ETV Bharat / entertainment

'ನೀವಿದ್ದೀರ, ನನಗಿನ್ನೇನು ಬೇಕು': ಕತ್ರಿನಾ ಮೇಲೆ ಪ್ರೀತಿಯ ಮಳೆಗೈದ ವಿಕ್ಕಿ - ಜರಾ ಹಟ್ಕೆ ಜರಾ ಬಚ್ಕೆ ಕಲೆಕ್ಷನ್​

ನಟ ವಿಕ್ಕಿ ಕೌಶಲ್​ ಸಾಮಾಜಿಕ ಜಾಲತಾಣದಲ್ಲಿ ಕತ್ರಿನಾ ಕೈಫ್‌ ಮೇಲೆ ಪ್ರೀತಿ ವ್ಯಕ್ತಪಡಿಸಿದ್ದಾರೆ.

Vicky Kaushal Katrina Kaif
ವಿಕ್ಕಿ ಕತ್ರಿನಾ
author img

By

Published : Jun 3, 2023, 5:24 PM IST

ನಿನ್ನೆಯಷ್ಟೇ ತೆರೆಕಂಡಿರುವ ಜರಾ ಹಟ್ಕೆ ಜರಾ ಬಚ್ಕೆ (Zara Hatke Zara Bachke) ಸಿನಿಮಾ ನಟ ವಿಕ್ಕಿ ಕೌಶಲ್​ ಸಾಮಾಜಿಕ ಜಾಲತಾಣದಲ್ಲಿ ಪತ್ನಿ, ನಟಿ ಕತ್ರಿನಾ ಕೈಫ್‌ ಮೇಲೆ ಪ್ರೀತಿಯ ಮಳೆಗರೆದಿದ್ದಾರೆ. ನಟಿ ಕತ್ರಿನಾ ಕೈಫ್‌ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪತಿ ವಿಕ್ಕಿ ಕೌಶಲ್ ಅವರ ಜರಾ ಹಟ್ಕೆ ಜರಾ ಬಚ್ಕೆ ಚಿತ್ರದ ಫೋಟೋ ಹಂಚಿಕೊಂಡಿದ್ದರು. ಸಿನಿಮಾ ಯಶಸ್ಸಿಗೆ ಶುಭ ಹಾರೈಸಿದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ ವಿಕ್ಕಿ ಅವರು ಚಿತ್ರದ ಒಂದು ಮಧುರವಾದ ಹಾಡಿನ ಸಾಹಿತ್ಯವನ್ನು ಪತ್ನಿಗೆ ಅರ್ಪಿಸಿದ್ದಾರೆ. ಕತ್ರಿನಾ ಕೈಫ್‌ ಸ್ಟೋರಿಯ ಸ್ಕ್ರೀನ್​ ಶಾಟ್​ ಹಂಚಿಕೊಳ್ಳುತ್ತಾ, ತು ಹೈ ತೊ ಮುಜೆ ಔರ್ ಕ್ಯಾ ಚಾಹಿಯೇ ಎಂದು ವಿಕ್ಕಿ ಬರೆದುಕೊಂಡಿದ್ದಾರೆ.

ನಟಿ ಕತ್ರಿನಾ ಕೈಫ್‌ ನಿನ್ನೆ ತಮ್ಮ ಇನ್​​ಸ್ಟಾ ಸ್ಟೋರಿಯಲ್ಲಿ ಪತಿ ವಿಕ್ಕಿ ನಟನೆಯ ಚಿತ್ರದ ಪೋಸ್ಟರ್ ಅನ್ನು ಹಂಚಿಕೊಂಡಿದ್ದರು. "ಈಗ ಚಿತ್ರಮಂದಿರಗಳಲ್ಲಿ" ಎಂಬ ಶೀರ್ಷಿಕೆ ಕೂಡ ಕೊಟ್ಟಿದ್ದರು. ನಟ ವಿಕ್ಕಿ ಕೌಶಲ್, ಕತ್ರಿನಾ ಅವರ ಇನ್​ಸ್ಟಾ ಸ್ಟೋರಿಯನ್ನು ಮರು ಹಂಚಿಕೊಂಡರು ಮತ್ತು ಚಿತ್ರದ ಫಿರ್ ಔರ್ ಕ್ಯಾ ಚಾಹಿಯೇ ಹಾಡಿನ ಸಾಹಿತ್ಯವನ್ನು ಆ ಸ್ಟೋರಿಯಲ್ಲಿ ಬರೆದುಕೊಂಡರು. "ತು ಹೈ ತೊ ಮುಜೆ ಔರ್ ಕ್ಯಾ ಚಾಹಿಯೇ'' (ನೀವು ಇದ್ದರೆ ನನಗೆ ಇನ್ನೇನು ಬೇಕು) ಎಂದು ಅವರು ತಮ್ಮ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಪತ್ನಿ ಬಗೆಗಿನ ನಟನ ಮನದಾಳದ ಮಾತು ಅಭಿಮಾನಿಗಳು, ನೆಟಿಜನ್‌ಗಳ ಹೃದಯವನ್ನು ಕರಗಿಸಿದೆ.

