ETV Bharat / entertainment

ಶಾರುಖ್ ಮುಂಬೈ ನಿವಾಸಕ್ಕೆ ಅಮೆರಿಕ ರಾಯಭಾರಿ ಭೇಟಿ; ಬಾಲಿವುಡ್, ಹಾಲಿವುಡ್‌ ಬಗ್ಗೆ ಮಾತುಕತೆ - ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್

ಭಾರತಕ್ಕೆ ಹೊಸದಾಗಿ ನೇಮಕಗೊಂಡ ಅಮೆರಿಕ(ಯುಎಸ್‌ಎ) ರಾಯಭಾರಿ ಎರಿಕ್ ಗಾರ್ಸೆಟ್ಟಿ ಅವರು ಶಾರುಖ್ ಖಾನ್ ಅವರನ್ನು ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ಬಾಲಿವುಡ್ ಪ್ರವೇಶದ ಬಗ್ಗೆ ತಮಾಷೆ ಮಾಡಿದರು.

US Envoy Eric Garcetti meets Shah Rukh Khan
ಶಾರುಖ್ ಖಾನ್ ಭೇಟಿಯಾದ ಯುಎಸ್ ರಾಯಭಾರಿ ಎರಿಕ್ ಗಾರ್ಸೆಟ್ಟಿ
author img

By

Published : May 17, 2023, 10:22 AM IST

ಮುಂಬೈ (ಮಹಾರಾಷ್ಟ್ರ): ಭಾರತ ಪ್ರವಾಸದಲ್ಲಿರುವ ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಟಿ ಮಂಗಳವಾರ ಮುಂಬೈನಲ್ಲಿರುವ ಮನ್ನತ್ ನಿವಾಸಕ್ಕೆ ಆಗಮಿಸಿ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರನ್ನು ಭೇಟಿ ಮಾಡಿದರು. ಈ ವೇಳೆ ಅವರು ಭಾರತೀಯ ಚಲನಚಿತ್ರೋದ್ಯಮ ಹಾಗೂ ಪ್ರಪಂಚದಾದ್ಯಂತ ಹಾಲಿವುಡ್ ಮತ್ತು ಬಾಲಿವುಡ್ ಸಾಂಸ್ಕೃತಿಕ ಪ್ರಭಾವದ ಬಗ್ಗೆ ಚರ್ಚಿಸಿದರು.

ನಟನ ಐಷಾರಾಮಿ ನಿವಾಸಕ್ಕೆ ಭೇಟಿ ನೀಡಿದ ತಮ್ಮ ಅನುಭವ ಮತ್ತು ಚಿತ್ರಗಳನ್ನು ಗಾರ್ಸೆಟ್ಟಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. "ಇದು ನನಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡುವ ಸಮಯವೇ"? ಎಂದು ತಮಾಷೆಯಾಗಿ ಶೀರ್ಷಿಕೆ ನೀಡಿದ್ದಾರೆ. ಶಾರುಖ್ ಖಾನ್ ಅವರ ನಿವಾಸದಲ್ಲಿ ಅದ್ಭುತ ಸಂಭಾಷಣೆ ನಡೆಯಿತು. ಮುಂಬೈನಲ್ಲಿ ಚಲನಚಿತ್ರೋದ್ಯಮದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುತ್ತಿದ್ದೇನೆ. ಜಗತ್ತಿನಾದ್ಯಂತ ಹಾಲಿವುಡ್ ಮತ್ತು ಬಾಲಿವುಡ್‌ನ ದೊಡ್ಡ ಸಾಂಸ್ಕೃತಿಕ ಪ್ರಭಾವದ ಕುರಿತು ಚರ್ಚಿಸಿದೆ" ಎಂದು ಟ್ವೀಟ್ ಮಾಡಿದ್ದಾರೆ.

