ETV Bharat / entertainment

ಸೆನ್ಸಾರ್​ ಪರೀಕ್ಷೆಯಲ್ಲಿ 'ಬುಲೆಟ್​' ಪಾಸ್​: ಧರ್ಮ ಕೀರ್ತಿರಾಜ್ ಸಿನಿಮಾ ಬಿಡುಗಡೆಗೆ ಸಿದ್ಧತೆ - Dharma Keerthiraj

ಧರ್ಮ ಕೀರ್ತಿರಾಜ್ ಅಭಿನಯದ ಬುಲೆಟ್ ಸಿನಿಮಾಗೆ ಪ್ರಾದೇಶಿಕ ಸೆನ್ಸಾರ್ ಮಂಡಳಿ 'ಯು/ಎ' ಪ್ರಮಾಣಪತ್ರ ನೀಡಿದೆ.

'U/A' certificate to 'Bullet' movie
'ಬುಲೆಟ್​' ಸಿನಿಮಾಗೆ 'ಯು/ಎ' ಪ್ರಮಾಣಪತ್ರ
author img

By ETV Bharat Karnataka Team

Published : Jan 2, 2024, 7:16 PM IST

ವಿಭಿನ್ನ ಚಿತ್ರಗಳ ಮೂಲಕ ಕನ್ನಡ ಸಿನಿಪ್ರಿಯರನ್ನು ರಂಜಿಸುತ್ತಿರುವ ನಟ ಧರ್ಮ ಕೀರ್ತಿರಾಜ್. ಚಾಕ್ಲೇಟ್ ಹೀರೋ ಅಂತಾ ಗುರುತಿಸಿಕೊಂಡಿರುವ ಧರ್ಮ ಕೀರ್ತಿರಾಜ್ ಒಂದರ ಹಿಂದೆ ಒಂದರಂತೆ ಸಿನಿಮಾ ಮಾಡ್ತಾನೆ ಇದ್ದಾರೆ. ಆದ್ರೆ ದೊಡ್ಡ ಮಟ್ಟದ ಬ್ರೇಕ್​​ಗಾಗಿ ಕಾಯುತ್ತಿದ್ದಾರೆ. ಇದೀಗ 'ಬುಲೆಟ್' ಅಂತಾ ಮಾಸ್ ಟೈಟಲ್ ಇಟ್ಟಿರುವ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬರಲು ಸಜ್ಜಾಗಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿರೋ 'ಬುಲೆಟ್' ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ 'ಯು/ಎ' ಪ್ರಮಾಣಪತ್ರ ನೀಡಿದೆ.

ಈ ಚಿತ್ರದಲ್ಲಿ ಧರ್ಮ ಕೀರ್ತಿರಾಜ್ ರಗಡ್ ಲುಕ್​ಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್ ನಿರ್ದೇಶಕ ಹಾಗೂ ನಿರ್ಮಾಪಕ ಸತ್ಯಜಿತ್‌ 'ಬುಲೆಟ್' ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ನಾಯಕನ ತಂದೆಯ ಪಾತ್ರದಲ್ಲೂ ಸತ್ಯಜಿತ್ ನಟಿಸಿದ್ದಾರೆ. ಕನ್ನಡದಲ್ಲಿ ನಿರ್ದೇಶಕರಿಗಿದು ಮೊದಲ ಚಿತ್ರ. ಇಶಾಕ್ ಕಾಝಿ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

