ETV Bharat / entertainment

ಮೆಗಾ ಫ್ಯಾಮಿಲಿಯಲ್ಲಿ ಮದುವೆ ಸಂಭ್ರಮ: ಹಸೆಮಣೆ ಏರಲು ಸಜ್ಜಾದ ವರುಣ್​ ತೇಜ್ ​- ಲಾವಣ್ಯ ತ್ರಿಪಾಠಿ - etv bharat kannada

Varun Tej Lavanya Tripati marriage date fix: ವರುಣ್​ ತೇಜ್​ ಮತ್ತು ಲಾವಣ್ಯ ತ್ರಿಪಾಠಿ ಮದುವೆಗೆ ಡೇಟ್​ ಫಿಕ್ಸ್ ಆಗಿದೆ. ಇಟಲಿಯಲ್ಲಿ ನವೆಂಬರ್​ 1 ರಂದು ಅದ್ಧೂರಿ ವಿವಾಹ ಸಮಾರಂಭ ನಡೆಯಲಿದೆ.

Varun tej and lavanya tripati
ವರುಣ್​ ತೇಜ್​- ಲಾವಣ್ಯ ತ್ರಿಪಾಠಿ
author img

By ETV Bharat Karnataka Team

Published : Aug 24, 2023, 9:47 AM IST

ಮೆಗಾ ಫ್ಯಾಮಿಲಿಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಟಾಲಿವುಡ್​ ಸೂಪರ್​ಸ್ಟಾರ್​ ವರುಣ್​ ತೇಜ್​ ಮತ್ತು ನಟಿ ಲಾವಣ್ಯ ತ್ರಿಪಾಠಿ ಶೀಘ್ರದಲ್ಲೇ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಜೂನ್​ 9 ರಂದು ಈ ಜೋಡಿಯ ನಿಶ್ಚಿತಾರ್ಥ ನೆರವೇರಿತ್ತು. ಮೆಗಾ ಬ್ರದರ್​ ನಾಗಬಾಬು ಅವರ ಮನೆಯಲ್ಲಿ ಅದ್ಧೂರಿಯಾಗಿ ಸಮಾರಂಭ ನಡೆದಿತ್ತು. ಮೆಗಾಸ್ಟಾರ್​ ಚಿರಂಜೀವಿ ಮತ್ತು ಸುರೇಖಾ ದಂಪತಿಯ ಸಮ್ಮುಖದಲ್ಲಿ ಹಾರ ಬದಲಾಯಿಸಿಕೊಂಡಿದ್ದರು. ಇದೀಗ ತಾರಾ ಜೋಡಿಯ ಮದುವೆಗೆ ಮುಹೂರ್ತ ನಿಗದಿಯಾಗಿದೆ.

ಮದುವೆ ಯಾವಾಗ? ಎಲ್ಲಿ?:​ ವರುಣ್​ ತೇಜ್​ ಮತ್ತು ಲಾವಣ್ಯ ತ್ರಿಪಾಠಿ ಮದುವೆಗೆ ಡೇಟ್​ ಫಿಕ್ಸ್ ಆಗಿದೆ. ಮಾಹಿತಿ ಪ್ರಕಾರ, ಇಟಲಿಯಲ್ಲಿ ನವೆಂಬರ್​ 1 ರಂದು ಅದ್ಧೂರಿ ವಿವಾಹ ಸಮಾರಂಭ ನಡೆಯಲಿದೆ. ಎರಡೂ ಕುಟುಂಬಗಳ ಸಮ್ಮುಖದಲ್ಲಿ ಮೂರು ದಿನಗಳ ಕಾಲ ಡೆಸ್ಟಿನೇಶನ್​ ವೆಡ್ಡಿಂಗ್​ ನಡೆಯಲಿದೆ. ಮದುವೆಗಾಗಿ ಮೆಗಾ ಫ್ಯಾಮಿಲಿ ಇಟಲಿಗೆ ತೆರಳಲಿದ್ದಾರೆ. ಆದರೆ, ಪವರ್​ ಸ್ಟಾರ್​ ಪವನ್​ ಕಲ್ಯಾಣ್​ ತಮ್ಮ ಬ್ಯುಸಿ ಶೆಡ್ಯೂಲ್​ನಿಂದಾಗಿ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗದೇ ಇರಬಹುದು ಎನ್ನಲಾಗಿದೆ.

ಪ್ರೀತಿಸಿ ಮದುವೆಯಾಗುತ್ತಿರುವ ಜೋಡಿ: ವರುಣ್​ ತೇಜ್​ ಮತ್ತು ಲಾವಣ್ಯ ತ್ರಿಪಾಠಿ 2016 ರಿಂದ ಪ್ರೀತಿಯಲ್ಲಿದ್ದರು. ಜೂನ್​ 9 ರಂದು ಎಂಗೇಜ್​ಮೆಂಟ್​ ಮಾಡಿಕೊಳ್ಳುವ ಮೂಲಕ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದರು. ವರುಣ್​ ತೇಜ್​ ನಟ ಹಾಗೂ ನಿರ್ಮಾಪಕ ನಾಗೇಂದ್ರ ಬಾಬು ಅವರ ಪುತ್ರ. ಜೊತೆಗೆ ಚಿರಂಜೀವಿ ಮತ್ತು ಪವನ್​ ಕಲ್ಯಾಣ್​ ಅವರ ಸೋದರಳಿಯ. ವರುಣ್​ ಮತ್ತು ಲಾವಣ್ಯ 2017ರ ಮಿಸ್ಟರ್​ ಚಿತ್ರದ ಸೆಟ್​ನಲ್ಲಿ ಪರಸ್ಪರ ಭೇಟಿಯಾದರು. ಅಲ್ಲಿಂದ ಸ್ನೇಹ ಬೆಳೆದು ನಂತರ ಪ್ರೀತಿಸಲು ಶುರು ಮಾಡಿದರು.

