ETV Bharat / entertainment

ಲವ್ ಲಿ ಚಿತ್ರದ ಕಲರ್​ಫುಲ್ ಮೇಕಿಂಗ್ ಜೊತೆಗೆ ನ್ಯೂ ಇಯರ್ ವಿಶ್ ಮಾಡಿದ ವಸಿಷ್ಠ ಸಿಂಹ - vasista simha haripriya

ವಸಿಷ್ಠ ಸಿಂಹ ನಟನೆಯ ಲವ್​ ಲಿ ಚಿತ್ರದ ಮೇಕಿಂಗ್ ವಿಡಿಯೋ ಬಿಡುಗಡೆ- ಮಲ್ಪೆ ಕಡಲ ತೀರದಲ್ಲಿ ಕೋಟಿ ವಚ್ಚದಲ್ಲಿ ಅದ್ಧೂರಿ ಸೆಟ್​- ವಿದೇಶದಲ್ಲಿ ಚಿತ್ರೀಕರಣ ಬಾಕಿ.

vasistha-simha-made-a-new-year-wish-with-the-colorful-making-of-love-li
ಲವ್ ಲಿ ಚಿತ್ರದ ಕಲರ್​ಫುಲ್ ಮೇಕಿಂಗ್ ಜೊತೆಗೆ ನ್ಯೂ ಇಯರ್ ವಿಶ್ ಮಾಡಿದ ವಸಿಷ್ಠ ಸಿಂಹ
author img

By

Published : Jan 2, 2023, 8:35 PM IST

Updated : Jan 2, 2023, 9:03 PM IST

ಲವ್ ಲಿ ಚಿತ್ರದ ಕಲರ್​ಫುಲ್ ಮೇಕಿಂಗ್ ಜೊತೆಗೆ ನ್ಯೂ ಇಯರ್ ವಿಶ್ ಮಾಡಿದ ವಸಿಷ್ಠ ಸಿಂಹ

ವಿಭಿನ್ನ ಪಾತ್ರಗಳು ಹಾಗು ಬೇಸ್ ವಾಯ್ಸ್ ಮೂಲಕ ಕನ್ನಡ ಚಿತ್ರರಂಗ ಅಲ್ಲದೇ ಪಕ್ಕದ ತೆಲುಗು ಸಿನಿಮಾ ಚಿತ್ರರಂಗದಲ್ಲಿ ಮಿಂಚುತ್ತಿರುವ ನಟ ವಸಿಷ್ಠ ಸಿಂಹ. ಕೆಲವು ದಿನಗಳ ಹಿಂದೆ ನಟಿ ಹರಿಪ್ರಿಯಾ ಜೊತೆ ಎಂಗೇಜ್​ಮೆಂಟ್ ಸುದ್ದಿಯಲ್ಲಿರೋ ವಸಿಷ್ಠ ಸಿಂಹ ತಮ್ಮ ಲವ್ ಲಿ ಸಿನಿಮಾದ ಗುಂಗಿನಲ್ಲಿದ್ದಾರೆ.

ಹೌದು, ಚಂದನವನದಲ್ಲಿ ಈ ಲವ್ ಲಿ ಸಿನಿಮಾ ಸೆಟ್ಟೇರಿದ ದಿನದಿಂದಲೂ ಸಿನಿರಸಿಕರ ಗಮನ ಸೆಳೆಯುತ್ತಲೇ ಇದೆ. ಸಿಲಿಕಾನ್ ಸಿಟಿಯಲ್ಲಿ ಮೊದಲ ಹಾಗೂ ಎರಡನೇ ಶೆಡ್ಯೂಲ್​ನ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಕೆಲವು ದಿನಗಳ ಹಿಂದೆ ಉಡುಪಿ ಜಿಲ್ಲೆಯ ಮಲ್ಪೆಯ ಪಡುಕೆರೆಯಲ್ಲಿ ಮೂರನೇ ಹಂತದ ಚಿತ್ರೀಕರಣ ಮಾಡೋದ್ರಲ್ಲಿ ಲವ್ ಲಿ ಸಿನಿಮಾ ತಂಡ ಬ್ಯುಸಿಯಾಗಿತ್ತು.

ಇದೀಗ ಹೊಸವರ್ಷಕ್ಕೆ ಉಡುಪಿಯಲ್ಲಿ ಅದ್ಧೂರಿ ಸೆಟ್ಟು ಹಾಕಿ ಚಿತ್ರೀಕರಣ ಮಾಡಿದ ಲವ್ ಲಿ ಚಿತ್ರದ ಮೇಕಿಂಗ್ ವಿಡಿಯೋವನ್ನು ಅನಾವರಣ ಮಾಡುವ ಮೂಲಕ 2022ನೇ ವರ್ಷದ ಹಳೆ ನೆನಪುಗಳ ವಿಡಿಯೋ ಮೇಕಿಂಗ್ ಅನಾವರಣ ಮಾಡುವ ಮುಖಾಂತರ ಲವ್ ಲಿ ಸಿನಿಮಾ ಸವಿ ಸವಿ ನೆನಪುಗಳನ್ನು ಮೆಲುಕು ಹಾಕಿದೆ.

