ETV Bharat / entertainment

ಶೂಟಿಂಗ್ ವೇಳೆ ಬಾಹುಬಲಿ ಬಿಜ್ಜಳದೇವ ಖ್ಯಾತಿಯ ನಟ ನಾಜರ್​ಗೆ ಗಾಯ - Etv bharat kannada

ಸಿನಿಮಾ ಚಿತ್ರೀಕರಣದ ವೇಳೆ ಖ್ಯಾತ ನಟ ನಾಜರ್​ಗೆ ಗಾಯವಾಗಿದ್ದು, ಪ್ರಥಮ ಚಿಕಿತ್ಸೆ ಪಡೆದುಕೊಂಡಿದ್ದಾರೆ.

Tollywood Film actor Nazar
Tollywood Film actor Nazar
author img

By

Published : Aug 17, 2022, 8:43 PM IST

ಶೂಟಿಂಗ್​ ಸಂದರ್ಭದಲ್ಲಿ ಬಾಹುಬಲಿ ಖ್ಯಾತಿಯ ನಟ ನಾಜರ್​ ಗಾಯಗೊಂಡಿದ್ದಾರೆ. ಚಿತ್ರೀಕರಣ ನಡೆಯುತ್ತಿದ್ದಾಗ ಮೆಟ್ಟಿಲು ಇಳಿಯುತ್ತಿದ್ದ ಸಂದರ್ಭ ಕಾಲು ಜಾರಿ ಕೆಳಗೆ ಬಿದ್ದಿದ್ದು, ಎಡಗಣ್ಣಿನ ಕೆಳಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

Tollywood Film actor Nazar
ಬಾಹುಬಲಿ ಬಿಜ್ಜಳದೇವ ಖ್ಯಾತಿಯ ನಟ ನಾಜರ್​ಗೆ ಗಾಯ

ಹೈದರಾಬಾದ್​​ನ ನರಸಿಂಗಿ ಪೊಲೀಸ್ ಠಾಣೆ ವ್ಯಾಪ್ತಿಯ ಪೊಲೀಸ್ ಅಕಾಡೆಮಿ ಆವರಣದಲ್ಲಿ ಘಟನೆ ನಡೆದಿದೆ. ಪ್ರಾಥಮಿಕ ಚಿಕಿತ್ಸೆಯ ಬಳಿಕ ನಟ ಮನೆಗೆ ತೆರಳಿದ್ದಾರೆಂದು ಹೇಳಲಾಗಿದೆ. ತಮಿಳು ಸಿನಿಮಾದ ಒಟಿಟಿ ಶೂಟಿಂಗ್​​ನಲ್ಲಿ ಅವರು ಭಾಗಿಯಾಗಿದ್ದರು.

ಕನ್ನಡ, ಹಿಂದಿ ಸೇರಿದಂತೆ ಬಹುತೇಕ ಎಲ್ಲ ಭಾಷೆಯ ಚಿತ್ರಗಳಲ್ಲೂ ನಟಿಸಿರುವ ನಾಜರ್​, ವಿಶಿಷ್ಟ ಪಾತ್ರಗಳು ಹಾಗೂ ಅಭಿನಯದ ಮೂಲಕ ಜನಮೆಚ್ಚುಗೆ ಗಳಿಸಿದ್ದಾರೆ. ರಾಜಮೌಳಿ ನಿರ್ದೇಶನದ 'ಬಾಹುಬಲಿ'ಯಲ್ಲಿ ಇವರ ಬಿಜ್ಜಳದೇವನ ಪಾತ್ರ ಸಿನಿರಸಿಕರ ಮೆಚ್ಚುಗೆ ಗಳಿಸಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.