ETV Bharat / entertainment

Haddi: ನವಾಜುದ್ದೀನ್ ಸಿದ್ದಿಕಿಯ ಸಿನಿಮಾದಲ್ಲಿ ನಟಿಸುತ್ತಿರುವ 300 ತೃತೀಯಲಿಂಗಿಗಳು

ಹಡ್ಡಿ ಸಿನಿಮಾದಲ್ಲಿ 300 ತೃತೀಯಲಿಂಗಿಗಳು ಕೆಲಸ ಮಾಡಿದ್ದಾರೆ.

author img

By

Published : Jun 22, 2023, 10:01 AM IST

Haddi features transgender people
ಹಡ್ಡಿ ಸಿನಿಮಾದಲ್ಲಿ ತೃತೀಯಲಿಂಗಿಗಳು

ಬಾಲಿವುಡ್​ ನಟ ನವಾಜುದ್ದೀನ್​​ ಸಿದ್ದಿಕಿ ನಟನೆಯ (Nawazuddin Siddiqui) ಮುಂದಿನ ಬಹುನಿರೀಕ್ಷಿತ ಸಿನಿಮಾ ಹಡ್ಡಿ (Haddi). ತೃತೀಯಲಿಂಗಿಗಳ ಕುರಿತಾಣ ಚಿತ್ರವಿದು. ಸಾಕಷ್ಟು ತಯಾರಿ ನಡೆಸಿಕೊಂಡು ಅಖಾಡಕ್ಕೆ ಧುಮುಕಿದ್ದಾರೆ ನಟ ನವಾಜುದ್ದೀನ್​​ ಸಿದ್ದಿಕಿ. ಮತ್ತೊಂದು ಗಮನಾರ್ಹ ವಿಚಾರವೆಂದರೆ ಚಿತ್ರಕ್ಕೆ ನೈಜತೆ ತಂದುಕೊಡಲು ನಿರ್ಮಾಪಕರು 300 ನಿಜವಾದ ತೃತೀಯಲಿಂಗಿಗಳನ್ನು ಕರೆತಂದಿದ್ದಾರೆ.

ಸಂಜಯ್ ಸಹಾ ಮತ್ತು ರಾಧಿಕಾ ನಂದಾ (ಚೊಚ್ಚಲ ನಿರ್ಮಾಣ) ಈ ಹಡ್ಡಿ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಚಿತ್ರಕ್ಕಾಗಿ 300 ಟ್ರಾನ್ಸ್​ಜೆಂಡರ್​ಗಳನ್ನು ಹುಡುಕುವ ಪ್ರಕ್ರಿಯೆಯನ್ನು ಚಿತ್ರರಂಗದವರು 'ಸಾಹಸ' ಎಂದು ಕರೆದಿದ್ದಾರೆ.

"ಈ ಪ್ರಕ್ರಿಯೆಯು ಅತ್ಯಂತ ಸಾಹಸಮಯ ಮತ್ತು ಕಠಿಣವಾಗಿತ್ತು. ನಾವು ಅವರ ಜೀವನದ ಅನುಭವಗಳ ಬಗ್ಗೆ ಅರಿತಿರುವುದರಿಂದ ಅವರನ್ನು ನಮ್ಮ ಚಲನಚಿತ್ರದ ಭಾಗವಾಗಿಸಲು ಅವರಿಗೆ ಮನವರಿಕೆ ಮಾಡಿಕೊಡುವುದು ತುಂಬಾ ಕಷ್ಟಕರವಾಗಿರಲಿಲ್ಲ. ನಾವು ಅವರಿಂದ ಬಹಳಷ್ಟನ್ನು ಕಲಿತಿದ್ದೇವೆ. ಅವರ ಜೀವನ ಮತ್ತು ಪ್ರಪಂಚವು ನಮ್ಮಿಂದ ಹೇಗೆ ಭಿನ್ನವಾಗಿದೆ ಎಂಬುದನ್ನು ಒಳಗೊಂಡಂತೆ ಅವರಿಂದ ಅನೇಕ ವಿಷಯಗಳನ್ನು ಕಲಿತುಕೊಂಡಿದ್ದೇವೆ ಎಂದು ಚಿತ್ರತಂಡ ತಿಳಿಸಿದೆ. ರೇಣುಕಾ ಎಂಬ ಟ್ರಾನ್ಸ್‌ಜೆಂಡರ್ ಹಡ್ಡಿ ಚಿತ್ರದ ಸಂಶೋಧನೆಯ ಸಮಯದಲ್ಲಿ ಚಿತ್ರ ನಿರ್ಮಾಪಕರಿಗೆ ಸಹಾಯ ಮಾಡಿದರು.

