ETV Bharat / entertainment

ಇವರು ಅವರೇನಾ? ನಟಿಯ ಕಾಲೇಜ್ ದಿನಗಳ ಫೋಟೋ ವೈರಲ್ - ಊರ್ವಶಿ ರೌಟೇಲಾ ಸರ್ಜರಿ

ಬಾಲಿವುಡ್​ ಬ್ಯೂಟಿ ಊರ್ವಶಿ ರೌಟೇಲಾ ಹಳೇ ಫೋಟೋಗಳು ವೈರಲ್​ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ನಟಿಯನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ.

Urvashi Rautela old pictures
ನಟಿ ಊರ್ವಶಿ ರೌಟೇಲಾ ಹಳೇ ಫೋಟೋ
author img

By

Published : Mar 31, 2023, 9:11 PM IST

ಸಿನಿಮಾಗಿಂತ ಹೆಚ್ಚಾಗಿ ಸೌಂದರ್ಯದಿಂದಲೇ ಸದ್ದು ಮಾಡುವ ಬಾಲಿವುಡ್​ ಬ್ಯೂಟಿ ಊರ್ವಶಿ ರೌಟೇಲಾ. ಇವರಿಗೆ ಟ್ರೋಲಿಂಗ್ ಮತ್ತು ಟೀಕೆ ಹೊಸದೇನಲ್ಲ. ನಟಿ ತಮ್ಮ ಬೆರಗುಗೊಳಿಸುವ ನೋಟಕ್ಕೆ ಹೆಸರುವಾಸಿಯಾಗಿದ್ದರೂ ಕೂಡ, ಅವರ ಹೇಳಿಕೆಗಳು ಅಥವಾ ಜನರ ಗಮನ ಸೆಳೆಯುವ ಮನೋಭಾವದಿಂದಾಗಿ ಆಗಾಗ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ವೈರಲ್ ಆದ ಫೋಟೋದಿಂದಾಗಿ ಹಿಂದಿ ಚಿತ್ರ ನಟಿ ಮತ್ತೊಮ್ಮೆ ಟ್ರೋಲ್​ ಸುಳಿಯಲ್ಲಿ ಸಿಲುಕಿದ್ದಾರೆ.

ಊರ್ವಶಿ ರೌಟೇಲಾ ಶಾಲಾ ದಿನಗಳ ವೈರಲ್ ಫೋಟೋಗಳಿಗೆ ಪ್ರತಿಕ್ರಿಯಿಸಿದ ಸಾಮಾಜಿಕ ಮಾಧ್ಯಮ ಬಳಕೆದಾರರು, ಅವರು ಅದ್ಭುತವಾದ ದೈಹಿಕ ರೂಪಾಂತರಕ್ಕೆ ಒಳಗಾಗಿದ್ದಾರೆ, ಇದು ಪ್ಲಾಸ್ಟಿಕ್ ಸರ್ಜರಿಯ ಮೂಲಕ ಮಾತ್ರ ಸಾಧ್ಯ ಎಂದು ವಾದಿಸಿದ್ದಾರೆ. ನಟಿಯ ಶಾಲಾ ದಿನಗಳ ಚಿತ್ರಗಳು ಸೋಶಿಯಲ್ ಮೀಡಿಯಾ ಬಳಕೆದಾರರನ್ನು ದಿಗ್ಭ್ರಮೆಗೊಳಿಸಿದೆ. ಬಾಲಿವುಡ್ ದಿವಾ ಪ್ಲಾಸ್ಟಿಕ್ ಸರ್ಜರಿ ಮಾಡಿಸಿದ್ದಾರೆಂದು ಹೇಳಲಾಗುತ್ತಿದೆ.

ತೆಳ್ಳಗಿನ ಹುಬ್ಬುಗಳು ಮತ್ತು ಸಾಮಾನ್ಯ ಕೇಶ ಶೈಲಿಯಿಂದಾಗಿ ಸನಮ್ ರೇ ಚಿತ್ರನಟಿ ಫೋಟೋಗಳಲ್ಲಿ ಗುರುತಿಸಲಾಗದಷ್ಟರ ಮಟ್ಟಿಗೆ ಕಾಣಿಸಿಕೊಂಡಿದ್ದಾರೆ. ಮಾಡೆಲ್, ನಟಿಯ ಈ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿವೆ. ಈ ವೈರಲ್​ ಫೋಟೋಗಳು ಸಾಮಾಜಿಕ ಮಾಧ್ಯಮ ಬಳಕೆದಾರರ ಆಶ್ಚರ್ಯಕ್ಕೆ ಕಾರಣವಾಗಿದೆ. ಆನ್​ಲೈನ್​ನಲ್ಲಿ ಊರ್ವಶಿ ಅವರ ಫೋಟೋಗಳು ಗಮನ ಸೆಳೆದ ತಕ್ಷಣ ಒಂದು ಗುಂಪಿನ ಜನರು ಅವರನ್ನು ಟ್ರೋಲ್ ಮಾಡಲು ಪ್ರಾರಂಭಿಸಿದರು. ಸೌಂದರ್ಯವನ್ನು ಹೆಚ್ಚಿಸಲು ಕಾಸ್ಮೆಟಿಕ್ ಸರ್ಜರಿ ಮಾಡಿಸಿದ್ದಾರೆಂದು ಆರೋಪಿಸಿದರು.

