ETV Bharat / entertainment

'ಟೈಗರ್​ 3' ಟ್ರೇಲರ್​​ ರಿಲೀಸ್​ ಡೇಟ್ ಫಿಕ್ಸ್‌; ದೀಪಾವಳಿಗೆ ಸಿನಿಮಾ ತೆರೆಗೆ - ಟೈಗರ್​ 3 ಟ್ರೇಲರ್​ ಬಿಡುಗಡೆ ದಿನಾಂಕ

Tiger 3 Trailer Release Date: ಯಶ್ ರಾಜ್ ಫಿಲ್ಮ್ಸ್ ಇಂದು ಬಹುನಿರೀಕ್ಷಿತ 'ಟೈಗರ್​ 3' ರಿಲೀಸ್​ ಡೇಟ್​ ಅನೌನ್ಸ್​ ಮಾಡಿದೆ.

Salman Khan Tiger 3
ಸಲ್ಮಾನ್​ ಖಾನ್​ ಟೈಗರ್​ 3
author img

By ETV Bharat Karnataka Team

Published : Oct 4, 2023, 6:46 PM IST

Updated : Oct 4, 2023, 6:52 PM IST

2023ನೇ ಸಾಲಿನ ಕೊನೆಯಲ್ಲಿ ಸಾಲು ಸಾಲು ಬಹುನಿರೀಕ್ಷಿತ ಸಿನಿಮಾಗಳು ತೆರೆಗಪ್ಪಳಿಸಲಿವೆ. ಈಗಾಗಲೇ ಹಲವು ಸಿನಿಮಾಗಳು ತೆರೆಕಂಡು ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸಿವೆ. ಇನ್ನುಳಿದ ಮೂರು ತಿಂಗಳಲ್ಲಿ ಬಿಡುಗಡೆಯಾಗಲಿರುವ ಸಿನಿಮಾಗಳ ಪೈಕಿ 'ಟೈಗರ್​ 3' ಕೂಡ ಒಂದು.

ಟೈಗರ್​ 3: ಬಾಲಿವುಡ್​​ ನಟರಾದ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ಸಿನಿಮಾವೇ ಟೈಗರ್​ 3. ಈಗಾಗಲೇ ಅಭಿಮಾನಿಗಳ ಕುತೂಹಲ ಹೆಚ್ಚಿಸಿರುವ ಈ ಸಿನಿಮಾ ಮುಂದಿನ ತಿಂಗಳು ಬಿಡುಗಡೆಗೆ ಸಜ್ಜಾಗಿದೆ. ಆಕರ್ಷಕ ಪೋಸ್ಟರ್, ಟೈಗರ್ ಕಾ ಮೆಸೇಜ್​ ಹೆಸರಿನ ವಿಡಿಯೋ ಅನಾವರಣಗೊಳಿಸುವ ಮೂಲಕ ಚಿತ್ರ ನಿರ್ಮಾಪಕರು ಪ್ರೇಕ್ಷಕರ ನಿರೀಕ್ಷೆ ಹೆಚ್ಚಿಸುವಲ್ಲಿ ಯಶಸ್ವಿ ಆಗಿದ್ದಾರೆ. ಇದೀಗ ಅಧಿಕೃತ ಟ್ರೇಲರ್ ರಿಲೀಸ್​ ಡೇಟ್ ಅನ್ನು ಯಶ್ ರಾಜ್ ಫಿಲ್ಮ್ಸ್ (YRF) ಪ್ರಕಟಿಸಿದೆ.

ಟ್ರೇಲರ್​ ಬಿಡುಗಡೆ ಯಾವಾಗ?: ಈ ಹಿಂದಿನ ವರದಿಗಳು, ಟೈಗರ್ 3 ಟ್ರೇಲರ್​​ ಅಕ್ಟೋಬರ್ ತಿಂಗಳ ಮಧ್ಯದಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದವು. ಇದೀಗ ಆ್ಯಕ್ಷನ್ ಪ್ಯಾಕ್ಡ್ ಥ್ರಿಲ್ಲರ್‌ ಮೂವಿ ನಿರ್ಮಾಣ ಮಾಡಿರುವ ಯಶ್​ ರಾಜ್​ ಫಿಲ್ಮ್​​​ ಟ್ರೇಲರ್‌ ರಿಲೀಸ್​ ಡೇಟ್​ ಅನ್ನು ಅಧಿಕೃತವಾಗಿ ಘೋಷಿಸಿದೆ. ಟ್ರೇಲರ್ ಅಕ್ಟೋಬರ್ 16 ರಂದು (ಸೋಮವಾರ) ಬಿಡುಗಡೆಯಾಗಲಿದೆ.

ದೀಪಾವಳಿಗೆ ಸಿನಿಮಾ ತೆರೆಗೆ: ಯಶ್​​ ರಾಜ್​ ಫಿಲ್ಮ್ಸ್ ಎಕ್ಸ್(X)​ ವೇದಿಕೆಯಲ್ಲಿ ಸಿನಿಮಾ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ''ಅಕ್ಟೋಬರ್ 16 ರಂದು ಅತ್ಯಂತ ಜೋರಾಗಿ ಘರ್ಜಿಸಲು ಟೈಗರ್​ 3 ಟ್ರೇಲರ್​ ಬರುತ್ತಿದೆ. ಈ ದೀಪಾವಳಿಗೆ ಚಿತ್ರಮಂದಿರಗಳಲ್ಲಿ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ" ಎಂದು ಪೋಸ್ಟ್‌​ ಮಾಡಿದೆ.

