ETV Bharat / entertainment

ಕ್ಯಾರೆಕ್ಟರ್​ ಸರ್ಟಿಫಿಕೆಟ್​​ ಕೇಳಿದ ಸಲ್ಮಾನ್ ಖಾನ್​​.. 'ಟೈಗರ್ ಕಾ ಮೆಸೇಜ್​' ಏನು? - ಕತ್ರಿನಾ ಕೈಫ್

Tiger ka Message: ಬಹುನಿರೀಕ್ಷಿತ ಟೈಗರ್ 3 ಸಿನಿಮಾದಿಂದ 'ಟೈಗರ್ ಕಾ ಮೆಸೇಜ್​' ಶೀರ್ಷಿಕೆಯಡಿ ವಿಡಿಯೋ ಅನಾವರಣಗೊಂಡಿದೆ.

Tiger ka Message
ಟೈಗರ್ ಕಾ ಮೆಸೇಜ್
author img

By ETV Bharat Karnataka Team

Published : Sep 27, 2023, 7:08 PM IST

ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿಮಾನಿಗಳು ಟೈಗರ್ 3 ಸಿನಿಮಾದ ಅಪ್‌ಡೇಟ್ಸ್​ಗಾಗಿ ಬಹಳ ಕಾತರರಾಗಿದ್ದರು. ಬಿಡುಗಡೆಗೆ ಸಜ್ಜಾಗಿರುವ ಚಿತ್ರದ ಟೀಸರ್, ಟ್ರೇಲರ್​ಗಾಗಿ ಕಾದು ಕುಳಿತಿದ್ದ ಸಿನಿಪ್ರಿಯರಿಗೆ ಇಂದು ಚಿತ್ರ ತಯಾರಕರು 'ಟೈಗರ್ ಕಾ ಮೆಸೇಜ್​' ಕೊಟ್ಟಿದ್ದಾರೆ.

ಟೈಗರ್ ಕಾ ಮೆಸೇಜ್: ಪ್ರೇಕ್ಷಕರ ಆಸಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಚಲನಚಿತ್ರ ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲ್ಮ್ಸ್ (YRF) ಟೈಗರ್ 3 ಟೀಸರ್ / ಗ್ಲಿಂಪ್ಸ್ (Tiger ka message) ಅನ್ನು ಇಂದು ಸಾಮಾಜಿಕ ಮಾಧ್ಯಮದಲ್ಲಿ ಅನಾವರಣಗೊಳಿಸಿದೆ. ಬಾಲಿವುಡ್​ ಭಾಯ್​​ಜಾನ್​​ ಸಲ್ಮಾನ್‌ ಖಾನ್​​ ಏಜೆಂಟ್ ಟೈಗರ್ ಪಾತ್ರದಲ್ಲಿ ಮರಳಿದ್ದರೆ, ಕತ್ರಿನಾ ಕೈಫ್ ಏಜೆಂಟ್ ಝೋಯಾ ಪಾತ್ರ ಮುಂದುವರಿಸಿದ್ದಾರೆ.

ಯಶ್ ಚೋಪ್ರಾ ಜನ್ಮದಿನ ಹಿನ್ನೆಲೆ ವಿಡಿಯೋ ಅನಾವರಣ: ಪ್ರಸಿದ್ಧ ಚಲನಚಿತ್ರ ನಿರ್ಮಾಪಕ ಯಶ್ ಚೋಪ್ರಾ ಅವರ 91ನೇ ಜನ್ಮದಿನದ ಸಲುವಾಗಿ ಟೈಗರ್​ 3 ಚಿತ್ರತಯಾರಕರು ಇಂದು ಸಿನಿಮಾದ ವಿಶೇಷ ವಿಡಿಯೋ ಅನಾವರಣಗೊಳಿಸಿದೆ. 'ಟೈಗರ್ ಕಾ ಮೆಸೇಜ್​' ಟೈಟಲ್​ನಡಿ ಈ ವಿಡಿಯೋ ಹೊರಬಿದ್ದಿದೆ. 1 ನಿಮಿಷ ಮತ್ತು 43 ಸೆಕೆಂಡುಗಳ ವಿಡಿಯೋದಲ್ಲಿ, ಸಲ್ಮಾನ್ ಖಾನ್ ದೇಶದ ಜನರೊಂದಿಗೆ ಮಾತನಾಡುತ್ತಿರುವುದು ಕಂಡುಬಂದಿದೆ. ಸಲ್ಮಾನ್​ರನ್ನು ರಾಷ್ಟ್ರದ "ಎನಿಮಿ ನಂಬರ್​ 1" ಎಂದು ಬಿಂಬಿಸಲಾದ ಹಿನ್ನೆಲೆ ಕ್ಯಾರೆಕ್ಟರ್​ ಸರ್ಟಿಫಿಕೇಟ್​ ಕೇಳುತ್ತಿರುವುದು ಕಂಡುಬಂದಿದೆ. ಎರಡು ದಶಕಗಳ ಕಾಲ ರಾಷ್ಟ್ರಕ್ಕೆ ಸೇವೆ ಸಲ್ಲಿಸಿದ ನಂತರ ತಮ್ಮ ನಿಷ್ಠೆಯನ್ನು ಸಾಬೀತುಪಡಿಸಲು ಹೋರಾಡುವ ಸನ್ನಿವೇಶದಲ್ಲಿ ಸಲ್ಮಾನ್​ ಅವರ ಭಾವನಾತ್ಮಕ ನೋಟ ಕಾಣಿಸಿಕೊಂಡಿದೆ.