ಇದನ್ನೂ ಓದಿ: 'ಮಟ್ಕಾ': ಪ್ಯಾನ್​ ಇಂಡಿಯಾ ಸಿನಿಮಾದಲ್ಲಿ ಮೆಗಾ ಪ್ರಿನ್ಸ್​ ವರುಣ್​ ತೇಜ್​

ಜೋಡಿಯ ಸಿನಿಮಾ ವಿಚಾರ: ಲಾವಣ್ಯ ತ್ರಿಪಾಠಿ ಸಿನಿ ವೃತ್ತಿ ಜೀವನ ಸದ್ಯ ನಿರೀಕ್ಷಿತ ಮಟ್ಟದಲ್ಲಿ ಸಾಗುತ್ತಿಲ್ಲ. ಅವರ ಕೊನೆಯ ಚಿತ್ರ 'ಹ್ಯಾಪಿ ಬರ್ತ್​ಡೇ' ಅಭಿಮಾನಿಗಳಿಗೆ ನಿರಾಸೆ ತಂದಿತ್ತು. ಈಗ ಅವರ ಕೈಯಲ್ಲಿ ಒಂದೇ ಒಂದು ತೆಲುಗು ಪ್ರಾಜೆಕ್ಟ್​ ಇಲ್ಲ. ತಮಿಳಿನಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಇತ್ತೀಚೆಗೆ ಲಾವಣ್ಯ ನಟಿಸಿರುವ 'ಪುಲಿ ಮೇಕಾ' ವೆಬ್ ಸೀರೀಸ್ ಬಿಡುಗಡೆಯಾಗಿತ್ತು. ಇದು ನಿರೀಕ್ಷಿತ ಮಟ್ಟದಲ್ಲಿ ಹಿಟ್​ ಆಗಿಲ್ಲ. ಇದರಲ್ಲಿ ಅವರು ಪೊಲೀಸ್​ ಅಧಿಕಾರಿಯಾಗಿ ನಟಿಸಿದ್ದಾರೆ.

ಇನ್ನೂ ವರುಣ್​ ತೇಜ್​ ಸ್ಟಾರ್​ ನಟನಾಗಿ ಟಾಲಿವುಡ್​ನಲ್ಲಿ ಮಿಂಚುತ್ತಿದ್ದಾರೆ. ಸದ್ಯ ಪ್ರವೀಣ್ ಸತ್ತಾರು ನಿರ್ದೇಶನದಲ್ಲಿ 'ಗಾಂಡಿವಧಾರಿ ಅರ್ಜುನ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಆ್ಯಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ವರುಣ್ ಎದುರು ಸಾಕ್ಷಿ ನಟಿಸುತ್ತಿದ್ದಾರೆ. ಮಿಕ್ಕಿ ಜೇ ಮೇಯರ್ ಸಂಗೀತ ಸಂಯೋಜಿಸುತ್ತಿದ್ದಾರೆ. ಇದಲ್ಲದೇ ನಿರ್ದೇಶಕ ಶಕ್ತಿ ಪ್ರತಾಪ್ ಸಿಂಹ ಅವರ ಜೊತೆಯೂ ವರುಣ್​ ತೇಜ್​ ಸಿನಿಮಾ ಮಾಡುತ್ತಿದ್ದಾರೆ.

ಜೊತೆಗೆ ಇತ್ತೀಚೆಗೆ ಇವರ 14ನೇ ಸಿನಿಮಾ 'ಮಟ್ಕಾ'ದ ಮುಹೂರ್ತ ಸಮಾರಂಭ ಹೈದರಾಬಾದ್​ನಲ್ಲಿ ನಡೆದಿತ್ತು. ಈ ಚಿತ್ರವನ್ನು ಮಾರುತಿ ನಿರ್ದೇಶಿಸುತ್ತಿದ್ದಾರೆ. ಇದು ಜೂಟಾಟದ ಕಥೆಯಾಧಾರಿತ ಸಿನಿಮಾ. 1958ರಿಂದ 82ರ ಅವಧಿಯಲ್ಲಿ ವೈಜಾಗ್​ನಲ್ಲಿ ನಡೆದ ಸತ್ಯ ಘಟನೆಯಾಧಾರಿತ ಚಿತ್ರವಾಗಿದೆ. ಬರೋಬ್ಬರಿ 24 ವರ್ಷದ ಹಿಂದಿನ ಕಥೆಯಾಧಾರಿತ ಸಿನಿಮಾವಾಗಿರುವ ಮಟ್ಕಾದಲ್ಲಿ ವರುಣ್ ತೇಜ್ ನಾಲ್ಕು ವಿಭಿನ್ನ ಶೇಡ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೆಗಾ ಪ್ರಿನ್ಸ್ ಸಿನಿ ಕೆರಿಯರ್​ನ ಅತಿ ಹೆಚ್ಚು ಬಜೆಟ್‌ನ ಚಿತ್ರ ಇದಾಗಲಿದೆ.

ಇದನ್ನೂ ಓದಿ: ಮೆಗಾ ಕುಟುಂಬದಲ್ಲಿ ನಿಶ್ಚಿತಾರ್ಥದ ಸಂಭ್ರಮ: ಯಾರೆಲ್ಲಾ ಭಾಗಿಯಾಗಿದ್ರೂ ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.