ETV Bharat / entertainment

Salaar vs Dunki: ಟೀಸರ್ ವೀಕ್ಷಣೆಯಲ್ಲಿ 'ಸಲಾರ್​​' ಮೇಲುಗೈ - ಸಲಾರ್​ ಟೀಸರ್

ಸೌತ್​ ಸಿನಿಮಾ ರಂಗದ 'ಸಲಾರ್​', ಅತಿ ಹೆಚ್ಚು ವೀಕ್ಷಣೆ ಕಂಡ ಟಾಪ್ 5 ಭಾರತೀಯ ಟೀಸರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

Salaar vs Dunki
ಸಲಾರ್ vs ಡಂಕಿ
author img

By ETV Bharat Karnataka Team

Published : Nov 3, 2023, 5:09 PM IST

ನವೆಂಬರ್ 2 ರಂದು ಶಾರುಖ್ ಖಾನ್ ತಮ್ಮ 58ನೇ ಹುಟ್ಟುಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಿಕೊಂಡಿದ್ದಾರೆ. ಅಭಿಮಾನಿಗಳಿಗೆ ವಿಶೇಷ ಉಡುಗೊರೆಯೊಂದಿಗೆ ತಮ್ಮ ಮುಂದಿನ ಬಹುನಿರೀಕ್ಷಿತ ಡಂಕಿ ಸಿನಿಮಾದ ಟೀಸರ್ ಹಂಚಿಕೊಂಡಿದ್ದಾರೆ. ಆ್ಯಕ್ಷನ್ ಪ್ಯಾಕ್ಡ್ ಪಠಾಣ್​​ ಮತ್ತು ಜವಾನ್‌ನ ಭರ್ಜರಿ ಯಶಸ್ಸಿನ ನಂತರ ಸೂಪರ್‌ ಸ್ಟಾರ್‌ನ ಮತ್ತೊಂದು ಬಹುನಿರೀಕ್ಷಿತ ಚಿತ್ರ ಡಂಕಿ ಆಗಿದ್ದು, ಅಭಿಮಾನಿಗಳು ಟೀಸರ್ ಅನ್ನು ಪೂರ್ಣಮನಸ್ಸಿನಿಂದ ಸ್ವೀಕರಿಸಿದ್ದಾರೆ. ಆದಾಗ್ಯೂ, ಪ್ರಭಾಸ್ ಅವರ ಪ್ಯಾನ್ ಇಂಡಿಯಾ ಸಿನಿಮಾ ಸಲಾರ್ ಜೊತೆ ಡಂಕಿ ಮುಖಾಮುಖಿ ಆಗಲಿದ್ದು, ಇಬ್ಬರೂ ಸೂಪರ್​ಸ್ಟಾರ್​ಗಳ ಫ್ಯಾನ್ಸ್​ ಬಗೆಬಗೆಯ ಪೋಸ್ಟ್ ಶೇರ್ ಮಾಡುತ್ತಿದ್ದಾರೆ. ಟೀಸರ್ ವೀಕ್ಷಣೆಗಳಲ್ಲಿ ಸಲಾರ್​ ಮುಂಚೂಣಿಯಲ್ಲಿದೆ.

  • " class="align-text-top noRightClick twitterSection" data="">

ಸಲಾರ್ ಚಿತ್ರ ತಯಾರಕರು ಜುಲೈ 6 ರಂದು ಚಿತ್ರದ ಟೀಸರ್ ಅನ್ನು ಅನಾವರಣಗೊಳಿಸಿದ್ದರು. ಮೊದಲ 24 ಗಂಟೆಗಳಲ್ಲಿಯೇ 83 ಮಿಲಿಯನ್ ವೀಕ್ಷಣೆಗಳನ್ನು ಗಳಿಸುವ ಮೂಲಕ ದಾಖಲೆ ಸೃಷ್ಟಿಸಿದೆ. ಒಂದು ನಿಮಿಷ ಮತ್ತು 47 ಸೆಕೆಂಡುಗಳ ವಿಡಿಯೋ ಮುಂಬರುವ ಸಿನಿಮಾದಲ್ಲಿ ಏನಿದೆ ಎಂಬುದರ ಒಂದು ಸಣ್ಣ ನೋಟ ಕೊಟ್ಟಿದೆ. ಇದನ್ನು ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶಿಸಿದ್ದಾರೆ ಮತ್ತು ಹೊಂಬಾಳೆ ಫಿಲ್ಮ್ಸ್​ನ ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ.