  • " class="align-text-top noRightClick twitterSection" data="">

ಐದನೇ ಬಾರಿ ಸ್ಕ್ರೀನ್​ ಶೇರ್ ಮಾಡಿದ ಸಲ್ಮಾನ್, ಕತ್ರಿನಾ: ಮನೀಶ್ ಶರ್ಮಾ ನಿರ್ದೇಶನ ಈ ಸಿನಿಮಾ ಯಶ್​ ರಾಜ್​ ಫಿಲ್ಮ್ಸ್​​ನ ಟೈಗರ್ ಫ್ರ್ಯಾಂಚೈಸಿಯ ಮೂರನೇ ಭಾಗ. ಐದನೇ ಬಾರಿ ಸಲ್ಮಾನ್ ಮತ್ತು ಕತ್ರಿನಾ ತೆರೆ ಮೇಲೆ ಒಂದಾಗಿದ್ದಾರೆ. ಸಲ್ಮಾನ್​, ಕತ್ರಿನಾ ಕೊನೆಯದಾಗಿ 2019ರಲ್ಲಿ ಬಂದ ಭಾರತ್ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಅದಕ್ಕೂ ಮೊದಲು, ಏಕ್ ಥಾ ಟೈಗರ್, ಟೈಗರ್ ಜಿಂದಾ ಹೈ, ಮೈನೆ ಪ್ಯಾರ್ ಕ್ಯೂನ್ ಕಿಯಾ ಮತ್ತು ಪಾರ್ಟ್‌ನರ್‌ನಂತಹ ಹಿಟ್‌ ಚಿತ್ರಗಳನ್ನು ಈ ಜೋಡಿ ನೀಡಿದೆ.

ಇದನ್ನೂ ಓದಿ: ಸೀರೆಯುಟ್ಟು ಕ್ಯಾಮರಾ ಎದುರು ಬಂದ ಬಳುಕುವ ಬಳ್ಳಿ: ಫಿಟ್ನೆಸ್ ಐಕಾನ್​​ ದಿಶಾ ಪಟಾನಿ ಫ್ಯಾಶನ್​ ಮೆಚ್ಚಿದ ಫ್ಯಾನ್ಸ್

ಬಹುನಿರೀಕ್ಷಿತ ಟೈಗರ್ 2 ಸಿನಿಮಾದಲ್ಲಿ ಇಮ್ರಾನ್ ಹಶ್ಮಿ ಸಹ ಪ್ರಮುಖ ಪಾತ್ರ ವಹಿಸಿದ್ದಾರೆ. ನೆಗೆಟಿವ್​ ರೋಲ್​​ನಲ್ಲಿ ಇಮ್ರಾನ್​ ಕಾಣಿಸಿಕೊಳ್ಳಲಿದ್ದಾರೆ. ದೀಪಾವಳಿ ಸಂದರ್ಭ ಚಿತ್ರ ಥಿಯೇಟರ್‌ಗಳಲ್ಲಿ ತೆರೆಕಾಣಲಿದೆ. ಕಳೆದ ಕೆಲವು ವರ್ಷಗಳಿಂದ ಸಲ್ಮಾನ್ ಖಾನ್​ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡದ ಹಿನ್ನೆಲೆ, ಅಭಿಮಾನಿಗಳು ಟೈಗರ್ 3 ಮೇಲೆ ಬೆಟ್ಟದಷ್ಟು ನಿರೀಕ್ಷೆ ಹೊಂದಿದ್ದಾರೆ. ಚಿತ್ರ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಹಾಲಿವುಡ್​ ಡೈರೆಕ್ಟರ್​ ಜೊತೆ ರಾಕಿಂಗ್​ ಸ್ಟಾರ್ ಯಶ್​​; ಡಿಸೆಂಬರ್​​ನಲ್ಲಿ ಶೂಟಿಂಗ್​ ಶುರು: ಸಿನಿಮಾ ವಿಶ್ಲೇಷಕರು ಹೇಳಿದ್ದಿಷ್ಟು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.