ಕೇರಳ: ಕೋಝಿಕ್ಕೋಡ್‌ನ ಮಾಲ್ ಒಂದರಲ್ಲಿ ಉದಯೋನ್ಮಖ ನಟಿಯರನ್ನು ಯುವಕರು ಎಳೆದಾಡಿರುವ ಆರೋಪ ಕೇಳಿಬಂದಿದೆ. ಕೋಝಿಕ್ಕೋಡ್‌ನ ಹೈಲೈಟ್ ಮಾಲ್‌ನಲ್ಲಿ ಹೊಸ ಚಲನಚಿತ್ರದ ಪ್ರಚಾರಕ್ಕಾಗಿ ಚಿತ್ರ ತಂಡ ಬಂದ ವೇಳೆ ನೂಕು ನುಗ್ಗಲಿನಲ್ಲಿ ನಟಿಯರನ್ನು ಹಿಡಿದು ಎಳೆದಾಡಿದ್ದಾರೆ.
ಚಿತ್ರದ ನಿರ್ಮಾಪಕರು ಮತ್ತು ನಟಿಯೊಬ್ಬರು ಈ ಬಗ್ಗೆ ಕೋಝಿಕ್ಕೋಡ್ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಪೊಲೀಸರು ಘಟನೆಯ ದೃಶ್ಯಾವಳಿಗಳನ್ನು ಸಂಗ್ರಹಿಸಿದ್ದು, ದುಷ್ಕರ್ಮಿಗಳ ಬಂಧನಕ್ಕೆ ಶೋಧ ಆರಂಭಿಸಿದ್ದಾರೆ.
ಯುವ ನಟಿಯೊಬ್ಬರು ತಮ್ಮ ಭಯಾನಕ ಅನುಭವವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಅವರು ತನ್ನನ್ನು ಹಿಡಿದ ಯುವಕನಿಗೆ ಕಪಾಳಮೋಕ್ಷ ಕೂಡ ಮಾಡಿದ್ದಾರೆ. ಆರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯ ಮುಂದುವರಿದಿದ್ದು, ಶೀಘ್ರವೇ ಬಂಧಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ನಟ ವಿಶಾಲ್ ಮನೆ ಮೇಲೆ ಅಪರಿಚಿತರಿಂದ ಕಲ್ಲು ತೂರಾಟ.. ಕಿಟಕಿ ಗಾಜುಗಳು ಪುಡಿಪುಡಿ