ETV Bharat / entertainment

100ಕ್ಕೂ ಹೆಚ್ಚು ಹಿಟ್​ ಚಿತ್ರಗಳಿಗೆ ಹಾಡು ಬರೆದಿದ್ದ ಹಿರಿಯ ಸಾಹಿತಿ ದೇವ್​ ಕೊಹ್ಲಿ ನಿಧನ - ಈಟಿವಿ ಭಾರತ ಕನ್ನಡ

Veteran Lyricist Dev Kohli Passed Away: 100ಕ್ಕೂ ಅಧಿಕ ಸೂಪರ್​ ಹಿಟ್​ ಸಿನಿಮಾಗಳಿಗೆ ಹಾಡುಗಳನ್ನು ಬರೆದಿದ್ದ ಹಿರಿಯ ಸಾಹಿತಿ ದೇವ್​ ಕೊಹ್ಲಿ ಇಂದು ನಿಧನರಾಗಿದ್ದಾರೆ.

Veteran Lyricist Dev Kohli Passed Away
ಹಿರಿಯ ಸಾಹಿತಿ ದೇವ್​ ಕೊಹ್ಲಿ
author img

By ETV Bharat Karnataka Team

Published : Aug 26, 2023, 11:05 AM IST

ಹಿರಿಯ ಸಾಹಿತಿ ದೇವ್​ ಕೊಹ್ಲಿ ಇಂದು ಮುಂಜಾನೆ ಮುಂಬೈನಲ್ಲಿ ನಿಧನರಾದರು. ಮುಂಬೈನ ಲೋಖಂಡವಾಲಾ ಕಾಂಪ್ಲೆಕ್ಸ್​ನಲ್ಲಿರುವ ಜುಪಿಟರ್​ ಅಪಾರ್ಟ್​ಮೆಂಟ್​ನ 4ನೇ ಕ್ರಾಸ್​ನಲ್ಲಿರುವ ದೇವ್​ ನಿವಾಸದಲ್ಲಿ​ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 2 ಗಂಟೆಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ದೇವ್​ ಆತ್ಮೀಯರು, ಬಾಲಿವುಡ್​ ಸಿನಿ ಗಣ್ಯರು ಆಗಮಿಸಲಿದ್ದಾರೆ. ಬಳಿಕ ಮುಂಬೈನ ಓಶಿವಾರಾ ಸ್ಮಶಾನದಲ್ಲಿ ಸಂಜೆ 6 ಗಂಟೆಗೆ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.

ದೇವ್​ ಕೊಹ್ಲಿ ಬಗ್ಗೆ.. ಹಿರಿಯ ಸಾಹಿತಿ ದೇವ್​ ಕೊಹ್ಲಿ ಅವರು 100 ಕ್ಕೂ ಅಧಿಕ ಸೂಪರ್​ ಹಿಟ್​ ಸಿನಿಮಾಗಳಿಗೆ ಹಾಡನ್ನು ಬರೆದಿದ್ದಾರೆ. ಮೈನೆ ಪ್ಯಾರ್​ ಕಿಯಾ, ಬಾಜಿಗರ್​, ಜುಡ್ವಾ 2, ಮುಸಾಫಿರ್​, ಶೂಟ್​ ಔಟ್​ ಅಲ್​ ಲೋಖಂಡವಾಲಾ, ಟ್ಯಾಕ್ಸಿ ನಂಬರ್​ 9-2-11ನಂತಹ ಅದ್ಭುತ ಚಿತ್ರಗಳ ಹಾಡಿಗೆ ಇವರು ಸಾಹಿತ್ಯ ಬರೆದಿದ್ದಾರೆ. ಅನು ಮಲಿಕ್​, ರಾಮ್​ ಲಕ್ಷ್ಮಣ್​, ಆನಂದ್​ ರಾಜ್​ ಆನಂದ್​, ಆನಂದ್​ ಮಿಲಿಂದ್​ ಸೇರಿದಂತೆ ಇನ್ನೂ ಅನೇಕ ಖ್ಯಾತ ಸಂಗೀತ ನಿರ್ದೇಶಕರೊಂದಿಗೆ ಇವರು ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: ಮರಾಠಿ - ಹಿಂದಿ ಚಿತ್ರರಂಗದ ಹಿರಿಯ ನಟಿ ಸೀಮಾ ಡಿಯೋ ನಿಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.