ಲವ್ ಲಿ ಸಿನಿಮಾಕ್ಕಾಗಿ ಉಡುಪಿಯ ಪಡುಕರೆಯ ಕಡಲ ತೀರದಲ್ಲಿ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಮನೆ ಸೆಟ್​ ನಿರ್ಮಾಣ ಮಾಡಲಾಗಿದೆ. ಕೇವಲ 25 ದಿನದಲ್ಲಿ ಈ ಮನೆ ನಿರ್ಮಾಣ ಮಾಡಲಾಗಿದ್ದು, 10 ದಿನಗಳ ಕಡಲ ತೀರದಲ್ಲಿ ಲವ್ ಲಿ ಸಿನಿಮಾ ಚಿತ್ರೀಕರಣ ಮಾಡಲಾಗಿದೆ.

ಈ ಸಿನಿಮಾದ ಚಿತ್ರೀಕರಣದಲ್ಲಿ ನಟರಾದ ವಸಿಷ್ಠ ಸಿಂಹ, ಸಾಧುಕೋಕಿಲ, ನಾಯಕಿ ಸ್ಟೆಫಿ ಪಟೇಲ್, ಲಕ್ಷ್ಮಿ, ಸಂಸಾರ ಸೀರಿಯಲ್ ಖ್ಯಾತಿಯ ಸಮೀಕ್ಷಾ ಚಿತ್ರದ ಪ್ರಮುಖ ರೋಲ್​ನಲ್ಲಿ ಮಿಂಚಲಿದ್ದಾರೆ. ಮಾಸ್ಟರ್ ಆನಂದ್ ಪುತ್ರಿ ವಂಶಿಕಾ, ದತ್ತಣ್ಣ, ಮಾಳವಿಕಾ, ಶೋಭರಾಜ್ ಸೇರಿದಂತೆ ಹಲವು ಕಲಾವಿದರು ತಾರಾಗಣದಲ್ಲಿದ್ದಾರೆ.

ಲವ್..​ ಲಿ ಇದೊಂದು ಕಮರ್ಶಿಯಲ್ ರೊಮ್ಯಾಂಟಿಕ್ ಲವ್ ಸ್ಟೋರಿ ಜೊತೆಗೆ ರೌಡಿಸಂ ಕಥಾಹಂದರವನ್ನ ಹೊಂದಿದೆ. ನೈಜ ಘಟನೆಯಿಂದ ಸ್ಪೂರ್ತಿ ಪಡೆದ ಲವ್ ಲಿ ಸಿನಿಮಾಗೆ ನಿರ್ದೇಶಕ ಚೇತನ್ ಕೇಶವ್ ನಿರ್ದೇಶನ ಮಾಡುತ್ತಿದ್ದಾರೆ. ಅಶ್ವಿನ್ ಕೆನಡಿ ಕ್ಯಾಮರಾ ವರ್ಕ್, ಹರೀಶ್ ಕೊಮ್ಮೆ ಸಂಕಲನ, ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಈ ಲವ್​ ಲಿ ಚಿತ್ರಕ್ಕಿದೆ.

ಈಗಾಗಲೇ ಶೇಕಡಾ 80ರಷ್ಟು ಸಿನಿಮಾ ಶೂಟಿಂಗ್ ಮುಗಿಸಿರುವ ಲವ್ ಲಿ ಚಿತ್ರತಂಡ ಈ ತಿಂಗಳಲ್ಲಿ ಲಂಡನ್​​ನಲ್ಲೂ ಚಿತ್ರೀಕರಣ ಮಾಡಲು ಸಿದ್ಧತೆ ನಡೆಸಿದೆ. ಅದ್ಧೂರಿ ವೆಚ್ಚದಲ್ಲಿ ರವೀಂದ್ರ ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ಲವ್ ಲಿ ಚಿತ್ರದ ಹಳೆ ನೆನಪುಗಳ ವಿಡಿಯೋವನ್ನು ರಿವೀಲ್ ಮಾಡುವ ಮೂಲಕ ಹೊಸ ವರ್ಷಕ್ಕೆ ಕಾಲಿಟ್ಟಿದೆ.

ಓದಿ: ಹೊಸ ವರ್ಷಕ್ಕೆ ತಮ್ಮ ಬಹುನಿರೀಕ್ಷಿತ ಚಿತ್ರದ ಬಗ್ಗೆ ಸರ್​ಪ್ರೈಸ್​ ನೀಡಿದ ಉಪೇಂದ್ರ

Last Updated : Jan 2, 2023, 9:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.