ETV Bharat / entertainment

ನೆಟ್ಟಿಗರಿಗೆ 'April Fool' ಮಾಡಿದ ಉರ್ಫಿ ಜಾವೇದ್ - urfi javed photos

ಸೋಶಿಯಲ್ ಮೀಡಿಯಾ ಸ್ಟಾರ್ ಉರ್ಫಿ ಜಾವೇದ್ ಟ್ವೀಟ್ ಮೂಲಕ ನೆಟ್ಟಿಗರನ್ನು ಏಪ್ರಿಲ್​ ಫೂಲ್​ ಮಾಡಿದ್ದಾರೆ.

urfi javed
ಉರ್ಫಿ ಜಾವೇದ್
author img

By

Published : Apr 1, 2023, 2:18 PM IST

ವಿಚಿತ್ರ ವಿನ್ಯಾಸದ ಉಡುಗೆ ತೊಟ್ಟು ಸೋಶಿಯಲ್​ ಮೀಡಿಯಾ ವೇದಿಕೆಗಳಲ್ಲಿ ಸದಾ ಸದ್ದು ಮಾಡುವ ಉರ್ಫಿ ಜಾವೇದ್ ಇದೀಗ ನೆಟ್ಟಿಗರಿಗೆ 'April Fool' ಮಾಡಿದ್ದಾರೆ. ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುವ ಇವರ ಉಡುಗೆ ಶೈಲಿಯನ್ನು ಬದಲಾಯಿಸಿಕೊಳ್ಳುತ್ತೇನೆ ಎಂದು ನಿನ್ನೆ ಟ್ವೀಟ್ ಮೂಲಕ ಸದ್ದು ಮಾಡಿದ್ದರು. ಇದೀಗ 'ಏಪ್ರಿಲ್​ ಫೂಲ್​​, ತಮಾಷೆ' ಎಂದು ಟ್ವೀಟ್ ಮಾಡಿದ್ದಾರೆ.

ಸೋಶಿಯಲ್​ ಮೀಡಿಯಾ ಸ್ಟಾರ್ ಉರ್ಫಿ ಜಾವೇದ್ ತಮ್ಮ ವಿಚಿತ್ರ ಡ್ರೆಸ್ಸಿಂಗ್​ನಿಂದ ಹೆಸರುವಾಸಿಯಾಗಿದ್ದಾರೆ. ಅಷ್ಟೇ ಅಲ್ಲ, ಹಲವು ವಿಷಯಗಳ ಬಗ್ಗೆ ತಮ್ಮದೇ ಆದ ಹೇಳಿಕೆಗಳನ್ನು ನೀಡುವುದರ ಮೂಲಕ ಕೂಡ ಸದ್ದು ಮಾಡುತ್ತಾರೆ. ಅವರ ಫ್ಯಾಷನ್ ಸೆನ್ಸ್ ಹೆಚ್ಚಾಗಿ ಟ್ರೋಲರ್‌ಗಳಿಗೆ ಆಹಾರವಾಗುತ್ತದೆ. ಏತನ್ಮಧ್ಯೆ, ಉರ್ಫಿ ಅವರ ಪೋಸ್ಟ್ ಒಂದು ಹೆಚ್ಚು ವೈರಲ್ ಆಗಿ ಸದ್ದು ಮಾಡಿತ್ತು. ಆದ್ರಿಂದು ಅವರು ತಮ್ಮ ದಾರಿ ಬದಲಾಯಿಸಿಕೊಂಡಿದ್ದಾರೆ.

  • I apologise for hurting everyone’s sentiments by wearing what I wear . From now on you guys will see a changed Uorfi . Changed clothes .
    Maafi

    — Uorfi (@uorfi_) March 31, 2023 " class="align-text-top noRightClick twitterSection" data=" ">

'ಬದಲಾದ ಉರ್ಫಿಯನ್ನು ನೋಡುತ್ತೀರಿ'...: ನಿನ್ನೆ ಅವರು ವಿಭಿನ್ನ ರೀತಿಯಲ್ಲಿ ಜನರಲ್ಲಿ ಕ್ಷಮೆಯಾಚಿಸಿದ್ದಾರೆ. ಟ್ವೀಟ್ ಮಾಡುವ ಮೂಲಕ, ಉರ್ಫಿ ಜಾವೇದ್ ಭಾವನಾತ್ಮಕ ರೀತಿಯಲ್ಲಿ ಕ್ಷಮೆಯಾಚಿಸಿದ್ದರು. 'ನಾನು ಧರಿಸುವ ಉಡುಗೆಯಿಂದ ಪ್ರತಿಯೊಬ್ಬರ ಭಾವನೆಗಳನ್ನು ನೋಯಿಸಿದ್ದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. ಇನ್ನು ಮುಂದೆ ನೀವು ಬದಲಾದ ಉರ್ಫಿಯನ್ನು ನೋಡುತ್ತೀರಿ. ನಾನು ಬದಲಾದ ಶೈಲಿಯಲ್ಲಿ ಕಾಣಿಸಿಕೊಳ್ಳುತ್ತೇನೆ' ಎಂದು ಶುಕ್ರವಾರ ಟ್ವೀಟ್ ಮಾಡಿದ್ದರು.

