ನಟ ಟೈಗರ್ ಶ್ರಾಫ್ ಮತ್ತು ನಟಿ ದಿಶಾ ಪಟಾನಿ ಬಾಲಿವುಡ್ ಚಿತ್ರರಂಗದಲ್ಲಿ ದಿ ಬೆಸ್ಟ್ ಜೋಡಿ ಎಂದು ಕರೆಸಿಕೊಂಡಿತ್ತು. ಆದರೆ, ಇತ್ತೀಚೆಗೆ ಟೈಗರ್ ಶ್ರಾಫ್ ಮತ್ತು ದಿಶಾ ಪಟಾನಿ ನಡುವೆ ಬ್ರೇಕಪ್ ಆಗಿದೆ ಎನ್ನುವ ಗಾಳಿ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ, ಈವರೆಗೆ ಈ ತಾರಾ ಜೋಡಿ ಯಾವತ್ತೂ ತಾವು ಡೇಟಿಂಗ್ ನಡೆಸುತ್ತಿರುವುದಾಗಿ ಅಥವಾ ಸದ್ಯ ಬ್ರೇಕಪ್ ಆಗಿದೆ ಎಂದು ಹೇಳಿಕೊಂಡಿಲ್ಲ. ಇವರಿಬ್ಬರು ತಮ್ಮ 6 ವರ್ಷದ ಗೆಳೆತನಕ್ಕೆ ಎಳ್ಳು-ನೀರು ಬಿಟ್ಟಿದ್ದಾರೆ ಎಂದು ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿರುವ ಈ ಹೊತ್ತಿನಲ್ಲಿ ಟೈಗರ್ ಶ್ರಾಫ್ ಮತ್ತೆ ಸುದ್ದಿಯಾಗಿದ್ದಾರೆ.
- " class="align-text-top noRightClick twitterSection" data="">
ಸದ್ಯ ಟೈಗರ್ ಶ್ರಾಫ್ ಈಗ ಆಕಾಂಕ್ಷಾ ಶರ್ಮಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. 'ಕ್ಯಾಸೊನೋವಾ' (Kesonova) ಎಂಬ ಸಾಂಗ್, ಐ ಆ್ಯಮ್ ಆ ಡಿಸ್ಕೋ ಡ್ಯಾನ್ಸರ್ 2.0 (I am a Disco Dancer 2.0) ಸಾಂಗ್ನಲ್ಲಿ ಟೈಗರ್ ಶ್ರಾಫ್ ಆಕಾಂಕ್ಷಾ ಶರ್ಮಾ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಜೋಡಿ ಡೇಟಿಂಗ್ನಲ್ಲಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ.
ಆಕಾಂಕ್ಷಾ ಶರ್ಮಾ ಮಾಡೆಲ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ತ್ರಿವಿಕ್ರಮ (2020) ಮೂಲಕ ಸಿನಿಮಾ ಲೋಕಕ್ಕೆ ಪದಾರ್ಪಣೆ ಮಾಡಿದರು. ಅವರು ಅನೇಕ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಅವರು ಕಾರ್ತಿ ಮತ್ತು ಬಾಲಿವುಡ್ ನಟ ವರುಣ್ ಧವನ್ ಅವರೊಂದಿಗೆ ಸೌತ್ ಸೂಪರ್ ಸ್ಟಾರ್ ಮಹೇಶ್ ಬಾಬು ಅವರೊಂದಿಗೆ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ಬಾಲಿವುಡ್ನ ದಿ ಬೆಸ್ಟ್ ಜೋಡಿ ಟೈಗರ್ ಶ್ರಾಫ್ - ದಿಶಾ ಪಟಾನಿ ನಡುವೆ ಬ್ರೇಕಪ್! ನಿಜವೇ?
ಇತ್ತೀಚೆಗೆ ಆಕಾಂಕ್ಷಾ ಮತ್ತು ಟೈಗರ್ ಶ್ರಾಫ್ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದರು. ಅದರ ವಿಡಿಯೋವನ್ನು ಆಕಾಂಕ್ಷಾ ಕೂಡ ಹಂಚಿಕೊಂಡಿದ್ದಾರೆ. ಇದು ಇವರ ಡೇಟಿಂಗ್ ಗಾಳಿ ಸುದ್ದಿಗೆ ಪುಷ್ಠಿ ನೀಡಿತ್ತು. ಆದರೆ, ಕೆಲ ವರದಿಗಳ ಪ್ರಕಾರ, ಟೈಗರ್ ಶ್ರಾಫ್ ಅವರು ಆಕಾಂಕ್ಷಾ ಶರ್ಮಾ ಜೊತೆಗಿನ ಡೇಟಿಂಗ್ ಸುದ್ದಿಯನ್ನು ಸುಳ್ಳು ಎಂದು ಹೇಳಿದ್ದಾರೆ.