ETV Bharat / entertainment

ಸ್ವಾತಂತ್ರ್ಯ ದಿನಕ್ಕೆ ವಿಕ್ಟರಿ ವೆಂಕಟೇಶ್ ನಟನೆಯ 'ಸೈಂಧವ್' ತಂಡದಿಂದ ಸ್ಪೆಷಲ್​ ಗಿಫ್ಟ್​ - ಖ್ಯಾತ ಸ್ಟಂಟ್ ಮಾಸ್ಟರ್ಸ್ ರಾಮ ಲಕ್ಷ್ಮಣ

ಸ್ವಾತಂತ್ರ್ಯ ದಿನಾಚರಣೆಯ ಸಲುವಾಗಿ 'ಸೈಂಧವ್' ಚಿತ್ರತಂಡ 8 ಸ್ಟಾರ್ಸ್​ ಒಳಗೊಂಡ ಸಣ್ಣ ವಿಡಿಯೋ ಝಲಕ್​ ಅನ್ನು ಬಿಡುಗಡೆ ಮಾಡಿದೆ.

victory venkatesh saindhav movie
ವಿಕ್ಟರಿ ವೆಂಕಟೇಶ್ ನಟನೆಯ 'ಸೈಂಧವ್' ತಂಡದಿಂದ ಸ್ಪೆಷಲ್​ ಗಿಫ್ಟ್​
author img

By

Published : Aug 15, 2023, 3:41 PM IST

ವಿಕ್ಟರಿ ವೆಂಕಟೇಶ್ ನಟನೆಯ 'ಸೈಂಧವ್' ತಂಡದಿಂದ ಸ್ಪೆಷಲ್​ ಗಿಫ್ಟ್​

ಟಾಲಿವುಡ್ ನಟ ವಿಕ್ಟರಿ ವೆಂಕಟೇಶ್ ನಟನೆಯ 75ನೇ ಪ್ಯಾನ್ ಇಂಡಿಯಾ ಸಿನಿಮಾ 'ಸೈಂಧವ್' ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಹುಟ್ಟು ಹಾಕಿದೆ. ಶೈಲೇಶ್ ಕೋಲನು ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣ ಇತ್ತೀಚೆಗಷ್ಟೇ ಮುಕ್ತಾಯಗೊಂಡಿದೆ. 18 ದಿನದ ಕಾಲ ನಡೆದ ಕ್ಲೈಮ್ಯಾಕ್ಸ್ ಶೂಟಿಂಗ್​ನಲ್ಲಿ 8 ಪ್ರಮುಖ ಸ್ಟಾರ್ ನಟರು ಭಾಗಿಯಾಗಿದ್ದು, ದಕ್ಷಿಣ ಚಿತ್ರರಂಗದ ಖ್ಯಾತ ಸ್ಟಂಟ್ ಮಾಸ್ಟರ್ಸ್ ರಾಮ ಲಕ್ಷ್ಮಣ ಸಾಹಸ ನಿರ್ದೇಶನ ಮಾಡಿದ್ದಾರೆ.

ಇಂದು 77ನೇ ಸ್ವಾತಂತ್ರ್ಯ ದಿನದ ಸಲುವಾಗಿ 8 ಸ್ಟಾರ್ಸ್​ ಒಳಗೊಂಡ ಸಣ್ಣ ವಿಡಿಯೋ ಝಲಕ್​ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ವೆಂಕಟೇಶ್, ನವಾಜುದ್ದೀನ್ ಸಿದ್ದಿಕಿ, ಶ್ರದ್ಧಾ ಶ್ರೀನಾಥ್, ರುಹಾನಿ ಶರ್ಮಾ, ಆಂಡ್ರಿಯಾ ಜೆರೆಮಿಯಾ, ಸಾರಾ ಮತ್ತು ಜಯಪ್ರಕಾಶ್ ಪಾತ್ರಗಳನ್ನು ಈ ಮೂಲಕ ಪರಿಚಯ ಮಾಡಲಾಗಿದೆ. ಈ ವಿಡಿಯೋದಲ್ಲಿ ಎಲ್ಲಾ ಅದ್ಭುತ ಕಲಾವಿದರನ್ನು ಒಟ್ಟಿಗೆ ನೋಡುವುದೇ ಕಣ್ಣಿಗೆ ಹಬ್ಬದಂತಾಗಿದೆ.