ಇದನ್ನೂ ಓದಿ: ಮುಂಬೈ ಸಿದ್ಧಿ ವಿನಾಯಕ ದೇಗುಲಕ್ಕೆ ಆರ್​ಆರ್​ಆರ್​ ಸ್ಟಾರ್ ರಾಮ್​ಚರಣ್ ಭೇಟಿಯ ಕ್ಷಣಗಳು​ - Photos

ಚಲನಚಿತ್ರ ನಿರ್ಮಾಣ ಸಂಸ್ಥೆಯ ಈ ಘೋಷಣೆ ಅಭಿಮಾನಿಗಳ ಉತ್ಸಾಹ ಹೆಚ್ಚಿಸಿದೆ. ಟ್ರೇಲರ್​ ಬಿಡುಗಡೆಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಅಂತಿಮವಾಗಿ, ಮುಹೂರ್ನ ಫಿಕ್ಸ್ ಆಗಿದೆ. ಅಭಿಮಾನಿಗಳೀಗ ತಮ್ಮ ಉತ್ಸಾಹವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತಪಡಿಸುತ್ತಿದ್ದಾರೆ. "ದಿ ಬಿಗ್ ಡ್ಯಾಡಿ ಆಫ್ ಸ್ಪೈ ಯೂನಿವರ್ಸ್" ಎಂದು ಅಭಿಮಾನಿಯೋರ್ವರು ಕಾಮೆಂಟ್​ ಮಾಡಿದ್ದಾರೆ. ಮತ್ತೋರ್ವರು ಪ್ರತಿಕ್ರಿಯಿಸಿ, "ಭಾಯ್ ಈಸ್ ಬ್ಯಾಕ್, ಟೈಗರ್3" ಎಂದು ಬರೆದಿದ್ದಾರೆ. ಸಾಮಾಜಿಕ ಜಾಲತಾಣ ಬಳಕೆದಾರರೋರ್ವರು ಪ್ರತಿಕ್ರಿಯಿಸಿ, "ಟೈಗರ್ ಈಸ್ ಬ್ಯಾಕ್ ವಿತ್ ಬ್ಲಾಕ್‌ಬಸ್ಟರ್ ಮೂವಿ" ಎಂದಿದ್ದಾರೆ. ಸೋಷಿಯಲ್​ ಮೀಡಿಯಾಗಳಲ್ಲಿ ಅಭಿಮಾನಿಗಳು ತಮ್ಮ ಪ್ರತಿಕ್ರಿಯೆ ನೀಡೋದನ್ನು ಮುಂದುವರಿಸಿದ್ದು, ಕಾಮೆಂಟ್‌ಗಳು ಅಭಿಮಾನಿಗಳ ಸಿನಿಮಾ ಮೇಲಿನ ನಿರೀಕ್ಷೆ ಮತ್ತು ಉತ್ಸಾಹವನ್ನು ಪ್ರತಿಬಿಂಬಿಸಿದೆ.

ಇದನ್ನೂ ಓದಿ: 'ರಾಮಾಯಣ'ದಲ್ಲಿ ಯಶ್​​, ಸಾಯಿ ಪಲ್ಲವಿ, ರಣ್​ಬೀರ್​ ಕಪೂರ್​: 2024ರ ಫೆಬ್ರವರಿಯಲ್ಲಿ ಸೆಟ್ಟೇರಲಿದೆ ಸಿನಿಮಾ

ಟೈಗರ್ 3ಗೆ ಮನೀಶ್​ ಶರ್ಮಾ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಆದಿತ್ಯ ಚೋಪ್ರಾ ನಿರ್ಮಾಣ ಮಾಡಿದ್ದಾರೆ. ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಮುಖ್ಯಭೂಮಿಕೆಯ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಯಶ್​ ರಾಜ್​ ಫಿಲ್ಮ್ಸ್​​ನ ಸ್ಪೈ ಯೂನಿವರ್ಸ್‌ನ ಪ್ರಮುಖ ಪ್ರಾಜೆಕ್ಟ್​. ದೀಪಾವಳಿ ಸಂದರ್ಭ, ನವೆಂಬರ್ 10 ರಂದು ಚಿತ್ರಮಂದಿರಗಳಲ್ಲಿ ಟೈಗರ್​ 3 ಬಿಡುಗಡೆ ಆಗಲಿದೆ. 2012ರಲ್ಲಿ ಕಬೀರ್ ಖಾನ್ ನಿರ್ದೇಶಿಸಿದ ಏಕ್ ಥಾ ಟೈಗರ್‌ ಮೂಲಕ ಪ್ರಾರಂಭವಾಗಿ, 2017ರಲ್ಲಿ ಬಂದ ಅಲಿ ಅಬ್ಬಾಸ್ ಜಾಫರ್ ನಿರ್ದೇಶನದ ಟೈಗರ್ ಜಿಂದಾ ಹೈ ಮೂಲಕ ಪ್ರಯಾಣಿಸಿ ಇದೀಗ ಟೈಗರ್​ 3ಗೆ ಬಂದು ನಿಂತಿದೆ ಯಶ್​ ರಾಜ್​ ಫಿಲ್ಮ್ಸ್ ಸ್ಪೈ ಯೂನಿವರ್ಸ್‌ ಪ್ರಯಾಣ.

Last Updated : Oct 4, 2023, 6:52 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.