ಹೈದರಾಬಾದ್(ತೆಲಂಗಾಣ): ಜನಪ್ರಿಯ ತೆಲುಗು ನಟ ಹಾಗೂ ಸೂಪರ್ ಸ್ಟಾರ್ ಕೃಷ್ಣ (79) ನಿಧನರಾಗಿದ್ದಾರೆ. ಭಾನುವಾರ ಮಧ್ಯರಾತ್ರಿ ಹೃದಯಾಘಾತವಾಗಿದ್ದು, ಕುಟುಂಬ ಸದಸ್ಯರು ಹೈದರಾಬಾದ್‌ನ ಗಚ್ಚಿಬೌಲಿಯ ಕಾಂಟಿನೆಂಟಲ್ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಪಡೆಯುತ್ತಿದ್ದಾಗ ಮಂಗಳವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.
ಕೃಷ್ಣ ಅವರ ನಿಧನದಿಂದ ಅವರ ಕುಟುಂಬ ಸದಸ್ಯರು, ಅಭಿಮಾನಿಗಳು ಹಾಗೂ ತೆಲುಗು ಸಿನಿಲೋಕ ಶೋಕದಲ್ಲಿ ಮುಳುಗಿದೆ. ಮೇ 31, 1942 ರಂದು ಗುಂಟೂರು ಜಿಲ್ಲೆಯ ತೆನಾಲಿ ಮಂಡಲದ ಬುರ್ರಿಪಾಲೆಂ ಗ್ರಾಮದಲ್ಲಿ ಜನಿಸಿದ್ದಾರೆ. ವೀರರಾಘವಯ್ಯ ಚೌಧರಿ ಮತ್ತು ನಾಗರತ್ನ ಇವರ ಪೋಷಕರು. ಈ ದಂಪತಿಯ ಐವರು ಮಕ್ಕಳಲ್ಲಿ ಕೃಷ್ಣ ಹಿರಿಯರು.
ಇವರ ಪುತ್ರ ಸೂಪರ್ ಸ್ಟಾರ್ ಮಹೇಶ್ ಬಾಬು. ಸೆಪ್ಟೆಂಬರ್ 28 ರಂದು ಮಹೇಶ್‌ಬಾಬು ತಮ್ಮ ತಾಯಿಯನ್ನು ಕಳೆದುಕೊಂಡಿದ್ದರು.
ಓದಿ: ಸೂಪರ್ಸ್ಟಾರ್ ಮಹೇಶ್ ಬಾಬುಗೆ ಮಾತೃ ವಿಯೋಗ.. ಸಹೋದರನ ಬಳಿಕ ತಾಯಿ ಕಳೆದುಕೊಂಡ ಪ್ರಿನ್ಸ್