ಚಿತ್ರತಂಡ ಹೀಗಿದೆ.. ನಿಹಾರಿಕಾ ಎಂಟರ್​ಟೈನ್​ಮೆಂಟ್​ ಅಡಿ ವೆಂಕಟ್ ಬೋಯನಪಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಸೈಂಧವ್ ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್​ ಅವರು ಮನೋಜ್ಞಾ ಎಂಬ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಡಾ. ರೇಣು ಪಾತ್ರದಲ್ಲಿ ರುಹಾನಿ ಶರ್ಮಾ ಮತ್ತು ಜಾಸ್ಮಿನ್ ಪಾತ್ರದಲ್ಲಿ ಆಂಡ್ರಿಯಾ ಜೆರೆಮಿಯಾ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಈ ಚಿತ್ರದ ಮೂಲಕ ಸೌತ್ ಸಿನಿರಂಗ ಪ್ರವೇಶಿಸಿದ್ದಾರೆ.

ಇದನ್ನೂ ಓದಿ: 'ಸುವರ್ಣ ಅನಂತ ಸಂಭ್ರಮ'ದಲ್ಲಿ ಚಿತ್ರರಂಗದ ನೆನಪಿನ ಬುತ್ತಿ ತೆರೆದಿಟ್ಟ ಮೇರು ನಟ

ಡಿಸೆಂಬರ್​ 22 ರಂದು ಬಿಡುಗಡೆ: ತಾಂತ್ರಿಕವಾಗಿಯೂ ಶ್ರೀಮಂತಿಕೆಯಿಂದ ಕೂಡಿರುವ ಸೈಂಧವ್ ಸಿನಿಮಾಗೆ ಸಂತೋಷ್ ನಾರಾಯಣನ್ ಸಂಗೀತ ನಿರ್ದೇಶನ, ಎಸ್ ಮಣಿಕಂದನ್ ಛಾಯಾಗ್ರಹಣ, ಗ್ಯಾರಿ ಬಿಎಚ್ ಸಂಕಲನ ಮತ್ತು ಅವಿನಾಶ್ ಕೊಲ್ಲ ನಿರ್ಮಾಣ ವಿನ್ಯಾಸ ಮಾಡಿದ್ದು, ಕಿಶೋರ್ ತಲ್ಲೂರ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಸೈಂಧವ್ ಸಿನಿಮಾವನ್ನು ಡಿಸೆಂಬರ್ 22 ರಂದು ಕ್ರಿಸ್ಮಸ್ ಸಮಯದಲ್ಲಿ ವಿಶ್ವದಾದ್ಯಂತ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಗೊಳಿಸಲು ಚಿತ್ರತಂಡ ಪ್ಲಾನ್​ ಮಾಡಿಕೊಂಡಿದೆ.

ಶ್ರದ್ಧಾ ಶ್ರೀನಾಥ್​ ಫಸ್ಟ್​ ಲುಕ್​: ಕೆಲವು ತಿಂಗಳ ಹಿಂದೆ 'ಸೈಂಧವ್​' ಚಿತ್ರದಿಂದ ಶ್ರದ್ಧಾ ಶ್ರೀನಾಥ್ ಫಸ್ಟ್​ ಲುಕ್​ ರಿಲೀಸ್​ ಆಗಿತ್ತು. ರಿಲೀಸ್​ ಆದ ಪೋಸ್ಟರ್​ನಲ್ಲಿ ಶ್ರದ್ಧಾ ಸೀರೆ ಉಟ್ಟು ಕೈಯಲ್ಲಿ ಟಿಫಿನ್​ ಬಾಕ್ಸ್​ ಹಿಡಿದುಕೊಂಡು ಏನೋ ಗಹನ ಚಿಂತನೆಯಲ್ಲಿ ಮುಳುಗಿರುವಂತಿದೆ. ಸೂಪರ್ ಹಿಟ್ ಜೆರ್ಸಿ ಸಿನಿಮಾದಲ್ಲಿ ಅಭಿನಯಿಸಿದ್ದ ಶ್ರದ್ಧಾ 'ಸೈಂಧವ್'​ ಮೂಲಕ ಮತ್ತೊಮ್ಮೆ ಎಲ್ಲರ ಗಮನ ಸೆಳೆಯಲಿದ್ದಾರೆ.

ಇದನ್ನೂ ಓದಿ: 'ಸೈಂಧವ್​' ಸಿನಿಮಾದಲ್ಲಿ ಶ್ರದ್ಧಾ ಶ್ರೀನಾಥ್​: ಫಸ್ಟ್​ ಲುಕ್​ ಔಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.