ETV Bharat / entertainment

ಅಖಿಲ್ ಅಕ್ಕಿನೇನಿಯಿಂದ ರೌಟೇಲಾಗೆ ಕಿರುಕುಳ ಆರೋಪ: ಉಮೈರ್ ಸಂಧು ವಿರುದ್ಧ ಸಿಡಿದೆದ್ದ ನಟಿ - ಉಮೈರ್​ ಸಂಧು ಟ್ವೀಟ್​

ಊರ್ವಶಿ ರೌಟೇಲಾ ಮತ್ತು ಅಖಿಲ್ ಅಕ್ಕಿನೇನಿ ಬಗ್ಗೆ ಉಮೈರ್ ಸಂಧು ನೀಡಿರುವ ಹೇಳಿಕೆ ಸಖತ್​ ಸದ್ದು ಮಾಡುತ್ತಿದೆ.

Urvashi Rautela reacts to Umair Sandhu tweet about harassment
ಊರ್ವಶಿ ರೌಟೇಲಾ ಅಖಿಲ್ ಅಕ್ಕಿನೇನಿ ಸುದ್ದಿ
author img

By

Published : Apr 23, 2023, 3:38 PM IST

ಸೌಂದರ್ಯ, ರಹಸ್ಯ ಪೋಸ್ಟ್​​ಗಳಿಗೆ ಹೆಸರುವಾಸಿಯಾಗಿರುವ ಬಾಲಿವುಡ್ ನಟಿ ಊರ್ವಶಿ ರೌಟೇಲಾ. ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ಚೆಲುವಿನಿಂದಲೇ ಸದ್ದು ಮಾಡುವ ನಟಿ ಈಗ ಮತ್ತೊಂದು ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಸ್ವಯಂ ಘೋಷಿತ ಚಲನಚಿತ್ರ ವಿಮರ್ಶಕ ಉಮೈರ್ ಸಂಧು ಅವರನ್ನು ಬಾಲಿವುಡ್​ ನಟಿ ತರಾಟೆಗೆ ತೆಗೆದುಕೊಂಡಿದ್ದಾರೆ. 'ತೆಲುಗು ನಟ ನಾಗಾರ್ಜುನ ಅವರ ಪುತ್ರ ಅಖಿಲ್ ಅಕ್ಕಿನೇನಿ ಅವರಿಂದ ನಟಿ ಕಿರುಕುಳ ಅನುಭವಿಸುತ್ತಿದ್ದಾರೆ' ಎಂಬ ಉಮೈರ್​ ಸಂಧು ಹೇಳಿಕೆಗೆ ಊರ್ವಶಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ.

Urvashi Rautela reacts to Umair Sandhu tweet about harassment
ಉಮೈರ್ ಸಂಧು ಆರೋಪ ತಳ್ಳಿ ಹಾಕಿದ ಊರ್ವಶಿ ರೌಟೇಲಾ

ಇನ್‌ಸ್ಟಾಗ್ರಾಮ್‌ನಲ್ಲಿ ಊರ್ವಶಿ ಅವರು ಉಮೈರ್​ ಅವರ ಟ್ವೀಟ್‌ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ. ಯುರೋಪ್‌ನಲ್ಲಿ ಏಜೆಂಟ್ ಚಿತ್ರದ ಐಟಂ ಸಾಂಗ್ ಚಿತ್ರೀಕರಣದ ಸಮಯದಲ್ಲಿ ಅಖಿಲ್ ಅಕ್ಕಿನೇನಿ ಅವರು ಬಾಲಿವುಡ್​ ನಟಿ ಊರ್ವಶಿ ರೌಟೇಲಾಗೆ ಕಿರುಕುಳ ನೀಡಿದ್ದಾರೆ. ಆ ನಟನೊಂದಿಗೆ ರೌಟೇಲಾಗೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಉಮೈರ್​ ಸಂಧು ಟ್ವೀಟ್ ಮಾಡಿಕೊಂಡಿದ್ದರು. ಉಮೈರ್ ಹೇಳಿಕೆಯನ್ನು ನಿರಾಕರಿಸಿರುವ ಊರ್ವಶಿ ಅವರು, ಟ್ವೀಟ್ ಸ್ಕ್ರೀನ್​ ಶಾಟ್ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿ ಅದರ ಮೇಲೆ 'ಫೇಕ್​' ಎಂದು ಬರೆದುಕೊಂಡಿದ್ದಾರೆ.

