ಪತ್ರಕರ್ತನಾಗಿ, ನಟನಾಗಿ, ಇದೀಗ ನಿರ್ದೇಶಕನಾಗಿಯೂ ಗುರುತಿಸಿಕೊಂಡಿರುವ ಯತಿರಾಜ್ ಅವರು ಆ್ಯಕ್ಷನ್ ಕಟ್ ಹೇಳಿರುವ "ಸಂಜು" ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಪ್ರೀತಿ ಮತ್ತು ಭಾವನೆಗಳ ಸುತ್ತ ಈ ಚಿತ್ರದ ಕಥೆ ಹೆಣೆಯಲಾಗಿದೆ.
ಯತಿರಾಜ್ ಅವರೇ ಕಥೆ ಹಾಗೂ ಚಿತ್ರಕಥೆ ಬರೆದಿದ್ದಾರೆ. ವಿಜಯ್ ಹರಿತ್ಸ ನಿರ್ದೇಶಿಸಿರುವ ಎರಡು ಹಾಡುಗಳು ಈ ಚಿತ್ರದಲ್ಲಿದ್ದು, ಎರಡೂ ಹಾಡುಗಳನ್ನು ಆಕಾಶ್ ಹಾಸನ್ ಬರೆದಿದ್ದಾರೆ. ಡ್ಯುಯೆಟ್ ಹಾಡನ್ನು ಖ್ಯಾತ ಗಾಯಕ ವಾಸುಕಿ ವೈಭವ್ ಹಾಗೂ ಗಾಯಕಿ ಐಶ್ವರ್ಯ ರಂಗರಾಜನ್ ಹಾಡಿದ್ದಾರೆ. ಮತ್ತೊಂದು ವಿಭಿನ್ನ ಶೈಲಿಯ ಗೀತೆಯನ್ನು ಹೆಸರಾಂತ ಗಾಯಕ ನವೀನ್ ಸಜ್ಜು ಹಾಡಿದ್ದಾರೆ. ಈ ಎರಡು ಹಾಡುಗಳನ್ನು ರೇಣು ಸ್ಟುಡಿಯೋ ಹಾಗೂ ಪಾರೇಕ್ ಸ್ಟುಡಿಯೋದಲ್ಲಿ ಇತ್ತೀಚೆಗೆ ರೆಕಾರ್ಡ್ ಮಾಡಲಾಗಿದೆ. ಹಾಡುಗಳು ಉತ್ತಮವಾಗಿ ಮೂಡಿ ಬಂದಿದೆ ಎಂದು ಗಾಯಕರು ಸಂತಸ ವ್ಯಕ್ತಪಡಿಸಿದ್ದಾರೆ.
ಮನ್ವಿತ್ ಈ ಚಿತ್ರದ ನಾಯಕನಾಗಿ ನಟಿಸಿದ್ದು, ಶ್ರಾವ್ಯ ನಾಯಕಿ. ಯತಿರಾಜ್, ಸುಂದರಶ್ರೀ, ಬಾಲ ರಾಜ್ವಾಡಿ, ಮಹಂತೇಶ್, ಅಪೂರ್ವ, ಚಂದ್ರಪ್ರಭ, ಪ್ರಕಾಶ್ ಶೆಣೈ, ವಿನೋದ್, ಬೌ ಬೌ ಜಯರಾಂ, ಬೇಬಿಶ್ರೀ, ರಾಜೇಗೌಡ, ನಾಗರತ್ನ, ಚೇತನ್, ಕುರಿ ರಂಗ, ಕಾತ್ಯಾಯಿನಿ ಸೇರಿದಂತೆ ಮುಂತಾದವರು ಈ ಸಂಜು ಚಿತ್ರದ ತಾರಾಬಳಗದಲ್ಲಿದ್ದಾರೆ.
