ETV Bharat / entertainment

ಜನ್ಮದಿನದಂದು ನಗ್ನ ಫೋಟೋ ಶೇರ್ ಮಾಡಿದ ನಟ; ಫೋಟೋಗ್ರಾಫರ್​ ಯಾರಣ್ಣ ಅಂತಾ ಕೇಳ್ತವ್ರೆ ನೆಟ್ಟಿಗರು

author img

By ETV Bharat Karnataka Team

Published : Dec 10, 2023, 5:28 PM IST

ಬಾಲಿವುಡ್​ ನಟ ವಿದ್ಯುತ್ ಜಮ್ವಾಲ್ ನಗ್ನ ಫೋಟೋ ಹಂಚಿಕೊಂಡಿದ್ದು, ಸೋಷಿಯಲ್​ ಮೀಡಿಯಾಗಳಲ್ಲಿ ಸದ್ದು ಮಾಡುತ್ತಿದೆ.

Vidyut Jammwal  naked photo
ವಿದ್ಯುತ್ ಜಮ್ವಾಲ್ ನಗ್ನ ಫೋಟೋ

ಬಾಲಿವುಡ್​ ನಟ ವಿದ್ಯುತ್ ಜಮ್ವಾಲ್ ಹಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 43ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ನಟನಿಗೆ ಕುಟುಂಬಸ್ಥರು, ಸ್ನೇಹಿತರು, ಚಿತ್ರರಂಗದವರೂ ಸೇರಿದಂತೆ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ಬರ್ತಡೇಯಂದು ಬೋಲ್ಡ್ ಫೋಟೋ ಶೇರ್ ಮಾಡಿಕೊಳ್ಳೋ ಮೂಲಕ ನೆಟ್ಟಿಗರ ಗಮನ ಸೆಳೆದಿದ್ದಾರೆ.

ಆ್ಯಕ್ಷನ್ ಹೀರೋ ವಿದ್ಯುತ್ ಜಮ್ವಾಲ್ ಪರ್ವತಗಳ ತಪ್ಪಲಿನಲ್ಲಿ ಆನಂದಿಸಿದ್ದಾರೆ. ಅರಣ್ಯ ಪ್ರದೇಶದಲ್ಲಿ ನೈಸರ್ಗಿಕ ಸೌಂದರ್ಯ ಆನಂದಿಸಿ, ಅಡುಗೆ ಮಾಡಿ ಸಮಯ ಕಳೆದಿದ್ದಾರೆ. ಏಕಾಂತತೆ ಕಂಡುಕೊಂಡ ಬಾಲಿವುಡ್​ ನಟ ಅಡುಗೆ ಮಾಡುವುದರಿಂದ ಹಿಡಿದು ತೊರೆಗಳಲ್ಲಿ ಸ್ನಾನ ಮಾಡುವವರೆಗೆ ಅರಣ್ಯ ಪ್ರದೇಶವನ್ನು ಆನಂದಿಸಿದ್ದಾರೆ. ಎಲ್ಲಾ ಕ್ಷಣಗಳಲ್ಲೂ ಬೆತ್ತಲೆಯಾಗಿದ್ದು, ಈ ಫೋಟೋಗಳನ್ನೇ ಪೋಸ್ಟ್ ಮಾಡಿದ್ದಾರೆ. ನೆಟ್ಟಿಗರು ಈ ಫೋಟೋಗಳನ್ನು ಕ್ಲಿಕ್ಕಿಸಿದ್ದು ಯಾರು ಎಂದು ನಟನನ್ನು ಪ್ರಶ್ನಿಸಿದ್ದಾರೆ.

  • My retreat to the Himalayan ranges - “the abode of the divine” started 14 years ago. Before I realised, it became an integral part of my life to spend 7-10 days alone- every year. pic.twitter.com/HRQTYtjk6y

    — Vidyut Jammwal (@VidyutJammwal) December 10, 2023 \" class="align-text-top noRightClick twitterSection" data=" \"> \