ಯೂಟ್ಯೂಬ್‌ನಲ್ಲಿ 24 ಗಂಟೆಗಳಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡ ಟಾಪ್ 5 ಭಾರತೀಯ ಟೀಸರ್‌ಗಳ ಪಟ್ಟಿ:

  1. ಸಲಾರ್ - 83 ಮಿಲಿಯನ್​.
  2. ಆದಿಪುರುಷ್ - 69 ಮಿಲಿಯನ್​.
  3. ಕೆಜಿಎಫ್ 2 - 68.8 ಮಿಲಿಯನ್​.
  4. ರಾಧೆ ಶ್ಯಾಮ್ - 42.7 ಮಿಲಿಯನ್​.
  5. ಡಂಕಿ - 36.8 ಮಿಲಿಯನ್​.

ಇದನ್ನೂ ಓದಿ: ಟೈಗರ್​ ಈಸ್​​ ಬ್ಯಾಕ್​: ಪ್ರೇಕ್ಷಕರ ಕುತೂಹಲ ಹೆಚ್ಚಿಸಿದ ಸಲ್ಲು ಕ್ಯಾಟ್​ ಸಿನಿಮಾದ ಹೊಸ ವಿಡಿಯೋ

ಈ ಮೊದಲು ಪ್ರಭಾಸ್​​​​​ ಅಭಿನಯದ ಆದಿಪುರುಷ್ ಬಾಕ್ಸ್​ ಆಫೀಸ್​ನಲ್ಲಿ ಸದ್ದು ಮಾಡುವಲ್ಲಿ ವಿಫಲವಾಗಿತ್ತು. ಆದರೆ ಶಾರೂಖ್​ ಖಾನ್​ ಅಭಿನಯದ ಎರಡೂ ಚಿತ್ರಗಳು ಬಾಕ್ಸ್​ ಆಫೀಸ್​ನಲ್ಲಿ ದೊಡ್ಡ ಕಲೆಕ್ಷನ್​ ಮಾಡಿದ್ದವು. ಇದೀಗ ಮತ್ತ ಶಾರೂಖ್​ ಮತ್ತು ಪ್ರಭಾಸ್​ ನಡುವೆ ಬಾಕ್ಸ್​​ ಆಫೀಸ್ ಸಮರ ಶುರುವಾಗಿದೆ.

ಇದೀಗ ಸಲಾರ್​ ಟೀಸರ್​​​ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದೆ. ಸಿನಿಮಾದ 47 ಸೆಕೆಂಡುಗಳ ಟೀಸರ್​ ಬರೋಬ್ಬರಿ 83 ಮಿಲಿಯನ್​ ವೀಕ್ಷಣೆ ಪಡೆಯುವ ಮೂಲಕ, ಡಂಕಿಗಿಂತ ಎರಡ್ಮೂರು ಪಟ್ಟು ಮುನ್ನಡೆ ಪಡೆದುಕೊಂಡಿದೆ. ಹೀಗಾಗಿ ಇಬ್ಬರು ನಟರ ಅಭಿಮಾನಿಗಳ ನಡುವೆ ಫೈಟ್​ ಶುರುವಾಗಿದೆ. ಈ ಸಿನಿಮಾಗಳು ತೆರೆಗೆ ಬರುವ ಮುನ್ನವೇ ಹವಾ ಕ್ರಿಯೇಟ್​ ಮಾಡಿರುವುದು, ಭಾರಿ ಕುತೂಹಲ ಕೆರಳಿಸಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.