ETV Bharat / entertainment

Kushi: ವಿಜಯ್‌ ದೇವರಕೊಂಡ, ಸಮಂತಾ ಅಭಿನಯದ 'ಖುಶಿ' ಮುಂದಿನ ತಿಂಗಳು ತೆರೆಗೆ - ಹಾಡುಗಳ ಮೂಲಕ ಎಲ್ಲರನ್ನು ಸೆಳೆದಿದೆ

Kushi Movie update: ಇತ್ತೀಚೆಗೆ ಖುಷಿ ಚಿತ್ರದ ಟೈಟಲ್​ ಟ್ರ್ಯಾಕ್​ ಅನ್ನು ಸಿನಿಮಾ ತಂಡ ಬಿಡುಗಡೆ ಮಾಡಿತ್ತು. ಇದೀಗ ಟ್ರೇಲರ್‌ ಬಿಡುಗಡೆ ವಿಚಾರದ ಕುರಿತು ನಟ ವಿಜಯ್‌ ದೇವರಕೊಂಡ ಮಾಹಿತಿ ನೀಡಿದ್ದಾರೆ.

Vijay Deverakonda and samantha starrer Kushi movie trailer release in two days

author img

By

Published : Aug 7, 2023, 3:47 PM IST

ಬೆಂಗಳೂರು: ವಿಜಯ್​ ದೇವರಕೊಂಡ ಮತ್ತು ಸಮಂತಾ ರುತ್​ ಪ್ರಭು ನಟಿಸಿರುವ 'ಖುಷಿ' ಚಿತ್ರ ಈಗಾಗಲೇ ಹಾಡುಗಳ ಮೂಲಕ ಸಿನಿಮಾ ಅಭಿಮಾನಿಗಳನ್ನು ಸೆಳೆದಿದೆ. ಸೆಪ್ಟೆಂಬರ್​​ 1ರಂದು ಸಿನಿಮಾ ಬಿಡುಗಡೆಯಾಗಲಿದೆ. ಅದಕ್ಕೂ ಮೊದಲು ಟ್ರೇಲರ್​ ಬಿಡುಗಡೆಗೆ ಚಿತ್ರತಂಡ ಸಜ್ಜಾಗಿದೆ.

ಟ್ರೇಲರ್​ ಆಗಸ್ಟ್​ 9ರಂದು ಬಿಡುಗಡೆಯಾಗಲಿದೆ ಎಂದು ವಿಜಯ್ ದೇವರಕೊಂಡ ಇನ್ಸ್​ಟಾಗ್ರಾಂ ಮೂಲಕ ತಿಳಿಸಿದ್ದಾರೆ. 2 ನಿಮಿಷ 41 ಸೆಕೆಂಡ್​ ಅವಧಿಯ ಟ್ರೇಲರ್​ ಸಿನಿಮಾಪ್ರಿಯರ ನಿರೀಕ್ಷೆ ಹೆಚ್ಚಿಸಿದೆ. ವಿಜಯ್​ ಮತ್ತು ಸಮಂತಾರ ಪೋಸ್ಟರ್​ ಪೋಸ್ಟ್‌ ಮಾಡುವ ಮೂಲಕ ಈ ವಿಷಯವನ್ನು ಅವರು ಮುಟ್ಟಿಸಿದ್ದಾರೆ. ನವೀರಾದ ಪ್ರೇಮಕಥೆ ಹೊಂದಿರುವ ಸಿನಿಮಾದ ಹಾಡುಗಳು ಈಗಾಗಲೇ ಜನಮನಗೆದ್ದಿವೆ. ಇದೊಂದು ಅಪರೂಪದ ಪ್ರೇಮಕಥೆ. ಎಲ್ಲ ವರ್ಗದ ಜನರನ್ನೂ ಸೆಳೆಯಲಿದೆ ಎಂದು ಚಿತ್ರತಂಡ ಹೇಳಿದೆ.

ಇತ್ತೀಚೆಗೆ ಟೈಟಲ್​ ಟ್ರ್ಯಾಕ್​ ಬಿಡುಗಡೆಯಾಗಿತ್ತು. ನಿರ್ದೇಶಕ ಶಿವ ನಿರ್ವಾಣ ಅವರೇ ಸಾಹಿತ್ಯ ಬರೆದಿದ್ದಾರೆ. ಹೆಶಂ ಅಬ್ದುಲ್ಲಾ ವಹಾಬ್​ ಸಂಗೀತ ಸಂಯೋಜಿಸಿದ್ದಾರೆ. ಜುಲೈ 28ರಂದು ಹಾಡು ಬಿಡುಗಡೆಯಾಗಿದ್ದು, ಯುಟ್ಯೂಬ್​ನಲ್ಲಿ ಈಗಾಗಲೇ 11 ಮಿಲಿಯನ್​ ವೀಕ್ಷಣೆ ಪಡೆದಿದೆ.

ಮೈತ್ರಿ ಮೂವಿ ಮೇಕರ್ಸ್​ ಚಿತ್ರ​ ನಿರ್ಮಿಸಿದ್ದಾರೆ. ಈ ಸಿನಿಮಾ ಮೂಲಕ ಎರಡನೇ ಬಾರಿಗೆ ವಿಜಯ್​ ದೇವರಕೊಂಡ ಮತ್ತು ಸಮಂತಾ ಒಟ್ಟಿಗೆ ನಟಿಸುತ್ತಿದ್ದಾರೆ. 'ಲೈಗರ್' ನಂತರ ವಿಜಯ್​ ದೇವರಕೊಂಡ ಅವರಿಗೆ ಭಾರಿ ಬೇಡಿಕೆಯಿದ್ದು ಹೆಚ್ಚು ಪ್ರಚಾರವನ್ನೂ ನೀಡುತ್ತಿದೆ. ಹೊಸ ಚಿತ್ರ ಅಂತರಧರ್ಮೀಯ ಜೋಡಿಯ ಕಥೆ ಹೊಂದಿದೆಯಂತೆ.

ಸಮಂತಾರಿಗೆ ಈ ಚಿತ್ರ ವಿಶೇಷವಾಗಿದೆ. ಇದಕ್ಕೆ ಕಾರಣ ಶಿವ ನಿರ್ವಾಣ. ಇವರದೇ ನಿರ್ದೇಶನದಲ್ಲಿ ಸಮಂತಾ ನಟಿಸುತ್ತಿರುವ ಎರಡನೇ ಚಿತ್ರವಿದು. ಈ ಹಿಂದೆ 'ಮಜಿಲಿ' ಯಲ್ಲಿ ನಟಿಸಿದ್ದು, ಸಿನಿಮಾ ಸೂಪರ್‌ಹಿಟ್​ ಆಗಿತ್ತು. 2022ರಲ್ಲಿ ಸೆಟ್ಟೇರಿದ ಚಿತ್ರ ಸಮಂತಾ ಅವರ ಚಿಕಿತ್ಸೆಯ ಹಿನ್ನೆಲೆಯಲ್ಲಿ ಬಿಡುಗಡೆ ವಿಳಂಬಗೊಂಡಿದೆ. ಜಯರಾಮ್, ಮುರಳಿ ಶರ್ಮಾ, ಲಕ್ಷ್ಮೀ, ಅಲಿ, ವಿನ್ನಿಲ್ಲಾ ಕಿಶೋರ್, ರೋಹಿನಿ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: Mahesh Babu: ಈ ಸಲ ಮಹೇಶ್​ ಬಾಬು ಬರ್ತ್‌ಡೇ ಎಲ್ಲಿ ಗೊತ್ತೇ? ಈ ದೇಶದಲ್ಲಂತೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.