ಜನಪ್ರಿಯ ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್​​ಗಳಲ್ಲಿ ಇಂದು ಪರ್ವತ ಪ್ರದೇಶದಲ್ಲಿ ಕಳೆದ ಕ್ಷಣಗುಳ್ಳ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಮೈ ಮೇಲೆ ಒಂದು ತುಂಡು ಬಟ್ಟೆ ಇಲ್ಲ. ಈ ಫೋಟೋಗಳನ್ನು ಕಂಡ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಗ್ನ ಚಿತ್ರಗಳು ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, ನಟ ಏಕಾಂಗಿಯಾಗಿ ಸಮಯ ಕಳೆದರೆ ಈ ಫೋಟೋಗಳನ್ನು ಕ್ಲಿಕ್ಕಿಸಲು ಹೇಗೆ ಸಾಧ್ಯವಾಯಿತು ಎಂದು ಹಲವರು ಪ್ರಶ್ನಿಸಿದ್ದಾರೆ. ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದ ವಿದ್ಯುತ್ ಜಮ್ವಾಲ್, ಮೊಹರ್ ಸಿಂಗ್ ಎಂಬ ಸ್ಥಳೀಯ ಕುರಿಗಾಹಿಯೋರ್ವ ತನ್ನ ಫೋಟೋಗಳನ್ನು ಕ್ಲಿಕ್ಕಿಸಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಈ ಫೋಟೋಗಳು ವೈರಲ್​ ಆಗುತ್ತಿದ್ದು, ವಿವಿಧ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ನಟನ ತಮ್ಮ ಮುಂದಿನ ಸಿನಿಮಾ ಕ್ರಾಕ್‌ (Crakk) ನ ಅಪ್​ಡೇಟ್ಸ್ ಕೊಟ್ಟಿದ್ದಾರೆ. ಫೋಟೋ, ಸಿನಿಮಾ ಅಪ್​​ಡೇಟ್ಸ್ ನೋಡಿದ ಅಭಿಮಾನಿಗಳಿಗೆ ಪ್ರತಿಕ್ರಿಯೆ ಕೊಡೋದನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ. ಪೋಸ್ಟ್‌ನ ಕಾಮೆಂಟ್ ವಿಭಾಗದಲ್ಲಿ ನೆಟ್ಟಿಗರು ಬ್ಯುಸಿಯಾಗಿದ್ದಾರೆ. ನಗ್ನ ಚಿತ್ರಗಳಿಗೆ ನೆಟಿಜನ್‌ಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

  • I’m now ready and excited for my next chapter - CRAKK releasing in theatres on Feb 23rd, 2024 🥳

    Pic courtesy - A Local Shepherd Mohar Singh

    — Vidyut Jammwal (@VidyutJammwal) December 10, 2023 " class="align-text-top noRightClick twitterSection" data=" ">

ಇದನ್ನೂ ಓದಿ: 'ಪುಷ್ಪ 2' ಶೂಟಿಂಗ್‌ಗೆ ರಶ್ಮಿಕಾ ಮಂದಣ್ಣ ಸಿದ್ಧತೆ: ಮುಂದಿನ ಸಿನಿಮಾಗಳಿವು

ಅದಾಗ್ಯೂ ನಟನೋರ್ವ ಬಟ್ಟೆ ಬಿಟ್ಟು ಬೆತ್ತಲೆ ಫೋಟೋಗಳನ್ನು ಪೋಸ್ಟ್ ಮಾಡಿರುವುದು ಇದೇ ಮೊದಲಲ್ಲ. ಖ್ಯಾತ ನಟ ರಣ್​ವೀರ್ ಸಿಂಗ್ ಸಹ ಈ ಹಿಂದೆ ಮ್ಯಾಗಜಿನ್ ಫೋಟೋ ಶೂಟ್‌ಗಾಗಿ ನಗ್ನ ಪೋಸ್ ನೀಡಿ ಸುದ್ದಿಯಾಗಿದ್ದರು. ಜುಲೈ 21 ರಂದು, ರಣ್​​​ವೀರ್ ಸಿಂಗ್ ಅವರ ಮ್ಯಾಗಜಿನ್ ಫೋಟೋ ಶೂಟ್‌ನ ಚಿತ್ರಗಳು ಆನ್‌ಲೈನ್‌ನಲ್ಲಿ ವೈರಲ್ ಆಗಿತ್ತು. ಇದರಲ್ಲಿ ಜನಪ್ರಿಯ ನಟಿ ದೀಪಿಕಾ ಪಡುಕೋಣೆ ಅವರ ಅವರ ಪತಿ ಸಂಪೂರ್ಣವಾಗಿ ನಗ್ನವಾಗಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: ಭೂಲ್​ ಭುಲೈಯಾ 3ನಲ್ಲಿ ಮಾಜಿ ಲವರ್ಸ್ ಕಾರ್ತಿಕ್ ಆರ್ಯನ್ ​- ಸಾರಾ ಅಲಿ ಖಾನ್​?

ವಿದ್ಯುತ್ ಜಮ್ವಾಲ್ ಅವರ ಕ್ರಾಕ್ ಚಿತ್ರವನ್ನು ಆದಿತ್ಯ ದತ್ ನಿರ್ದೇಶಿಸುತ್ತಿದ್ದಾರೆ. ಚಿತ್ರವನ್ನು ರಿಲಯನ್ಸ್ ಎಂಟರ್‌ಟೈನ್‌ಮೆಂಟ್ ಪ್ರಸ್ತುತಪಡಿಸಲಿದೆ. ಆ್ಯಕ್ಷನ್ ಹೀರೋ ಫಿಲ್ಮ್ಸ್ ಮತ್ತು ಪಿ.ಜೆಡ್ ಪಿಕ್ಚರ್ಸ್ ಅಡಿ ವಿದ್ಯುತ್ ಜಮ್ವಾಲ್, ಪರಾಗ್ ಸಾಂಘ್ವಿ ನಿರ್ಮಿಸಿದ್ದಾರೆ. ಅಲ್ಲದೇ, ಆದಿ ಶರ್ಮಾ ಮತ್ತು ಆದಿತ್ಯ ಚೌಕ್ಸೆ ಚಿತ್ರದ ಸಹ-ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ. 2024ರ ಫೆಬ್ರವರಿ 23ರಂದು ಸಿನಿಮಾ ಬಿಡುಗಡೆ ಆಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.