ETV Bharat / entertainment

ವಾ ವಾ ವೂಂ: ಎಸ್​​ಆರ್​ಕೆ ಪುತ್ರಿಯ ಚೊಚ್ಚಲ ಚಿತ್ರದ 2ನೇ ಹಾಡು ಬಿಡುಗಡೆ - ಅಗಸ್ತ್ಯಾ ನಂದಾ

Va Va Voom song: 'ದಿ ಆರ್ಚೀಸ್' ಸಿನಿಮಾದ 'ವಾ ವಾ ವೂಂ' ಹಾಡು ಅನಾವರಣಗೊಂಡಿದೆ.

Va Va Voom song
ವಾ ವಾ ವೂಂ ಹಾಡು
author img

By ETV Bharat Karnataka Team

Published : Nov 3, 2023, 2:06 PM IST

ಬಾಲಿವುಡ್ ನಟ ಶಾರುಖ್​ ಖಾನ್​​ ಅವರು ಗುರುವಾರ ತಮ್ಮ 58ನೇ ಜನ್ಮದಿನವನ್ನು ಬಹಳ ವಿಜೃಂಭಣೆಯಿಂದ ಆಚರಿಸಿಕೊಂಡರು. ಅಭಿಮಾನಿಗಳಿಗೆ ಎಸ್​ಆರ್​ಕೆ ಕಡೆಯಿಂದ ಡಂಕಿ ಸಿನಿಮಾದ ಟೀಸರ್​ ಗಿಫ್ಟ್​​ ಸಿಕ್ಕಿತ್ತು. ಇಂದು ಪುತ್ರಿಯಿಂದ ಶಾರುಖ್​ಗೆ ವಿಶೇಷ ಉಡುಗೊರೆ ದೊರೆತಿದೆ.

ವಾ ವಾ ವೂಂ: 'ದಿ ಆರ್ಚೀಸ್' ಶಾರುಖ್​ ಪುತ್ರಿಯ ಚೊಚ್ಚಲ ಚಿತ್ರ. ಚಿತ್ರ ತಯಾರಕರು ಚಿತ್ರದ ಎರಡನೇ ಹಾಡನ್ನು ಅನಾವರಣಗೊಳಿಸಿದ್ದಾರೆ. ಮೊದಲ ಸುನೋ ಹಾಡು ಕೇಳುಗರ ಮನಸೆಳೆದಿದ್ದು, ಇದೀಗ 'ವಾ ವಾ ವೂಮ್' ಮೋಡಿ ಮಾಡುತ್ತಿದೆ. ಉತ್ಸಾಹಭರಿತ ರೆಟ್ರೋ ಶೈಲಿಯಲ್ಲಿ ಹಾಡು ಪ್ರಸ್ತುತಗೊಂಡಿದೆ. ಇಡೀ ಪಾತ್ರವರ್ಗ ಒಟ್ಟು ಸೇರಿದೆ. ಅಗಸ್ತ್ಯಾ ನಂದಾ, ಅದಿತಿ ಡಾಟ್ ಸೈಗಲ್, ಖುಷಿ ಕಪೂರ್, ಮಿಹಿರ್ ಅಹುಜಾ, ಸುಹಾನಾ ಖಾನ್, ವೇದಾಂಗ್ ರೈನಾ ಮತ್ತು ಯುವರಾಜ್ ಮೆಂದಾ ಸೇರಿದಂತೆ ಪ್ರಮುಖ ತಾರಾಗಣ ಹಾಡಿನಲ್ಲಿ ಕಾಣಿಸಿಕೊಂಡಿದೆ.

ರೆಟ್ರೋ ಶೈಲಿ: ತೇಜಸ್ ಹಾಡಿರುವ 'ವಾ ವಾ ವೂಂ' ಎರಡು ನಿಮಿಷ, ಇಪ್ಪತ್ತೆರಡು ಸೆಕೆಂಡುಗಳಷ್ಟಿದೆ. ಯಂಗ್​ಸ್ಟರ್ಸ್ ಪಾರ್ಟಿ ಸಾಂಗ್​ ಇದ್ದಂತಿದೆ. ನೋಡಿದಷ್ಟೂ ನೋಡೋಣ ಎನ್ನುವಂತಿದೆ ಅಂತಾರೆ ಸಿನಿಪ್ರಿಯರು. ಜಾವೇದ್ ಅಖ್ತರ್ ಸಾಹಿತ್ಯ, ಶಂಕರ್ ಎಹ್ಸಾನ್ ಲಾಯ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ರೆಟ್ರೋ ಶೈಲಿಯಲ್ಲಿದೆ. ಅಸಂಖ್ಯಾತ ಸಹ ನೃತ್ಯಗಾರರು ಪ್ರಮುಖ ಕಲಾವಿದರೊಂದಿಗೆ ಅಭಿನಯಿಸಿದ್ದಾರೆ.