ನಿರ್ಮಾಪಕ ಸಂಜಯ್ ಸಹಾ ಮಾತನಾಡಿ, "ಅವರು ಬಾಲ್ಯದಿಂದ ದೈನಂದಿನ ಜೀವನದಲ್ಲಿ ಅವರು ಎದುರಿಸಿದ ಸವಾಲುಗಳ ಜೊತೆಗೆ ಅವರ ಸಮುದಾಯ ಮತ್ತು ಅವರ ಆಚರಣೆಯ ಬಗ್ಗೆ ಕಲಿಯಲು ನಮಗೆ ಸಹಾಯ ಮಾಡಿದರು. ಅವರು ನಮಗೆ ಸ್ಕ್ರಿಪ್ಟ್ ಬರೆಯುವ ಸಮಯದಲ್ಲಿ ಸಹಾಯ ಮಾಡಿದರು. ಸಮುದಾಯದ ಅನೇಕ ಜನರನ್ನು ಭೇಟಿ ಮಾಡಲು ಸಹಾಯ ಮಾಡಿದರು. ಅವರ ಜೀವನದ ಬಗ್ಗೆ ಉತ್ತಮವಾಗಿ ಅರಿತುಕೊಂಡೆವು. ನಟ ನವಾಜುದ್ದೀನ್​​ ಸಿದ್ದಿಕಿ ಪಾತ್ರಕ್ಕೆ ಪ್ರವೇಶಿಸುವ ಸಂದರ್ಭ ಅವರ ಜೀವನವನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಅವರ ಸಮುದಾಯದಿಂದ ಕೆರ ಸ್ನೇಹಿತರನ್ನು ಕರೆತಂದು ನಮಗೆ ಸಹಾಯ ಮಾಡಿದರೆಂದು ತಿಳಿಸಿದರು.

ಇದನ್ನೂ ಓದಿ: Adipurush: ವಿವಾದಕ್ಕೊಳಗಾದ ಭಗವಾನ್ ಹನುಮಂತನ ಡೈಲಾಗ್ಸ್​​ ಸರಿಪಡಿಸಿದ ಚಿತ್ರತಂಡ - ವಿಡಿಯೋ ನೋಡಿ

"ನಟ ನವಾಜುದ್ದೀನ್​​ ಸಿದ್ದಿಕಿ ಅವರೊಂದಿಗೆ ಸಾಕಷ್ಟು ಸಮಯವನ್ನು ಕಳೆದಿದ್ದಾರೆ. ತೃತೀಯಲಿಂಗಿಗಳ ಜೀವನ, ಅನುಭವವನ್ನು ಅವರು ನಿಜವಾಗಿಯೂ ಅರ್ಥಮಾಡಿಕೊಂಡಿದ್ದಾರೆ ಎಂಬುದನ್ನು ತಿಳಿಸಲು ನನಗೆ ನಿಜವಾಗಿಯೂ ಸಂತೋಷವಾಗಿದೆ" ಎಂದು ತಿಳಿಸಿದರು. ಚಿತ್ರತಂಡವು ದೆಹಲಿಯಲ್ಲಿ ತೃತೀಯಲಿಂಗಿಗಳೊಂದಿಗೆ ಶೂಟಿಂಗ್​​ ನಡೆಸಿದೆ. ಟ್ರಾನ್ಸ್ಜೆಂಡರ್ ಅವರ ವಿಷಯ, ಚಿತ್ರಣ, ಪ್ರಾತಿನಿಧ್ಯಕ್ಕೆ ಸಂಬಂಧಿಸಿದಂತೆ ಹಡ್ಡಿ ಸಿನಿಮಾವನ್ನು ಹೆಚ್ಚು ನೈಜಗೊಳಿಸಿರುವ ಕ್ರೆಡಿಟ್​​ ರೇಣುಕಾ ಅವರಿಗೆ ಸಲ್ಲುತ್ತದೆ ಎಂದು ನಿರ್ಮಾಪಕ ಸಂಜಯ್ ಸಹಾ ತಿಳಿಸಿದರು.

ಇದನ್ನೂ ಓದಿ: 'ಜನ ದುಡ್ಡು ಕೊಟ್ಟು ಸಿನಿಮಾ ನೋಡ್ತಾರೆ, ಅದ್ಭುತ ಚಿತ್ರ ನೀಡುವ ಜವಾಬ್ದಾರಿ ನನ್ನ ಮೇಲಿದೆ': ಯಶ್​​

" ತೃತೀಯಲಿಂಗಿಗಳಿಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆ ಹೇಗೆ ನಡೆಯುತ್ತದೆ ಮತ್ತು ಶಸ್ತ್ರಚಿಕಿತ್ಸೆಯ ನಂತರ ಅವರು ಏನು ಮಾಡಬೇಕು ಸೇರಿದಂತೆ ಸಂಪೂರ್ಣ ವೈದ್ಯಕೀಯ ಪ್ರಕ್ರಿಯೆ ಬಗ್ಗೆ ಸಹ ತಿಳಿದುಕೊಳ್ಳಲು ರೇಣುಕಾ ನಮಗೆ ಸಹಾಯ ಮಾಡಿದ್ದಾರೆ. ಟ್ರಾನ್ಸ್‌ಜೆಂಡರ್‌ಗಳು ಎಲ್ಲಿ ವಾಸಿಸುತ್ತಾರೆ, ಎಲ್ಲಿ ಚಿಕಿತ್ಸೆ ಪಡೆಯುತ್ತಾರೆ ಎಂಬುದರ ಬಗ್ಗೆ ಅರಿಯಲು ಚಿತ್ರದ ಬರಹಗಾರರು ಅವರೊಂದಿಗೆ ಸಮಯ ಕಳೆದರು. ಅವರು ದೈನಂದಿನ ಜೀವನದಲ್ಲಿ ಏನು ಮಾಡುತ್ತಾರೆ ಮತ್ತು ಅವರ ಜೀವನಶೈಲಿ ಹೇಗಿದೆ ಎಂಬುದನ್ನು ತಿಳಿದುಕೊಂಡರು. ಇದು ನವಾಜುದ್ದೀನ್​ ಸಿದ್ದಿಕಿ ಮತ್ತು ಚಿತ್ರತಂಡಕ್ಕೆ ಸಾಕಷ್ಟು ಸಹಾಯ ಮಾಡಿತು" ಎಂದು ಅವರು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.