ಹೈದರಾಬಾದ್, ತೆಲಂಗಾಣ: ನಟ ಪ್ರಭಾಸ್ ಅವರ ಫೇಸ್ ಬುಕ್ ಖಾತೆ ಹ್ಯಾಕ್ ಆಗಿದೆ. ಈ ನಿಟ್ಟಿನಲ್ಲಿ ಗುರುವಾರ ಸಂಜೆ ಅವರ ಖಾತೆಯಲ್ಲಿ ವೈರಲ್ ವಿಡಿಯೋ ಕಾಣಿಸಿಕೊಂಡಿದೆ. 'ಮನುಷುಲು ದುರದೃಷ್ಟಕರ' ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ನೋಡಿದ ಅಭಿಮಾನಿಗಳು 'ಪ್ರಭಾಸ್ ಫೇಸ್ ಬುಕ್ ಖಾತೆ ಹ್ಯಾಕ್ ಆಗಿದೆ' ಎಂದು ಟ್ವೀಟ್ ಮಾಡಿದ್ದಾರೆ. ಇದರಿಂದ ಎಚ್ಚೆತ್ತ ಪ್ರಭಾಸ್ ತಂಡ ಸಮಸ್ಯೆ ಬಗೆಹರಿಸಿದೆ. ಅವರ ಖಾತೆಯನ್ನು ಮರುಸ್ಥಾಪಿಸಿದೆ.
ಪ್ರಭಾಸ್ ಹತ್ತು ವರ್ಷಗಳ ಹಿಂದೆ ತಮ್ಮ ಅಭಿಮಾನಿಗಳನ್ನು ಸಂಪರ್ಕಿಸಲು ಫೇಸ್‌ಬುಕ್ ಖಾತೆ ಹೊಂದಿದ್ದರು. ಅವರು 18 ಅಕ್ಟೋಬರ್ 2013 ರಂದು ತಮ್ಮ ಹೆಸರಿನಲ್ಲಿ ಖಾತೆಯನ್ನು ತೆರೆದರು. ಇಲ್ಲಿಯವರೆಗೆ 24 ಮಿಲಿಯನ್ ಜನರು ಅವರನ್ನು ಅನುಸರಿಸುತ್ತಿದ್ದಾರೆ. ಅವರು ರಾಜಮೌಳಿ ಅವರನ್ನು ಮಾತ್ರ ಅನುಸರಿಸುತ್ತಿದ್ದಾರೆ. ಅವರು ತಮ್ಮ ಚಲನಚಿತ್ರ ಮತ್ತು ನಟರಿಗೆ ಶುಭ ಹಾರೈಸಲು ಮಾತ್ರ ಈ ಸಾಮಾಜಿಕ ಮಾಧ್ಯಮ ಖಾತೆಯನ್ನು ಬಳಸುತ್ತಾರೆ.
ಇನ್ನು ಸಿನಿಮಾಗಳ ವಿಚಾರಕ್ಕೆ ಬಂದರೆ ಪ್ರಭಾಸ್ ಸದ್ಯ 'ಸಲಾರ್' ಮತ್ತು 'ಕಲ್ಕಿ 2898 ಎಡಿ' ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಚಿತ್ರದಲ್ಲಿ ಅವರು ಆ್ಯಕ್ಷನ್ ನೋಟದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವು ಆಕ್ಷನ್ ಎಂಟರ್‌ಟೈನರ್ ಆಗಿ ತಯಾರಾಗುತ್ತಿದ್ದು, ಸೆಪ್ಟೆಂಬರ್ 28 ರಂದು ತೆರೆಗೆ ಬರಲಿದೆ. ನಾಗ್ ಅಶ್ವಿನ್ ನಿರ್ಮಿಸುತ್ತಿರುವ 'ಕಲ್ಕಿ 2898 ಎಡಿ' ಮುಂದಿನ ವರ್ಷ ಬಿಡುಗಡೆಯಾಗಲಿದೆ. ಇವುಗಳ ಹೊರತಾಗಿ, ಅವರು ಸಂದೀಪ್ ರೆಡ್ಡಿ ವಂಗಾ ಅವರೊಂದಿಗೆ 'ಸ್ಪಿರಿಟ್' ಮತ್ತು ಮಾರುತಿ ನಿರ್ದೇಶನದ ಮತ್ತೊಂದು ಚಿತ್ರವನ್ನು ಮಾಡಲಿದ್ದಾರೆ.
50 ದಿನಗಳ ಬಳಿಕ ಹೈದರಾಬಾದ್‌ಗೆ ಬಂದ ಪ್ರಭಾಸ್: ಆದಿಪುರುಷ್ ಬಿಡುಗಡೆ ಬಳಿಕ ವಿದೇಶಕ್ಕೆ ಹಾರಿದ್ದ ಡಾರ್ಲಿಂಗ್ ಪ್ರಭಾಸ್ ವಾಪಸ್ ಭಾರತಕ್ಕೆ ಬಂದಿದ್ದಾರೆ. ಅಮೆರಿಕದಲ್ಲಿ ಪ್ರತಿಷ್ಠಿತ ಸ್ಯಾನ್ ಡಿಯಾಗೋ ಕಾಮಿಕ್-ಕಾನ್ (SDCC) ಈವೆಂಟ್ನಲ್ಲಿ ಭಾಗವಹಿಸಿದ್ದ ಅವರು, ಜುಲೈ 26ರಂದು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು.
ಅಂತಾರಾಷ್ಟ್ರೀಯ ಮಟ್ಟದ ಸ್ಯಾನ್ ಡಿಯಾಗೋ ಕಾಮಿಕ್-ಕಾನ್ ಸಮಾರಂಭದಲ್ಲಿ ಪ್ರಭಾಸ್ ಜೊತೆಗೆ ‘ಕಲ್ಕಿ 2898 AD’ ಚಿತ್ರ ತಂಡದ ಎಲ್ಲ ನಟ-ನಟಿಯರು ಕೂಡ ಭಾಗಿಯಾಗಿದ್ದರು. ಚಿತ್ರೀಕರಣ ವೇಳೆ ಪೆಟ್ಟು ಬಿದ್ದು ಸುರಿಸುಮಾರು 50 ದಿನಗಳನ್ನು ವಿದೇಶದಲ್ಲಿಯೇ ಕಾಲ ಕಳೆದ ಡಾರ್ಲಿಂಗ್ ಪ್ರಭಾಸ್ ಸ್ವದೇಶಕ್ಕೆ ಮರಳಿದ್ದರು. ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಅವರು ಆಗಮಿಸುತ್ತಿದ್ದಂತೆ ಕ್ಯಾಮೆರಾಗಳ ಕಣ್ಣು ಅವರ ಮೇಲೆ ಬಿದ್ದಿವೆ. ಕಪ್ಪು ಪ್ಯಾಂಟ್ ಮತ್ತು ಅದೇ ಬಣ್ಣದ ದೊಡ್ಡ ಸ್ವೆಟ್‌ಶರ್ಟ್ ಧರಿಸಿದ್ದರು. ಅದರ ಜೊತೆ ಟೋಪಿ ಧರಿಸಿದ್ದ ಅವರು ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದರು. ಅವರ ಈ ವಿಶೇಷ ಲುಕ್ ಕಂಡ ಅಭಿಮಾನಿಗಳು ಫಿದಾ ಆಗಿದ್ದಾರೆ.