ನಟಿ ಊರ್ವಶಿ ರೌಟೇಲಾ ಸಂಪೂರ್ಣ ನಕಲಿ ಎಂದು ನೆಟಿಜನ್​ಗಳು ಆರೋಪಿಸಿದ್ದಾರೆ. ಅವರ ಮೂಗು ಮತ್ತು ಹುಬ್ಬು ಎರಡೂ ತೀವ್ರವಾಗಿ ಬದಲಾಗಿದೆ. ಇದೆಲ್ಲವೂ ಸರಿ, ನನ್ನನ್ನು ಕೆರಳಿಸುವ ಏಕೈಕ ವಿಷಯವೆಂದರೆ ಅವರು ಇನ್ನೂ ಜನಪ್ರಿಯತೆ ಮತ್ತು ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ನೆಟ್ಟಿಗರೋರ್ವರು ತಿಳಿಸಿದ್ದಾರೆ. ಅವರು ಮುಗ್ಧರಂತೆ ತೋರುತ್ತಾರೆ, ಅವರ ತಾಯಿಯೇ ಒತ್ತಡ ಹಾಕಿರಬಹುದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಪರಿಣಿತಿ ನಿಶ್ಚಿತಾರ್ಥ ವದಂತಿ ಬೆನ್ನಲ್ಲೇ ಪುತ್ರಿಯೊಂದಿಗೆ ಮೊದಲ ಬಾರಿ ತವರಿಗೆ ಬಂದ ಪ್ರಿಯಾಂಕಾ ಚೋಪ್ರಾ

ಊರ್ವಶಿ ರೌಟೇಲಾ ತಮ್ಮ ಚೆಲುವಿನಿಂದಲೇ ಅಭಿಮಾನಿಗಳ ಗಮನ ಸೆಳೆಯುವ ನಟಿ. ಕೆಲ ಸಿನಿಮಾಗಳಲ್ಲಿ ನಟಿಸಿದ್ದಾದರೂ, ತಮ್ಮ ಅಂದ ಚೆಂದದಿಂದಲೇ ಸದ್ದು ಮಾಡಿದವರು. ಜೊತೆಗೆ ಸೋಶಿಯಲ್​ ಮಿಡಿಯಾದಲ್ಲೂ ಬಹಳ ಸಕ್ರಿಯರಾಗಿದ್ದಾರೆ. ಅಭಿಮಾನಿಗಳಿಗಾಗಿ ಸುಂದರ, ವಿಭಿನ್ನ ಫೋಟೋಗಳನ್ನು ಹಂಚಿಕೊಳ್ಳುವ ಇವರು ಪಾಪರಾಜಿಗಳಿಗೆ ಪೋಸ್ ನೀಡೋ ವಿಚಾರವಾಗಿ ಎಂದೂ ಹಿಂದೆ ಸರಿದಿಲ್ಲ. ಆಗಾಗ ರಹಸ್ಯ ಪೋಸ್ಟ್​ಗಳನ್ನು ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುವ ಇವರು ನಿನ್ನೆ ವಿಚಿತ್ರ ಅವತಾರದಲ್ಲೇ ಕ್ಯಾಮರಾಗೆ ಪೋಸ್ ಕೊಟ್ಟು ಸಖತ್ ಟ್ರೋಲ್ ಆಗಿದ್ದರು.

ಇದನ್ನೂ ಓದಿ: ಫೇಸ್ ಮಾಸ್ಕ್ ಹಾಕಿ ಹೊರಬಂದ ನಟಿ: ರಾಜ್​ ಕುಂದ್ರಾ ಸಹೋದರಿಯೆಂದ ಟ್ರೋಲಿಗರು!

ಬ್ಯೂಟಿ ಫೇಸ್​ ಮಾಸ್ಕ್​​ ಹಾಕಿ ಮನೆಯಿಂದ ಹೊರಬಂದ ನಟಿ ಕ್ಯಾಮರಾಗಳಿಗೆ ಫೋಸ್ ಕೂಡ ಕೊಟ್ಟಿದ್ದಾರೆ. ಹಾಗಾಗಿ ಇವರನ್ನು ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಅವರ ಸಹೋದರಿ ಎಂದು ಟ್ರೋಲ್ ಮಾಡಲಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.