ತಮಗೆ ಮತ್ತು ತಮ್ಮ ಕುಟುಂಬಕ್ಕೆ ಅಹಿತಕರ ವಾತಾವರಣ ಸೃಷ್ಟಿ ಮಾಡಿದ್ದಕ್ಕಾಗಿ ತಮ್ಮ ಕಾನೂನು ತಂಡವು ಉಮೈರ್ ವಿರುದ್ಧ ಕ್ರಮ ಕೈಗೊಂಡಿದೆ ಎಂದು ಊರ್ವಶಿ ಹಂಚಿಕೊಂಡಿದ್ದಾರೆ. "ತಮ್ಮ ಕಾನೂನು ತಂಡದಿಂದ ಮಾನನಷ್ಟ ಮೊಕದ್ದಮೆಯ ನೋಟಿಸ್ ನೀಡಲಾಗಿದೆ. ನಿಮ್ಮ ನಕಲಿ/ಹಾಸ್ಯಾಸ್ಪದ ಟ್ವೀಟ್‌ಗಳಿಂದಾಗಿ ಅಸಮಾಧಾನಗೊಂಡಿದ್ದೇನೆ. ನೀವು ನನ್ನ ಅಧಿಕೃತ ವಕ್ತಾರರಲ್ಲ. ನನಗೆ ಮತ್ತು ನನ್ನ ಕುಟುಂಬಕ್ಕೆ ಅಹಿತಕರ ವಾತಾವರಣ ಸೃಷ್ಟಿ ಮಾಡಿದ ಅಪ್ರಬುದ್ಧ ಪತ್ರಕರ್ತರು'' ಎಂದು ಬರೆದುಕೊಂಡಿದ್ದಾರೆ.

  • DEFAMATION LEGAL NOTICE HAS BEEN SERVED BY MY LEGAL TEAM. DEFINITELY DISGRUNTLED BY INDECENT JOURNALIST LIKE YOU FOR YOUR SPURIOUS / RIDICULOUS TWEETS. YOU’RE NOT MY OFFICIAL SPOKESPERSON. AND YES YOU’RE VERY IMMATURE KIND OF A JOURNALIST WHO MADE ME VERY UNCOMFORTABLE. pic.twitter.com/v755qXnQuq

    — URVASHI RAUTELA🇮🇳 (@UrvashiRautela) April 23, 2023 " class="align-text-top noRightClick twitterSection" data=" ">