  • Is it time for my Bollywood debut? 😉 Had a wonderful chat with superstar @iamsrk at his residence Mannat, learning more about the film industry in Mumbai and discussing the huge cultural impact of Hollywood and Bollywood across the globe. #AmbExploresIndia pic.twitter.com/SLRQyhhn8C

    — U.S. Ambassador Eric Garcetti (@USAmbIndia) May 16, 2023 " class="align-text-top noRightClick twitterSection" data=" ">

ಶೇರ್ ಮಾಡಿರುವ ಮತ್ತೊಂದು ಚಿತ್ರದಲ್ಲಿ, ಗಾರ್ಸೆಟ್ಟಿ ಕೈಯಲ್ಲಿ ಹಳದಿ ಬಣ್ಣದ ಫುಟ್‌ಬಾಲ್ ನೋಡಬಹುದು. ಶಾರುಖ್‌ ಪಕ್ಕದಲ್ಲಿ ಪತ್ನಿ ಗೌರಿ ಖಾನ್‌ ಹಾಗು ಮ್ಯಾನೇಜರ್ ಪೂಜಾ ದದ್ಲಾನಿ ಇದ್ದಾರೆ.

ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ ಒಂದು ದಿನದ ನಂತರ ಗಾರ್ಸೆಟ್ಟಿ ಮುಂಬೈಗೆ ಬಂದಿಳಿದಿದ್ದಾರೆ. ಸೋಮವಾರ ಗಾರ್ಸೆಟ್ಟಿ ಭಾರತದ ಮೇಲಿನ ಪ್ರೀತಿ ಮತ್ತು ಅದರ ಸಂಸ್ಕೃತಿಯ ಬಗ್ಗೆ ಮಾತನಾಡಿದ್ದರು. ಚಿಕ್ಕವನಿದ್ದಾಗ ಭಾರತಕ್ಕೆ ಬಂದಿದ್ದೆ. ಈ ದೇಶ, ಅದರ ಆತಿಥ್ಯ ಮತ್ತು ಜನರ ನಡುವಿನ ಸಂಬಂಧವನ್ನು ನಾನು ಪ್ರೀತಿಸುತ್ತಿದ್ದೆ ಎಂದು ಹೇಳಿದ್ದಾರೆ.

ಇದಕ್ಕೂ ಮೊದಲು ಮೇ 11 ರಂದು, ಗಾರ್ಸೆಟ್ಟಿ, ಕತಾರ್ ಮತ್ತು ಮೊನಾಕೊದ ಪ್ರಿನ್ಸಿಪಾಲಿಟಿಯ ರಾಯಭಾರಿಗಳು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ತಮ್ಮ ರುಜುವಾತುಗಳನ್ನು ಸಲ್ಲಿಸಿದ್ದರು. "ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ, ಕತಾರ್ ಮತ್ತು ಮೊನಾಕೊ ರಾಯಭಾರಿಗಳ ರುಜುವಾತುಗಳನ್ನು ಸ್ವೀಕರಿಸಿದರು" ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿತ್ತು.

ದ್ರೌಪದಿ ಮುರ್ಮು ಅವರು ಪ್ರಮಾಣ ಪತ್ರವನ್ನು ಸ್ವೀಕರಿಸಿದ ನಂತರ ಗಾರ್ಸೆಟ್ಟಿ ಅವರು, "ಶ್ರೇಷ್ಠ ಅಧ್ಯಾಯ ಬರೆಯಲು ವಿಶ್ವದ ಅತ್ಯಂತ ಹಳೆಯ ಮತ್ತು ದೊಡ್ಡ ಪ್ರಜಾಪ್ರಭುತ್ವಗಳು ಮುಂಬರುವ ವರ್ಷಗಳಲ್ಲಿ ಒಂದಾಗುತ್ತವೆ. ಯುನೈಟೆಡ್ ಸ್ಟೇಟ್ಸ್ ಮತ್ತು ಭಾರತ ಹೇಗೆ ಒಗ್ಗಟ್ಟಾಗಿವೆ ಎಂಬುದನ್ನು ಜಗತ್ತಿಗೆ ತೋರಿಸುತ್ತೇವೆ. ಭಾರತದ ಪಾಲುದಾರಿಕೆ ಸಮೃದ್ಧ ಇಂಡೋ-ಪೆಸಿಫಿಕ್ ಮತ್ತು ಅದರಾಚೆಗೆ ಪ್ರಮುಖವಾಗಿದೆ. ನಮ್ಮ ಜನರು ಮತ್ತು ನಾನು ನಿಮ್ಮೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇವೆ. ಜಾಗತಿಕ ಆರೋಗ್ಯ ಸವಾಲು ಹಾಗೂ ಹವಾಮಾನ ಬದಲಾವಣೆಯನ್ನು ಒಟ್ಟಾಗಿ ಎದುರಿಸುತ್ತೇವೆ" ಎಂದು ವಿಡಿಯೋ ಸಂದೇಶದಲ್ಲಿ ಹೇಳಿದ್ದರು.