ಮಡಿಕೇರಿಯ ಮೂರ್ನಾಡು ಎಂಬ ಅದ್ಭುತ ಸ್ಥಳದಲ್ಲಿ ಸಂಜು ಚಿತ್ರದ ಬಹತೇಕ ಭಾಗದ ಚಿತ್ರೀಕರಣ ನಡೆದಿದೆ. ಬಸ್ ನಿಲ್ದಾಣದ ಸೆಟ್ ಸಹ ಹಾಕಲಾಗಿತ್ತು. ಈ ಬಸ್ ನಿಲ್ದಾಣ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಶೀಘ್ರದಲ್ಲೇ ಹಾಡುಗಳನ್ನು ಬಿಡುಗಡೆ ಮಾಡುವ ಯೋಜನೆ ಇದೆ ಎಂದು ನಿರ್ದೇಶಕ ಯತಿರಾಜ್ ಮಾಹಿತಿ ನೀಡಿದ್ದಾರೆ.
ಮೈಸೂರಿನ ಸಂತೋಷ್ ಡಿ ಎಂ ನಿರ್ಮಿಸಿರುವ ಈ ಚಿತ್ರಕ್ಕೆ ವಿದ್ಯಾ ನಾಗೇಶ್ ಛಾಯಾಗ್ರಹಣ, ಸಂಜೀವ್ ರೆಡ್ಡಿ ಸಂಕಲನ, ಮದನ್ ಹರಿಣಿ ನೃತ್ಯ ನಿರ್ದೇಶನ ಹಾಗೂ ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನ ಇದೆ. ಶೀಘ್ರದಲ್ಲೇ ಸಂಜು ಸಿನಿಮಾದ ಧ್ವನಿ ಸುರುಳಿ ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ.
ಇದನ್ನೂ ಓದಿ: Bawaal: ರೊಮ್ಯಾಂಟಿಕ್ ಮೂಡ್ನಲ್ಲಿ ಬವಾಲ್ ಜೋಡಿ - ಜಾನ್ವಿ ಮಾದಕ ನೋಟ! Photos
ಕನ್ನಡ ಚಿತ್ರರಂಗದಲ್ಲಿ ಉತ್ತಮ ಕಥಾಹಂದರವುಳ್ಳ ಸಿನಿಮಾಗಳೇನೋ ನಿರ್ಮಾಣವಾಗುತ್ತಿದೆ. ಆದರೆ 2022ರಲ್ಲಿ ಸ್ಯಾಂಡಲ್ವುಡ್ ಸದ್ದು ಬೇರೆಯದ್ದೇ ಲೆವೆಲ್ನಲ್ಲಿತ್ತು. ಹಾಗಾಗಿ ಸ್ಯಾಂಡಲ್ವುಡ್ ಸಿನಿಮಾಗಳ ಮೇಲೆ ನಿರೀಕ್ಷೆ ಕೊಂಚ ಹೆಚ್ಚೇ ಆಗಿದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಯಾವುದೇ ಸಿನಿಮಾಗಳು ದೊಡ್ಡ ಮಟ್ಟಿಗೆ ಸದ್ದು ಮಾಡುತ್ತಿಲ್ಲ. ಈ ನಿಟ್ಟಿನಲ್ಲಿ "ಸಂಜು" ಚಿತ್ರದ ಬಗ್ಗೆ ಸಾಕಷ್ಟು ಭರವಸೆ, ಕುತೂಹಲ ಮತ್ತು ನಿರೀಕ್ಷೆ ಅಭಿಮಾನಿಗಳಲ್ಲಿದೆ.
ಇದನ್ನೂ ಓದಿ: ಅಮೆರಿಕದಲ್ಲಿ ಪ್ರಾಜೆಕ್ಟ್ ಕೆ ಚಿತ್ರತಂಡ.. ಸ್ಟೈಲಿಶ್ ಲುಕ್ನಲ್ಲಿ ಗಮನ ಸೆಳೆದ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್