ದಕ್ಷಿಣ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕ ವಿಘ್ನೇಶ್ ಶಿವನ್ ಕ್ರಿಕೆಟ್ ಪ್ರೇಮಿ ಕೂಡ ಹೌದು. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಕಟ್ಟಾ ಅಭಿಮಾನಿ ಎಂಬುದು ನಿಮಗೆ ಈಗಾಗಲೇ ತಿಳಿದಿರೋ ವಿಚಾರ. ಆದ್ರಿಂದು, ಮಾಹಿ ಜೊತೆಗಿನ ಫೋಟೋ ಶೇರ್ ಮಾಡಿಕೊಳ್ಳುವ ಮೂಲಕ ಅವರ ಮೇಲಿನ ತಮ್ಮ ಅಭಿಮಾನವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಹೌದು, ಖ್ಯಾತ ನಿರ್ದೇಶಕ ಇಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಎಂಎಸ್ ಧೋನಿ ಜೊತೆಗಿರುವ ಫೋಟೋ ಹಂಚಿಕೊಂಡು, ತಮ್ಮ 'ಐಡಲ್', 'ರೋಲ್ ಮಾಡೆಲ್' ಎಂದು ಉಲ್ಲೇಖಿಸಿದ್ದಾರೆ.
ವಿಘ್ನೇಶ್ ಶಿವನ್ - ಧೋನಿ ಶೂಟಿಂಗ್: ಇಂದು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಅಕೌಂಟ್ನಲ್ಲಿ ಫೋಟೋ ಹಂಚಿಕೊಂಡ ಖ್ಯಾತ ನಿರ್ದೇಶಕ ವಿಘ್ನೇಶ್ ಶಿವನ್, "ನನ್ನ ಐಡಲ್, ನನ್ನ ರೋಲ್ ಮಾಡೆಲ್, ವರ್ಣನೆಗೂ ಮೀರಿ ಅತಿ ಹೆಚ್ಚು ಇಷ್ಟಪಡುವ ಸ್ಟಾರ್ಗೆ ನಿರ್ದೇಶನ ಮಾಡೋದು ಮತ್ತು ಆ್ಯಕ್ಷನ್ ಕಟ್ ಹೇಳೋದು ನನ್ನ ಜೀವನದಲ್ಲಿ ನಾನು ಅತಿ ಹೆಚ್ಚು ಇಷ್ಟಪಟ್ಟ ಕೆಲಸ'' ಎಂದು ಬರೆದುಕೊಂಡಿದ್ದಾರೆ. ನಿರ್ದೇಶಕರು ಶೇರ್ ಮಾಡಿರುವ ಫೋಟೋದಲ್ಲಿ, ಕ್ರಿಕೆಟಿಗನಿಗೆ ದೃಶ್ಯವನ್ನು ವಿವರಿಸುತ್ತಿರುವಂತೆ ಕಾಣಿಸುತ್ತಿದೆ. ಆದ್ರೆ ಇದು ಜಾಹೀರಾತು ಚಿತ್ರೀಕರಣವೇ ಅಥವಾ ಸಿನಿಮಾವೊಂದರಲ್ಲಿ ಅತಿಥಿ ಪಾತ್ರ ನಿರ್ವಹಿಸಿದ್ದು, ಅದರ ಶೂಟಿಂಗ್ ಕ್ಷಣವೇ ಎಂಬುದನ್ನು ಬಹಿರಂಗಪಡಿಸಿಲ್ಲ.