ಇದನ್ನೂ ಓದಿ: ನಯನತಾರಾ ಮನೆಗೆ ಶಾರುಖ್​ ಖಾನ್ ಭೇಟಿ: 'ಜವಾನ್' ನಟನನ್ನು ಕಂಡು ಅಭಿಮಾನಿಗಳು ಖುಷ್

ಭಾರತ ಹಲವು ವರ್ಷಗಳಿಂದ ಮೂಲಸೌಕರ್ಯಗಳ ವಿಷಯದಲ್ಲಿ ಸಾಕಷ್ಟು ಬದಲಾಗಿದ್ದರೂ, ಪ್ರತಿಯೊಬ್ಬರ ಪ್ರೀತಿ ಮತ್ತು ಸ್ನೇಹಪರತೆ ಒಂದೇ ಆಗಿರುತ್ತದೆ ಎಂದು ಅವರು ಹೇಳಿದರು. ಗಾರ್ಸೆಟ್ಟಿ ತಮ್ಮ ಮೊದಲ ಭಾರತ ಪ್ರವಾಸದಲ್ಲಿ ಹಳೆ ದೆಹಲಿ ಮತ್ತು ನಗರದ ಇತರ ಸ್ಥಳಗಳಿಗೆ ಹೋಗಿದ್ದನ್ನು ಸ್ಮರಿಸಿದ್ದಾರೆ.

ತಮ್ಮನ್ನು ಭಾರತಕ್ಕೆ 26ನೇ ರಾಯಭಾರಿಯಾಗಿ ನೇಮಿಸಿದ್ದಕ್ಕಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಲಾಸ್ ಏಂಜಲೀಸ್‌ನ ಮಾಜಿ ಮೇಯರ್ ಗಾರ್ಸೆಟ್ಟಿ ಅವರು ಈ ವರ್ಷದ ಮಾರ್ಚ್‌ನಲ್ಲಿ ಭಾರತಕ್ಕೆ ಹೊಸ ಯುಎಸ್ ರಾಯಭಾರಿಯಾಗಿ ಯುಎಸ್ ಉಪಾಧ್ಯಕ್ಷ ಕಮಲಾ ಹ್ಯಾರಿಸ್ ಅವರಿಂದ ಪ್ರಮಾಣ ವಚನ ಸ್ವೀಕರಿಸಿದರು. ಇದಕ್ಕೂ ಮೊದಲು, ಸೆನೆಟ್ ಅವರನ್ನು ಭಾರತಕ್ಕೆ ಮುಂದಿನ ಯುಎಸ್ ರಾಯಭಾರಿಯಾಗಿ ನೇಮಕ ಮಾಡುವುದನ್ನು ದೃಢಪಡಿಸಿತ್ತು.

ಗಾರ್ಸೆಟ್ಟಿ ಬಗ್ಗೆ ಒಂದಿಷ್ಟು ಮಾಹಿತಿ..: 52 ವರ್ಷದ ಎರಿಕ್ ಗಾರ್ಸೆಟ್ಟಿ, ಸ್ಯಾನ್ ಫೆರ್ನಾಂಡೋ ವ್ಯಾಲಿಯಲ್ಲಿ ಬೆಳೆದವರು. ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಬಿಎ ಮತ್ತು ಎಂಎ ಪದವಿ ಪಡೆದುಕೊಂಡಿದ್ದಾರೆ. ಆಕ್ಸ್‌ಫರ್ಡ್ ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ವ್ಯಾಸಂಗ ಮಾಡಿದ್ದಾರೆ. ಆಕ್ಸಿಡೆಂಟಲ್ ಕಾಲೇಜು ಮತ್ತು ಯುಎಸ್‌ಸಿಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ಅಪಾರ ಅನುಭವವನ್ನು ಗಳಿಸಿಕೊಂಡಿದ್ದಾರೆ. 12 ವರ್ಷಗಳ ಕಾಲ ಅಮೆರಿಕದ ನೌಕಾ ದಳದ ಮೀಸಲು ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಅನುಭವವೂ ಇವರಿಗಿದೆ.

ಇದನ್ನೂ ಓದಿ: ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ ಭಾರತದಲ್ಲಿನ ಅಮೆರಿಕದ ರಾಯಭಾರಿ ಎರಿಕ್ ಗಾರ್ಸೆಟ್ಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.