ಬಾಲಿವುಡ್​ ದಿಗ್ಗಜರ ಮಕ್ಕಳು, ಮೊಮ್ಮಕ್ಕಳ ಸಿನಿಮಾ: 'ದಿ ಆರ್ಚೀಸ್' ಕೇವಲ ಓರ್ವ ನಟ-ನಟಿಯ ಸಿನಿಮಾವಲ್ಲ. ಒಂದು ತಂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮುಖ್ಯಭೂಮಿಕೆಯಲ್ಲಿರುವ ಹೆಚ್ಚಿನ ತಾರಾಗಣ ಬಾಲಿವುಡ್​ ದಿಗ್ಗಜರ ಮಕ್ಕಳು, ಮೊಮ್ಮಕ್ಕಳು. ದಿ. ಶ್ರೀದೇವಿ - ಬೋನಿ ಕಪೂರ್​ ಪುತ್ರಿ, ನಟಿ ಜಾನ್ವಿ ಕಪೂರ್​ ಸಹೋದರಿ ಖುಷಿ ಕಪೂರ್​​ ಬೆಟ್ಟಿ ಕೂಪರ್ ಪಾತ್ರ ನಿರ್ವಹಿಸಿದ್ದಾರೆ. ಶಾರುಖ್​ ಪುತ್ರಿ ಸುಹಾನಾ ಖಾನ್​ ವೆರೋನಿಕಾ ಲಾಡ್ಜ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಿರಿಯ ನಟ ಅಮಿತಾಭ್​ ಬಚ್ಚನ್​​ ಮೊಮ್ಮಗ ಅಗಸ್ತ್ಯಾ ನಂದಾ ಆರ್ಚೀ ಆ್ಯಂಡ್ರೆವ್ಸ್ ಪಾತ್ರ ಮಾಡಿದ್ದಾರೆ.

ಇದನ್ನೂ ಓದಿ: ಡಾರ್ಲಿಂಗ್ ಕೃಷ್ಣರ 'ಶುಗರ್ ಫ್ಯಾಕ್ಟರಿ': ಭಾವನೆ ಬಿಂಬಿಸುವ 'ಹಣೆಯಬರಹ' ಗೀತೆಗೆ ಮೆಚ್ಚುಗೆ- ನೋಡಿ

ಉಳಿದಂತೆ ರೆಗ್ಗೀ ಮ್ಯಾಂಟಲ್ ಆಗಿ ವೇದಾಂಗ್ ರೈನಾ, ಜಗ್‌ಹೆಡ್ ಜೋನ್ಸ್ ಆಗಿ ಮಿಹಿರ್ ಅಹುಜಾ, ಡಿಲ್ಟನ್ ಡೋಯ್ಲಿಯಾಗಿ ಯುವರಾಜ್ ಮೆಂದಾ ಮತ್ತು ಎಥೆಲ್ ಮಗ್ಸ್ ಆಗಿ ಅದಿತಿ ಡಾಟ್ ಸೈಗಲ್ ನಟಿಸಿದ್ದಾರೆ. ಹೆಚ್ಚು ಜನಮನ ಸೆಳೆದಿರುವ ಖುಷಿ, ಸುಹಾನಾ ಮತ್ತು ಅಗಸ್ತ್ಯಾ ಅವರಿಗೆ ಇದು ಚೊಚ್ಚಲ ಚಿತ್ರ. ಜೋಯಾ ಅಖ್ತರ್ ನಿರ್ದೇಶನದ ಚಿತ್ರ ಡಿಸೆಂಬರ್ 7ರಂದು ನೆಟ್‌ಫ್ಲಿಕ್ಸ್‌ನಲ್ಲಿ ಪ್ರದರ್ಶನಗೊಳ್ಳಲಿದೆ.

ಇದನ್ನೂ ಓದಿ: ಅಭಿಮಾನಿಗಳೊಂದಿಗೆ ಕುಣಿದು ಕುಪ್ಪಳಿಸಿದ ಶಾರುಖ್ ಖಾನ್: 'ಡಂಕಿ' ಬಗ್ಗೆ ಮತ್ತಷ್ಟು ಡೀಟೆಲ್ಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.