'ಬುಲೆಟ್' ಎಂದರೆ ವಾಹನವಲ್ಲ. ಬಂದೂಕಿನ ಒಳಗಿರುವ ಬುಲೆಟ್ ಅಂತಿದ್ದಾರೆ ಧರ್ಮ ಕೀರ್ತಿರಾಜ್. ಇವರ ಜೋಡಿಯಾಗಿ ಶ್ರೀಯಾ ಶುಕ್ಲ ಹಾಗೂ ಅಜಿತಾ ಅಭಿನಯಿಸಿದ್ದಾರೆ. ಹಿರಿಯ ನಟಿ ಭವ್ಯ ಸಹ ಮುಖ್ಯ ಪಾತ್ರದಲ್ಲಿದ್ದಾರೆ. ಬಾಲಿವುಡ್​ನ ಖ್ಯಾತ ನಟರಾದ ಅಮಿತಾಭ್​ ಬಚ್ಚನ್, ಶಾರುಖ್​ ಖಾನ್, ಅಮೀರ್ ಖಾನ್ ಸೇರಿದಂತೆ ಮೊದಲಾದವರ ಚಿತ್ರಗಳಲ್ಲಿ ನಟಿಸಿರುವ ಶಿವ ಅವರು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಶಾಕ್ ಕಾಝಿ, ಸತ್ಯಜಿತ್, ಮಾಸ್ಟರ್ ಸಿದ್ ಟೈನ್, ಶಿವ, ರಾಜ ದೀಪ್, ಕಿಲ್ಲರ್ ವೆಂಕಟೇಶ್, ಶೋಭ್ ರಾಜ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

'U/A' certificate to 'Bullet' movie
'ಬುಲೆಟ್​' ಸಿನಿಮಾ ಬಿಡುಗಡೆಗೆ ಸಿದ್ಧತೆ

ಇದನ್ನೂ ಓದಿ: 'ರಾಜ್‌ಕುಮಾರ್ ಅವರ ಕಾಲು ಧೂಳಿಗೂ ನಾನು ಸಮ ಇಲ್ಲ': ನಟ ದರ್ಶನ್​

ಚಿತ್ರಕ್ಕೆ ಪಿ.ವಿ.ಆರ್ ಸ್ವಾಮಿ ಅವರ ಛಾಯಾಗ್ರಹಣವಿದೆ. ಮೂರು ಹಾಡುಗಳಿದ್ದು, ರಾಜ್ ಭಾಸ್ಕರ್ ಸಂಗೀತ ನೀಡಿದ್ದಾರೆ. ಗುರುಪ್ರಸಾದ್ ಸಂಕಲನ ಹಾಗೂ ಅಲ್ಟಿಮೇಟ್ ಶಿವು, ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಬೆಂಗಳೂರು, ಗೋವಾ, ಮಾಲೂರು, ತುಮಕೂರು ಮುಂತಾದ ಕಡೆಗಳಲ್ಲಿ 45 ದಿನಗಳ ಚಿತ್ರೀಕರಣ ನಡೆದಿದೆ‌. ವಿಭಿನ್ನ ಕಥಾಹಂದರ ಹೊಂದಿರುವ ಈ ಸಿನಿಮಾ ಸದ್ಯದಲ್ಲೇ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಸದ್ಯ ಸೆನ್ಸಾರ್​ನಿಂದ ಯು/ಎ ಸರ್ಟಿಫಿಕೇಟ್ ಪಡೆದಿರೋ ಬುಲೆಟ್ ಸಿನಿಮಾ ಸದ್ಯದಲ್ಲೇ ತೆರೆಗೆ ಬರಲಿದೆ. ಈ ಚಿತ್ರ ಧರ್ಮ ಕೀರ್ತಿರಾಜ್ ಅವರ ಜನಪ್ರಿಯತೆ ಹೆಚ್ಚಿಸುತ್ತಾ ಎಂಬುದನ್ನು ಕಾದು ನೋಡಬೇಕು.

ಇದನ್ನೂ ಓದಿ: ಚೊಚ್ಚಲ ಚಿತ್ರದಲ್ಲೇ ಮಾಲಾಶ್ರೀ ಪುತ್ರಿಗೆ ಅದ್ಭುತ ಯಶಸ್ಸು: ವಿದೇಶದಲ್ಲಿ ಅಮ್ಮ-ಮಗಳ ಡ್ಯಾನ್ಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.