  • April fool 🤓🤓🤓
    I know so kiddish of me

    — Uorfi (@uorfi_) April 1, 2023 " class="align-text-top noRightClick twitterSection" data=" ">

'ಏಪ್ರಿಲ್​ ಫೂಲ್​​, ತಮಾಷೆ'...: ಆದ್ರಿಂದು 'ಏಪ್ರಿಲ್​ ಫೂಲ್​​, ತಮಾಷೆ' ಎಂದು ಟ್ವೀಟ್ ಮಾಡಿದ್ದಾರೆ. ಇದರರ್ಥ ಉಡುಪಿನ ಶೈಲಿಯನ್ನು ಇವರು ಬದಲಾಯಿಸಿಕೊಳ್ಳುವುದಿಲ್ಲ ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ಅಂದಾಜಿಸಿದ್ದಾರೆ.

ಇದನ್ನೂ ಓದಿ: ಮೇಕಪ್ ಇಲ್ಲದೇ ನಟಿಸುವುದರಿಂದ ಪ್ರೇಕ್ಷಕರು ನನ್ನನ್ನು ಇಷ್ಟಪಡುತ್ತಾರೆ : ಸಾಯಿ ಪಲ್ಲವಿ

ಟ್ವೀಟ್​ಗೆ ಪ್ರತಿಕ್ರಿಯೆ ಹೀಗಿತ್ತು.. ಶುಕ್ರವಾರದ ಟ್ವೀಟ್​ಗೆ ಪ್ರತಿಕ್ರಿಯಿಸಿದ್ದ ನೆಟ್ಟಿಗರು, ಮೊದಲು ಡಿಪಿ ಬದಲಾಯಿಸಿ ಎಂದು ಹೇಳಿದ್ದರು. ಆರಾಮಿದ್ದೀರಾ? ಎಂದು ಓರ್ವರು ಪ್ರಶ್ನಿಸಿದರೆ, ಮತ್ತೊಬ್ಬರು ಏಕೆ? ಎಂದು ಕೇಳಿದರು. ಅಂದಹಾಗೆ, ಉರ್ಫಿ ಮುಂದೆ ಏನು ಮಾಡಲು ಯೋಜಿಸುತ್ತಿದ್ದಾರೆ ಎಂಬುದು ಶೀಘ್ರದಲ್ಲೇ ಸ್ಪಷ್ಟವಾಗುತ್ತದೆ ಎಂದು ಸಹ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಬಾಲಿವುಡ್​ ಬ್ಯೂಟಿ ಜಾನ್ವಿ ವದಂತಿ ಗೆಳೆಯನೊಂದಿಗೆ ತಂದೆ ಬೋನಿ ಕಪೂರ್​

ಹಿಂದಿ ಬಿಗ್​ ಬಾಸ್​ ಒಟಿಟಿ, ಟೇಟ್​​ಬಾಜಿ, ಮೇರಿ ದುರ್ಗಾ, ಬೇಪನ್ಹಾ, ಪಂಚ್ ಬೀಟ್ 2, ಚಂದ್ರ ನಂದಿನಿ, ಸಾತ್ ಫೆರೋ ಕಿ ಹೇರಾ ಫೇರಿ, ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ ಕಸೌತಿ ಜಿಂದಗಿ ಕಿ, ಸ್ಪಿಟ್ಸ್​ವಿಲ್ಲಾ ಸೇರಿದಂತೆ ಹಲವಾರು ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ಕೆಲ ಸಮಯಗಳಿಂದ ಸೋಶಿಯಲ್​ ಮೀಡಿಯಾದಲ್ಲಿ ಸಕ್ರಿಯರಾಗಿರುವ ಇವರು, ಬಗೆಬಗೆಯ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸದ್ದು ಮಾಡುತ್ತಾರೆ. ಚಿತ್ರ ವಿಚಿತ್ರ ಉಡುಪಿನ ಶೈಲಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ. ಹೆಚ್ಚಾಗಿ ಇವರ ಫೋಟೋಗಳು ಟ್ರೋಲ್ ಆಗಿ ವೈರಲ್​ ಆಗುತ್ತೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.