಹಾಡಿಗೆ ಸಮಸ್ಯೆ ಕೂಡ ಎದುರಾಗಿದೆ. 'ನಾ ರೆಡಿ' ಹಾಡು ಡ್ರಗ್ಸ್ ಸೇವನೆ ಮತ್ತು ರೌಡಿಸಂ ಅನ್ನು ಉತ್ತೇಜಿಸಿದೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತರೊಬ್ಬರು ನಟ ವಿಜಯ್ ವಿರುದ್ಧ ನಿನ್ನೆಯಷ್ಟೇ ದೂರು ದಾಖಲಿಸಿದ್ದರು.
ಇದನ್ನೂ ಓದಿ: ತಿಂಗಳಾಂತ್ಯ ಸಿನಿ ಪ್ರಿಯರಿಗೆ ಹಬ್ಬವೋ ಹಬ್ಬ.. ರೋಮ್ಯಾನ್ಸ್ನಿಂದ ಹಿಡಿದು ಆ್ಯಕ್ಷನ್ವರೆಗಿನ ಸಿನಿಮಾ, ವೆಬ್ ಸರಣಿ ತೆರೆಗೆ
ದೂರಿನಲ್ಲೇನಿದೆ?: "ಇತ್ತೀಚೆಗಷ್ಟೇ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರು ರಾಜ್ಯದಲ್ಲಿ ಮಾದಕ ದ್ರವ್ಯ ತಡೆಗೆ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ತಮಿಳುನಾಡಿನಲ್ಲಿ ಮಾದಕ ದ್ರವ್ಯ ತಡೆಯಲು ವಿಫಲರಾದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದಿದ್ದಾರೆ. ಹೀಗಿರುವಾಗ ನಟ ವಿಜಯ್ 'ಲಿಯೋ' ಹಾಡಿನ ಸಾಹಿತ್ಯದ ಮೂಲಕ ಯುವಕರಲ್ಲಿ ಡ್ರಗ್ಸ್ಗೆ ಬೆಂಬಲ ನೀಡುತ್ತಿರುವುದು ಒಪ್ಪಲಾಗದು. ಹೀಗಾಗಿ ಯುವಕರನ್ನು ಮಾದಕ ವಸ್ತು ಸೇವನೆಗೆ ಪ್ರಚೋದಿಸಿದ್ದಕ್ಕಾಗಿ ನಟ ವಿಜಯ್ ಹಾಗೂ ಸಾಹಿತ್ಯ ಬರೆದವರ ವಿರುದ್ಧ ಮಾದಕ ದ್ರವ್ಯ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು" ಎಂದು ದೂರಿನಲ್ಲಿ ಒತ್ತಾಯಿಸಿದ್ದರು.
ವಿಜಯ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಲಿಯೋ': ನಟ ವಿಜಯ್ ಅಭಿನಯದ ಲಿಯೋ ಚಿತ್ರದ ಮೇಲೆ ಅವರ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಈ ಸಿನಿಮಾವು ಕಾಶ್ಮೀರದಲ್ಲಿ ಚಿತ್ರೀಕರಣಗೊಂಡಿದೆ. 'ಮಾಸ್ಟರ್' ಚಿತ್ರದ ನಂತರ 'ಲಿಯೋ' ಮೂಲಕ ವಿಜಯ್ ಮತ್ತು ಲೋಕೇಶ್ ಕನಕರಾಜ್ ಮತ್ತೆ ಒಂದಾಗಿದ್ದಾರೆ. ಚಿತ್ರದಲ್ಲಿ ತ್ರಿಶಾ, ಸಂಜಯ್ ದತ್, ಅರ್ಜುನ್, ಪ್ರಿಯಾ ಆನಂದ್, ಗೌತಮ್ ವಾಸುದೇವ್ ಮೆನನ್, ಮನ್ಸೂರ್ ಅಲಿ ಖಾನ್, ಸ್ಯಾಂಡಿ ಮತ್ತು ಮಿಸ್ಕಿನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸವೆನ್ ಸ್ಕ್ರೀನ್ ಸ್ಟುಡಿಯೋದ ಲಲಿತ್ ಕುಮಾರ್ ನಿರ್ಮಿಸಿರುವ 'ಲಿಯೋ' ಚಿತ್ರ ಇದೇ ಅಕ್ಟೋಬರ್ನಲ್ಲಿ ಬಿಡುಗಡೆಯಾಗಲಿದೆ.
ಇದನ್ನೂ ಓದಿ: ಟಾಕಿ ಕಾಲದಲ್ಲಿ ಮೂಕಿ 'ಮಹಾಗುರು': 36 ವರ್ಷಗಳ ಬಳಿಕ ಕನ್ನಡದಲ್ಲಿ ಬರ್ತಿದೆ ಮೂಕಿಚಿತ್ರ