ETV Bharat / entertainment

100 ಕೋಟಿ ಕ್ಲಬ್​ ಸೇರಿದ ರಣ್​​ಬೀರ್​ ಶ್ರದ್ಧಾ ನಟನೆಯ TJMM.. - ಶ್ರದ್ಧಾ ಕಪೂರ್

ತೂ ಜೂಟಿ ಮೇ ಮಕ್ಕರ್ ಸಿನಿಮಾ ವಿಶ್ವದಾದ್ಯಂತ ಬಾಕ್ಸ್​ ಆಫೀಸ್​ನಲ್ಲಿ 11 ದಿನಗಳಲ್ಲಿ 122 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ.

Tu Jhoothi Main Makkaar
ತೂ ಜೂಟಿ ಮೇ ಮಕ್ಕರ್ ಸಿನಿಮಾ
author img

By

Published : Mar 19, 2023, 4:29 PM IST

ಬಾಲಿವುಡ್​ ಬಹು ಬೇಡಿಕೆ ನಟ ರಣ್​​ಬೀರ್ ಕಪೂರ್ ಮತ್ತು ಶ್ರದ್ಧಾ ಕಪೂರ್ ನಟನೆಯ, ಇತ್ತೀಚೆಗೆ ಬಿಡುಗಡೆಯಾದ ತೂ ಜೂಟಿ ಮೇ ಮಕ್ಕರ್ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಧೂಳೆಬ್ಬಿಸುವಲ್ಲಿ ಯಶಸ್ವಿಯಾಗಿದೆ. ಲವ್ ರಂಜನ್ ನಿರ್ದೇಶನದ ಈ ಚಿತ್ರವು ಬಿಡುಗಡೆ ಆದ 11 ದಿನಗಳಲ್ಲಿ 100 ಕೋಟಿ ಕ್ಲಬ್ ಸೇರಿದೆ.

ಬಾಯ್ಕಾಟ್​ ಪ್ರವೃತ್ತಿಗೆ ನಲುಗಿದ್ದ ಬಾಲಿವುಡ್​ ಮತ್ತೆ ಯಶಸ್ಸಿನ ಹಾದಿಗೆ ಮರಳಿದೆ. ಈ ವರ್ಷದ ಮೊದಲ ತಿಂಗಳು ಬಿಡುಗಡೆ ಆದ, ಶಾರುಖ್​ ಖಾನ್ ಆ್ಯಕ್ಷನ್​ ಅವತಾರ ಪಠಾಣ್​​ ಅಭೂತಪೂರ್ವ ಯಶಸ್ಸು ಕಾಣುವ ಮೂಲಕ ಬಾಲಿವುಡ್​ಗೆ ಭರ್ಜರಿ ಓಪನಿಂಗ್​ ಕೊಟ್ಟಿತ್ತು. ಸಿನಿಮಾ ಬಿಡುಗಡೆ ಆದ ಒಂದು ತಿಂಗಳೊಳಗೆ 1,000 ಕೋಟಿ ರೂ. ಕಲೆಕ್ಷನ್​ ಮಾಡುವ ಮೂಲಕ ಗೆಲುವಿನ ನಗೆ ಬೀರಿತ್ತು. ಇದೀಗ ಮತ್ತೊಂದು ಹಿಟ್​ ಮೂಲಕ ಬಾಲಿವುಡ್​​ ಬ್ಯಾಕ್ ಟು ಫೈನ್ ಸ್ಟೇಜ್​ ತಲುಪಿದೆ.

122 ಕೋಟಿ ರೂ. ಕಲೆಕ್ಷನ್: ರಣ್​ಬೀರ್ ಕಪೂರ್ ಮತ್ತು ಶ್ರದ್ಧಾ ಕಪೂರ್ ಮುಖ್ಯಭೂಮಿಕೆಯ ತೂ ಜೂಟಿ ಮೇ ಮಕ್ಕರ್ ಸಿನಿಮಾ ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಗಳಿಸಿದೆ. ಬಿಡುಗಡೆಯಾದ ಮೊದಲ ದಿನದಿಂದಲೂ ಉತ್ತಮ ಪ್ರದರ್ಶನ ನೀಡುತ್ತಿದ್ದು, ಬಾಕ್ಸ್​ ಆಫೀಸ್​ ಸಂಖ್ಯೆ ಏರುತ್ತಲೇ ಇದೆ. ಈ ಚಿತ್ರವು ಜಗತ್ತಿನಾದ್ಯಂತ ಬಾಕ್ಸ್​ ಆಫೀಸ್​ನಲ್ಲಿ 11 ದಿನಗಳಲ್ಲಿ 122 ಕೋಟಿ ರೂಪಾಯಿ ಸಂಗ್ರಹಿಸಿದೆ. ಈ ಸಾಲಿನ ಮೆಗಾ ಹಿಟ್​ ಸಿನಿಮಾ ಪಠಾಣ್​ ನಂತರ ತೂ ಜೂಟಿ ಮೇ ಮಕ್ಕರ್ ಎರಡನೇ ಹಿಟ್ ಚಿತ್ರವಾಗಿದೆ.

