ETV Bharat / entertainment

2 ದಿನದಲ್ಲಿ 100 ಕೋಟಿ ರೂ. ದಾಟಿದ 'ಟೈಗರ್ 3': ಸಲ್ಲು ಕ್ಯಾಟ್​ ಫಾನ್ಸ್ ಖುಷ್

author img

By ETV Bharat Karnataka Team

Published : Nov 14, 2023, 4:19 PM IST

Tiger 3: 'ಟೈಗರ್ 3' ಸಿನಿಮಾದ ಕಲೆಕ್ಷನ್​ ಮಾಹಿತಿ ಇಲ್ಲಿದೆ.

tiger 3
ಟೈಗರ್ 3

ಯಶ್​ ರಾಜ್​ ಫಿಲ್ಮ್ಸ್​ ನಿರ್ಮಾಣದ ಬಹು ನಿರೀಕ್ಷಿತ ಚಿತ್ರ 'ಟೈಗರ್ 3' ದೀಪಾವಳಿ ಉಡುಗೊರೆಯಾಗಿ ಭಾನುವಾರ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ತೆರೆಕಂಡಿತು. ಬಿಡುಗಡೆಗೂ ಮುನ್ನ ಸಖತ್​ ಸದ್ದು ಮಾಡಿದ್ದ ಸಿನಿಮಾ ಎರಡು ದಿನಗಳಲ್ಲಿ 100 ಕೋಟಿ ರೂ.ನ ಕ್ಲಬ್​ ಸೇರುವಲ್ಲಿ ಯಶ ಕಂಡಿದೆ. ಹೌದು, ಸಲ್ಮಾನ್​ ಖಾನ್​ - ಕತ್ರಿನಾ ಕೈಫ್ ಮುಖ್ಯಭೂಮಿಕೆಯ ಚಿತ್ರ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್​ ಮಾಡಿದೆ. ಸೋಮವಾರದಂದು 57.52 ಕೋಟಿ ರೂ. ಗಳಿಸಿದೆ ಎಂದು ಸ್ಯಾಕ್ನಿಲ್ಕ್ ಮಾಹಿತಿ ನೀಡಿದೆ.

ಮನೀಶ್​ ಶರ್ಮಾ ನಿರ್ದೇಶನದ 'ಟೈಗರ್ 3' ಸಿನಿಮಾ ತೆರೆಕಂಡ ಮೊದಲ ದಿನ ಅಂದರೆ ಭಾನುವಾರ 44.5 ಕೋಟಿ ರೂ. ಕಲೆಕ್ಷನ್​ ಮಾಡಿತ್ತು. ಎರಡನೇ ದಿನ 57.52 ಕೋಟಿ ರೂ. ಗಳಿಸೋ ಮೂಲಕ ಎರಡು ದಿನಗಳ ಒಟ್ಟು ಕಲೆಕ್ಷನ್ 102 ಕೋಟಿ ರೂ. ಆಗಿದೆ. ಈ ಮೂಲಕ ವರ್ಷದ ಸೂಪರ್ ಹಿಟ್ ಸಿನಿಮಾ ಆಗಿ ಟೈಗರ್​ 3 ಹೊರಹೊಮ್ಮಿದೆ. ಸಿನಿಮಾ ಬಿಡುಗಡೆಯಾದ ಮೊದಲ ದಿನವೇ 44.5 ಕೋಟಿ ರೂ. ಗಳಿಸಿದೆ. ಈವರೆಗಿನ ಸಲ್ಮಾನ್ ಖಾನ್ ಚಿತ್ರಗಳ ಪೈಕಿ 'ಟೈಗರ್ 3' ಮೊದಲ ದಿನ ಅತಿ ಹೆಚ್ಚು ಸಂಗ್ರಹ ಮಾಡಿರುವ ಸಿನಿಮಾ. ಇದನ್ನು ತಿಳಿದ ಫ್ಯಾನ್ಸ್ ಫುಲ್​ ಖುಷ್​ ಆಗಿದ್ದಾರೆ.