ನಿರ್ದೇಶಕ ವಿಘ್ನೇಶ್ ಶಿವನ್ ಹಂಚಿಕೊಂಡಿರುವ ಪೋಸ್ಟ್ ಕ್ಷಣಮಾತ್ರದಲ್ಲಿ ಕಾಡ್ಗಿಚ್ಚಿನಂತೆ ವೈರಲ್ ಆಗಿದೆ. ನೆಟ್ಟಿಗರು ತಮ್ಮ ಪ್ರತಿಕ್ರಿಯೆ ಕೊಡಲು ಆರಂಭಿಸಿದ್ದಾರೆ. ಮೆಚ್ಚುಗೆಯ ಮಳೆ ಸುರಿಸಿದ್ದಾರೆ. ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಸಾಮಾಜಿಕ ಮಾಧ್ಯಮ ಬಳಕೆದಾರರೋರ್ವರು, "ಫೈನಲಿ ಧೋನಿ ಜೊತೆ ವಿಕ್ಕಿ ಶೂಟಿಂಗ್ ಮಾಡಿರೋದು ನಿಜವಾಗಿಯೂ ಸಂತೋಷವಾಗಿದೆ'' ಎಂದು ಬರೆದಿದ್ದಾರೆ. ಮತ್ತೋರ್ವ ಸೋಷಿಯಲ್ ಮೀಡಿಯಾ ಯೂಸರ್ ಕಾಮೆಂಟ್ ಮಾಡಿದ್ದು, "ಒಂದೇ ಫ್ರೇಮ್ನಲ್ಲಿ ನನ್ನ ಮೆಚ್ಚಿನ ಜನರು" ಎಂದು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಕೇವಲ 48 ಗಂಟೆಗಳಲ್ಲಿ ನಡೆಯುವ ಕಥೆ: 'ಘೋಸ್ಟ್' ಮಾಹಿತಿ ಹಂಚಿಕೊಂಡ ಶಿವರಾಜ್ಕುಮಾರ್
ನಿರ್ದೇಶಕ ವಿಘ್ನೇಶ್ ಶಿವನ್ ಅವರು ಈ ಹಿಂದೆ ಕ್ಯಾಪ್ಟನ್ ಕೂಲ್ ಜೊತೆ ಆಟೋಗ್ರಾಫ್ ಪಡೆಯುವ ವಿಡಿಯೋವನ್ನು ಪೋಸ್ಟ್ ಮಾಡಿದ್ದರು. "ನನ್ನ ಹೀರೋ, ನನ್ನ ಕ್ಯಾಪ್ಟನ್, ನನ್ನ ರೋಲ್ ಮಾಡೆಲ್ ಜೊತೆಗಿನ ಕ್ಷಣ. ಪರಿಶುದ್ಧ ಆತ್ಮದ ಜೊತೆ ಇರುವುದು ಒಂದು ವಿಶೇಷ ಭಾವನಾತ್ಮಕ ಕ್ಷಣ. ನಾನು ಬಹಳ ಪ್ರೀತಿಸುವ ವ್ಯಕ್ತಿ. ನಾನು ಪ್ರತಿದಿನ ನೋಡುವ, ನೋಡಲಿಚ್ಛಿಸುವ ವ್ಯಕ್ತಿ. ನಾನು ಅವರನ್ನು ನೋಡಿದಾಗಲೆಲ್ಲಾ ನನ್ನ ಮುಖದಲ್ಲಿ ಮೂಡುವ ಸಂತೋಷವನ್ನು ನೋಡಲು ನನಗೇನೇ ತಬಹಳ ಸಂತೋಷವಾಗುತ್ತದೆ" ಎಂದು ಬರೆದುಕೊಂಡಿದ್ದರು. ವಿಘ್ನೇಶ್ ಶಿವನ್ ವೈಟ್ ಟೀ ಶರ್ಟ್‌ಗೆ ಮಾಹಿ ಆಟೋಗ್ರಾಫ್ ಹಾಕುತ್ತಿದ್ದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿತ್ತು.
ಇದನ್ನೂ ಓದಿ: 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಸಮಯ, ಸ್ಥಳ, ವಿಜೇತರು ಸೇರಿ ಸಂಪೂರ್ಣ ಮಾಹಿತಿ
ಈ ಹಿಂದೆ, ತಮಿಳು ಚಿತ್ರರಂಗಕ್ಕೆ ನಿರ್ಮಾಪಕರಾಗಿ ಪಾದಾರ್ಪಣೆ ಮಾಡಿರುವ ಎಂ ಎಸ್ ಧೋನಿ ಅವರಿಗೆ ವಿಘ್ನೇಶ್ ಶಿವನ್ ಕೃತಜ್ಞತೆ ಸಲ್ಲಿಸಿದ್ದರು. ಧೋನಿ ಮತ್ತು ಅವರ ಪತ್ನಿ ಸಾಕ್ಷಿ ಸಿಂಗ್ ಅವರು ತಮಿಳಿನ ಲೆಟ್ಸ್ ಗೆಟ್ ಮ್ಯಾರಿಡ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಜುಲೈ 28 ರಂದು ಬಿಡುಗಡೆಯಾದ ಈ ಚಿತ್ರವನ್ನು ರಮೇಶ್ ತಮಿಳ್ಮಣಿ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಹರೀಶ್ ಕಲ್ಯಾಣ್, ಇವಾನಾ, ನಾದಿಯಾ ಮತ್ತು ಯೋಗಿ ಬಾಬು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.