ನಿನ್ನ ಸನಿಹಕೆ ಸಿನಿಮಾ ಬಳಿಕ ಧನ್ಯಾ ರಾಮ್ ಕುಮಾರ್ ಏನ್ಮಾಡ್ತಿದ್ದಾರೆ? ಮುಂದಿನ ಸಿನಿಮಾ ಯಾವ ನಟನ ಜೊತೆ ಎಂದೆಲ್ಲಾ ಅಭಿಮಾನಿಗಳಲ್ಲಿ ಪ್ರಶ್ನೆ ಮನೆ ಮಾಡಿತ್ತು. ಇದೀಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಅವರು ಕೆಂಡಸಂಪಿಗೆ ಹುಡುಗ ವಿಕ್ಕಿ ವರಣ್ ಅಭಿನಯಿಸಿ ನಿರ್ದೇಶಿಸಿರುವ ಕಾಲಾಪತ್ಥರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಕಾಲಾಪತ್ಥರ್ ಚಿತ್ರದಲ್ಲಿ ಧನ್ಯಾ ರಾಮ್‌ಕುಮಾರ್ ಫಸ್ಟ್ ಲುಕ್ ಅನಾವರಣ ಆಗಿದ್ದು, ಧನ್ಯಾ ಪಕ್ಕಾ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಡಾ.ರಾಜ್ ಕುಮಾರ್ ಹುಟ್ಟುಹಬ್ಬದ ಅಂಗವಾಗಿ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ. ವಿಕ್ಕಿ ವರಣ್ ಅಭಿನಯದ ಜೊತೆಗೆ, ನಿರ್ದೇಶಕನಾಗಿ ಚೊಚ್ಚಲ ಚಿತ್ರದ ಚಿತ್ರೀಕರಣ ಮುಗಿಸಿದ್ದಾರೆ.
ಗೀತಾ ಶಿವರಾಜ್ ಕುಮಾರ್ ಅರ್ಪಿಸುವ, ಭುವನ್ ಮೂವೀಸ್ ನಿರ್ಮಾಣದಲ್ಲಿ ಸಿನಿಮಾ ಮೂಡಿಬರುತ್ತಿದೆ. ನಾಯಕನಟನಾಗಿ ಎರಡು ಚಿತ್ರ ಮಾಡಿ ಈಗ ಮೂರನೇ ಚಿತ್ರಕ್ಕೆ ನಟನೆಯ ಜತೆಗೆ ನಿರ್ದೇಶನವನ್ನು ಮಾಡಿದ್ದಾರೆ ವಿಕ್ಕಿ ವರಣ್. ಸತ್ಯಪ್ರಕಾಶ್ ಕಾಲಾಪತ್ಥರ್ ಚಿತ್ರಕ್ಕೆ ಕಥೆ ಬರೆದಿದ್ದಾರೆ.
ಇದನ್ನೂ ಓದಿ: ಡಾ.ರಾಜ್ ಕುಮಾರ್ ಹುಟ್ಟುಹಬ್ಬ: ನಮನ ಸಲ್ಲಿಸಿದ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್‌ವೈ
ಹಿರಿಯ ನಟ ನಿರ್ದೇಶಕ ನಾಗಭರಣ, ರಾಜೇಶ್ ನಟರಂಗ, ಕೆ.ಜಿ.ಎಫ್ ಸಂಪತ್ ಸೇರಿದಂತೆ ಪ್ರತಿಭಾವಂತ ತಾರಾಬಳಗ ಚಿತ್ರಕ್ಕಿದೆ. ಸಂದೀಪ್ ಕುಮಾರ್ ಛಾಯಾಗ್ರಹಣವಿರುವ ಕಾಲಾಪತ್ಥರ್ ಗೆ ಅನೂಪ್ ಸಿಳೀನ್ ಸಂಗೀತ, ದೀಪು ಎಸ್.ಕುಮಾರ್ ಸಂಕಲನವಿದೆ. ಬಿಜಾಪುರದ ಜೈನಾಪುರ, ಜಮ್ಮು ಕಾಶ್ಮೀರ, ರಾಜಸ್ಥಾನದಲ್ಲಿ ಚಿತ್ರೀಕರಣ ಮಾಡಿದ್ದು, ಚಿತ್ರದ ಟಾಕಿ ಪೋರ್ಷನ್ ಮುಕ್ತಾಯಗೊಂಡಿದೆ. ಅಂದುಕೊಂಡಂತೆ ನಡೆದರೆ ಜೂನ್ನಲ್ಲಿ ಕಾಲಾಪ್ಥರ್ ಪ್ರೇಕ್ಷಕರ ಮುಂದೆ ಬರಲಿದೆ.