ಸಿನಿ ಇಂಡಸ್ಟ್ರಿ ಟ್ಯಾಕರ್ ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ಟೈಗರ್ 3 ಎರಡನೇ ದಿನ ಚಿತ್ರಮಂದಿರಗಳಲ್ಲಿ ಶೇ. 48.62 ರಷ್ಟು (ಹಿಂದಿ) ಆಕ್ಯುಪೆನ್ಸಿ ಹೊಂದಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಟಿಕೆಟ್ಸ್ ಖರೀದಿ ಗಮನಿಸಿದರೆ 94 ಕೋಟಿ ರೂ. ಕಲೆಕ್ಷನ್ ಮಾಡಿದೆ. ಜಾಗತಿಕ ಗಲ್ಲಾಪೆಟ್ಟಿಗೆ ಅಂಕಿ - ಅಂಶ ಇನ್ನಷ್ಟೇ ಬರಬೇಕಿದೆ.

ಇದನ್ನೂ ಓದಿ: 'ಅನಿಮಲ್'ನ ಪಾಪ ಮೇರಿ ಜಾನ್‌: ಮಕ್ಕಳ ದಿನಾಚರಣೆಯಂದು ತಂದೆ ಮಗನ ಹಾಡು ಅನಾವರಣ

ಬೆಳಕಿನ ಹಬ್ಬದ ಸಂಭ್ರಮದ ಸಂದರ್ಭ ಸಿನಿಮಾ ಬಿಡುಗಡೆಯಾಗಿದೆ. ಮೊದಲ ದಿನಕ್ಕಿಂತಲೂ ಎರಡನೇ ದಿನದ ಅಂಕಿ - ಅಂಶ ಕೊಂಚ ಹೆಚ್ಚೇ ಇದೆ. ಥಿಯೇಟರ್​ಗಳಲ್ಲಿ ಟೈಗರ್ 3 ಒಟ್ಟಾರೆ ಆಕ್ಯುಪೆನ್ಸಿ ರೇಟ್​​ ಗಮನಿಸಿದರೆ, ಹಿಂದಿಯಲ್ಲಿ ಶೇ. 48.62, ತೆಲುಗಿನಲ್ಲಿ ಶೇ. 26.43, ತಮಿಳಿನಲ್ಲಿ ಶೇ. 29.91 ರಷ್ಟಿದೆ ಎಂದು ಸ್ಯಾಕ್ನಿಲ್ಕ್ ವರದಿ ತಿಳಿಸಿದೆ.

ಇದನ್ನೂ ಓದಿ: 54th IFFI: ಗೋವಾದಲ್ಲಿ ನಡೆಯಲಿರುವ ಪ್ರತಿಷ್ಠಿತ ಚಲನಚಿತ್ರೋತ್ಸವದ ಮಾಹಿತಿ ನಿಮಗಾಗಿ

ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಜೊತೆ ಇಮ್ರಾನ್ ಹಶ್ಮಿ ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಟೈಗರ್ ಜಿಂದಾ ಹೈ ನಂತರ ಬಂದಿರುವ ಟೈಗರ್ 3 ಯಶ್​ ರಾಜ್​ ಫಿಲ್ಮ್ಸ್​ನ ಸ್ಪೈ ಯೂನಿವರ್ಸ್‌ನ ಪ್ರಮುಖ ಭಾಗ. ಟೈಗರ್ 3 ರಲ್ಲಿ ಸಲ್ಮಾನ್ ಖಾನ್ ಅವರು ಟೈಗರ್ ಹೆಸರಿನ ಗೂಢಾಚಾರಿ ಪಾತ್ರ ನಿರ್ವಹಿಸಿದ್ದಾರೆ. ತಮ್ಮ ಕುಟುಂಬ ಮತ್ತು ರಾಷ್ಟ್ರವನ್ನು ರಕ್ಷಿಸಲು ಟೈಗರ್​ ಹೋರಾಟ ನಡೆಸುತ್ತಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.