ಆರನೇ ಹಿಟ್ ಚಿತ್ರ: ರಣಬೀರ್ ಮತ್ತು ಶ್ರದ್ಧಾ ಅಭಿನಯದ ಈ ತೂ ಜೂಟಿ ಮೇ ಮಕ್ಕರ್ ಸಿನಿಮಾ ದೇಶೀಯ ಬಾಕ್ಸ್ ಆಫೀಸ್​ ಕಲೆಕ್ಷನ್​ ವಿಚಾರದಲ್ಲಿ 100 ಕೋಟಿ ಕ್ಲಬ್​ ಸೇರಿದೆ ಎಂದು ಸಿನಿಮಾ ವ್ಯವಹಾರ ವಿಶ್ಲೇಷಕ ಜೋಗಿಂದರ್ ತುತೇಜಾ ಟ್ವೀಟ್ ಮೂಲಕ ತಿಳಿಸಿದ್ದಾರೆ. ಕುತೂಹಲಕಾರಿಯಾಗಿ, ರಣಬೀರ್ ಮತ್ತು ಶ್ರದ್ಧಾ ಅಭಿನಯದ ಚಿತ್ರಗಳ (ಪ್ರತ್ಯೇಕ ಸಿನಿಮಾಗಳು) ಪೈಕಿ 100 ಕೋಟಿ ದಾಟಿದ ಆರನೇ ಚಿತ್ರವಿದು.

ಒಂದು ತಿಂಗಳ ಹಿಂದೆ ತೂ ಜೂಟಿ ಮೇ ಮಕ್ಕರ್ ಟ್ರೇಲರ್ ಬಿಡುಗಡೆ ಆದಾಗ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೆಲವರು ಟ್ರೇಲರ್​ ಟೀಕಿಸಿದ್ದರೆ, ಹಲವರು ರಣ್​​ಬೀರ್ ಮತ್ತು ಶ್ರದ್ಧಾ ಜೋಡಿಯನ್ನು ಮೊದಲ ಬಾರಿಗೆ ತೆರೆ ಮೇಲೆ ಒಟ್ಟಾಗಿ ನೋಡಲು ಕಾತುರದಿಂದ ಕಾಯುತ್ತಿದ್ದರು. ಇದೀಗ ಗಲ್ಲಾಪೆಟ್ಟಿಗೆ ಸಂಖ್ಯೆ ಚಿತ್ರದ ಯಶಸ್ಸಿನ ಬಗ್ಗೆ ಮಾತನಾಡುತ್ತಿದೆ.

ಇದನ್ನೂ ಓದಿ: ನಾಟು ನಾಟು ಕ್ರೇಜ್: RC15 ಶೂಟಿಂಗ್​ ಸೆಟ್​​ ಮರಳಿದ ರಾಮ್​ ಚರಣ್​ ಜೊತೆ ಕುಣಿದು ಕುಪ್ಪಳಿಸಿದ ಪ್ರಭುದೇವ ಟೀಂ

ರಣಬೀರ್ ಮತ್ತು ಶ್ರದ್ಧಾ ಪ್ರತ್ಯೇಕವಾಗಿ ತಮ್ಮ ಚಿತ್ರದ ಪ್ರಚಾರ ನಡೆಸಿದ್ದರು. ಈ ಪ್ರತ್ಯೇಕ ಚಿತ್ರ ಪ್ರಚಾರ ತಂತ್ರವನ್ನು ಚಿತ್ರ ತಯಾರಕರು ರೂಪಿಸಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ. ಪ್ರೇಕ್ಷಕರು ತಮ್ಮ ಮೆಚ್ಚಿನ ಕಲಾವಿದರ ಕೆಮಿಸ್ಟ್ರಿಯನ್ನು ತೆರೆಯ ಮೇಲೆ ನೋಡುವ ಮೊದಲು ಇವರನ್ನು ಒಟ್ಟಿಗೆ ನೋಡುವುದು ನಿರ್ಮಾಪಕರಿಗೆ ಇಷ್ಟವಿರಲಿಲ್ಲ. ಇದೀಗ ತೆರೆ ಮೇಲೆ ಈ ಜೋಡಿ ಕಂಡ ಅಭಿಮಾನಿಗಳು ಚಿತ್ರಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

ಇದನ್ನೂ ಓದಿ: ಆಸ್ಕರ್​ ಸಮಾರಂಭಕ್ಕೆ ಸಾಕ್ಷಿಯಾಗಲು 1.44 ಕೋಟಿ ರೂ. ಖರ್ಚು ಮಾಡಿದ ನಿರ್ದೇಶಕ ರಾಜಮೌಳಿ!

TJMM ಜೋಡಿಯ ಪ್ರತ್ಯೇಕ ಪ್ರಚಾರಗಳು ಹಲವರ ಟೀಕೆಗೆ ವೇದಿಕೆ ಸೃಷ್ಟಿಸಿತ್ತು. ನಟ ರಣ್​ಬೀರ್​ ಕಪೂರ್​ ಅವರ ಪತ್ನಿ ಆಲಿಯಾ ಭಟ್ ಹೆಸರನ್ನು ಈ ವಿಚಾರದಲ್ಲಿ ತರಲಾಗಿತ್ತು. ಶ್ರದ್ಧಾ ಅವರೊಂದಿಗಿನ ಚಿತ್ರದ ಪ್ರಚಾರದಿಂದ ಗಂಡನನ್ನು ಆಲಿಯಾ ತಡೆದರು ಎಂಬ ವದಂತಿಗಳು ಹಬ್ಬಿದ್ದವು. ಆದರೆ ಈ ವದಂತಿಗಳನ್ನು ರಣ್​ಬೀರ್​ ಕಪೂರ್​ ಪ್ರಚಾರದ ವೇಳೆಯೇ ಅಲ್ಲಗಳೆದಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.