ಇದನ್ನೂ ಓದಿ: ಮುದ್ದು ಮಗಳೊಂದಿಗೆ ಮಕ್ಕಳಾದ ಸ್ಟಾರ್ ಕಪಲ್: ಪ್ರಿಯಾಂಕಾ ಚೋಪ್ರಾ ಫ್ಯಾಮಿಲಿ ಫೋಟೋ

ಉಮೈರ್​ ಸಂಧು ವಿದೇಶಿ ಸೆನ್ಸಾರ್​ ಮಂಡಳಿ ಸದಸ್ಯ ಎಂದು ಗುರುತಿಸಿಕೊಂಡಿದ್ದಾರೆ. ಬಾಲಿವುಡ್​ ಚಿತ್ರಗಳ ಬಗ್ಗೆ ಮಾತನಾಡುತ್ತಾರೆ. ಸಿನಿಮಾಗಿಂತ ಹೆಚ್ಚಾಗಿ ನಟ ನಟಿಯರ ಬಗ್ಗೆ ಮಾತನಾಡುತ್ತಾರೆ. ರಿಲೇಶನ್​ಶಿಪ್, ಡಿವೋರ್ಸ್​​, ದೈಹಿಕ ಸಂಬಂಧ ಹೀಗೆ ವಿವಾದಾತ್ಮಕ ಟ್ವೀಟ್ ಮೂಲಕ ಗುರುತಿಸಿಕೊಂಡಿದ್ದಾರೆ​. ಆಗಾಗ್ಗೆ ಬಾಲಿವುಡ್ ವ್ಯಕ್ತಿಗಳ ಬಗ್ಗೆ ಅಸಹ್ಯಕರ, ಕೀಳರಿಮೆ ಬರುವಂತಹ, ಗಾಸಿಪ್​ ಟ್ವೀಟ್‌ಗಳನ್ನು ಪೋಸ್ಟ್ ಮಾಡುತ್ತಾರೆ. 23.9K ಫಾಲೋವರ್‌ಗಳನ್ನು ಹೊಂದಿರುವ ಇವರು ಸಲ್ಮಾನ್ ಖಾನ್, ದೀಪಿಕಾ ಪಡುಕೋಣೆ ಅವರಂತಹ ಪ್ರಸಿದ್ಧ ವ್ಯಕ್ತಿಗಳನ್ನು ಸಹ ಬಿಟ್ಟಿಲ್ಲ.

ಇದನ್ನೂ ಓದಿ: ವಿಷ್ಣುವರ್ಧನ್​ಗೆ ದೇವರ ಸ್ಥಾನ ಕೊಟ್ಟ ಅವಿನಾಶ್, ಮಾಳವಿಕಾ: ಮಗನ ಸ್ಥಿತಿ ನೆನೆದು ದಂಪತಿ ಭಾವುಕ!

ಕಳೆದ ವರ್ಷ ಬಾಲಿವುಡ್​ ತಾರಾ ದಂಪತಿಗಳಾದ ದೀಪಿಕಾ ಪಡುಕೋಣೆ ಮತ್ತು ರಣ್​ವೀರ್​ ಸಿಂಗ್​ ಬಗ್ಗೆ ಮಾತನಾಡಿದ್ದರು. ಈಗಲೂ ಈ ಜೋಡಿ ಬಗ್ಗೆ ಟ್ವೀಟ್​ ಮುಂದುವರಿಸಿದ್ದಾರೆ. ದೀಪ್​ವೀರ್​ ದಂಪತಿ ನಡುವೆ ಎಲ್ಲವೂ ಸರಿ ಇಲ್ಲ ಎಂಬಂತೆ ಮಾತನಾಡಿದ್ದರು. ಸಾಕಷ್ಟು ಸಂಖ್ಯೆಯ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದರು. ಆದ್ರೆ ಪರೋಕ್ಷವಾಗಿ ನಟ ನಟಿ ತಮ್ಮ ದಾಂಪತ್ಯ ಚೆನ್ನಾಗಿಯೇ ಮುನ್ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದ್ದರು.

ದೀಪಿಕಾ ಪಡುಕೋಣೆ ಅವರು ರಣ್​​ವೀರ್ ಸಿಂಗ್ ಜೊತೆ ಸಂಸಾರ ಮುಂದುವರಿಸಲು ತಯಾರಿಲ್ಲ. ದೀಪಿಕಾ ಆಪ್ತ ಸ್ನೇಹಿತರ ಪ್ರಕಾರ, ರಣ್​ವೀರ್​ ಅಪ್ರಬುದ್ಧ ವ್ಯಕ್ತಿ. ಅವರು ಫ್ಯಾಮಿಲಿ ಮ್ಯಾನ್ ಅಲ್ಲ. ದೀಪಿಕಾ ಅವರನ್ನು ಮದುವೆಯಾಗಿದ್ದು ದೊಡ್ಡ ತಪ್ಪು. ದೀಪಿಕಾ ಅನೇಕ ಬಾರಿ ಪ್ರತ್ಯೇಕತೆಯ ಬಗ್ಗೆ ಯೋಚಿಸಿದ್ದಾರೆ. ಆದರೆ ಅವರಿಗೆ ಸಾಧ್ಯವಾಗಿಲ್ಲ ಎಂದು ಟ್ವೀಟ್ ಮಾಡುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದರು ಈ ಉಮೈರ್.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.