Vicky Kaushal Katrina Kaif
ನಟ ವಿಕ್ಕಿ ಕೌಶಲ್​ ಇನ್​ಸ್ಟಾ ಸ್ಟೋರಿ

ವಿಕ್ಕಿ ಕೌಶಲ್ ಈ ಜರಾ ಹಟ್ಕೆ ಜರಾ ಬಚ್ಕೆ ಚಿತ್ರದಲ್ಲಿ ಸಾರಾ ಅಲಿ ಖಾನ್ ಜೊತೆಗೆ ಪ್ರಮುಖ ಪಾತ್ರ ವಹಿಸಿದ್ದಾರೆ. ಇದು ಫ್ಯಾಮಿಲಿ ಎಂಟರ್​ಟೈನ್​ಮೆಂಟ್​ ಚಿತ್ರ. ಈ ಇಬ್ಬರು ತಾರೆಯರು ಲಕ್ನೋ, ದೆಹಲಿ ಮತ್ತು ಇಂದೋರ್, ಹೈದರಾಬಾದ್​​ ಸೇರಿದಂತೆ ಹಲವೆಡೆ ತಮ್ಮ ಅಭಿಮಾನಿಗಳನ್ನು ಭೇಟಿ ಆಗಿದ್ದಾರೆ. ಚಲನಚಿತ್ರದ ಪ್ರಚಾರವನ್ನು ದೇಶಾದ್ಯಂತ ಮುಂದುವರಿಸಿದ್ದಾರೆ.

ಚಿತ್ರದ ಕಥೆ: ಇಂದೋರ್‌ನ ಮಧ್ಯಮ ವರ್ಗದ ನವ ವಿವಾಹಿತ ದಂಪತಿ ಖಾಸಗಿ ಸಮಯವನ್ನು ಆಶಿಸಿ, ಪ್ರತ್ಯೇಕವಾಗಿ ಹೊಸ ಮನೆ ಮಾಡಲು ಮುಂದಾಗುತ್ತಾರೆ. ಸರ್ಕಾರಿ ಯೋಜನೆಯ ಮೂಲಕ ಮನೆ ಹೊಂದಲು ವಿಚ್ಛೇದನ ಪಡೆದಂತೆ ನಟಿಸುವ ಕಥೆಯನ್ನು ಈ ಚಿತ್ರ ಒಳಗೊಂಡಿದೆ. ಅವರ ವಿಚ್ಛೇದನದ ನಾಟಕ ವರ್ಕ್​ ಔಟ್​ ಆಗುವುದಿಲ್ಲ. ಆದ್ರೆ ಈ ದಂಪತಿಯ ಪ್ರೀತಿ ನಿಮ್ಮನ್ನು ಸೆಳೆಯುತ್ತದೆ. ಸಂಪೂರ್ಣ ಸಿನಿಮಾ ಮನರಂಜನಾತ್ಮಕವಾಗಿದೆ.

ಇದನ್ನೂ ಓದಿ: ತಮನ್ನಾ ಭಾಟಿಯಾ ಡೇಟಿಂಗ್​​ ವದಂತಿ: 'ವಿಜಯ್ ವರ್ಮಾ ಅದೃಷ್ಟವಂತರು' ಎಂದ ಅಭಿಮಾನಿಗಳು

ಚಿತ್ರವು ನಿನ್ನೆ (ಜೂನ್ 2 ರಂದು) ಬಿಡುಗಡೆಯಾಯಿತು. ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮಿಶ್ರ ವಿಮರ್ಶೆಗಳನ್ನು ಸ್ವೀಕರಿಸಿದೆ. ಈ ಚಲನಚಿತ್ರವನ್ನು ಲಕ್ಷ್ಮಣ್ ಉಟೇಕರ್ ನಿರ್ದೇಶಿಸಿದ್ದಾರೆ. ಮೊದಲ ದಿನವೇ 5.49 ಕೋಟಿ ರೂ. ಸಂಪಾದನೆ ಮಾಡುವಲ್ಲಿ ಯಶಸ್ವಿ ಆಗಿದೆ. ಇಂದು ಮತ್ತು ನಾಳೆ ವಾರಾಂತ್ಯ ಆಗಿರುವ ಹಿನ್ನೆಲೆ ಕಲೆಕ್ಷನ್​ ಏರುವ ಸಾಧ್ಯತೆ ಇದೆ.

ಇದನ್ನೂ ಓದಿ: ಅಂಬರೀಶ್ ಪುತ್ರನ​ ಮದುವೆ ಸಂಭ್ರಮ: ಅಭಿಷೇಕ್​​​ ಹಸ್ತದಲ್ಲಿ ಭಾವಿ ಪತ್ನಿ ಹೆಸರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.